ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿಯ ಸಂದರ್ಭದಲ್ಲಿ ಪಂಡಿತ್ ಜಸ್ರಾಜ್ ಅವರ ಭಾವಪೂರ್ಣ ಗಾಯನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ನಾಗರಿಕರು ತಮ್ಮ ನೆಚ್ಚಿನ ಭಜನೆಗಳನ್ನು ಹಂಚಿಕೊಳ್ಳಲು ಪ್ರಧಾನಮಂತ್ರಿ ಅವರು ಆಹ್ವಾನ ನೀಡಿದ್ದಾರೆ

Posted On: 22 SEP 2025 9:32AM by PIB Bengaluru

ನವರಾತ್ರಿಯ ಸಂದರ್ಭದಲ್ಲಿ ಪಂಡಿತ್ ಜಸ್ರಾಜ್ ಅವರ ಭಾವಪೂರ್ಣ ಗಾಯನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ನವರಾತ್ರಿಯ ಶುಭ ಸಂದರ್ಭದಲ್ಲಿ ಶುದ್ಧ ಭಕ್ತಿಯ ಬಗ್ಗೆ ಅನೇಕ ಜನರು ಭಕ್ತಿಯನ್ನು ಸಂಗೀತದ ಮೂಲಕ ಅಂತರ್ಗತಗೊಳಿಸಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. "ನೀವು ಭಜನೆ ಹಾಡಿದ್ದರೆ ಅಥವಾ ನಿಮಗೆ ಇಷ್ಟವಾದ ಭಜನೆ ಯಾವುದಾದರೂ ಇದ್ದರೆ, ದಯವಿಟ್ಟು ಅದನ್ನು ನನ್ನೊಂದಿಗೆ ಹಂಚಿಕೊಳ್ಳಿ. ಮುಂಬರುವ ದಿನಗಳಲ್ಲಿ ನಾನು ಅವುಗಳಲ್ಲಿ ಕೆಲವನ್ನು ರೀ-ಪೋಸ್ಟ್ ಮಾಡುತ್ತೇನೆ!" ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿ:

"ನವರಾತ್ರಿಯು ಶುಭ ಸಂದರ್ಭವು ಶುದ್ಧ ಭಕ್ತಿಯನ್ನು ಸಾರುತ್ತದೆ. ಅನೇಕ ಜನರು ಭಕ್ತಿಯನ್ನು ಸಂಗೀತದ ಮೂಲಕ ಸಂಭ್ರಮಿಸಿದ್ದಾರೆ. ಪಂಡಿತ್ ಜಸ್ರಾಜ್ ಅವರ ಅಂತಹ ಒಂದು ಭಾವಪೂರ್ಣ ಗಾಯನವನ್ನು ಹಂಚಿಕೊಳ್ಳುತ್ತಿದ್ದೇನೆ.

ನೀವು ಭಜನೆ ಹಾಡಿದ್ದರೆ ಅಥವಾ ನೆಚ್ಚಿನದನ್ನು ಹೊಂದಿದ್ದರೆ, ದಯವಿಟ್ಟು ಅದನ್ನು ನನ್ನೊಂದಿಗೆ ಹಂಚಿಕೊಳ್ಳಿ. ಮುಂಬರುವ ದಿನಗಳಲ್ಲಿ ನಾನು ಅವುಗಳಲ್ಲಿ ಕೆಲವನ್ನು ಪೋಸ್ಟ್ ಮಾಡುತ್ತೇನೆ!" ಎಂದು ಟ್ವೀಟ್ ಮಾಡಿದ್ದಾರೆ.

https://youtube.com/watch?v=0NlwLAkuXvo"

 

 

*****

 


(Release ID: 2169458)