ಪ್ರಧಾನ ಮಂತ್ರಿಯವರ ಕಛೇರಿ
ಸಾರ್ವಜನಿಕರ ಆರೋಗ್ಯ ಸುಧಾರಿಸುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಉಪಕ್ರಮಗಳ ಪ್ರಭಾವವನ್ನು ಪ್ರಧಾನಮಂತ್ರಿ ಉಲ್ಲೇಖಿಸಿದ್ದಾರೆ
Posted On:
24 SEP 2025 1:12PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಆರೋಗ್ಯ ರಕ್ಷಣೆಯು ರಾಷ್ಟ್ರೀಯ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭವಾಗಿರುವ ಮನ್ನಣೆಯನ್ನು ಉಲ್ಲೇಖಿಸಿದ್ದಾರೆ. ಇತ್ತೀಚಿನ ಲೇಖನವೊಂದರಲ್ಲಿ, ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಆಯುಷ್ಮಾನ್ ಭಾರತ್, ಪೋಷಣ್ ಅಭಿಯಾನ ಮತ್ತು ಸ್ವಚ್ಛ ಭಾರತ್ ನಂತಹ ಉಪಕ್ರಮಗಳು ಸಾರ್ವಜನಿಕರ ಆರೋಗ್ಯ ಸುಧಾರಿಸುವುದಲ್ಲದೆ ಆರ್ಥಿಕತೆಯನ್ನು ಹೇಗೆ ಬಲಪಡಿಸುತ್ತಿವೆ ಎಂಬುದನ್ನು ಒತ್ತಿ ಹೇಳಿದ್ದರು.
Xನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿಯವರು,
“ಭಾರತದ ಆರೋಗ್ಯ ರಕ್ಷಣೆಯು ಈಗ ಆರ್ಥಿಕ ಬೆಳವಣಿಗೆಯ ಪ್ರಮುಖ ಭಾಗವಾಗಿದೆ ಎಂದು ಡಾ. ದೇವಿ ಪ್ರಸಾದ್ ಶೆಟ್ಟಿಯವರು ಬರೆಯುತ್ತಾರೆ. ಆಯುಷ್ಮಾನ್ ಭಾರತ್, ಪೋಷಣ್ ಅಭಿಯಾನ್ ಮತ್ತು ಸ್ವಚ್ಛ ಭಾರತ್ ನಂತಹ ಉಪಕ್ರಮಗಳು ರೋಗಗಳನ್ನು ಕಡಿಮೆ ಮಾಡುತ್ತಿವೆ, ಮನೆಯ ಉಳಿತಾಯವನ್ನು ರಕ್ಷಿಸಿ, ಮಾನವ ಬಂಡವಾಳವನ್ನು ನಿರ್ಮಿಸುತ್ತಿವೆ. ಆರೋಗ್ಯವನ್ನು ವೆಚ್ಚವಾಗಿ ಅಲ್ಲದೆ, ಹೂಡಿಕೆಯಾಗಿ ನೋಡುವುದು ಆಡಳಿತ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತಿದೆ” ಎಂದು ಹೇಳಿದ್ದಾರೆ.
*****
(Release ID: 2170669)
Visitor Counter : 6
Read this release in:
Marathi
,
English
,
Urdu
,
Hindi
,
Bengali
,
Bengali-TR
,
Manipuri
,
Punjabi
,
Gujarati
,
Tamil
,
Telugu
,
Malayalam