ಕೃಷಿ ಸಚಿವಾಲಯ
azadi ka amrit mahotsav

ಹೊಸ ಜಿ.ಎಸ್.ಟಿ ದರಗಳು: ಕೃಷಿ ಮತ್ತು ರೈತರ ಸಮೃದ್ಧಿಗೆ ವರದಾನ


"ಜಿ.ಎಸ್.ಟಿ ಸುಧಾರಣೆಗಳಿಗಾಗಿ ರಾಷ್ಟ್ರವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಿಗೆ ಕೃತಜ್ಞವಾಗಿದೆ": ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

"ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯ ಹೊಸ ಅಧ್ಯಾಯಗಳು ಬರೆಯಲ್ಪಡುತ್ತವೆ ಮತ್ತು ನಾವು ಪ್ರತಿಯೊಂದು ವಲಯದಲ್ಲೂ ಸಕಾರಾತ್ಮಕ ಫಲಿತಾಂಶಗಳನ್ನು ನೋಡುತ್ತೇವೆ" - ಕೇಂದ್ರ ಕೃಷಿ ಸಚಿವರಾದ ಶ್ರೀ ಚೌಹಾಣ್

Posted On: 09 SEP 2025 2:13PM by PIB Bengaluru

ಹೊಸ ಜಿ.ಎಸ್.ಟಿ (ಸರಕು ಮತ್ತು ಸೇವಾ ತೆರಿಗೆ) ದರಗಳು ಕೃಷಿ ಮತ್ತು ಡೈರಿ ವಲಯದಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತವೆ. ದೇಶಾದ್ಯಂತ ರೈತರು, ಕೃಷಿ ಮತ್ತು ಡೈರಿ ಕಾರ್ಮಿಕರು ಮತ್ತು ಹೈನುಗಾರರು ಜಿ.ಎಸ್.ಟಿ ದರಗಳನ್ನು ಕಡಿತಗೊಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹೊಸ ದರಗಳನ್ನು ಕ್ರಾಂತಿಕಾರಿ ನಿರ್ಧಾರ ಎಂದು ಬಣ್ಣಿಸಿದ್ದಾರೆ ಮತ್ತು ಐತಿಹಾಸಿಕ ಬದಲಾವಣೆಯ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಜಿ.ಎಸ್.ಟಿ ಸುಧಾರಣೆಗಳ ಪರಿಣಾಮವು ಸಣ್ಣ ಮತ್ತು ಮಧ್ಯಮ ರೈತರ ಮೇಲೆ ವ್ಯಾಪಕವಾಗಿ ಕಂಡುಬರುತ್ತದೆ. ಕೃಷಿ ಯಂತ್ರೋಪಕರಣಗಳು ಮತ್ತು ಸೌರಶಕ್ತಿ ಚಾಲಿತ ಉಪಕರಣಗಳ ಮೇಲಿನ ಕಡಿಮೆ ಜಿ.ಎಸ್.ಟಿ ಕೃಷಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಲಾಭವನ್ನು ಹೆಚ್ಚಿಸುತ್ತದೆ. ಜೈವಿಕ ಕೀಟನಾಶಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಮೇಲಿನ ಜಿ.ಎಸ್.ಟಿ ಯನ್ನು ಕಡಿಮೆ ಮಾಡಲಾಗಿದೆ, ಇದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರು ರಾಸಾಯನಿಕಗಳಿಂದ ಜೈವಿಕ ಗೊಬ್ಬರಗಳಿಗೆ ಬದಲಾಗುತ್ತಾರೆ. ಡೈರಿ ವಲಯದಲ್ಲಿ, ಹಾಲು ಮತ್ತು ಚೀಸ್ ಮೇಲೆ ಈಗ ಶೂನ್ಯ ಜಿ.ಎಸ್.ಟಿ ಇರುತ್ತದೆ, ಇದು ಸಾಮಾನ್ಯ ನಾಗರಿಕರಿಗೆ ಮಾತ್ರವಲ್ಲದೆ ರೈತರು, ಹೈನುಗಾರರು ಮತ್ತು ಡೈರಿ ಉತ್ಪಾದಕರಿಗೂ ಪ್ರಯೋಜನವನ್ನು ನೀಡುತ್ತದೆ. ಜಿ.ಎಸ್.ಟಿ  ಧಾರಣೆಗಳು ಸಮಗ್ರ ಕೃಷಿಯನ್ನು ಸಹ ಉತ್ತೇಜಿಸುತ್ತವೆ. ಪಶುಸಂಗೋಪನೆ, ಜೇನುಸಾಕಣೆ, ಮೀನುಗಾರಿಕೆ, ಕೃಷಿ ಅರಣ್ಯ ಮತ್ತು ಕೋಳಿ ಸಾಕಣೆ ಸ್ಪಷ್ಟ ಪ್ರಯೋಜನಗಳನ್ನು ಕಾಣುತ್ತವೆ. ತೆಂಡು ಎಲೆಗಳ ಮೇಲಿನ ಕಡಿಮೆ ಜಿ.ಎಸ್.ಟಿ ಬುಡಕಟ್ಟು ಸಮುದಾಯಗಳ ಜೀವನೋಪಾಯವನ್ನು ಬಲಪಡಿಸುತ್ತದೆ, ವಾಣಿಜ್ಯ ಸರಕು ವಾಹನಗಳ ಮೇಲಿನ ಕಡಿಮೆ ಜಿ.ಎಸ್.ಟಿ ಕೃಷಿ ಉತ್ಪನ್ನಗಳ ಸಾಗಣೆಯನ್ನು ಅಗ್ಗವಾಗಿಸುತ್ತದೆ.

