ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ 2025 ಅನ್ನು ಸ್ವಾಗತಿಸಿದ ಪ್ರಧಾನಮಂತ್ರಿ
Posted On:
27 SEP 2025 6:03PM by PIB Bengaluru
ನವದೆಹಲಿಯಲ್ಲಿ ಇಂದು ಪ್ರಾರಂಭವಾಗುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ 2025 ಅನ್ನು ಭಾರತವು ಹೆಮ್ಮೆಯಿಂದ ಆಯೋಜಿಸುತ್ತಿರುವಾಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಕ್ರೀಡಾಪಟುಗಳು ಮತ್ತು ಪ್ರತಿನಿಧಿಗಳಿಗೆ ಆತ್ಮೀಯ ಸ್ವಾಗತ ಕೋರಿದರು.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಬರೆದಿದ್ದಾರೆ:
"ಇಂದು ಪ್ರಾರಂಭವಾಗುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ 2025 ಅನ್ನು ದೆಹಲಿಯಲ್ಲಿ ಆಯೋಜಿಸಲು ಭಾರತ ಹೆಮ್ಮೆಪಡುತ್ತದೆ. ಭಾಗವಹಿಸುವ ಎಲ್ಲರಿಗೂ ಆತ್ಮೀಯ ಸ್ವಾಗತ ಮತ್ತು ಶುಭ ಹಾರೈಕೆಗಳು. ಈ ಪಂದ್ಯಾವಳಿಯು ಮಾನವನ ದೃಢನಿಶ್ಚಯ ಮತ್ತು ಮನೋಭಾವವನ್ನು ಆಚರಿಸುತ್ತದೆ. ಈ ಪಂದ್ಯಾವಳಿಯು ಪ್ರಪಂಚದಾದ್ಯಂತ ಹೆಚ್ಚು ಅಂತರ್ಗತ ಮತ್ತು ರೋಮಾಂಚಕ ಕ್ರೀಡಾ ಸಂಸ್ಕೃತಿಗೆ ಸ್ಫೂರ್ತಿ ನೀಡಲಿ," ಎಂದಿದ್ದಾರೆ.
*****
(Release ID: 2172338)
Visitor Counter : 11
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam