ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗುಜರಾತ್‌ನ ಗಾಂಧಿನಗರದಲ್ಲಿ 2025 ರ ಸ್ಟಾರ್ಟ್‌ಅಪ್ ಕಾನ್ಕ್ಲೇವ್ ಉದ್ಘಾಟಿಸಿದ  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಉದಯೋನ್ಮುಖ ನವೋದ್ಯಮಗಳನ್ನು ಹೂಡಿಕೆದಾರರೊಂದಿಗೆ ಸಂಪರ್ಕಿಸಲು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಮೈಂಡ್ ಟು ಮಾರ್ಕೆಟ್' ಎಂಬ ಮಂತ್ರವನ್ನು ಸಾಕಾರಗೊಳಿಸಲು ಈ ಸಮಾವೇಶವು ಮಹತ್ವದ ವೇದಿಕೆಯನ್ನು ಒದಗಿಸುತ್ತದೆ

ದೇಶದ ಯುವಜನರು ಮತ್ತು ನವೋದ್ಯಮಗಳು ಪ್ರಧಾನಮಂತ್ರಿ ಮೋದಿಯವರ ನವ ಭಾರತ ಚಿಂತನಾ ದೃಷ್ಟಿಕೋನದ ಬೆನ್ನೆಲುಬಾಗಿವೆ

ಸ್ಟಾರ್ಟ್ಅಪ್ ಇಂಡಿಯಾ ಮೂಲಕ ಪ್ರಧಾನಮಂತ್ರಿ ಮೋದಿ ಭಾರತೀಯ ಯುವಜನರನ್ನು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರನ್ನಾಗಿ ಪರಿವರ್ತಿಸಿದ್ದಾರೆ

‘ಸ್ಟಾರ್ಟ್ಅಪ್ ಇಂಡಿಯಾ’ ಪ್ರಾರಂಭವಾದ ಎಂಟು ವರ್ಷಗಳಲ್ಲಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿದೆ

ಪ್ರಧಾನಮಂತ್ರಿ ಮೋದಿ ಸ್ಟಾರ್ಟ್ಅಪ್‌ಗಳನ್ನು ಕೇವಲ ಲಾಭ ಗಳಿಸುವ ಘಟಕಗಳಿಗಿಂತ ಎತ್ತರದಲ್ಲಿರಿಸಿದ್ದಾರೆ, ಅವುಗಳನ್ನು ಸ್ವಾವಲಂಬನೆಗೆ ಮಹತ್ವದ ಸಾಧನವನ್ನಾಗಿ ಮಾಡಿದ್ದಾರೆ

ದೇಶದ ಶೇ. 48 ರಷ್ಟು ನವೋದ್ಯಮಗಳು ಮಹಿಳೆಯರಿಂದ ಸ್ಥಾಪಿಸಲ್ಪಟ್ಟಿವೆ ಮತ್ತು ಈಶಾನ್ಯದಲ್ಲಿ 900 ನವೋದ್ಯಮಗಳು ಮಹಿಳೆಯರಿಂದ ನಡೆಸಲ್ಪಡುತ್ತಿವೆ

ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿನ ನವೋದ್ಯಮಗಳು ಲಕ್ಷಾಂತರ ಬಡ ಜನರಿಗೆ ಆಶೀರ್ವಾದದ ಮೂಲವಾಗುತ್ತಿವೆ

ನವೋದ್ಯಮ ಪರಿಸರ ವ್ಯವಸ್ಥೆಯು ಇಲ್ಲಿಯವರೆಗೆ 17.9 ಲಕ್ಷ ಜನರಿಗೆ ಸುಸ್ಥಿರ ಉದ್ಯೋಗವನ್ನು ಒದಗಿಸಿದೆ

2014 ರಲ್ಲಿ, ಕೇವಲ 500 ಸ್ಟಾರ್ಟ್ಅಪ್ಗಳು ಮತ್ತು 4 ಯುನಿಕಾರ್ನ್ಗಳು ಇದ್ದವು, ಆದರೆ ಇಂದು 1.92 ಲಕ್ಷ ಸ್ಟಾರ್ಟ್ಅಪ್ಗಳು ಮತ್ತು 120 ಕ್ಕೂ ಹೆಚ್ಚು ಯುನಿಕಾರ್ನ್ಗಳು $350 ಬಿಲಿಯನ್ ಗಿಂತ ಹೆಚ್ಚಿನ ಮೌಲ್ಯಮಾಪನವನ್ನು ಹೊಂದಿವೆ

ದೇಶದಲ್ಲಿ ಗುಜರಾತ್ ಸತತ ನಾಲ್ಕು ವರ್ಷಗಳಿಂದ ಸ್ಟಾರ್ಟ್ಅಪ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಪ್ರಧಾನಿ ಮೋದಿಯವರ ಚಿಂತನಾ ದೃಷ್ಟಿಕೋನವನ್ನು ವಾಸ್ತವಕ್ಕೆ ತಂದಿದ್ದಾರೆ

ಮೋದಿ ಸರ್ಕಾರದ ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳು ತೆರಿಗೆದಾರರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ

Posted On: 23 SEP 2025 5:01PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ಗಾಂಧಿನಗರದಲ್ಲಿ ನವೋದ್ಯಮ ಸಮಾವೇಶ (ಸ್ಟಾರ್ಟ್‌ಅಪ್ ಕಾನ್ಕ್ಲೇವ್)  2025ನ್ನು ಉದ್ಘಾಟಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಹಲವಾರು ಗಣ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

9B7A6702.JPG

ನವೋದ್ಯಮ ಜಗತ್ತಿನಲ್ಲಿ ಭಾರತದ ಗುರುತನ್ನು ಸ್ಥಾಪಿಸುವ ಮತ್ತು ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಧ್ಯೇಯದ ಎಲ್ಲಾ ಅಂಶಗಳ ಕುರಿತು ಸಮಾವೇಶವು ಚರ್ಚಿಸಲಿದೆ ಎಂದು ತಮ್ಮ ಭಾಷಣದಲ್ಲಿ ಕೇಂದ್ರ ಗೃಹ ಸಚಿವರೂ ಆಗಿರುವ  ಸಹಕಾರ ಸಚಿವರು ಹೇಳಿದರು. ಈ ಸಮಾವೇಶವನ್ನು ಮೂರು ಮಂತ್ರಗಳ ಶೀರ್ಷಿಕೆಯ ಮೇಲೆ ಆಯೋಜಿಸಲಾಗಿದೆ: ಆವಿಷ್ಕಾರ, ಉನ್ನತೀಕರಣ ಮತ್ತು ವೇಗವರ್ಧನೆ. ಎರಡು ದಿನಗಳಲ್ಲಿ, ವಿವಿಧ ವಿಷಯಗಳ ಕುರಿತು ಏಳು ಅಧಿವೇಶನಗಳಲ್ಲಿ ಚರ್ಚೆಗಳು ನಡೆಯಲಿದ್ದು, ಉದಯೋನ್ಮುಖ ಸ್ಟಾರ್ಟ್‌ಅಪ್‌ಗಳನ್ನು ಹೂಡಿಕೆದಾರರೊಂದಿಗೆ ಸಂಪರ್ಕಿಸಲು ಮತ್ತು ಪ್ರಧಾನಿ ಮೋದಿಯವರ "ಮನಸ್ಸಿನಿಂದ ಮಾರುಕಟ್ಟೆಗೆ" ಎಂಬ ಮಂತ್ರವನ್ನು ಅರಿತುಕೊಳ್ಳಲು ಇದು ಮಹತ್ವದ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯ ಸಂಕಲನವನ್ನು ಸಹ ಪ್ರಾರಂಭಿಸಲಾಗಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಈ ವ್ಯವಸ್ಥೆಯು ಆಯುರ್ವೇದ, ಶಾಸ್ತ್ರೀಯ ಕಲೆಗಳು, ವಾಸ್ತುಶಿಲ್ಪ, ಗಣಿತ, ತತ್ವಶಾಸ್ತ್ರ, ವಿಜ್ಞಾನ, ಬಾಹ್ಯಾಕಾಶ ಮತ್ತು ಪರಿಸರದಂತಹ ಕ್ಷೇತ್ರಗಳಲ್ಲಿ ಪ್ರಪಂಚದಾದ್ಯಂತದ ಅತ್ಯುತ್ತಮ ಜ್ಞಾನವನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಮೋದಿ ಅವರು ಹೊಸ ಶಿಕ್ಷಣ ನೀತಿಯ ಮೂಲಕ ಭಾರತೀಯ ಜ್ಞಾನ ವ್ಯವಸ್ಥೆಯ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಒಂದು ವೇದಿಕೆಯನ್ನು ಸೃಷ್ಟಿಸಿದ್ದಾರೆ, ಇದು ಭಾರತದ ಯುವಜನರಿಗೆ ನಿಧಿಯನ್ನು ತೆರೆದಿಟ್ಟಿದೆ ಎಂದೂ ಶ್ರೀ ಶಾ ಹೇಳಿದರು. ಈ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಯುವ ಭಾರತೀಯರು ವಿಶ್ವ ದರ್ಜೆಯ ಸಂಶೋಧನೆಯನ್ನು ನಡೆಸಬಹುದು ಎಂದವರು ಅಭಿಪ್ರಾಯಪಟ್ಟರು.

2014 ಕ್ಕಿಂತ ಮೊದಲು, ಭಾರತೀಯ ಯುವಜನರು ನವೋದ್ಯಮ ವಲಯದಲ್ಲಿ ಹೊಸತನವನ್ನು ಕಂಡುಕೊಳ್ಳಲು, ಸಂಶೋಧನೆ ನಡೆಸಲು ಅಥವಾ ತಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸಲು ದೇಶವನ್ನು ತೊರೆಯಬೇಕಾಗಿತ್ತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 2000 ದಲ್ಲಿ, ಭಾರತದಲ್ಲಿ ನವೋದ್ಯಮಗಳು, ವ್ಯವಸ್ಥೆಗಳು ಅಥವಾ ಪರಿಸರ ವ್ಯವಸ್ಥೆಗಳ ಪರಿಕಲ್ಪನೆ ಇರಲಿಲ್ಲ. 2014 ರ ಹೊತ್ತಿಗೆ, 500 ಕ್ಕಿಂತ ಕಡಿಮೆ ನವೋದ್ಯಮಗಳು ಇದ್ದವು ಮತ್ತು ನವೋದ್ಯಮಗಳ ಕನಸು ಕಾಣುವುದು ಶ್ರೀಮಂತ ಹಿನ್ನೆಲೆಯ ಮಕ್ಕಳಿಗೆ ಮಾತ್ರ ಸಾಧ್ಯವಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ, ಪ್ರಧಾನಿ ಮೋದಿ 2016 ರಲ್ಲಿ ಸ್ಟಾರ್ಟ್ಅಪ್ ಇಂಡಿಯಾವನ್ನು ಪ್ರಾರಂಭಿಸಿದರು ಮತ್ತು ಇಂದು, ಭಾರತವು ವಿಶ್ವ ದರ್ಜೆಯ ನವೋದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ ಎಂದು ಅವರು ಒತ್ತಿ ಹೇಳಿದರು. ಸ್ಟಾರ್ಟಪ್ ಇಂಡಿಯಾ ಮೂಲಕ, ಪ್ರಧಾನಿ ಮೋದಿ ಭಾರತೀಯ ಯುವಜನರನ್ನು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗ ಸೃಷ್ಟಿಕರ್ತರನ್ನಾಗಿ ಪರಿವರ್ತಿಸುವ ಕನಸನ್ನು ಈಡೇರಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಅವರು ನವೋದ್ಯಮಗಳನ್ನು ಕೇವಲ ಲಾಭ ಗಳಿಸುವ ಘಟಕಗಳೆಂದು ಪರಿಗಣಿತವಾಗಿರುವುದನ್ನು ಮೀರಿ ಉನ್ನತೀಕರಿಸಿದ್ದಾರೆ, ಅವುಗಳನ್ನು ಸ್ವಾವಲಂಬನೆಗೆ ಮಹತ್ವದ ಸಾಧನವನ್ನಾಗಿ ಮಾಡಿದ್ದಾರೆ. ನವೋದ್ಯಮ ಪರಿಸರ ವ್ಯವಸ್ಥೆಯು ದೇಶದ ಹಲವು ಸವಾಲುಗಳನ್ನು ಪರಿಹರಿಸಲು, ನಾವೀನ್ಯತೆಯನ್ನು ವೇಗಗೊಳಿಸಲು ಮತ್ತು ಯುವ ಸೃಜನಶೀಲತೆಗೆ ಅವಕಾಶಗಳನ್ನು ಒದಗಿಸಲು ಒಂದು ವೇದಿಕೆಯಾಗಿದೆ ಎಂದೂ ಅವರು ನುಡಿದರು.

