ಪ್ರಧಾನ ಮಂತ್ರಿಯವರ ಕಛೇರಿ
ಮೇಕ್ ಇನ್ ಇಂಡಿಯಾ ಉಪಕ್ರಮದ 11ನೇ ವರ್ಷಾಚರಣೆ ಆಚರಿಸಿದ ಪ್ರಧಾನಮಂತ್ರಿ
Posted On:
25 SEP 2025 1:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮೇಕ್ ಇನ್ ಇಂಡಿಯಾ ಉಪಕ್ರಮದ 11ನೇ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ಉಪಕ್ರಮವು ಭಾರತದ ಆರ್ಥಿಕತೆ ಮತ್ತು ಉದ್ಯಮಶೀಲ ಪರಿಸರ ವ್ಯವಸ್ಥೆಯ ಮೇಲೆ ತನ್ನ ಪರಿವರ್ತನಾತ್ಮಕ ಪರಿಣಾಮವನ್ನು ಬೀರಿದೆ. ಮೇಕ್ ಇನ್ ಇಂಡಿಯಾ ಭಾರತದ ಉದ್ಯಮಿಗಳಿಗೆ ನೀಡಿದ ಪ್ರೋತ್ಸಾಹವನ್ನು ಮತ್ತು ಇದರಿಂದಾಗಿ ಉಂಟಾದ ಜಾಗತಿಕ ಪರಿಣಾಮವನ್ನು ಶ್ರೀ ಮೋದಿಯವರು ಶ್ಲಾಘಿಸಿದರು.
Xನ MyGovIndia ಪೋಸ್ಟ್ ಗಳಿಗೆ ಪ್ರತಿಕ್ರಿಯಿಸುತ್ತಾ ಶ್ರೀ ಮೋದಿಯವರು:
“11 ವರ್ಷಗಳ ಹಿಂದೆ ಇದೇ ದಿನದಂದು, ಭಾರತದ ಬೆಳವಣಿಗೆಯ ವೇಗವೃದ್ದಿ ಮತ್ತು ನಮ್ಮ ದೇಶದ ಉದ್ಯಮಶೀಲತಾ ಸಾಮರ್ಥ್ಯವನ್ನು ಬಳಸಿಕೊಳ್ಳುವ ದೃಷ್ಟಿಕೋನದಿಂದ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಲಾಯಿತು.
#11YearsOfMakeInIndia ಆರ್ಥಿಕ ಬಲವನ್ನು ಹೆಚ್ಚಿಸಿ, ಆತ್ಮನಿರ್ಭರತೆಗೆ ಅಡಿಪಾಯ ಹಾಕಲು ಹೇಗೆ ಕೊಡುಗೆ ನೀಡಿದೆ ಎಂಬುದನ್ನು ನೋಡಲು ಸಂತೋಷವಾಗುತ್ತದೆ. ಇದು ವಿವಿಧ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸಿದೆ.”
"ಮೇಕ್ ಇನ್ ಇಂಡಿಯಾ ಭಾರತದ ಉದ್ಯಮಿಗಳಿಗೆ ಪ್ರಚೋದನೆಯನ್ನು ನೀಡಿ, ಜಾಗತಿಕವಾಗಿ ತನ್ನ ಪ್ರಭಾವವನ್ನು ಸೃಷ್ಟಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
#11YearsOfMakeInIndia"
*****
(Release ID: 2171196)
Visitor Counter : 11
Read this release in:
Bengali-TR
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam