ಪ್ರಧಾನ ಮಂತ್ರಿಯವರ ಕಛೇರಿ
ಪ್ರಮುಖ ಉಪಕ್ರಮಗಳ ಮೂಲಕ ವನ್ಯಜೀವಿ ಸಂರಕ್ಷಣೆಯಲ್ಲಿ ಭಾರತದ ಗಮನಾರ್ಹ ದಾಪುಗಾಲುಗಳನ್ನು ಬಿಂಬಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
08 OCT 2025 12:16PM by PIB Bengaluru
ಕಳೆದ ದಶಕದಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ಭಾರತದ ಮಹತ್ವದ ಪ್ರಗತಿಯನ್ನು ವಿವರಿಸುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರ ಲೇಖನವನ್ನು ಪ್ರಧಾನಮಂತ್ರಿ ಅವರು ಹಂಚಿಕೊಂಡಿದ್ದಾರೆ.
ಪ್ರಭೇದಗಳನ್ನು ಸಂರಕ್ಷಿಸಲು ಮತ್ತು ಅವನತಿ ಹೊಂದಿದ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಸರ್ಕಾರದ ಕೇಂದ್ರೀಕೃತ ಪ್ರಯತ್ನಗಳನ್ನು ಲೇಖನವು ಒತ್ತಿಹೇಳುತ್ತದೆ, ಇದು ಪರಿಸರ ಸುಸ್ಥಿರತೆಗೆ ಭಾರತದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಇದು ಅಮೃತ್ ಕಾಲ್ ಕಾ ಟೈಗರ್ ವಿಷನ್ (Tiger@2047), ಪ್ರಾಜೆಕ್ಟ್ ಹಿಮ ಚಿರತೆ, ಪ್ರಾಜೆಕ್ಟ್ ಚೀತಾ ಮತ್ತು ಪ್ರಾಜೆಕ್ಟ್ ಡಾಲ್ಫಿನ್ ನಂತಹ ಪ್ರಮುಖ ಉಪಕ್ರಮಗಳನ್ನು ಬಿಂಬಿಸುತ್ತದೆ.
ಕೇಂದ್ರ ಸಚಿವರು ಬರೆದ ಲೇಖನಕ್ಕೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ ಅವರು;
"ಈ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @byadavbjp ಅವರು ಪ್ರಭೇದಗಳನ್ನು ಸಂರಕ್ಷಿಸುವ ಮತ್ತು ಅವನತಿ ಹೊಂದಿದ ಆವಾಸಸ್ಥಾನಗಳನ್ನು ಪುನಃಸ್ಥಾಪಿಸುವ ಗುರಿಯನ್ನು ಹೊಂದಿರುವ ಭಾರತದ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳು ಕಳೆದ ದಶಕದಲ್ಲಿ ಹೇಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ ಎಂಬುದನ್ನು ವಿವರಿಸುತ್ತಾರೆ.
ವನ್ಯಜೀವಿ ಸಂರಕ್ಷಣೆಗೆ ಭರವಸೆ ಮತ್ತು ಆಶಾವಾದವನ್ನು ಒದಗಿಸುವ ಅಮೃತ್ ಕಾಲ್ ಕಾ ಟೈಗರ್ ವಿಷನ್ (Tiger@2047), ಹಿಮ ಚಿರತೆ ಯೋಜನೆ, ಪ್ರಾಜೆಕ್ಟ್ ಚೀತಾ ಮತ್ತು ಪ್ರಾಜೆಕ್ಟ್ ಡಾಲ್ಫಿನ್ ನಂತಹ ಉಪಕ್ರಮಗಳನ್ನು ಅವರು ಬಿಂಬಿಸಿದ್ದಾರೆ,’’ಎಂದು ಹೇಳಿದ್ದಾರೆ.
*****
(Release ID: 2176343)
Visitor Counter : 7
Read this release in:
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam