ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ರಾಷ್ಟ್ರೀಯ ಹೆದ್ದಾರಿ 715ರ ಅಸ್ಸಾಂನ ಕಾಲಿಬೋರ್-ನುಮಾಲಿಗಢ ವಿಭಾಗದ ಹಾಲಿ ಹೆದ್ದಾರಿಯನ್ನು ಚತುಷ್ಪಥವಾಗಿ ಅಗಲೀಕರಣ ಮತ್ತು ಸುಧಾರಣೆ ಮಾಡಲು ಸಚಿವ ಸಂಪುಟದ ಅನುಮೋದನೆ
ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಉದ್ದೇಶಿಸಲಾದ ವನ್ಯಜೀವಿ ಸ್ನೇಹಿ ಕ್ರಮಗಳ ಅನುಷ್ಠಾನವನ್ನು ಒಳಗೊಂಡಿದೆ
ಕ್ಯಾರೇಜ್ ವೇ ನ ಒಟ್ಟು ಉದ್ದ 85.675 ಕಿ.ಮೀ.ಗಳಾಗಿದ್ದು, ಇದಕ್ಕೆ 6957 ಕೋಟಿ ರೂ. ವೆಚ್ಚವಾಗಲಿದೆ
Posted On:
01 OCT 2025 3:26PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ (ಸಿಸಿಇಎ) ಸಭೆಯು ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ 715ರ ಕಾಲಿಬೋರ್ – ನುಮಾಲಿಗರ್ ವಿಭಾಗದ ಹಾಲಿ ಇರುವ ಕ್ಯಾರೇಜ್ ವೇಯನ್ನು 4 ಪಥ ರಸ್ತಗೆಯಾಗಿ ಅಗಲೀಕರಣ ಮಾಡಲು ಮತ್ತು ಸುಧಾರಣೆ ಮಾಡಲು ಅನುಮೋದನೆ ನೀಡಿದೆ. ಇದು ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಕೆಎನ್‌ಪಿ) ವಿಸ್ತರಣೆಯಲ್ಲಿ ಉದ್ದೇಶಿಸಿರುವ ವನ್ಯಜೀವಿ ಸ್ನೇಹಿ ಕ್ರಮಗಳ ಅನುಷ್ಠಾನವನ್ನೂ ಒಳಗೊಂಡಿದೆ. ಒಟ್ಟು 85.675 ಕಿ.ಮೀ ಉದ್ದ ಮತ್ತು ಒಟ್ಟು 6957 ಕೋಟಿ ರೂ.ಗಳ ಬಂಡವಾಳ ವೆಚ್ಚದೊಂದಿಗೆ ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ (ಇಪಿಸಿ) ಮಾದರಿಯಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ 715ರ (ಹಳೆಯ ರಾಷ್ಟ್ರೀಯ ಹೆದ್ದಾರಿ -37) ಅಸ್ತಿತ್ವದಲ್ಲಿರುವ ಕಾಲಿಬೋರ್-ನುಮಾಲಿಗಢ್ ವಿಭಾಗವು ಸುಸಜ್ಜಿತ ಅಂಚಿನ ರಸ್ತೆಯನ್ನು ಒಳಗೊಂಡ / ಒಳಗೊಂಡಿಲ್ಲದ ದ್ವಿಪಥ ಸಂರಚನೆಯನ್ನು ಹೊಂದಿದೆ. ಇದು ಜಖ್ಲಾಬಂಧ (ನಾಗಾಂವ್) ಮತ್ತು ಬೊಕಾಖಟ್ (ಗೋಲಘಾಟ್) ಪಟ್ಟಣಗಳ ದಟ್ಟವಾದ ನಿರ್ಮಾಣ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಅಸ್ತಿತ್ವದಲ್ಲಿರುವ ಹೆದ್ದಾರಿಯ ಪ್ರಮುಖ ಭಾಗವು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಅಥವಾ ಉದ್ಯಾನವನದ ದಕ್ಷಿಣ ಗಡಿಯ ಉದ್ದಕ್ಕೂ ಹಾದುಹೋಗುತ್ತದೆ, ಇದು 16 ರಿಂದ 32 ಮೀಟರ್‌ಗಳ ನಿರ್ಬಂಧಿತ ಮಾರ್ಗವನ್ನು (ಆರ್‌ಒಡಬ್ಲ್ಯೂ) ಹೊಂದಿದೆ. ಭೂಪ್ರದೇಶದ ದುರ್ಗಮತೆಯು ಈ ರಸ್ತೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಮಳೆಗಾಲದಲ್ಲಿ, ಉದ್ಯಾನವನದ ಒಳಗಿನ ಪ್ರದೇಶವು ಪ್ರವಾಹಕ್ಕೆ ತುತ್ತಾಗುತ್ತದೆ. ಈ ವೇಳೆ ವನ್ಯಜೀವಿಗಳು ಅಸ್ತಿತ್ವದಲ್ಲಿರುವ ಹೆದ್ದಾರಿಯನ್ನು ದಾಟುವ ಮೂಲಕ ಉದ್ಯಾನವನದಿಂದ ಎತ್ತರದ ಕರ್ಬಿ-ಆಂಗ್ಲಾಂಗ್ ಬೆಟ್ಟಗಳ ಕಡೆಗೆ ಪ್ರಯಾಣಿಸುತ್ತವೆ. ಆದರೆ, ಹೆದ್ದಾರಿಯಲ್ಲಿ ಹಗಲಿರುಳು ಭಾರಿ ಸಂಚಾರೆ ದಟ್ಟಣೆಯ ಕಾರಣದಿಂದ ಆಗಾಗ್ಗೆ ಅಪಘಾತಗಳು ಸಂಭವಿಸಿ ಇಂತಹ ಕಾಡು ಪ್ರಾಣಿಗಳು ಬಲಿಯಾಗುತ್ತಿವೆ.
ಈ ಸವಾಲುಗಳನ್ನು ಎದುರಿಸಲು, ಯೋಜನೆಯು ಸುಮಾರು 34.5 ಕಿ.ಮೀ ಉದ್ದದ ಎತ್ತರಿಸಿದ ಕಾರಿಡಾರ್ ನಿರ್ಮಾಣವನ್ನು ಒಳಗೊಂಡಿರುತ್ತದೆ. ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ಕರ್ಬಿ-ಆಂಗ್ಲಾಂಗ್ ಬೆಟ್ಟಗಳವರೆಗೆ ವನ್ಯಜೀವಿಗಳ ಸಂಚಾರವನ್ನು ಸಂಪೂರ್ಣ ಅಡಚಣೆ ಮುಕ್ತವಾಗಿಸುತ್ತದೆ. ಜೊತೆಗೆ, ಅಸ್ತಿತ್ವದಲ್ಲಿರುವ 30.22 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಜಖಲಾಬಂಧ ಮತ್ತು ಬೊಕಾಖತ್ ಸುತ್ತಲೂ 21 ಕಿ.ಮೀ ಗ್ರೀನ್‌ಫೀಲ್ಡ್ ಬೈಪಾಸ್‌ಗಳ ನಿರ್ಮಾಣವನ್ನೂ ಈ ಯೋಜನೆಯು ಒಳಗೊಂಡಿದೆ. ಇದು ಅಸ್ತಿತ್ವದಲ್ಲಿರುವ ಕಾರಿಡಾರ್‌ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಗುವಾಹಟಿ (ರಾಜ್ಯ ರಾಜಧಾನಿ), ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಪ್ರವಾಸೋದ್ಯಮ ತಾಣ) ಮತ್ತು ನುಮಾಲಿಗಢ (ಕೈಗಾರಿಕಾ ಪಟ್ಟಣ) ನಡುವಿನ ನೇರ ಸಂಪರ್ಕವನ್ನು ಸುಧಾರಿಸುತ್ತದೆ.
ಈ ಯೋಜನೆಯು 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು (ಎನ್ಎಚ್-127, ಎನ್ಎಚ್ -129) ಮತ್ತು 1 ರಾಜ್ಯ ಹೆದ್ದಾರಿಗಳೊಂದಿಗೆ (ಎಸ್ಎಚ್-35) ಸಂಪರ್ಕ ಕಲ್ಪಿಸುತ್ತದೆ. ಆ ಮೂಲಕ ಅಸ್ಸಾಂನಾದ್ಯಂತ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ನೋಡ್ ಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಮೇಲ್ದರ್ಜೆಗೇರಿಸಲಾದ ರಸ್ತೆಯು 3 ರೈಲು ನಿಲ್ದಾಣಗಳು (ನಾಗಾಂವ್, ಜಖಲಾಬಂಧ, ವಿಶ್ವನಾಥ ಚಾರ್ಲಿ) ಮತ್ತು 3 ವಿಮಾನ ನಿಲ್ದಾಣಗಳೊಂದಿಗೆ (ತೇಜ್ಪುರ್, ಲಿಯಾಬರಿ, ಜೋರ್ಹತ್) ಸಂಪರ್ಕಿಸುವ ಮೂಲಕ ಬಹು-ಮಾದರಿ ಸಾರಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಆ ಮೂಲಕ ಈ ಪ್ರದೇಶದಾದ್ಯಂತ ಸರಕು ಮತ್ತು ಪ್ರಯಾಣಿಕರ ಸಂಚಾರ ವೇಗ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಯೋಜನೆಯ ವ್ಯಾಪ್ತಿಯು 02 ಸಾಮಾಜಿಕ-ಆರ್ಥಿಕ ನೋಡ್‌ಗಳು, 08 ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ, ಆ ಮೂಲಕ ಪ್ರಾದೇಶಿಕ ಆರ್ಥಿಕ ಬೆಳವಣಿಗೆ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಬಲಪಡಿಸುತ್ತದೆ.
ಈ ಯೋಜನೆಯು ಪೂರ್ಣಗೊಂಡ ನಂತರ, ಕಾಲಿಬೋರ್-ನುಮಾಲಿಗಢ್ ವಿಭಾಗವು ಪ್ರಾದೇಶಿಕ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪ್ರಮುಖ ಪ್ರವಾಸೋದ್ಯಮ, ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಹಾಗೂ ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಈ ಯೋಜನೆಯು ಸುಮಾರು 15.42 ಲಕ್ಷ ಮಾನವ ದಿನಗಳ ನೇರ ಮತ್ತು 19.19 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಜೊತೆಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ..
ವೈಶಿಷ್ಟ್ಯ
|
ವಿವರಗಳು
|
ಯೋಜನೆಯ ಹೆಸರು
|
ರಾಷ್ಟ್ರೀಯ ಹೆದ್ದಾರಿ 715ರ ಅಸ್ಸಾಂನ ಕಾಲಿಬೋರ್-ನುಮಾಲಿಗಢ ವಿಭಾಗದಲ್ಲಿ ಅಸ್ತಿತ್ವದಲ್ಲಿರುವ ಕ್ಯಾರೇಜ್ ವೇ ಅನ್ನು 4 ಪಥದ ರಸ್ತೆಯಾಗಿ ಅಗಲೀಕರಣ ಮತ್ತು ಸುಧಾರಣೆ; ಕಾಜಿರಂಗ ರಾಷ್ಟ್ರೀಯ ಉದ್ಯಾನ (ಕೆಎನ್‌ಪಿ) ವ್ಯಾಪ್ತಿಯಲ್ಲಿ ಉದ್ದೇಶಿತ ವನ್ಯಜೀವಿ ಸ್ನೇಹಿ ಕ್ರಮಗಳ ಅನುಷ್ಠಾನವನ್ನೂ ಒಳಗೊಂಡಿದೆ.
|
ಕಾರಿಡಾರ್
|
ರಾಷ್ಟ್ರೀಯ ಹೆದ್ದಾರಿ 715
|
ಉದ್ದ (ಕಿಮೀ)
|
85.675
|
ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ಎಲಿವೇಟೆಡ್ ಕಾರಿಡಾರ್ ಉದ್ದ
|
34.45 kms
|
ಬೈಪಾಸ್ ಗಳು
|
ಪುದುಚೇರಿ ಬೈಪಾಸ್ (ಗ್ರೀನ್ ಫೀಲ್ಡ್) - 11.5 ಕಿ.ಮೀ
ಬೊಕಾಖಟ್ ಬೈಪಾಸ್ (ಗ್ರೀನ್ ಫೀಲ್ಡ್) - 9.5 ಕಿ.ಮೀ
|
ಅಸ್ತಿತ್ವದಲ್ಲಿರುವ ರಸ್ತೆಯ ಪಥ ಅಗಲೀಕರಣ (2 ರಿಂದ 4 ಪಥ)
|
30.22 kms
|
ಒಟ್ಟು ಕಾಮಗಾರಿ ವೆಚ್ಚ (ಕೋಟಿ ರೂ.)
|
4,829
|
ಭೂಸ್ವಾಧೀನ ವೆಚ್ಚ (ಕೋಟಿ ರೂ.)
|
622
|
ಒಟ್ಟು ಬಂಡವಾಳ ವೆಚ್ಚ (ಕೋಟಿ ರೂ.)
|
6,957
|
ಮಾದರಿ
|
ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ (ಇಪಿಸಿ)
|
ಸಂಪರ್ಕ ಹೊಂದಿದ ಪ್ರಮುಖ ರಸ್ತೆಗಳು
|
ರಾಷ್ಟ್ರೀಯ ಹೆದ್ದಾರಿಗಳು: ರಾಷ್ಟ್ರೀಯ ಹೆದ್ದಾರಿ -127, ರಾಷ್ಟ್ರೀಯ ಹೆದ್ದಾರಿ -129
ರಾಜ್ಯ ಹೆದ್ದಾರಿಗಳು: ಎಸ್ಎಚ್-35
|
ಆರ್ಥಿಕ / ಸಾಮಾಜಿಕ / ಸಾರಿಗೆ ನೋಡ್ ಗಳು / ಪ್ರವಾಸಿ ಸ್ಥಳಗಳು / ಧಾರ್ಮಿಕ ಸ್ಥಳಗಳ ಸಂಪರ್ಕ
|
ವಿಮಾನ ನಿಲ್ದಾಣಗಳು: ತೇಜ್ಪುರ್, ಲಿಯಾಬರಿ, ಜೋರ್ಹತ್
ರೈಲು ನಿಲ್ದಾಣಗಳು: ನಾಗಾಂವ್, ಜಖಲಾಬಂಧ, ವಿಶ್ವನಾಥ ಚರಿಯಾಲಿ
ಆರ್ಥಿಕ ನೋಡ್ ಗಳು : ತೇಜ್ಪುರ್ ಮೀನುಗಾರಿಕಾ ಕ್ಲಸ್ಟರ್, ನಾಗಾಂವ್ ಮೀನುಗಾರಿಕಾ ಕ್ಲಸ್ಟರ್
ಸಾಮಾಜಿಕ ನೋಡ್ ಗಳು: ಕರ್ಬಿ ಆಂಗ್ಲಾಂಗ್ (ಬುಡಕಟ್ಟು ಜಿಲ್ಲೆ) ಮತ್ತು ಬುಡಕಟ್ಟು ವೋಖಾ (ಬುಡಕಟ್ಟು ಜಿಲ್ಲೆ)
ಪ್ರವಾಸಿ ಸ್ಥಳಗಳು: ಕಾಜಿರಂಗ ರಾಷ್ಟ್ರೀಯ ಉದ್ಯಾನ, ದಿಯೋಪಹಾರ್ ಪುರಾತತ್ವ ತಾಣ- ನುಮಾಲಿಗಢ, ಕಾಕೊಚಾಂಗ್ ಜಲಪಾತ
ಧಾರ್ಮಿಕ ಸ್ಥಳಗಳು: ಬಾಬಾ ಥಾನ್ (ಭಗವಾನ್ ಶಿವ ದೇವಾಲಯ) - ನುಮಾಲಿಗಢ, ಮಹಾ ಮೃತ್ಯುಂಜಯ್ ದೇವಾಲಯ- ನಾಗಾಂವ್, ಹಾತಿಮುರಾ ದೇವಾಲಯ- ನಾಗಾಂವ್
|
ಪ್ರಮುಖ ನಗರಗಳು / ಪಟ್ಟಣಗಳಿಗೆ ಸಂಪರ್ಕ
|
ಗುವಾಹಟಿ, ನಾಗಾಂವ್, ಗೋಲಘಾಟ್, ನುಮಾಲಿಗಢ, ಜೋರ್ಹತ್
|
ಉದ್ಯೋಗ ಸೃಷ್ಟಿ ಸಾಮರ್ಥ್ಯ
|
15.42 ಲಕ್ಷ ಮಾನವ ದಿನಗಳು (ನೇರ) ಮತ್ತು 19.19 ಲಕ್ಷ ಮಾನವ ದಿನಗಳು (ಪರೋಕ್ಷ)
|
ಹಣಕಾಸು ವರ್ಷ-25ರಲ್ಲಿ ವಾರ್ಷಿಕ ಸರಾಸರಿ ದೈನಂದಿನ ವಾಹನ ದಟ್ಟಣೆ (ಎಎಡಿಟಿ)
|
13,800 ಪ್ರಯಾಣಿಕರ ಕಾರುಗಳು (ಪಿಸಿಯು) ಎಂದು ಅಂದಾಜಿಸಲಾಗಿದೆ
|
ಕಾರಿಡಾರ್ ನಕ್ಷೆ

*****
(Release ID: 2173771)
Visitor Counter : 9
Read this release in:
English
,
Urdu
,
Marathi
,
Hindi
,
Bengali
,
Bengali-TR
,
Assamese
,
Gujarati
,
Odia
,
Tamil
,
Telugu
,
Malayalam