ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಬಿಹಾರದಲ್ಲಿ ʻರಾಷ್ಟ್ರೀಯ ಹೆದ್ದಾರಿ -139 ಡಬ್ಲ್ಯುʼನಲ್ಲಿ ಒಟ್ಟು 78.942 ಕಿ.ಮೀ. ಉದ್ದದ, 3,822.31 ಕೋಟಿ ರೂ. ವೆಚ್ಚದ 4 ಪಥಗಳ ʻಸಾಹೇಬ್‌ಗಂಜ್ – ಅರೆರಾಜ್– ಬೆಟ್ಟಿಯಾʼ ವಿಭಾಗವನ್ನು ʻಹೈಬ್ರಿಡ್ ವರ್ಷಾಶನ ಮಾದರಿʼಯಲ್ಲಿ (ಎಚ್ಎಎಂ) ನಿರ್ಮಿಸಲು ಸಚಿವ ಸಂಪುಟದ ಅನುಮೋದನೆ
Posted On:
24 SEP 2025 3:07PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು, ಬಿಹಾರದಲ್ಲಿ ʻರಾಷ್ಟ್ರೀಯ ಹೆದ್ದಾರಿ-139ಡಬ್ಲ್ಯುʼನಲ್ಲಿ ಒಟ್ಟು 78.942 ಕಿ.ಮೀ ಉದ್ದದ, ಒಟ್ಟು 3,822.31 ಕೋಟಿ ರೂ. ವೆಚ್ಚದ 4 ಪಥಗಳ ʻಸಾಹೇಬ್‌ಗಂಜ್ – ಅರೆರಾಜ್ – ಬೆಟ್ಟಿಯಾʼ ವಿಭಾಗವನ್ನು ʻಹೈಬ್ರಿಡ್ ವರ್ಷಾಶನ ಮಾದರಿʼಯಲ್ಲಿ (ಎಚ್ಎಎಂ) ನಿರ್ಮಿಸಲು ತನ್ನ ಅನುಮೋದನೆ ನೀಡಿದೆ.
ಪ್ರಸ್ತಾವಿತ ಚತುಷ್ಪಥ ಗ್ರೀನ್‌ಫೀಲ್ಡ್ ಯೋಜನೆಯು ರಾಜ್ಯದ ರಾಜಧಾನಿ ಪಾಟ್ನಾ ಮತ್ತು ಬೆಟ್ಟಿಯಾ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ. ಇದು ಉತ್ತರ ಬಿಹಾರದ ವೈಶಾಲಿ, ಸರನ್, ಸಿವಾನ್, ಗೋಪಾಲ್‌ಗಂಜ್, ಮುಜಾಫರ್‌ಪುರ್, ಪೂರ್ವ ಚಂಪಾರಣ್ ಮತ್ತು ಪಶ್ಚಿಮ ಚಂಪಾರಣ್ ಅನ್ನು ಇಂಡೋ-ನೇಪಾಳ ಗಡಿಯಲ್ಲಿರುವ ಪ್ರದೇಶಗಳವರೆಗೆ ಸಂಪರ್ಕಿಸುತ್ತದೆ. ಈ ಯೋಜನೆಯು ದೂರದ ಸರಕು ಸಾಗಣೆಗೆ ನೆರವಾಗುತ್ತದೆ, ಪ್ರಮುಖ ಮೂಲಸೌಕರ್ಯಗಳಿಗೆ ಪ್ರವೇಶವನ್ನು ಸುಧಾರಿಸುತ್ತದೆ ಜೊತೆಗೆ ಕೃಷಿ ವಲಯಗಳು, ಕೈಗಾರಿಕಾ ಪ್ರದೇಶಗಳು ಮತ್ತು ಗಡಿಯಾಚೆಗಿನ ವ್ಯಾಪಾರ ಮಾರ್ಗಗಳಿಗೆ ಸಂಪರ್ಕವನ್ನು ಸುಧಾರಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ.
