ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ 100 ಗಿಗಾವ್ಯಾಟ್ ಸೋಲಾರ್ ಫೋಟೋವೋಲ್ಟಾಯಿಕ್  ಮಾಡ್ಯೂಲ್(ಸೌರ ಫಲಕ) ಉತ್ಪಾದನಾ ಸಾಮರ್ಥ್ಯದಲ್ಲಿ ಸ್ವಾವಲಂಬನೆಯ ಮೈಲಿಗಲ್ಲು ಹಾಗೂ ಶುದ್ಧ ಇಂಧನವನ್ನು ಜನಪ್ರಿಯಗೊಳಿಸುವ ಪರಿಶ್ರಮನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 13 AUG 2025 8:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 100 ಗಿಗಾವ್ಯಾಟ್ ಸೋಲಾರ್ ಪಿವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವಲ್ಲಿ ಸ್ವಾವಲಂಬನೆಯ ಮೈಲಿಗಲ್ಲು ಮತ್ತು ಶುದ್ಧ ಇಂಧನವನ್ನು ಜನಪ್ರಿಯಗೊಳಿಸುವ ಭಾರತದ ಪಯತ್ನಗಳನ್ನು ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ: 

“ಸ್ವಾವಲಂಬನೆಯತ್ತ ಇದು ಮತ್ತೊಂದು ಮೈಲಿಗಲ್ಲು! ಭಾರತದ ಉತ್ಪಾದನಾ ಸಾಮರ್ಥ್ಯ ಹಾಗೂ ಶುದ್ಧ ಇಂಧನವನ್ನು ಜನಪ್ರಿಯಗೊಳಿಸುವಲ್ಲಿ ನಮ್ಮ ಪ್ರಯತ್ನಗಳ ಯಶಸ್ಸನ್ನು ಇದು ಪ್ರತಿನಿಧಿಸುತ್ತದೆ.”

 

 

*****

 


(ಪ್ರಕಟಣೆ ಐ.ಡಿ.: 2156237) ವಿಸಿಟರ್ ಕೌಂಟರ್ : 27