9B7A6413.JPG

2016 ರಿಂದ 2024 ರವರೆಗಿನ ಎಂಟು ವರ್ಷಗಳಲ್ಲಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ರೂಪುಗೊಂಡಿದೆ  ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಲ್ಲದೆ, ಕಳೆದ ಹತ್ತು ವರ್ಷಗಳಲ್ಲಿ, ಭಾರತವು ಮೂರನೇ ಅತಿದೊಡ್ಡ ಡಿಜಿಟಲ್ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ, ನವೋದ್ಯಮ ಪರಿಸರ ವ್ಯವಸ್ಥೆಯನ್ನು ಸಬಲೀಕರಣಗೊಳಿಸುತ್ತಿದೆ. ಡಿಜಿಟಲ್ ಪರಿಸರ ವ್ಯವಸ್ಥೆಯು ಯುವಜನರ ಆಲೋಚನೆಗಳು, ದೃಷ್ಟಿ ಮತ್ತು ಧೈರ್ಯವನ್ನು ತ್ವರಿತವಾಗಿ ರಾಷ್ಟ್ರ ಮತ್ತು ಪ್ರಪಂಚದ ಮುಂಚೂಣಿಗೆ ತರುತ್ತಿದೆ. 2015 ರಲ್ಲಿ, ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 91ನೇ ಸ್ಥಾನದಲ್ಲಿತ್ತು ಮತ್ತು ಇಂದು ಅದು 38 ನೇ ಸ್ಥಾನಕ್ಕೆ ತಲುಪಿದೆ ಎಂದು ಅವರು ಹೇಳಿದರು. ಮುಂದಿನ ಮೂರು ವರ್ಷಗಳಲ್ಲಿ, ಭಾರತವು ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಅಗ್ರ ಹತ್ತು ದೇಶಗಳಲ್ಲಿ ಸ್ಥಾನ ಪಡೆಯುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಜಾಗತಿಕ ನಾವೀನ್ಯತೆಯನ್ನು ಮುನ್ನಡೆಸುತ್ತದೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

9B7A6527.JPG

ಮೋದಿ ಸರ್ಕಾರದ 11 ವರ್ಷಗಳಲ್ಲಿ, ದೇಶದಲ್ಲಿ ಗಮನಾರ್ಹ ಪರಿವರ್ತನೆಗಳು ಕಂಡುಬಂದಿವೆ, ಪ್ರತಿ ವಲಯದಲ್ಲೂ ನವೋದ್ಯಮ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಪ್ರಯತ್ನಗಳು ನಡೆದಿವೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು, ಹೇಳಿದರು. ಈ ವಿಸ್ತರಣೆಯ ಕೀರ್ತಿ ಪ್ರಧಾನಿ ಮೋದಿ ರಚಿಸಿದ ನವೋದ್ಯಮ ವ್ಯವಸ್ಥೆಗೆ ಹಾಗೂ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಸಲ್ಲುತ್ತದೆ. 2014 ರಲ್ಲಿ 500 ರಷ್ಟಿದ್ದ ನವೋದ್ಯಮಗಳ ಸಂಖ್ಯೆ ಇಂದು 1.92 ಲಕ್ಷಕ್ಕೆ ಬೆಳೆದಿದೆ, ಇದು 380 ಪಟ್ಟು ಹೆಚ್ಚು ಎಂದು ಅವರು ಎತ್ತಿ ತೋರಿಸಿದರು. ಅದೇ ರೀತಿ, 2014 ರಲ್ಲಿ ಕೇವಲ 4 ರಷ್ಟಿದ್ದ ಯೂನಿಕಾರ್ನ್ ನವೋದ್ಯಮಗಳ ಸಂಖ್ಯೆ ಇಂದು 120 ಕ್ಕೂ ಹೆಚ್ಚಾಗಿದೆ, ಒಟ್ಟು ಮೌಲ್ಯಮಾಪನ $350 ಬಿಲಿಯನ್ ಮೀರಿದೆ. ಪ್ರಧಾನಿ ಮೋದಿ ಅವರು ರಚಿಸಿದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಮತ್ತು ಪ್ರತಿಭೆಯನ್ನು ಹೇಗೆ ಯೂನಿಕಾರ್ನ್ ನವೋದ್ಯಮಗಳನ್ನು ಬೆಳೆಸಲು ಬಳಸಿಕೊಳ್ಳಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಪ್ರತಿಯೊಂದು ಆಯಾಮದಲ್ಲೂ ವಿಸ್ತರಿಸಲು ನವೋದ್ಯಮಗಳೊಂದಿಗೆ ಸಹಕರಿಸುವಂತೆ ಅವರು ಉದ್ಯಮದ ಪಾಲುದಾರರನ್ನು ಆಗ್ರಹಿಸಿದರು.