ಕಡಿಮೆ ಬೆಲೆಗಳು, ಹೆಚ್ಚಿನ ಲಾಭ

ಟ್ರ್ಯಾಕ್ಟರ್ ಬೆಲೆ ಇಳಿಕೆ

ಟ್ರಾಕ್ಟರ್ ಬಿಡಿಭಾಗಗಳು ಅಗ್ಗವಾಗಲಿವೆ

ಕೃಷಿ ಉಪಕರಣಗಳು ಹೆಚ್ಚು ಕೈಗೆಟುಕಲಿವೆ

ಸೌರಶಕ್ತಿ ಚಾಲಿತ ನೀರಾವರಿ ಉಪಕರಣಗಳು ಅಗ್ಗವಾಗಲಿವೆ

ರಸಗೊಬ್ಬರಗಳ ಬೆಲೆ ಕಡಿಮೆಯಾಗಲಿದೆ

ಕೀಟನಾಶಕಗಳು ಅಗ್ಗವಾಗಲಿವೆ

ಹಣ್ಣುಗಳು ಮತ್ತು ತರಕಾರಿಗಳು ಅಗ್ಗವಾಗಲಿವೆ

ಬೀಜಗಳ ಬೆಲೆ ಕಡಿಮೆಯಾಗಲಿದೆ

ಆಹಾರ ಸಂಸ್ಕರಣೆಗೆ ಉತ್ತೇಜನ ದೊರೆಯಲಿದೆ

ಹಾಲು ಮತ್ತು ಚೀಸ್ ಮೇಲೆ ಜಿ.ಎಸ್.ಟಿ ಇಲ್ಲ

ದೇಶೀಯ ಉತ್ಪನ್ನಗಳಿಗೆ ಉತ್ತೇಜನ

ʼತಯಾರಿಸಿದ/ಸಂರಕ್ಷಿತ ಮೀನು’ಮೇಲಿನ ಜಿ.ಎಸ್.ಟಿ ಇಳಿಕೆ

ನೈಸರ್ಗಿಕ ಜೇನುತುಪ್ಪದ ಬೆಲೆ ಕಡಿಮೆಯಾಗಲಿದೆ

ತೆಂಡು ಎಲೆಗಳ ಮೇಲಿನ ಜಿ.ಎಸ್.ಟಿ ಇಳಿಕೆ

ವಿವಿಧ ವಲಯಗಳ ಮೇಲೆ ಜಿ.ಎಸ್.ಟಿ ಕಡಿತದ ವಿವರವಾದ ಪರಿಣಾಮ

ಕೃಷಿ ಯಾಂತ್ರೀಕರಣ

  • ಟ್ರ್ಯಾಕ್ಟರ್‌ಗಳ (<1800 cc) ಮೇಲಿನ ಜಿ.ಎಸ್.ಟಿ  ಶೇ.5 ಕ್ಕೆ ಇಳಿಕೆ
  • ಟೈರ್‌ ಗಳು, ಟ್ಯೂಬ್‌ ಗಳು, ಹೈಡ್ರಾಲಿಕ್ ಪಂಪ್‌ ಗಳು ಸೇರಿದಂತೆ ಟ್ರ್ಯಾಕ್ಟರ್ ಬಿಡಿಭಾಗಗಳು: ಜಿ.ಎಸ್.ಟಿ ಶೇ.18 ರಿಂದ ಶೇ.5 ಕ್ಕೆ ಇಳಿಕೆ
  • ಸ್ಪ್ರಿಂಕ್ಲರ್‌ ಗಳು, ಹನಿ ನೀರಾವರಿ, ಕೊಯ್ಲು ಯಂತ್ರೋಪಕರಣಗಳು, ಟ್ರ್ಯಾಕ್ಟರ್ ಬಿಡಿಭಾಗಗಳು: ಜಿ.ಎಸ್.ಟಿ  ಶೇ.12 ರಿಂದ ಶೇ.5 ಕ್ಕೆ ಇಳಿಕೆ.
  • ಸ್ಥಿರ ವೇಗದ ಡೀಸೆಲ್ ಎಂಜಿನ್‌ ಗಳು (>15 ಹೆಚ್‌ ಪಿ), ಒಕ್ಕಣೆ/ಕೊಯ್ಲು ಯಂತ್ರಗಳು, ಕಾಂಪೋಸ್ಟ್ ತಯಾರಿಕೆ ಯಂತ್ರಗಳು: ಜಿ.ಎಸ್.ಟಿ ಶೇ.12 ರಿಂದ ಶೇ.5 ಕ್ಕೆ ಇಳಿಕೆ.
  • ಕಡಿಮೆ ಟ್ರ್ಯಾಕ್ಟರ್ ಬೆಲೆಗಳು ಸಣ್ಣ ಮತ್ತು ಮಧ್ಯಮ ರೈತರಿಗೆ ಯಾಂತ್ರೀಕರಣವನ್ನು ಪ್ರವೇಶಿಸುವಂತೆ ಮಾಡುತ್ತದೆ, ಸಮಯವನ್ನು ಉಳಿಸುತ್ತದೆ, ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಉತ್ಪಾದಕತೆಯನ್ನು ಸುಧಾರಿಸುತ್ತದೆ.

ಜನಪ್ರಿಯ ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಹಳೆಯ ಮತ್ತು ಹೊಸ ಜಿ.ಎಸ್.ಟಿ  ವ್ಯತ್ಯಾಸದ ಲೆಕ್ಕಾಚಾರ:

ಕ್ರ.ಸಂ.

ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಹೆಸರು

ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೂಲ ವೆಚ್ಚ (ರೂ.)

ಪ್ರಸ್ತುತ ಜಿ.ಎಸ್.ಟಿ@ 12 %

(ರೂ.)

12% ಜಿ.ಎಸ್.ಟಿ  ಯೊಂದಿಗೆ ಒಟ್ಟು ವೆಚ್ಚ

(ರೂ.)

ಮುಂಬರುವ ಪರಿಷ್ಕೃತ ಜಿ.ಎಸ್.ಟಿ@ 5%

(ರೂ.)

ಪರಿಷ್ಕೃತ ಜಿ.ಎಸ್.ಟಿ@ 5% ರೊಂದಿಗೆ ಒಟ್ಟು ವೆಚ್ಚ

(ರೂ.)

