ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಕಿಂಡ್ರಿಲ್ ನ ಅಧ್ಯಕ್ಷ ಮತ್ತು ಸಿ.ಇ ಒ. ಶ್ರೀ ಮಾರ್ಟಿನ್ ಶ್ರೋಟರ್
Posted On:
21 AUG 2025 9:50PM by PIB Bengaluru
ಕಿಂಡ್ರಿಲ್ ನ ಅಧ್ಯಕ್ಷ ಮತ್ತು ಸಿ.ಇ.ಒ ಶ್ರೀ ಮಾರ್ಟಿನ್ ಶ್ರೋಟರ್ ಅವರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಪ್ರಧಾನಮಂತ್ರಿ ಅವರು ಜಾಗತಿಕ ಪಾಲುದಾರರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು, ಭಾರತದಲ್ಲಿ ಅಪಾರವಾದ ಅವಕಾಶಗಳನ್ನು ಅನ್ವೇಷಿಸಲು ಮತ್ತು ಹೊಸತನ ಮತ್ತು ಉತ್ಕೃಷ್ಟತೆಗಾಗಿ ರಾಷ್ಟ್ರದ ಪ್ರತಿಭಾವಂತ ಯುವಕರೊಂದಿಗೆ ಸಹಕರಿಸಲು ಅವರನ್ನು ಆಹ್ವಾನಿಸಿದರು.
ಅಂತಹ ಪಾಲುದಾರಿಕೆಗಳ ಮೂಲಕ, ಭಾರತಕ್ಕೆ ಪ್ರಯೋಜನವಾಗುವುದು ಮಾತ್ರವಲ್ಲದೆ ಜಾಗತಿಕ ಪ್ರಗತಿಗೆ ಕೊಡುಗೆ ನೀಡುವ ಪರಿಹಾರಗಳನ್ನು ನಿರ್ಮಿಸಬಹುದು ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಶ್ರೀ ಮಾರ್ಟಿನ್ ಶ್ರೋಟರ್ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:
"ಇದು ಶ್ರೀ ಮಾರ್ಟಿನ್ ಶ್ರೋಟರ್ ಅವರೊಂದಿಗಿನ ಭೇಟಿ ನಿಜಕ್ಕೂ ಉತ್ತಮವಾದ ಭೇಟಿಯಾಗಿತ್ತು. ನಮ್ಮ ರಾಷ್ಟ್ರದಲ್ಲಿ ಅಪಾರ ಅವಕಾಶಗಳನ್ನು ಅನ್ವೇಷಿಸಲು ಮತ್ತು ಹೊಸತನ ಮತ್ತು ಉತ್ಕೃಷ್ಟತೆಗಾಗಿ ನಮ್ಮ ಪ್ರತಿಭಾವಂತ ಯುವಕರೊಂದಿಗೆ ಸಹಕರಿಸಲು ಭಾರತವು ಜಾಗತಿಕ ಪಾಲುದಾರರನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ.
ನಾವೆಲ್ಲರೂ ಒಟ್ಟಾಗಿ, ಭಾರತಕ್ಕೆ ಪ್ರಯೋಜನವಾಗುವುದು ಮಾತ್ರವಲ್ಲದೆ ಜಾಗತಿಕ ಪ್ರಗತಿಗೆ ಕೊಡುಗೆ ನೀಡುವ ಪರಿಹಾರಗಳನ್ನು ನಿರ್ಮಿಸಬಹುದು ".
****
(Release ID: 2159612)
Read this release in:
Telugu
,
Malayalam
,
English
,
Gujarati
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Odia
,
Tamil