ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತ ಜಾಗತಿಕ ಸವಾಲುಗಳನ್ನು ಎದುರಿಸಲು ಒಗ್ಗಟ್ಟಿನಿಂದ ನಿಂತಿದೆ; ಸ್ವದೇಶಿ ಮತ್ತು ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡುವುದು ಅತ್ಯಗತ್ಯ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್


ಭಾರತ “ಶೂನ್ಯ ದೋಷ, ಶೂನ್ಯ ಪರಿಣಾಮ” ಬೆಳವಣಿಗೆಗೆ ಬದ್ಧವಾಗಿದೆ; ವಿಶ್ವಾಸಾರ್ಹ ಜಾಗತಿಕ ಪಾಲುದಾರ ಮತ್ತು ಸುಸ್ಥಿರತೆ ಪ್ರಯತ್ನಗಳಲ್ಲಿ ಅಗ್ರ ಪ್ರದರ್ಶಕ: ಶ್ರೀ ಗೋಯಲ್

ಜಿಎಸ್‌ಟಿ ದರ ಕಡಿತ ಮತ್ತು ಸುಧಾರಣೆಗಳು ದೇಶೀಯ ಬೇಡಿಕೆ ಹೆಚ್ಚಿಸುತ್ತವೆ; ಭಾರತ ಜಾಗತಿಕ ಆರ್ಥಿಕ ಶಕ್ತಿಯಾಗಲು ಸಿದ್ಧವಾಗಿದೆ: ಶ್ರೀ ಪಿಯೂಷ್ ಗೋಯಲ್

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ದುರ್ಬಲ ಐದರಿಂದ ಅಗ್ರ ಐದು ಆರ್ಥಿಕತೆಯ ಸ್ಥಾನಕ್ಕೆ ಏರಿದೆ; ನಾಲ್ಕು ವರ್ಷಗಳಿಂದ ವೇಗವಾಗಿ ಬೆಳೆಯುತ್ತಿದೆ: ಶ್ರೀ ಪಿಯೂಷ್ ಗೋಯಲ್

Posted On: 08 SEP 2025 1:59PM by PIB Bengaluru

ಜಾಗತಿಕ ಪರಿಸ್ಥಿತಿಯಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಬಂದರೂ ಭಾರತ ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು, ಇಂದು ನಡೆದ 56ನೇ ಇಇಪಿಸಿ ಇಂಡಿಯಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು. ಯಾವುದೇ ಬಿಕ್ಕಟ್ಟು ನಿವಾರಿಸುವ ಸಾಮರ್ಥ್ಯ ದೇಶಕ್ಕಿದೆ. ವ್ಯಾಪಾರಗಳು ಸ್ವದೇಶಿ ಉತ್ಪನ್ನಗಳ ಮೇಲೆ ಗಮನಹರಿಸಬೇಕು ಏಕೆಂದರೆ, ಇದು ಭಾರತದ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೇ ದೇಶದ ಆರ್ಥಿಕ ಭದ್ರತೆಯನ್ನು ಬಲಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಇತ್ತೀಚೆಗೆ ಯಾವುದೇ ದೇಶ ರಫ್ತು ನಿಯಂತ್ರಣ ಹೇರುವುದು ಅಥವಾ ಭಾರತಕ್ಕೆ ಪ್ರಮುಖ ಉತ್ಪನ್ನ ತಲುಪುವುದನ್ನು ನಿರ್ಬಂಧಿಸುವುದು ಕಂಡುಬಂದಿದೆ, ಇದು ವ್ಯಾಪಾರಕ್ಕೆ ಅಡೆತಡೆ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದರು. ಆದ್ದರಿಂದ, ಆತ್ಮನಿರ್ಭರ ಭಾರತದ ಮೇಲೆ ಹೆಚ್ಚು ಗಮನಹರಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿ, ಇದು ಎಲ್ಲರೂ ಒಪ್ಪಿಕೊಳ್ಳಬೇಕಾದ ಕಾರ್ಯಯೋಜನೆ ಎಂದು ವಿವರಿಸಿದರು.

ಶ್ರೀ ಗೋಯಲ್ ಅವರು, ಆಗಸ್ಟ್ 15ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವದೇಶಿ ಉತ್ಪನ್ನಗಳಿಗೆ ಸ್ಪಷ್ಟ ಕರೆ ನೀಡಿದ್ದು, ನಾವೀನ್ಯತೆಯ ಮಹತ್ವವನ್ನು ಉಲ್ಲೇಖಿಸಿದ್ದಾರೆ ಎಂದು ನೆನಪಿಸಿಕೊಂಡರು. ಭಾರತದ 1.4 ಶತಕೋಟಿ ಜನರು, ವ್ಯವಹಾರಗಳು ಮತ್ತು ವ್ಯಾಪಾರವು ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಮೇಲೆ ಗಮನಹರಿಸಬೇಕು ಎಂದು ಅವರು ಹೇಳಿದರು. ಆಮದನ್ನು ಅವಲಂಬಿಸಿರುವ ವ್ಯವಹಾರಗಳು, ಭಾರತದಲ್ಲಿ ಸಂಗ್ರಹಿಸಬಹುದಾದ ಮತ್ತು ತಯಾರಿಸಬಹುದಾದ ಉತ್ಪನ್ನಗಳತ್ತ ಗಮನಹರಿಸಬಹುದ ಎಂದು ಅವರು ಸೂಚಿಸಿದರು.

ಗೌರವಾನ್ವಿತ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ,  ಭಾರತದ ಇಂಜಿನಿಯರಿಂಗ್ ರಫ್ತುಗಳು ಮತ್ತು ದಶಕಗಳಿಂದಾದ ಅವುಗಳ ಪ್ರಗತಿಯ ಬಗ್ಗೆ ಮಾತನಾಡಿದರು. ದೇಶದ ಆರ್ಥಿಕತೆ ಬಲಪಡಿಸುವಲ್ಲಿ ಮತ್ತು ಭಾರತದ ಜಾಗತಿಕ ಸ್ಥಾನಮಾನ ಹೆಚ್ಚಿಸುವಲ್ಲಿ ರಫ್ತುಗಳ ಪ್ರಾಮುಖ್ಯತೆಯ ಮಹತ್ವ ತಿಳಿಸಿದರು.

ಭಾರತದ ಬಲವು ವ್ಯಾಪಾರ ಮತ್ತು ಎಂಎಸ್‌ಎಂಇ ವಲಯವನ್ನು ಅವಲಂಬಿಸಿದೆ, ಇದು ದೇಶದ ವ್ಯಾಪಾರಗಳ ಬೆನ್ನೆಲುಬಾಗಿದೆ ಎಂದು ಶ್ರೀ ಗೋಯಲ್ ಅವರು ಹೇಳಿದರು. ಭಾರತದ ಆತ್ಮವಿಶ್ವಾಸವು ತುಂಬಾ ಪ್ರಬಲವಾಗಿದೆ, ಅದು ಇನ್ನಷ್ಟು ಬಲಗೊಳ್ಳುತ್ತದೆ ಮತ್ತು ಯಾರ ಮುಂದೆಯೂ ಬಾಗುವುದಿಲ್ಲ ಎಂದು ಅವರು ಹೇಳಿದರು. ಇಇಪಿಸಿಯ ಪಯಣವನ್ನು ಉಲ್ಲೇಖಿಸಿ, 1955ರಲ್ಲಿ ರಫ್ತುಗಳು 10 ಮಿಲಿಯನ್ ಯುಎಸ್ ಡಾಲರ್ ಇತ್ತು, ಆದರೆ ಇಂದು ಅದು 116 ಬಿಲಿಯನ್ ಯುಎಸ್ ಡಾಲರ್ ಗೆ ನಿಂತಿದೆ ಎಂದು ಹೇಳಿದರು. ಸಮಯ ಕಳೆದಂತೆ, ಇಂಜಿನಿಯರಿಂಗ್ ವಲಯವು ದೊಡ್ಡ ಗುರಿ ಮತ್ತು ಹೆಚ್ಚಿನ ಬಲದೊಂದಿಗೆ ಮತ್ತಷ್ಟು ಬೆಳೆಯುತ್ತದೆ ಎಂದು ತಿಳಿಸಿದರು.

“ಶೂನ್ಯ ದೋಷ, ಶೂನ್ಯ ಪರಿಣಾಮ” ಎಂಬ ಧ್ಯೇಯದೊಂದಿಗೆ ಭಾರತ ದೊಡ್ಡದಾಗಿ ಬೆಳೆಯುವ ಸಂಪೂರ್ಣ ವಿಶ್ವಾಸ ಇದೆ ಎಂದು ಸಚಿವರು ಹೇಳಿದರು. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಿ ಪ್ರಪಂಚದಾದ್ಯಂತ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಉಲ್ಲೇಖಿಸಿದರು. ಇಂದು ಪ್ರಪಂಚ ಭಾರತವನ್ನು ವಿಶ್ವಾಸಾರ್ಹ ಪಾಲುದಾರ ಎಂದು ಪರಿಗಣಿಸುತ್ತದೆ ಮತ್ತು ಆ ಸ್ಥಾನಮಾನ ಕಾಪಾಡಿಕೊಳ್ಳುವುದು ಮುಖ್ಯ ಎಂದು ಅವರು ಹೇಳಿದರು. ಭಾರತ ಸುಸ್ಥಿರತೆಯ ಬಗ್ಗೆ ಜಾಗೃತಿ ಹೊಂದಿರುವ ರಾಷ್ಟ್ರ ಎಂದು ಅವರು ಹೇಳಿದರು. ಜವಾಬ್ದಾರಿಯುತ ಜಾಗತಿಕ ಪ್ರಜೆಯಾಗಿ, ಭಾರತವು ಪ್ರಕೃತಿಯ ಬಗ್ಗೆ ಜಾಗರೂಕವಾಗಿದೆ ಮತ್ತು ಪ್ಯಾರಿಸ್‌ನಲ್ಲಿ ನಡೆದ ಸಿಒಪಿ21ರ ಅಡಿಯಲ್ಲಿ ತನ್ನ ಎನ್‌ಡಿಸಿ ಬದ್ಧತೆಗಳೊಂದಿಗೆ, ಜಾಗತಿಕ ಸುಸ್ಥಿರತೆ ಪ್ರಯತ್ನಗಳಲ್ಲಿ ಸತತ ವರ್ಷಗಳಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ದುರ್ಬಲ ಐದು ಆರ್ಥಿಕತೆಗಳಿಂದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗಿ ರೂಪಾಂತರಗೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ, ದೇಶವು 7.8% ಜಿಡಿಪಿ ಬೆಳವಣಿಗೆ ಸಾಧಿಸಿದೆ, ಇದನ್ನು ಅವರು ವಿಶ್ವ ದಾಖಲೆ ಎಂದು ವಿವರಿಸಿದರು.

ಜಿಎಸ್‌ಟಿ ದರ ಕಡಿತ ಮತ್ತು ಸರಳೀಕರಣದೊಂದಿಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶೀಯ ಬೇಡಿಕೆ ಹೆಚ್ಚಿಸಿದ್ದಾರೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಮತ್ತು ಆದಾಯದಲ್ಲಿ ಹೆಚ್ಚಳ ಅನುಸರಿಸುತ್ತದೆ. ಮೂಲಸೌಕರ್ಯ ವೆಚ್ಚ ಮತ್ತು ಗ್ರಾಹಕರ ಬೇಡಿಕೆಯು ಆರ್ಥಿಕ ವ್ಯವಸ್ಥೆಯ ಬಲವಾದ ಅಡಿಪಾಯದ ಮೇಲೆ ಬೆಳೆದಾಗ, ಭಾರತವನ್ನು ವಿಶ್ವ ಶಕ್ತಿಯಾಗುವುದರಿಂದ ಪ್ರಪಂಚದ ಯಾವುದೇ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಮಾನ ಆರ್ಥಿಕ ಪ್ರಯೋಜನಗಳ ಪ್ರಾಮುಖ್ಯತೆ ಪ್ರತಿಪಾದಿಸುವ ಮೂಲಕ ಶ್ರೀ ಪಿಯೂಷ್ ಗೋಯಲ್ ಅವರು ಭಾಷಣಾಂತ್ಯದಲ್ಲಿ, ಜಿಎಸ್‌ಟಿ ದರ ಕಡಿತದ ಪ್ರಯೋಜನಗಳು ಗ್ರಾಹಕರಿಗೆ ಸಂಪೂರ್ಣವಾಗಿ ತಲುಪಬೇಕು, ಬೆಳವಣಿಗೆ ಪ್ರತಿಯೊಬ್ಬ ನಾಗರಿಕನಿಗೂ ತಲುಪುವುದು ಮತ್ತು ಭಾರತದ ಆರ್ಥಿಕತೆಯ ಅಡಿಪಾಯ ಬಲಪಡಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಭಾರತವು ಒಂದುಗೂಡಿದ ಕುಟುಂಬವಾಗಿ ಒಟ್ಟಾಗಿ ಕೆಲಸ ಮಾಡಿದಾಗ, ವಲಯಗಳಾದ್ಯಂತ ಪರಸ್ಪರ ಬೆಂಬಲಿಸಿದಾಗ, ಸಮಗ್ರ ಬೆಳವಣಿಗೆ ಸ್ವಾಭಾವಿಕವಾಗಿ ಅನುಸರಿಸುತ್ತದೆ ಎಂದು ಸಚಿವರು ಹೇಳಿ, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ದೇಶವು ಜಾಗತಿಕ ಮಾದರಿಯಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

*****
 


(Release ID: 2164649) Visitor Counter : 2