ಪ್ರಧಾನ ಮಂತ್ರಿಯವರ ಕಛೇರಿ
ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
19 SEP 2025 11:51AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು, ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮಕ್ಕಳು, ಹದಿಹರೆಯದ ಯುವತಿಯರು ಮತ್ತು ಗರ್ಭಿಣಿ ತಾಯಂದಿರ ಪೋಷಣೆಯನ್ನು ಸುಧಾರಿಸಲು ತೆಗೆದುಕೊಂಡ ಪ್ರಮುಖ ಉಪಕ್ರಮಗಳ ಕುರಿತು ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. "ಅವುಗಳ ಮೂಲಕ ದೇಶಾದ್ಯಂತ ವ್ಯಾಪಿಸಿರುವ ಅಂಗನವಾಡಿ ಕೇಂದ್ರಗಳ ವಿಸ್ತೃತ ಜಾಲದ ಮೂಲಕ ಲಕ್ಷಾಂತರ ಫಲಾನುಭವಿಗಳು ಸಹಾಯ ಪಡೆಯುತ್ತಿದ್ದಾರೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಕೇಂದ್ರ ಸಚಿವರಾದ ಶ್ರೀ ಅನ್ನಪೂರ್ಣಾ ದೇವಿ ಅವರ ಪೋಸ್ಟ್ ಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ.
"ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮಕ್ಕಳು, ಹದಿಹರೆಯದ ಯುವತಿಯರು ಮತ್ತು ಗರ್ಭಿಣಿ ತಾಯಂದಿರ ಪೌಷ್ಟಿಕಾಂಶವನ್ನು ಸುಧಾರಿಸುವ ಪ್ರಮುಖ ಉಪಕ್ರಮವಾಗಿದೆ. ಈ ಉಪಕ್ರಮದಡಿಲ್ಲಿ ದೇಶಾದ್ಯಂತ ವ್ಯಾಪಿಸಿರುವ ಅಂಗನವಾಡಿ ಕೇಂದ್ರಗಳ ವಿಸ್ತೃತ ಜಾಲದ ಮೂಲಕ ಲಕ್ಷಾಂತರ ಫಲಾನುಭವಿಗಳು ಸಹಾಯ ಪಡೆಯುತ್ತಿದ್ದಾರೆ. ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಈ ಲೇಖನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಈ ಯೋಜನೆಯು ನಮ್ಮ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.’’
*****
(रिलीज़ आईडी: 2168382)
आगंतुक पटल : 19
इस विज्ञप्ति को इन भाषाओं में पढ़ें:
Odia
,
Telugu
,
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Tamil
,
Malayalam