ಉಳಿತಾಯ

(ರೂ.)

  1.  

ಟ್ರ್ಯಾಕ್ಟರ್ 35 ಎಚ್‌ ಪಿ

5,80,000

69,600

6,50,000

29,000

6,09,000

41,000

  1.  

ಟ್ರಾಕ್ಟರ್ 45 ಎಚ್‌ ಪಿ

6,43,000

77,160

7,20,000

32,150

6,75,000

45,000

  1.  

ಟ್ರಾಕ್ಟರ್ 50 ಎಚ್‌ ಪಿ

7,59.000

91,080

8,50,000

37,950

7,97,000

53,000

  1.  

ಟ್ರಾಕ್ಟರ್ 75 ಎಚ್‌ ಪಿ

8,93,000

1,07,160

10,00,000

44,650

9,37,000

63,000

  1.  

ಪವರ್ ಟಿಲ್ಲರ್ 13 ಎಚ್‌ ಪಿ

1,69,643

20,357

1,90,000

8,482

1,78,125

11,875

  1.  

ಭತ್ತದ ನಾಟಿ ಯಂತ್ರ- 4 ಸಾಲು ವಾಕ್ ಬ್ಯಾಕ್

2,20,000

26,400

2,46,400

11,000

2,31,000

15,400

  1.  

ಮಲ್ಟಿಕ್ರಾಪ್ ಥ್ರೆಷರ್ - 4 ಟೋನ್/ಗಂ ಸಾಮರ್ಥ್ಯ

2,00,000

24,000

2,24,000

1,0000

2,10,000

14,000

  1.  

ಪವರ್ ವೀಡರ್ - 7.5 ಎಚ್‌ ಪಿ

78,500

9,420

87,920

3,925

82,425

5,495

  1.  

ಟ್ರೇಲರ್ 5 ಟೋನ್ ಸಾಮರ್ಥ್ಯ

1,50,000

18,000

1,68,000

7,500

1,57,500

10,500

  1.  

ಸೀಡ್ ಕಮ್ ಫರ್ಟಿಲೈಜರ್ ಡ್ರಿಲ್ - 11 ಟೈನ್

46,000

5,520

51,520

2,300

48,300

3,220

  1.  

ಸೀಡ್ ಕಮ್ ಫರ್ಟಿಲೈಜರ್ ಡ್ರಿಲ್ - 13 ಟೈನ್

62,500

7,500.00

70,000

3,125.00

65,625

4,375

  1.  

ಹಾರ್ವೆಸ್ಟರ್ ಕಂಬೈನ್ 14 ಅಡಿ ಕಟ್ಟರ್ ಬಾರ್

26,78,571

3,21,428

30,00,000

1,33,928

28,12,500

1,87,500

  1.  

ಸ್ಟ್ರಾ ರೀಪರ್ 5 ಅಡಿ

3,12,500

37,500.

3,50,000

15,625

3,28,125

21,875

  1.  

ಸೂಪರ್ ಸೀಡರ್ 8 ಅಡಿ

2,41,071

28,928.57

2,70,000

12,053

2,53,125

16,875

  1.  

ಹ್ಯಾಪಿ ಸೀಡರ್ 10 ಟೈನ್

1,51,786

18,214

1,70,000

7,589.29

1,59,375

10,625

  1.  

ರೋಟೇವೇಟರ್ 6 ಅಡಿ

1,11,607

13,392

1,25,000

5,580

1,17,187

7,812

  1.  

ಬೇಲರ್ ಸ್ಕ್ವೇರ್ 6 ಅಡಿ

13,39,286

1,60,714

15,00,000

66,964

14,06,250

93,750

  1.  

ಮಲ್ಚರ್ 8 ಅಡಿ

1,65,179

19,821

1,85,000

8,258

1,73,437

11,562

  1.  

ನ್ಯೂಮ್ಯಾಟಿಕ್ ಪ್ಲಾಂಟರ್ 4 ಸಾಲು ⁠

4,68,750

56,250

5,25,000

23,437

4,92,187

32,812

  1.  

