ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಮಾರಿಷಸ್: ಯೋಜನೆಗಳ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
Posted On:
29 FEB 2024 3:06PM by PIB Bengaluru
ಮಾನ್ಯ ಪ್ರಧಾನಮಂತ್ರಿ ಶ್ರೀ ಪ್ರವಿಂದ್ ಜುಗ್ನೌತ್ ಅವರೇ,
ಮಾರಿಷಸ್ ಸಂಪುಟದ ಪ್ರಸ್ತುತ ಸದಸ್ಯರುಗಳೇ,
ಭಾರತದ ವಿದೇಶಾಂಗ ಸಚಿವರಾದ ಡಾ. ಜೈಶಂಕರ್ ಅವರೇ,
ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಾರಿಷಸ್ ನ ಅಗಾಲೇಗಾ ಪ್ರದೇಶದ ನಿವಾಸಿಗಳು,
ಮತ್ತು ನನ್ನ ಎಲ್ಲಾ ಸ್ನೇಹಿತರೇ,
ನಮಸ್ಕಾರಗಳು!
ಕಳೆದ 6 ತಿಂಗಳಲ್ಲಿ ಪ್ರಧಾನಮಂತ್ರಿ ಶ್ರೀ ಜುಗ್ನೌತ್ ಮತ್ತು ನನ್ನ ನಡುವಿನ ಐದನೇ ಸಭೆ ಇದಾಗಿದೆ. ಇದು ಭಾರತ ಮತ್ತು ಮಾರಿಷಸ್ ನಡುವಿನ ವೈವಿದ್ಯಮಯ, ಬಲವಾದ ಮತ್ತು ವಿಶಿಷ್ಟ ಪಾಲುದಾರಿಕೆಗೆ ಸಾಕ್ಷಿಯಾಗಿದೆ. ಮಾರಿಷಸ್ ನಮ್ಮ ನೆರೆಹೊರೆ ಮೊದಲು ನೀತಿಯ ಪ್ರಮುಖ ಪಾಲುದಾರ ದೇಶವಾಗಿದೆ. "ಸಾಗರ್" ಎಂಬ ನಮ್ಮ ದೃಷ್ಟಿಕೋನದಡಿಯಲ್ಲಿ ಮಾರಿಷಸ್ ನಮ್ಮ ವಿಶೇಷ ಪಾಲುದಾರ ದೇಶವಾಗಿದೆ. ಜಾಗತಿಕ ದಕ್ಷಿಣದ ದೇಶಗಳ ಸದಸ್ಯರಾಗಿ, ನಮಗೆ ಸಾಮಾನ್ಯ ಆದ್ಯತೆಗಳಿವೆ. ಕಳೆದ 10 ವರ್ಷಗಳಲ್ಲಿ ನಮ್ಮ ಸಂಬಂಧಗಳಲ್ಲಿ ಅಭೂತಪೂರ್ವ ಆವೇಗವಿದೆ. ನಾವು ಪರಸ್ಪರ ಸಹಕಾರದಲ್ಲಿ ಹೊಸ ಎತ್ತರವನ್ನು ಸಾಧಿಸಿದ್ದೇವೆ. ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳಿಗೆ ಹೊಸ ಆಕಾರ ನೀಡಲಾಗಿದೆ. ನಮ್ಮ ಜನರು ಈಗಾಗಲೇ ಭಾಷೆ ಮತ್ತು ಸಂಸ್ಕೃತಿಯ ಸುವರ್ಣ ಎಳೆಗಳಿಂದ ಸಂಪರ್ಕ ಹೊಂದಿದ್ದಾರೆ. ಕೆಲವೇ ದಿನಗಳ ಹಿಂದೆ, ನಾವು ಯುಪಿಐ ಮತ್ತು ರುಪೇ ಕಾರ್ಡ್‌ನಂತಹ ಪ್ರಯತ್ನಗಳ ಮೂಲಕ ಆಧುನಿಕ ಡಿಜಿಟಲ್ ಸಂಪರ್ಕವನ್ನು ಒದಗಿಸಿದ್ದೇವೆ.