ಭಾರತವು ಪ್ರಸ್ತುತ ಐಟಿ ವಲಯದಲ್ಲಿ 21,000 ನವೋದ್ಯಮಗಳನ್ನು ಮತ್ತು ಆರೋಗ್ಯ ರಕ್ಷಣೆಯಲ್ಲಿ 17,000 ನವೋದ್ಯಮಗಳನ್ನು ಹೊಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದಲ್ಲದೆ, ಕೃಷಿ, ಸೇವಾ ವಲಯ ಮತ್ತು ಶಿಕ್ಷಣದಲ್ಲಿ ತಲಾ 11,000 ನವೋದ್ಯಮಗಳಿವೆ. ಭಾರತದ 770 ಜಿಲ್ಲೆಗಳಿಗೆ ನವೋದ್ಯಮಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿವೆ, ಇದು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯ ಬಲವನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು. ಇದಲ್ಲದೆ, 48% ನವೋದ್ಯಮಗಳು ಮಹಿಳೆಯರಿಂದ ಸ್ಥಾಪಿಸಲ್ಪಟ್ಟಿವೆ ಮತ್ತು ಈಶಾನ್ಯದಲ್ಲಿ 900 ನವೋದ್ಯಮಗಳು ಮಹಿಳೆಯರಿಂದ ಮುನ್ನಡೆಸಲ್ಪಡುತ್ತಿವೆ. ನವೋದ್ಯಮ ಪರಿಸರ ವ್ಯವಸ್ಥೆಯು ಇಲ್ಲಿಯವರೆಗೆ 17.9 ಲಕ್ಷ ಜನರಿಗೆ ಸುಸ್ಥಿರ ಉದ್ಯೋಗವನ್ನು ಒದಗಿಸಿದೆ ಎಂದೂ  ಶ್ರೀ ಶಾ ಹೇಳಿದರು.

9B7A6434.JPG

2014 ರಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೋದ್ಯಮಗಳಿಗೆ ಬೆಂಬಲ ನೀಡುವ ವಾತಾವರಣವನ್ನು ಸೃಷ್ಟಿಸಿದ್ದಾರೆ ಮತ್ತು ಅವುಗಳ ಬೆಳವಣಿಗೆಗೆ ಹಣಕಾಸು, ನೀತಿ, ಮೂಲಸೌಕರ್ಯ, ಬ್ಯಾಂಕಿಂಗ್ ಮತ್ತು ಕೈಗಾರಿಕಾ ಬೆಂಬಲವನ್ನು ಒದಗಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರೂ ಆಗಿರುವ  ಸಹಕಾರ ಸಚಿವರು ಹೇಳಿದರು. ₹10,000 ಕೋಟಿ ನಿಧಿಗಳ ನಿಧಿಯನ್ನು ಸ್ಥಾಪಿಸಲಾಗಿದೆ, ₹945 ಕೋಟಿ ನಿಧಿಯೊಂದಿಗೆ ಸ್ಟಾರ್ಟ್ ಅಪ್  ಇಂಡಿಯಾ  ಬೀಜ ನಿಧಿಯನ್ನು ಪ್ರಾರಂಭಿಸಲಾಗಿದೆ, ಗರಿಷ್ಠ ಸಾಲ ಮಿತಿಯನ್ನು ₹10 ಕೋಟಿಯಿಂದ ₹20 ಕೋಟಿಗೆ ಹೆಚ್ಚಿಸಲಾಗಿದೆ, ಪರಿಕಲ್ಪನೆಯ ಪುರಾವೆಗಾಗಿ ₹20 ಲಕ್ಷದವರೆಗೆ ಬೆಂಬಲವನ್ನು ಅನುಮೋದಿಸಲಾಗಿದೆ ಮತ್ತು ಮೂಲಮಾದರಿ ಅಭಿವೃದ್ಧಿಗೆ ₹50 ಲಕ್ಷದವರೆಗೆ ಹಣವನ್ನು ಅನುಮೋದಿಸಲಾಗಿದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಮೋದಿ ಅವರು ಮೇಕ್ ಇನ್ ಇಂಡಿಯಾವನ್ನು ಪ್ರಾರಂಭಿಸಿದರು, 14 ಪ್ರಮುಖ ವಲಯಗಳಲ್ಲಿ ಪಿಎಲ್ಐ ಯೋಜನೆಗಳನ್ನು ಪರಿಚಯಿಸಿದರು, 40,000 ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಿದರು ಮತ್ತು ಕ್ರಿಮಿನಲ್ ಕಾನೂನುಗಳ ವರ್ಗದಿಂದ 3400 ಕ್ಕೂ ಹೆಚ್ಚು ಕಾನೂನುಗಳನ್ನು ತೆಗೆದುಹಾಕಿದರು ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಹೊರತುಪಡಿಸಿ ಬೇರೆ ಯಾರೂ ಜಿಎಸ್‌ಟಿಯನ್ನು ಸರಳೀಕರಿಸಲು ಮತ್ತು ಸುಧಾರಿಸಲು ಸಾಧ್ಯವಿರಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಹಳ ಸಮಯದ ನಂತರ, ದೇಶವು ಪ್ರಧಾನಿ ಮೋದಿಯವರಂತಹ ನಾಯಕರನ್ನು ಕಂಡಿದೆ, ಅವರ ಮೇಲೆ ತೆರಿಗೆದಾರರು ಮತ್ತು ಸಾರ್ವಜನಿಕರು ಇಬ್ಬರೂ ನಂಬಿಕೆ ಇಡಬಹುದು. ಪ್ರಧಾನಿ ಮೋದಿಯವರು ಬಹಳ ಧೈರ್ಯದಿಂದ ಮತ್ತು ಎಲ್ಲಾ ರಾಜ್ಯಗಳನ್ನು ಒಟ್ಟಿಗೆ ಕರೆದುಕೊಂಡು ಜಿಎಸ್‌ಟಿಯನ್ನು ಯಶಸ್ವಿಯಾಗಿ ಜಾರಿಗೆ ತಂದರು ಎಂಬುದನ್ನು  ಅವರು ಒತ್ತಿ ಹೇಳಿದರು. ಜಿಎಸ್‌ಟಿ ಸಂಗ್ರಹವು ₹80,000 ಕೋಟಿಯಿಂದ ಪ್ರಾರಂಭವಾಯಿತು ಮತ್ತು ಇಂದು ₹2 ಲಕ್ಷ ಕೋಟಿ ದಾಟಿದೆ. ಜಿಎಸ್‌ಟಿ ಸುಧಾರಣೆಗಳ ಅಡಿಯಲ್ಲಿ, ಪ್ರಧಾನಿ ಮೋದಿಯವರು ಅನೇಕ ವಸ್ತುಗಳ ದರಗಳನ್ನು ಅರ್ಧದಷ್ಟು, ಮೂರನೇ ಒಂದು ಭಾಗದಷ್ಟು ಮತ್ತು ಕೆಲವು ಸಂದರ್ಭಗಳಲ್ಲಿ ಶೂನ್ಯಕ್ಕೆ ಇಳಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಜಿಎಸ್‌ಟಿ ಸುಧಾರಣೆಗಳ ಮೂಲಕ, ಪ್ರಧಾನಿ ಮೋದಿ ಅವರು ಸರ್ಕಾರದ ಉದ್ದೇಶ ದೇಶವನ್ನು ನಡೆಸಲು ಆದಾಯವನ್ನು ಹೆಚ್ಚಿಸುವುದು, ಜನರನ್ನು ಶೋಷಿಸುವುದು ಅಲ್ಲ ಎಂಬುದನ್ನು  ಸಾರ್ವಜನಿಕರಿಗೆ ತೋರಿಸಿದ್ದಾರೆ ಎಂದರು.