ಸ್ಪ್ರೇಯರ್ ಟ್ರ್ಯಾಕ್ಟರ್ ಮೌಂಟೆಡ್ 400 ಲೀಟರ್ ಸಾಮರ್ಥ್ಯ

1,33,929

16,071

1,50,000

6,696

1,40,625

9,375

ರಸಗೊಬ್ಬರಗಳು

  • ಅಮೋನಿಯಾ, ಸಲ್ಫ್ಯೂರಿಕ್ ಆಮ್ಲ, ನೈಟ್ರಿಕ್ ಆಮ್ಲ: ಜಿ.ಎಸ್.ಟಿ ಶೇ.18 ರಿಂದ ಶೇ.5 ಕ್ಕೆ ಇಳಿಕೆ.
  • ದರಗಳಲ್ಲಿನ ಕಡಿತವು ರಸಗೊಬ್ಬರ ಉತ್ಪಾದನೆಗೆ ತಿರುಗುಮುರುಗು (ಅಂತಿಮ ವಸ್ತುಗಳ ಮೇಲಿನ ತೆರಿಗೆಗಿಂತ ಅವುಗಳ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಮೇಲೆ ಅಧಿಕ ತೆರಿಗೆ)  ಸುಂಕ ರಚನೆಯನ್ನು ಸರಿಪಡಿಸುತ್ತದೆ.

ಜೈವಿಕ ಕೀಟನಾಶಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು

  • 12 ಜೈವಿಕ ಕೀಟನಾಶಕಗಳು ಮತ್ತು ಹಲವಾರು ಸೂಕ್ಷ್ಮ ಪೋಷಕಾಂಶಗಳು: ಜಿ.ಎಸ್.ಟಿ ಶೇ.12 ರಿಂದ ಶೇ.5 ಕ್ಕೆ ಇಳಿಕೆ.
  • ಜೈವಿಕ ಆಧಾರಿತ ಒಳಹರಿವು ಹೆಚ್ಚು ಕೈಗೆಟುಕುವಂತೆ ಮಾಡಲಾಗಿದ್ದು, ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ.
  • ರಾಸಾಯನಿಕ ಕೀಟನಾಶಕಗಳಿಂದ ಜೈವಿಕ ಕೀಟನಾಶಕಗಳಿಗೆ ಬದಲಾಗಲು ರೈತರನ್ನು ಪ್ರೋತ್ಸಾಹಿಸಿ, ಮಣ್ಣಿನ ಆರೋಗ್ಯ ಮತ್ತು ಬೆಳೆ ಗುಣಮಟ್ಟವನ್ನು ಸುಧಾರಿಸುತ್ತದೆ.
  • ಸರ್ಕಾರದ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಸಣ್ಣ ಸಾವಯವ ರೈತರು ಮತ್ತು ಎಫ್‌ ಪಿ ಒ ಗಳಿಗೆ ನೇರ ಲಾಭ.

ಹಣ್ಣುಗಳು, ತರಕಾರಿಗಳು ಮತ್ತು ಆಹಾರ ಸಂಸ್ಕರಣೆ

  • ಸಿದ್ಧಪಡಿಸಿದ/ಸಂರಕ್ಷಿತ ತರಕಾರಿಗಳು, ಹಣ್ಣುಗಳು, ಬೀಜಗಳು: ಜಿ.ಎಸ್.ಟಿ ಶೇ.12 ರಿಂದ ಶೇ.5 ಕ್ಕೆ ಇಳಿಕೆ.
  • ಶೀಥಲೀಕರಣ, ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಉತ್ತೇಜನ.
  • ಬೇಗ ಹಾಳಾಗುವ ವಸ್ತುಗಳ ವ್ಯರ್ಥದಲ್ಲಿ ಕಡಿತ, ರೈತರಿಗೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುತ್ತದೆ.
  • ಸಂಸ್ಕರಿಸಿದ ಆಹಾರದ ರಫ್ತನ್ನು ಉತ್ತೇಜಿಸುತ್ತದೆ, ಕೃಷಿ-ರಫ್ತು ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.

ಡೈರಿ ವಲಯ

  • ಹಾಲು ಮತ್ತು ಚೀಸ್ ಮೇಲೆ ಜಿ.ಎಸ್.ಟಿ ಇಲ್ಲ.
  • ಬೆಣ್ಣೆ, ತುಪ್ಪ ಇತ್ಯಾದಿಗಳ ಮೇಲಿನ ಜಿ.ಎಸ್.ಟಿ ಶೇ.12 ರಿಂದ ಶೇ.5 ಕ್ಕೆ ಇಳಿಕೆ.
  • ಡೈರಿ ರೈತರ ಉತ್ಪನ್ನಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ
  • ಹಾಲಿನ ಡಬ್ಬಿಗಳ (ಕಬ್ಬಿಣ/ಉಕ್ಕು/ಅಲ್ಯೂಮಿನಿಯಂ) ಮೇಲಿನ ಜಿ.ಎಸ್.ಟಿ ಈಗ ಶೇ.12 ರ ಬದಲು ಶೇ.5 ಕ್ಕೆ ಇಳಿಕೆ
  • ದೇಶೀಯ ಡೈರಿ ಉತ್ಪನ್ನಗಳಿಗೆ ಉತ್ತೇಜನ

ಜಲಚರ ಸಾಕಣೆ

  • “ತಯಾರಿಸಿದ ಅಥವಾ ಸಂರಕ್ಷಿಸಿದ ಮೀನು’ಮೇಲಿನ ಜಿ.ಎಸ್.ಟಿ ಶೇ.12 ರಿಂದ ಶೇ.5 ಕ್ಕೆ ಇಳಿಕೆ.
  • ರಾಷ್ಟ್ರವ್ಯಾಪಿ ಜಲಚರ ಸಾಕಣೆ ಮತ್ತು ಮೀನು ಸಾಕಣೆಯನ್ನು ಪ್ರೋತ್ಸಾಹಿಸುತ್ತದೆ.

ಜೇನುತುಪ್ಪ

  • ನೈಸರ್ಗಿಕ ಜೇನುತುಪ್ಪದ ಮೇಲಿನ ಜಿ.ಎಸ್.ಟಿ ಕಡಿತ, ಜೇನುಸಾಕಣೆದಾರರು, ಬುಡಕಟ್ಟು ಸಮುದಾಯಗಳು ಮತ್ತು ಗ್ರಾಮೀಣ ಸ್ವಸಹಾಯ ಸಂಘಗಳಿಗೆ ಪ್ರಯೋಜನವನ್ನು ನೀಡುತ್ತದೆ.
  • ನೈಸರ್ಗಿಕ ಜೇನುತುಪ್ಪದೊಂದಿಗೆ ಬೆರೆಸಿದ ಅಥವಾ ಬೆರಸದ ಕೃತಕ ಜೇನುತುಪ್ಪದ ಮೇಲಿನ ಜಿ.ಎಸ್.ಟಿ ಯನ್ನು ಶೇ.18 ರಿಂದ ಶೇ.5 ಕ್ಕೆ ಇಳಿಸಲಾಗಿದೆ.

ಸೌರಶಕ್ತಿ ಚಾಲಿತ ಉಪಕರಣಗಳು

  • ಸೌರಶಕ್ತಿ ಚಾಲಿತ ಸಾಧನಗಳ ಮೇಲಿನ ಜಿ.ಎಸ್.ಟಿ ಶೇ.12 ರಿಂದ ಶೇ.5 ಕ್ಕೆ ಇಳಿಕೆ.
  • ಕೈಗೆಟುಕುವ ಸೌರ ಉಪಕರಣಗಳು ನೀರಾವರಿ ವೆಚ್ಚವನ್ನು ಕಡಿಮೆ ಮಾಡುತ್ತವೆ, ಇದು ರೈತರಿಗೆ ಸಹಾಯ ಮಾಡುತ್ತದೆ.

ತೆಂಡು ಎಲೆಗಳು

  • ಜಿ.ಎಸ್.ಟಿ ಶೇ.18 ರಿಂದ ಶೇ.5 ಕ್ಕೆ ಇಳಿಕೆ.
  • ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸಗಢದ ರೈತರು ಮತ್ತು ಬುಡಕಟ್ಟು ಜನಾಂಗದವರಿಗೆ ತೆಂಡು ಎಲೆಗಳು ಪ್ರಮುಖ ಆದಾಯದ ಮೂಲವಾಗಿರುವುದರಿಂದ, ಈ ಕಡಿತವು ಈ ರಾಜ್ಯಗಳಲ್ಲಿ ಜೀವನೋಪಾಯವನ್ನು ಬಲಪಡಿಸುತ್ತದೆ.

ಒಟ್ಟಾರೆಯಾಗಿ, ಕೃಷಿಯಲ್ಲಿ ಜಿ.ಎಸ್.ಟಿ ತರ್ಕಬದ್ಧಗೊಳಿಸುವಿಕೆಯು ರೈತ ಸ್ನೇಹಿ, ಗ್ರಾಮೀಣ ಪರ ಮತ್ತು ಸುಸ್ಥಿರ ಅಭಿವೃದ್ಧಿ ಪರ ಸುಧಾರಣೆಯಾಗಿದೆ - ಇದು ರೈತರ ವೆಚ್ಚವನ್ನು ಕಡಿಮೆ ಮಾಡುತ್ತದೆ, ಸಹಕಾರಿ ಸಂಘಗಳು ಮತ್ತು ಎಫ್‌ ಪಿ ಒ ಗಳನ್ನು ಉತ್ತೇಜಿಸುತ್ತದೆ ಮತ್ತು ಆಹಾರ ಭದ್ರತೆಯನ್ನು ಬಲಪಡಿಸುತ್ತದೆ. ಕೃಷಿಗೆ ಈ ಉತ್ತೇಜನವು ಬಹುಮುಖಿಯಾಗಲಿದೆ ಮತ್ತು ಎಲ್ಲಾ ಸಂಬಂಧಿತ ಚಟುವಟಿಕೆಗಳಲ್ಲಿ ವಿತರಿಸಲ್ಪಡುತ್ತದೆ. ರಸಗೊಬ್ಬರ ವೆಚ್ಚವನ್ನು ಕಡಿಮೆ ಮಾಡುವುದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ಶೀಥಲೀಕರಣ ಸಂಗ್ರಹಣೆ ಮತ್ತು ಕೃಷಿ ಸಂಸ್ಕರಣೆಯನ್ನು ಹೆಚ್ಚಿಸುತ್ತದೆ ಮತ್ತು ಕೃಷಿಯಲ್ಲಿ ಯಾಂತ್ರೀಕರಣವನ್ನು ಹೆಚ್ಚಿಸುತ್ತದೆ. ಇವುಗಳ ಹೊರತಾಗಿ, ಜಲಚರ ಸಾಕಣೆ, ಹೈನುಗಾರಿಕೆ ಮತ್ತು ಸಂಬಂಧಿತ ಸಹಕಾರಿ ಸಂಸ್ಥೆಗಳು ಹೆಚ್ಚು ಲಾಭದಾಯಕವಾಗುತ್ತವೆ. ಮೇಲಿನವುಗಳ ಅನುಸರಣಾ ಪರಿಣಾಮವು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳು ಮತ್ತು ಪ್ಯಾಕ್ ಮಾಡಿದ ಆಹಾರಗಳ ವಿರುದ್ಧ ನಮ್ಮನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ. ಸ್ವಾವಲಂಬಿಯಾಗಲು, ನಮ್ಮ ದೇಶೀಯ ಆಹಾರ ಉತ್ಪಾದನೆಯು ಆಹಾರ ಪದಾರ್ಥಗಳ ಆಮದಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ.

 

*****


(Release ID: 2164941) Visitor Counter : 2