ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

NextGenGST ಸುಧಾರಣೆಗಳು ಡೈರಿ ರೈತರನ್ನು ಸಬಲೀಕರಣಗೊಳಿಸಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತವೆ: ಪ್ರಧಾನಮಂತ್ರಿ

प्रविष्टि तिथि: 04 SEP 2025 8:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಡೈರಿ ರೈತರು ಮತ್ತು ಗ್ರಾಮೀಣ ಆರ್ಥಿಕತೆಯ ಸಬಲೀಕರಣಕ್ಕಾಗಿ ಸರ್ಕಾರದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ, ಪೌಷ್ಠಿಕಾಂಶ ಸುರಕ್ಷತೆಯನ್ನು ಕಾಪಾಡಿಕೊಂಡು ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರ್ತಿಸಿದ್ದಾರೆ.

ರಾಷ್ಟ್ರೀಯ ಗೋಕುಲ್ ಮಿಷನ್, ಸಹಕಾರಿ ಸಂಸ್ಥೆಗಳಿಗೆ ವರ್ಧಿತ ಬೆಂಬಲ ಮತ್ತು ನಿರಂತರ ವಲಯ ಸುಧಾರಣೆಗಳಂತಹ ಪ್ರಮುಖ ಉಪಕ್ರಮಗಳ ಮೂಲಕ, ಸರ್ಕಾರವು ಡೈರಿ ಪರಿಸರ ವ್ಯವಸ್ಥೆಯನ್ನು ಆಧುನೀಕರಿಸಿ, ಸಬಲೀಕರಣಗೊಳಿಸಲು ನಿರಂತರವಾಗಿ ಕೆಲಸ ಮಾಡಿದೆ. ಇತ್ತೀಚಿನ #NextGenGST ಸುಧಾರಣೆಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿವೆ.

ಅಮುಲ್ ಕೋಆಪರೇಟಿವ್ ಸೊಸೈಟಿಯ Xಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು: 

"ಭಾರತದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿ ಲಕ್ಷಾಂತರ ಜನರಿಗೆ ಪೌಷ್ಠಿಕಾಂಶ ಭದ್ರತೆಯನ್ನು ನೀಡುವಲ್ಲಿ ನಮ್ಮ ಅನ್ನದಾತರ ಕೊಡುಗೆ ಬಹಳ ಪ್ರಮುಖವಾಗಿದೆ. 

ರಾಷ್ಟ್ರೀಯ ಗೋಕುಲ್ ಮಿಷನ್, ಸಹಕಾರಿ ಸಂಸ್ಥೆಗಳಿಗೆ ಬೆಂಬಲ ಮತ್ತು ನಿರಂತರ ಸುಧಾರಣೆಗಳಂತಹ ಉಪಕ್ರಮಗಳ ಮೂಲಕ, ನಮ್ಮ ಸರ್ಕಾರವು ಭಾರತದ ಡೈರಿ ವಲಯವನ್ನು ಪರಿವರ್ತಿಸಲು ಬದ್ಧವಾಗಿದೆ. 

#NextGenGST ಸುಧಾರಣೆಗಳು ಲಕ್ಷಾಂತರ ಡೈರಿ ರೈತರನ್ನು ಸಬಲೀಕರಣಗೊಳಿಸಿ, ಮೌಲ್ಯವರ್ಧನೆಯನ್ನು ಹೆಚ್ಚಿಸುವ ಮತ್ತು ಡೈರಿ ಉತ್ಪನ್ನಗಳನ್ನು ಪ್ರತಿ ಮನೆಗೆ ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಹೇಳಿದ್ದಾರೆ.

 

 

*****

 


(रिलीज़ आईडी: 2164021) आगंतुक पटल : 25
इस विज्ञप्ति को इन भाषाओं में पढ़ें: Odia , English , Gujarati , Urdu , हिन्दी , Marathi , Manipuri , Assamese , Bengali , Punjabi , Tamil , Telugu , Malayalam