ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್ ಕುರಿತ ಲೇಖನವನ್ನು ಹಂಚಿಕೊಂಡಿದ್ದಾರೆ
Posted On:
16 SEP 2025 2:40PM by PIB Bengaluru
ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ದೈನಂದಿನ ವಾಸ್ತವ ಜೀವನದಲ್ಲಿ 'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್' ಹೇಗೆ ಕಾಣುತ್ತದೆ - ವಿದ್ಯುತ್ ಈಗ ಐಷಾರಾಮಿ ವಸ್ತುವಾಗಿ ಉಳಿದಿಲ್ಲ, ಕಲ್ಯಾಣ ಕಾರ್ಯಕ್ರಮಗಳು ನೇರವಾಗಿ ತಲುಪುತ್ತಿವೆ ಮತ್ತು ಮೂಲಸೌಕರ್ಯಗಳನ್ನು ಡಿಜಿಟಲ್ ಸಮನ್ವಯದೊಂದಿಗೆ ಯೋಜಿಸಲಾಗಿದೆ ಎಂಬುದರ ಕುರಿತು ಲೇಖನದಲ್ಲಿ ವಿವರಿಸಲಾಗಿದೆ.
ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಅವರ ಪೋಸ್ಟ್‌ಗೆ ಶ್ರೀ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ:
"ಈ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಅವರು 'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್' ಎಂಬುದು ದೈನಂದಿನ ವಾಸ್ತವ ಜೀವನದಲ್ಲಿ ಕಾಣಿಸುತ್ತದೆ - ವಿದ್ಯುತ್ ಈಗ ಐಷಾರಾಮಿ ವಸ್ತುವಾಗಿ ಉಳಿದಿಲ್ಲ, ಕಲ್ಯಾಣ ಕಾರ್ಯಕ್ರಮಗಳು ನೇರವಾಗಿ ತಲುಪುತ್ತಿವೆ ಮತ್ತು ಮೂಲಸೌಕರ್ಯಗಳನ್ನು ಡಿಜಿಟಲ್ ಸಮನ್ವಯದೊಂದಿಗೆ ಯೋಜಿಸಲಾಗಿದೆ ಎಂದು ಬರೆದಿದ್ದಾರೆ.
ಈ ಭಾರತೀಯ ಮಾದರಿಯನ್ನು ಮೊದಲು ಗುಜರಾತ್‌ನಲ್ಲಿ ಪರೀಕ್ಷಿಸಿ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ಆಡಳಿತವನ್ನು ಕೊನೆಯವರೆಗೂ ತಲುಪಿಸಿದೆ, ಭಾರತದ ಆಡಳಿತ ವ್ಯವಸ್ಥೆಯು ಭರವಸೆಗಳಿಂದ ಕಾರ್ಯನಿರ್ವಹಿಸುವಂತೆ ಮಾಡಿದೆ ಮತ್ತು 2047 ರ ವೇಳೆಗೆ ವಿಕಸಿತ ಭಾರತದ ಹಾದಿಯನ್ನು ರೂಪಿಸಿದೆ."
****
(Release ID: 2167375)
Visitor Counter : 2
Read this release in:
Bengali
,
Telugu
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Malayalam