ಈ ಯೋಜನೆಯು ಕೇಸರಿಯ ʻಬುದ್ಧ ಸ್ತೂಪʼ (ಸಾಹೇಬ್‌ಗಂಜ್), ಸೋಮೇಶ್ವರನಾಥ ಮಂದಿರ (ಅರೆರಾಜ್), ಜೈನ ಮಂದಿರ ಮತ್ತು ವಿಶ್ವಶಾಂತಿ ಸ್ತೂಪ (ವೈಶಾಲಿ) ಹಾಗೂ ಮಹಾವೀರ ದೇವಾಲಯ (ಪಾಟ್ನಾ) ಸೇರಿದಂತೆ ಪ್ರಮುಖ ಪಾರಂಪರಿಕ ಮತ್ತು ಬೌದ್ಧ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸುವ ಮೂಲಕ ಏಳು ʻಪಿಎಂ ಗತಿ ಶಕ್ತಿʼ ಆರ್ಥಿಕ ಕೇಂದ್ರಗಳು, ಆರು ಸಾಮಾಜಿಕ ಕೇಂದ್ರಗಳು, ಎಂಟು ಲಾಜಿಸ್ಟಿಕ್ ಕೇಂದ್ರಗಳು, ಒಂಬತ್ತು ಪ್ರಮುಖ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
ಪ್ರಸ್ತುತ ವಾಹನದಟ್ಟಣೆಯಿಂದ ಕಿಕ್ಕಿರಿದ ಮತ್ತು ಕಿರಿದಾಗಿರುವ ಪರ್ಯಾಯ ಮಾರ್ಗಗಳಿಗೆ ಹೆಚ್ಚಿನ ವೇಗದ ಸಂಪರ್ಕವನ್ನು ಒದಗಿಸಲು ʻರಾಷ್ಟ್ರೀಯ ಹೆದ್ದಾರಿ -139ಡಬ್ಲ್ಯೂʼ ಅನ್ನು ಯೋಜಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ-31, ರಾಷ್ಟ್ರೀಯ ಹೆದ್ದಾರಿ-722, ರಾಷ್ಟ್ರೀಯ ಹೆದ್ದಾರಿ-727, ರಾಷ್ಟ್ರೀಯ ಹೆದ್ದಾರಿ-27 ಮತ್ತು ರಾಷ್ಟ್ರೀಯ ಹೆದ್ದಾರಿ-ʻ227ಎʼ ಗೆ ಪ್ರಮುಖ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಸ್ತಾವಿತ ಗ್ರೀನ್‌ಫೀಲ್ಡ್ ಸಂಪರ್ಕವು ಗಂಟೆಗೆ 100 ಕಿ.ಮೀ ವಿನ್ಯಾಸದ ವೇಗಕ್ಕೆ ವಿರುದ್ಧವಾಗಿ ಗಂಟೆಗೆ 80 ಕಿ.ಮೀ. ಸರಾಸರಿ ವಾಹನ ವೇಗವನ್ನು ಬೆಂಬಲಿಸುತ್ತದೆ. ಇದು ಅಸ್ತಿತ್ವದಲ್ಲಿರುವ ಪರ್ಯಾಯಗಳಿಗೆ ಹೋಲಿಸಿದರೆ ಸಾಹೇಬ್‌ಗಂಜ್ ಮತ್ತು ಬೆಟ್ಟಿಯಾ ನಡುವಿನ ಒಟ್ಟಾರೆ ಪ್ರಯಾಣದ ಸಮಯವನ್ನು 2.5 ಗಂಟೆಗಳಿಂದ 1 ಗಂಟೆಗೆ ಇಳಿಸುತ್ತದೆ, ಜೊತೆಗೆ ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಿಗೆ ಸುರಕ್ಷಿತ, ವೇಗದ ಮತ್ತು ನಿರಂತರ ಸಂಪರ್ಕವನ್ನು ಒದಗಿಸುತ್ತದೆ.
78.94 ಕಿ.ಮೀ ಉದ್ದದ ಉದ್ದೇಶಿತ ಯೋಜನೆಯು ಸುಮಾರು 14.22 ಲಕ್ಷ ಮಾನವ ದಿನಗಳ ನೇರ ಉದ್ಯೋಗ ಮತ್ತು 17.69 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಉದ್ದೇಶಿತ ಕಾರಿಡಾರ್ ಸುತ್ತಮುತ್ತಲಿನ ಆರ್ಥಿಕ ಚಟುವಟಿಕೆಗಳ ಹೆಚ್ಚಳದಿಂದಾಗಿ ಈ ಯೋಜನೆಯು ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ʻರಾಷ್ಟ್ರೀಯ ಹೆದ್ದಾರಿ 139 ಡಬ್ಲ್ಯೂʼನ ಸಾಹೇಬ್‌ಗಂಜ್-ಅರೆರಾಜ್-ಬೆಟ್ಟಿಯಾ ವಿಭಾಗದ ಯೋಜನಾ ನಕ್ಷೆ

*****
(Release ID: 2170696)
Visitor Counter : 10
Read this release in:
Bengali
,
English
,
Urdu
,
Marathi
,
Hindi
,
Bengali-TR
,
Assamese
,
Manipuri
,
Punjabi
,
Gujarati
,
Telugu
,
Malayalam