ಸ್ನೇಹಿತರೇ,
ಅಭಿವೃದ್ಧಿ ಪಾಲುದಾರಿಕೆ ನಮ್ಮ ಕಾರ್ಯತಂತ್ರದ ಸಂಬಂಧಗಳ ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮ ಅಭಿವೃದ್ಧಿ ಪಾಲುದಾರಿಕೆಯು ಮಾರಿಷಸ್ ನ ಆದ್ಯತೆಗಳನ್ನು ಆಧರಿಸಿದೆ. ಅದು ಮಾರಿಷಸ್‌ನ ಇ.ಇ.ಝೆಡ್ ಭದ್ರತಾ ಅಗತ್ಯಗಳಾಗಲಿ, ಅಥವಾ ಆರೋಗ್ಯ ಭದ್ರತೆಯಾಗಲಿ, ಭಾರತ ಯಾವಾಗಲೂ ಮಾರಿಷಸ್ ನ ಅಗತ್ಯಗಳನ್ನು ಗೌರವಿಸಿದೆ. ಕೋವಿಡ್ ಸಾಂಕ್ರಾಮಿಕದ ಬಿಕ್ಕಟ್ಟು ಅಥವಾ ತೈಲ ಸೋರಿಕೆಯ ಬಿಕ್ಕಟ್ಟು ಆಗಿರಲಿ, ಭಾರತ ಯಾವಾಗಲೂ ತನ್ನ ಸ್ನೇಹಿತ ಮಾರಿಷಸ್ ಗೆ ಮೊದಲ ಪ್ರತಿಕ್ರಿಯೆ ನೀಡುತ್ತದೆ. ನಮ್ಮ ಪ್ರಯತ್ನಗಳ ಮೂಲ ಉದ್ದೇಶ ಮಾರಿಷಸ್ ನ ಸಾಮಾನ್ಯ ಮಾನವ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ತರುವುದು. ಕಳೆದ 10 ವರ್ಷಗಳಲ್ಲಿ, ಮಾರಿಷಸ್‌ನ ಜನರಿಗೆ ಸುಮಾರು ಒಂದು ಸಾವಿರ ಮಿಲಿಯನ್ ಡಾಲರ್ ಕ್ರೆಡಿಟ್ ಲೈನ್ ಮತ್ತು 400 ಮಿಲಿಯನ್ ಡಾಲರ್ ಸಹಾಯ ಲಭ್ಯವಾಗಿದೆ. ಮಾರಿಷಸ್‌ನಲ್ಲಿ ಮೆಟ್ರೋ ಮಾರ್ಗಗಳು, ಸಮುದಾಯ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ವಸತಿ, ಇ.ಎನ್.ಟಿ ಆಸ್ಪತ್ರೆಗಳು, ನಾಗರಿಕ ಸೇವಾ ಕಾಲೇಜುಗಳು ಮತ್ತು ಕ್ರೀಡಾ ಸಂಕೀರ್ಣಗಳ ಅಭಿವೃದ್ಧಿಯಿಂದ ಹಿಡಿದು ಮೂಲಸೌಕರ್ಯ ಯೋಜನೆಗಳಲ್ಲಿ ಭಾಗವಹಿಸುವ ಸವಲತ್ತು ನನಗೆ ಸಿಕ್ಕಿದೆ.
ಸ್ನೇಹಿತರೇ,
ಇಂದು ನಮ್ಮ ಅಭಿವೃದ್ಧಿ ಪಾಲುದಾರಿಕೆಗೆ ವಿಶೇಷ ಮಹತ್ವದ್ದಾಗಿದೆ. 2015 ರಲ್ಲಿ ಅಗಲೇಗಾ ಜನರ ಅಭಿವೃದ್ಧಿಗಾಗಿ ನಾನು ಮಾಡಿದ ಬದ್ಧತೆಯ ಪೂರ್ಣತೆಯನ್ನು ಇಂದು ನಾವು ಕಾಣುತ್ತಿದ್ದೇವೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇದನ್ನು "ಮೋದಿಯವರ ಗ್ಯಾರಂಟಿ" ಎಂದು ಕರೆಯಲಾಗುತ್ತಿದೆ. ನಾವು ಜಂಟಿಯಾಗಿ ಉದ್ಘಾಟಿಸಿರುವ ಸೌಲಭ್ಯಗಳು ಜೀವನ ಸುಗಮತೆಯನ್ನು ಹೆಚ್ಚಿಸುತ್ತವೆ ಎಂದು ನನಗೆ ವಿಶ್ವಾಸವಿದೆ. ಮಾರಿಷಸ್‌ನ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಂಪರ್ಕ ಹೆಚ್ಚಾಗುತ್ತದೆ. ಮುಖ್ಯ ಭೂಭಾಗದಿಂದ ಆಡಳಿತಾತ್ಮಕ ಸಹಕಾರ ಸುಲಭವಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹೆಚ್ಚಾಗುತ್ತದೆ. ವೈದ್ಯಕೀಯ ಚಿಕಿತ್ಸೆಗಾಗಿ ತುರ್ತು ಸ್ಥಳಾಂತರ ಮತ್ತು ಶಿಕ್ಷಣಕ್ಕಾಗಿ ಶಾಲಾ ಮಕ್ಕಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ.
ಸ್ನೇಹಿತರೇ,
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅನೇಕ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಸವಾಲುಗಳು ಹೊರಹೊಮ್ಮುತ್ತಿವೆ. ಈ ಎಲ್ಲಾ ಸವಾಲುಗಳು ನಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ. ಇವುಗಳನ್ನು ಎದುರಿಸಲು, ಭಾರತ ಮತ್ತು ಮಾರಿಷಸ್ ಕಡಲ ಭದ್ರತಾ ಕ್ಷೇತ್ರದಲ್ಲಿ ನೈಸರ್ಗಿಕ ಪಾಲುದಾರರು. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ, ಸಮೃದ್ಧಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ವಿಶೇಷ ಆರ್ಥಿಕ ವಲಯದ ಮೇಲ್ವಿಚಾರಣೆ, ಜಂಟಿ ಗಸ್ತು, ಹೈಡ್ರೋಗ್ರಫಿ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಂತಹ ಎಲ್ಲಾ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಸಹಕರಿಸುತ್ತಿದ್ದೇವೆ. ಇಂದು, ಅಗಲೇಗಾದಲ್ಲಿ ಏರ್‌ಸ್ಟ್ರಿಪ್ ಮತ್ತು ಜೆಟ್ಟಿಯ ಉದ್ಘಾಟನೆಯು ನಮ್ಮ ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಮಾರಿಷಸ್‌ನಲ್ಲಿ ನೀಲಿ ಆರ್ಥಿಕತೆಯನ್ನು ಸಹ ಬಲಪಡಿಸುತ್ತದೆ.
ಸ್ನೇಹಿತರೇ,
ಮಾರಿಷಸ್‌ನಲ್ಲಿ ಜನೌಷಧಿ ಕೇಂದ್ರವನ್ನು ತೆರೆಯುವ ನಿರ್ಧಾರಕ್ಕಾಗಿ ಪ್ರಧಾನಮಂತ್ರಿ ಶ್ರೀ ಜುಗ್ನೌತ್ ಜಿ ಅವರನ್ನು ನಾನು ಕೃತಜ್ಞನಾಗಿದ್ದೇನೆ. ನಮ್ಮ ಜನೌಷಧಿ ಉಪಕ್ರಮಕ್ಕೆ ಸೇರ್ಪಡೆಗೊಳ್ಳುವ ಮೊದಲ ದೇಶ ಮಾರಿಷಸ್ ಆಗಲಿದೆ. ಇದರೊಂದಿಗೆ, ಮಾರಿಷಸ್‌ನ ಜನರು ಭಾರತದಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ಜೆನೆರಿಕ್ ಔಷಧಿಗಳ ಪ್ರಯೋಜನವನ್ನು ಪಡೆಯುತ್ತಾರೆ.
ಘನತೆವೆತ್ತರೇ,
ಪ್ರಧಾನಮಂತ್ರಿ ಶ್ರೀ ಪ್ರವಿಂದ್ ಜುಗ್ನೌತ್ ಜಿ, ನಿಮ್ಮ ದೂರದೃಷ್ಟಿಯ ದೃಷ್ಟಿಕೋನ ಮತ್ತು ಕ್ರಿಯಾತ್ಮಕ ನಾಯಕತ್ವಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ, ಒಟ್ಟಾಗಿ, ನಾವು ಭಾರತ ಮತ್ತು ಮಾರಿಷಸ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂದು ನನಗೆ ವಿಶ್ವಾಸವಿದೆ.
ಮತ್ತೊಮ್ಮೆ ನಾನು ನಿಮಗೆ ಎಲ್ಲರಿಗೂ ತುಂಬಾ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ!
ಧನ್ಯವಾದಗಳು !
ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಕನ್ನಡ ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಯಿತು.
*****
(Release ID: 2173048)
Visitor Counter : 11
Read this release in:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam