ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ಅಕ್ಟೋಬರ್ 8ರಂದು 9ನೇ ಆವೃತ್ತಿಯ ಇಂಡಿಯನ್ ಮೊಬೈಲ್ ಕಾಂಗ್ರೆಸ್ ಉದ್ಘಾಟನೆ


ಐಎಂಸಿ 2025: ಅಕ್ಟೋಬರ್ 8–11 ರವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ದೂರಸಂಪರ್ಕ ಮತ್ತು ತಂತ್ರಜ್ಞಾನ ಕಾರ್ಯಕ್ರಮ

ವಿಷಯ: “ಪರಿವರ್ತನೆಗೆ ನಾವೀನ್ಯತೆ”- ಡಿಜಿಟಲ್ ಪರಿವರ್ತನೆಯಲ್ಲಿ ಭಾರತದ ನಾಯಕತ್ವ ಪ್ರದರ್ಶನ

ಹೆಚ್ಚಿನ ಗಮನ ಹರಿಸುವ ಕ್ಷೇತ್ರಗಳು: 6 ಜಿ, ಕ್ವಾಂಟಮ್ ಸಂವಹನಗಳು, ಸೆಮಿಕಂಡಕ್ಟರ್‌ಗಳು, ಆಪ್ಟಿಕಲ್ ನೆಟ್‌ವರ್ಕ್‌ಗಳು ಮತ್ತು ಸೈಬರ್ ವಂಚನೆ ತಡೆಗಟ್ಟುವಿಕೆ

ಐಎಂಸಿ 2025ರಲ್ಲಿ 400ಕ್ಕೂ ಅಧಿಕ ಕಂಪನಿಗಳು, ಸುಮಾರು 7,000 ಜಾಗತಿಕ ಪ್ರತಿನಿಧಿಗಳು ಮತ್ತು 150ಕ್ಕೂ ಅಧಿಕ ರಾಷ್ಟ್ರಗಳಿಂದ ಸುಮಾರು 1.5 ಲಕ್ಷ ವೀಕ್ಷಕರು ಭಾಗಿ

Posted On: 07 OCT 2025 10:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನವದೆಹಲಿಯ ಯಶೋಭೂಮಿಯಲ್ಲಿ 2025ರ ಅಕ್ಟೋಬರ್‌ 8ರಂದು ಏಷ್ಯಾದ ಅತಿದೊಡ್ಡ ದೂರಸಂಪರ್ಕ, ಮಾಧ್ಯಮ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ)ಯ 9ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ.

ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಸಿಒಎಐ) ಜಂಟಿಯಾಗಿ ಆಯೋಜಿಸಿರುವ ಐಎಂಸಿ 2025 ಅಕ್ಟೋಬರ್ 8 ರಿಂದ 11 ರವರೆಗೆ "ಪರಿವರ್ತನೆಗೆ ನಾವೀನ್ಯತೆ (ಇನ್ನೋವೇಟ್ ಟು ಟ್ರಾನ್ಸ್‌ಫಾರ್ಮ್)" ಎಂಬ ವಿಷಯದಡಿಯಲ್ಲಿ ನಡೆಯಲಿದೆ, ಇದು ಡಿಜಿಟಲ್ ಪರಿವರ್ತನೆ ಮತ್ತು ಸಾಮಾಜಿಕ ಪ್ರಗತಿಗಾಗಿ ನಾವೀನ್ಯತೆಯನ್ನು ಬಳಸಿಕೊಳ್ಳುವ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಐಎಂಸಿ 2025 ದೂರಸಂಪರ್ಕ  ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಇತ್ತೀಚಿನ ಪ್ರಗತಿಯನ್ನು ಪ್ರದರ್ಶಿಸುತ್ತದೆ, ಜಾಗತಿಕ ನಾಯಕರು, ನೀತಿ ನಿರೂಪಕರು, ಉದ್ಯಮ ತಜ್ಞರು ಮತ್ತು ನಾವೀನ್ಯಕಾರರನ್ನು ಒಗೂಡಿಸುತ್ತದೆ. ಮುಂದಿನ ಪೀಳಿಗೆಯ ಸಂಪರ್ಕ, ಡಿಜಿಟಲ್ ಸಾರ್ವಭೌಮತ್ವ, ಸೈಬರ್ ವಂಚನೆಗಳ ತಡೆಗಟ್ಟುವಿಕೆ ಮತ್ತು ಜಾಗತಿಕ ತಂತ್ರಜ್ಞಾನ ನಾಯಕತ್ವದಲ್ಲಿ ಭಾರತದ ಕಾರ್ಯತಂತ್ರದ ಆದ್ಯತೆಗಳನ್ನು ಪ್ರತಿಬಿಂಬಿಸುವ ಆಪ್ಟಿಕಲ್ ಕಮ್ಯುನಿಕೇಷನ್ಸ್, ಟೆಲಿಕಾಂನಲ್ಲಿ ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ಕಮ್ಯುನಿಕೇಷನ್ಸ್, 6ಜಿ ಮತ್ತು ವಂಚನೆ ಅಪಾಯ ಸೂಚಕಗಳು ಸೇರಿದಂತೆ ಪ್ರಮುಖ ವಿಷಯಗಳ ಮೇಲೆ ಈ ಕಾರ್ಯಕ್ರಮವು ಗಮನವನ್ನು ಕೇಂದ್ರೀಕರಿಸುತ್ತದೆ.

150ಕ್ಕೂ ಅಧಿಕ ದೇಶಗಳಿಂದ 1.5 ಲಕ್ಷಕ್ಕೂ ಅಧಿಕ ವೀಕ್ಷಕರು ಸಂದರ್ಶಕರು, 7 ಸಾವಿರಕ್ಕೂ ಅಧಿಕ ಜಾಗತಿಕ ಪ್ರತಿನಿಧಿಗಳು ಮತ್ತು 400ಕ್ಕೂ ಅಧಿಕ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. 5ಜಿ/6ಜಿ, ಎಐ (ಕೃತಕ ಬುದ್ಧಿಮತ್ತೆ), ಸ್ಮಾರ್ಟ್ ಮೊಬಿಲಿಟಿ, ಸೈಬರ್ ಭದ್ರತೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಹಸಿರು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ 1,600 ಕ್ಕೂ ಅಧಿಕ ಹೊಸ ಬಳಕೆಯ ಪ್ರಕರಣಗಳನ್ನು 100+ ಗೋಷ್ಠಿಗಳು ಮತ್ತು 800+ ಭಾಷಣಕಾರರ ಮೂಲಕ ಪ್ರದರ್ಶಿಸಲಾಗುತ್ತದೆ.

ಐಎಂಸಿ 2025 ಅಂತಾರಾಷ್ಟ್ರೀಯ ಸಹಯೋಗವನ್ನು ಬಲವಾಗಿ ಪ್ರತಿಪಾದಿಸುತ್ತದೆ, ಜಪಾನ್, ಕೆನಡಾ,  ಯುನೈಟೆಡ್  ಕಿಂಗ್‌ಡಮ್, ರಷ್ಯಾ, ಐರ್ಲೆಂಡ್ ಮತ್ತು ಆಸ್ಟ್ರಿಯಾದ ನಿಯೋಗಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

 

*****


(Release ID: 2175695) Visitor Counter : 14