ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇವಿ ಮಾತೆಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ ಎಲ್ಲರಿಗೂ ಶಕ್ತಿ ಮತ್ತು ಯೋಗಕ್ಷೇಮವನ್ನು ಕೋರಿದರು

Posted On: 28 SEP 2025 9:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇವಿ ಮಾತೆಯ ಪಾದಗಳಿಗೆ ಹೃತ್ಪೂರ್ವಕ ನಮನ ಸಲ್ಲಿಸಿ, ರಾಷ್ಟ್ರಕ್ಕಾಗಿ ಅವರ ದಿವ್ಯ ಆಶೀರ್ವಾದವನ್ನು ಕೋರಿದರು. ಆಧ್ಯಾತ್ಮಿಕ ಉತ್ಸಾಹ ಮತ್ತು ಸಾಮೂಹಿಕ ಸದ್ಭಾವನೆಯಿಂದ ಪ್ರತಿಧ್ವನಿಸುವ ಸಂದೇಶದಲ್ಲಿ, ಪ್ರಧಾನಮಂತ್ರಿ ಅವರು ಎಲ್ಲಾ ನಾಗರಿಕರ ಯೋಗಕ್ಷೇಮ, ಧೈರ್ಯ ಮತ್ತು ಆಂತರಿಕ ಶಕ್ತಿಗಾಗಿ ಪ್ರಾರ್ಥಿಸಿದ್ದಾರೆ.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಶ್ರೀ ಮೋದಿ ಅವರು:

"ನಾನು ತಾಯಿ ದೇವಿಯ ಪಾದಗಳಿಗೆ ನಮಸ್ಕರಿಸುತ್ತೇನೆ! ಅವರು ಎಲ್ಲರಿಗೂ ಅದಮ್ಯ ಧೈರ್ಯ ಮತ್ತು ಉತ್ತಮ ಆರೋಗ್ಯವನ್ನು ಆಶೀರ್ವದಿಸಲಿ. ಅವರ ಕೃಪೆಯು ಪ್ರತಿಯೊಬ್ಬರ ಜೀವನದಲ್ಲಿ ಆತ್ಮವಿಶ್ವಾಸವನ್ನು ತುಂಬಲಿ,’’ ಎಂದು ಹೇಳಿದ್ದಾರೆ.

https://www.youtube.com/watch?v=xipST4S094Q

 

 

*****

 


(Release ID: 2172374) Visitor Counter : 7