ಭಾರತ ಸ್ವಾತಂತ್ರ್ಯ ಪಡೆದ ನಂತರ, ಸಾರ್ವಜನಿಕರು ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ತೆರಿಗೆ ಕಡಿತವನ್ನು ನೋಡುತ್ತಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಜಿಎಸ್‌ಟಿ ಸುಧಾರಣೆಯು ತೆರಿಗೆದಾರರು ಮತ್ತು ಸರ್ಕಾರದ ನಡುವಿನ ನಂಬಿಕೆಯ ಸೇತುವೆಯಾಗಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ₹2.5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು, ಆದರೆ ಇಂದು ₹12 ಲಕ್ಷದವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ವಿಧಿಸಲಾಗಿದೆ ಎಂದು ಶ್ರೀ ಶಾ ನೆನಪಿಸಿಕೊಂಡರು. ಈ ಎರಡು ಉದಾಹರಣೆಗಳು, ಸರ್ಕಾರವು ಶೋಷಣೆಗಾಗಿ ಅಲ್ಲ, ಜನರಿಗಾಗಿ, ದೇಶದ ಅಭಿವೃದ್ಧಿಗಾಗಿ ಮತ್ತು ಸ್ವಾವಲಂಬನೆಗಾಗಿ ತೆರಿಗೆ ವಿಧಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಅವರ ಕ್ರಮವು ಮುಂಬರುವ ದಶಕಗಳವರೆಗೆ ತೆರಿಗೆದಾರರು ಮತ್ತು ಭಾರತ ಸರ್ಕಾರದ ನಡುವೆ ವಿಶ್ವಾಸದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದೂ ಶ್ರೀ ಶಾ ಹೇಳಿದರು.

ದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗುಜರಾತ್ ಸ್ಟಾರ್ಟ್‌ಅಪ್‌ಗಳಲ್ಲಿ ನಿರಂತರವಾಗಿ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಿ ಮೋದಿಯವರ ಚಿಂತನಾ ದೃಷ್ಟಿಕೋನವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಕ್ಕಾಗಿ ಮತ್ತು ಗುಜರಾತನ್ನು ಸ್ಟಾರ್ಟ್‌ಅಪ್ ಕ್ರಾಂತಿಯ ಕೇಂದ್ರವನ್ನಾಗಿ ಪರಿವರ್ತಿಸಿದ್ದಕ್ಕಾಗಿ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರನ್ನು ಶ್ರೀ ಶಾ ಶ್ಲಾಘಿಸಿದರು, 16,000 ಸ್ಟಾರ್ಟ್‌ಅಪ್‌ಗಳೊಂದಿಗೆ, ಗುಜರಾತ್ ದೇಶದ ಅಗ್ರ ಐದು ರಾಜ್ಯಗಳಲ್ಲಿ ಒಂದಾಗಿದೆ ಮತ್ತು 6,650 ಸ್ಟಾರ್ಟ್‌ಅಪ್‌ಗಳೊಂದಿಗೆ, ಅಹಮದಾಬಾದ್ ಅಗ್ರ ನಾಲ್ಕು ನಗರಗಳಲ್ಲಿ ಒಂದಾಗಿದೆ. ಭಾರತದಲ್ಲಿ ಉದಯೋನ್ಮುಖ ಕೈಗಾರಿಕೆಗಳಲ್ಲಿ ಸ್ಟಾರ್ಟ್‌ಅಪ್‌ಗಳು ಪ್ರಮುಖ ವಲಯವಾಗಿದೆ ಮತ್ತು ವಲಯದ ವೇಗ, ಗಾತ್ರ, ವ್ಯಾಪ್ತಿ ಹಾಗು ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದರು - ಈ ದೃಷ್ಟಿಕೋನವು ಈಗ ಸಾಕಾರಗೊಳ್ಳುತ್ತಿದೆ ಎಂಬುದರತ್ತ ಶ್ರೀ ಶಾ ಬೆಟ್ಟು ಮಾಡಿದರು. ಪ್ರತಿಭೆಯನ್ನು ಬಳಸಿಕೊಳ್ಳುವಲ್ಲಿ  ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಮತ್ತು ಶ್ರೀ ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸರ್ಕಾರಗಳು ಯುವಜನರೊಂದಿಗೆ ಬಂಡೆಯಂತೆ ದೃಢವಾಗಿ ನಿಲ್ಲುತ್ತವೆ ಎಂದು ಅವರು ಒತ್ತಿ ಹೇಳಿದರು. ಯುವಜನರ ಕನಸುಗಳನ್ನು ನನಸಾಗಿಸಲು ಇಬ್ಬರೂ ನಾಯಕರು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿ ಅವರ ನವ ಭಾರತದ ದೃಷ್ಟಿಕೋನದ ಬೆನ್ನೆಲುಬು ಯುವಜನರು ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಎಂದು ಹೇಳಿ ಶ್ರೀ ಶಾ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

*****


(Release ID: 2170376)