ಗೃಹ ವ್ಯವಹಾರಗಳ ಸಚಿವಾಲಯ
ಜಾರ್ಖಂಡ್‌ನ ಹಝಾರಿಬಾಗ್‌ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರಿ ಯಶಸ್ಸು ಸಾಧಿಸಿದ್ದಕ್ಕಾಗಿ ಸಿ.ಆರ್.ಪಿ.ಎಫ್ ನ ಕೋಬ್ರಾ ಬೆಟಾಲಿಯನ್ ಮತ್ತು ಜಾರ್ಖಂಡ್ ಪೊಲೀಸರನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ
ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದ್ದ ಕುಖ್ಯಾತ ನಕ್ಸಲ್ ಕಮಾಂಡರ್, ಸಿ.ಸಿ.ಎಂ ಸಹದೇವ್ ಸೊರೆನ್ ಅಲಿಯಾಸ್ ಪರ್ವೇಶ್ ರನ್ನು ತಟಸ್ಥಗೊಳಿಸಿದ ಪಡೆಗಳು
ಭದ್ರತಾ ಪಡೆಗಳಿಂದ ಇತರ ಇಬ್ಬರು ನಕ್ಸಲರಾದ - ರಘುನಾಥ್ ಹೆಂಬ್ರಾಮ್ ಅಲಿಯಾಸ್ ಚಂಚಲ್ ಮತ್ತು ಬಿರ್ಸೆನ್ ಗಂಜು ಅಲಿಯಾಸ್ ರಾಮ್‌ಖೇಲಾವನ್ ನಿರ್ಮೂಲನೆ
ಈ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ನಂತರ ಉತ್ತರ ಜಾರ್ಖಂಡ್‌ನ ಬೊಕಾರೊ ಪ್ರದೇಶದಿಂದ ನಕ್ಸಲ್‌ವಾದ ಸಂಪೂರ್ಣ ನಿರ್ಮೂಲನೆ
ಶೀಘ್ರದಲ್ಲೇ ಇಡೀ ದೇಶವು ನಕ್ಸಲಿಸಂ ಪಿಡುಗಿನಿಂದ ಮುಕ್ತ
Posted On:
15 SEP 2025 5:35PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಜಾರ್ಖಂಡ್‌ನ ಹಝಾರಿಬಾಗ್‌ನಲ್ಲಿ ಇಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರಿ ಯಶಸ್ಸು ಸಾಧಿಸಿದ್ದಕ್ಕಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್)ನ ಕೋಬ್ರಾ ಬೆಟಾಲಿಯನ್ ಮತ್ತು ಜಾರ್ಖಂಡ್ ಪೊಲೀಸರನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಸಾಮಾಜಿಕ ಮಾಧ್ಯಮ ಖಾತೆ ಎಕ್ಸ ನಲ್ಲಿ “ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್)ನ ಕೊಬ್ರಾ ಬೆಟಾಲಿಯನ್ ಮತ್ತು ಜಾರ್ಖಂಡ್ ಪೊಲೀಸರು ಇಂದು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರಿ ಯಶಸ್ಸು ಸಾಧಿಸಿವೆ’’ ಎಂದು ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದ್ದ ಕುಖ್ಯಾತ ನಕ್ಸಲ್ ಕಮಾಂಡರ್ ಸಿ.ಸಿ.ಎಂ ಸಹದೇವ್ ಸೊರೆನ್ ಅಲಿಯಾಸ್ ಪರ್ವೇಶ್ ಅವರನ್ನು ತಟಸ್ಥಗೊಳಿಸಲಾಗಿದೆ. ಇತರ ಇಬ್ಬರು ನಕ್ಸಲರು - ರಘುನಾಥ್ ಹೆಂಬ್ರಾಮ್ ಅಲಿಯಾಸ್ ಚಂಚಲ್ ಮತ್ತು ಬಿರ್ಸೆನ್ ಗಂಜು ಅಲಿಯಾಸ್ ರಾಮ್ಖೇಲಾವನ್ - ಅವರನ್ನು ಭದ್ರತಾ ಪಡೆಗಳುನಿರ್ಮೂಲನೆ ಮಾಡಿವೆ. ಈ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ನಂತರ ಉತ್ತರ ಜಾರ್ಖಂಡ್‌ನ ಬೊಕಾರೊ ಪ್ರದೇಶದಿಂದ ನಕ್ಸಲ್‌ವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರಿಂದಾಗಿ ಶೀಘ್ರವೇ ಇಡೀ ದೇಶವು ನಕ್ಸಲಿಸಂ ಪಿಡುಗಿನಿಂದ ಮುಕ್ತವಾಗಲಿದೆ.
****
(Release ID: 2166933)
Visitor Counter : 2