ನೀತಿ ಆಯೋಗ
ಭಾರತದ ಅತಿದೊಡ್ಡ 'ಟಿಂಕರಿಂಗ್' ಕಾರ್ಯಕ್ರಮ ಅಟಲ್ ಇನ್ನೋವೇಶನ್ ಮಿಷನ್ ನಡಿ ರಾಷ್ಟ್ರೀಯ ನಾವೀನ್ಯತೆ ಆಂದೋಲನದಲ್ಲಿ ಒಂದುಗೂಡಿದ 10,000 ಶಾಲೆಗಳು
ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಏಕಕಾಲದಲ್ಲಿ ನಾವೀನ್ಯತೆ ನಿರ್ಮಾಣ ಮಾಡಲು ಸಜ್ಜು
Posted On:
12 AUG 2025 12:41PM by PIB Bengaluru
ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಸಾಮೂಹಿಕ ನಾವೀನ್ಯತೆಯ ಒಂದು ಪರಿವರ್ತನಾ ಪ್ರದರ್ಶನವಾಗಿ ಇಂದು 'ಮೆಗಾ ಟಿಂಕರಿಂಗ್ ಡೇ' (ಬೃಹತ್ ಚಿಂತನಾ ದಿನ) ಅನ್ನು ಆಯೋಜಿಸಿತ್ತು. ಇದು ಭಾರತದ ಅತಿದೊಡ್ಡ ಶಾಲಾ ಆಧಾರಿತ ಟಿಂಕರಿಂಗ್ ಕಾರ್ಯಕ್ರಮವಾಗಿದ್ದು 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 10,000 ಕ್ಕೂ ಅಧಿಕ ಅಟಲ್ ಟಿಂಕರಿಂಗ್ ಲ್ಯಾಬ್‌ಗಳ (ಎ ಟಿ ಎಲ್ ಗಳ) ವಿದ್ಯಾರ್ಥಿಗಳನ್ನು ಒಂದುಗೂಡಿಸಿತು.
ದೇಶಾದ್ಯಂತ ಶಾಲೆಗಳಲ್ಲಿ ವರ್ಚುವಲ್ ಮತ್ತು ಭೌತಿಕವಾಗಿ ಏಕಕಾಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 9467 ಎಟಿಎಲ್ ಸುಸಜ್ಜಿತ ಶಾಲೆಗಳ 4,73,350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರು ತಮ್ಮ ಪ್ರಯೋಗಾಲಯಗಳಲ್ಲಿ ಲಭ್ಯವಿರುವ ದೈನಂದಿನ ವಸ್ತುಗಳನ್ನು ಬಳಸಿಕೊಂಡು ಡಿಐವೈ ವ್ಯಾಕ್ಯೂಮ್ ಕ್ಲೀನರ್ ಅನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ಪ್ರಾಯೋಗಿಕ ಯೋಜನೆಯಲ್ಲಿ ತೊಡಗಿದ್ದರು. ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಲಾದ ಪ್ರತಿಯೊಂದು ಹಂತವಾರು ಸೂಚನೆಗಳ ಮೂಲಕ ಚಟುವಟಿಕೆಗೆ ಮಾರ್ಗದರ್ಶನ ನೀಡಲಾಯಿತು, ವಿದ್ಯಾರ್ಥಿಗಳು ಎಲ್ಲಿದ್ದರೂ ವೈಜ್ಞಾನಿಕ ಪರಿಕಲ್ಪನೆಗಳನ್ನು ಕಲಿಯಲು ಮತ್ತು ನೈಜ ಸಮಯದಲ್ಲಿ ಅವುಗಳನ್ನು ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ.
ಭಾರತದ ಉತ್ತರ ಭಾಗದ ಪ್ರದೇಶಗಳಾದ ಲೇಹ್, ಲಡಾಖ್ ಮತ್ತು ಕಾರ್ಗಿಲ್, ಕಾಶ್ಮೀರ, ವಿರುಧುನಗರದಂತಹ ಮಹತ್ವಾಕಾಂಕ್ಷೆಯ ಜಿಲ್ಲೆಗಳ ದೂರದ ಹಳ್ಳಿಗಳು, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶದ ಈಶಾನ್ಯ ಪ್ರದೇಶಗಳು ಮತ್ತು ಕನ್ಯಾಕುಮಾರಿಯಂತಹ ದಕ್ಷಿಣ ಪ್ರದೇಶಗಳು ಮತ್ತು ಭುಜ್ ಮತ್ತು ಕಛ್‌ನ ಪಶ್ಚಿಮದ ಪ್ರದೇಶಗಳ ಶಾಲೆಗಳು ಭಾಗವಹಿಸಿದ್ದವು. ಎಐಎಂ ತಂಡವು ಸಹ ಈ ಕಾರ್ಯದಲ್ಲಿ ಸೇರಿಕೊಂಡಿತು, ಭಾರತದಾದ್ಯಂತ ವಿದ್ಯಾರ್ಥಿಗಳೊಂದಿಗೆ ಸನಿಹದಲ್ಲೇ ನಿಂತು ಪೋಷಿಸಿತು ಮತ್ತು ವ್ಯಾಕ್ಯೂಮ್ ಕ್ಲೀನರ್ ಅನ್ನು ಅಭಿವೃದ್ಧಿಪಡಿಸಿತು.
ಈ ಮಹತ್ವಾಕಾಂಕ್ಷೆಯ ಉಪಕ್ರಮವು ಭಾರತದ ಶಿಕ್ಷಣ ಮತ್ತು ನಾವೀನ್ಯತೆ ಆಯಾಮದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿ ಗುರುತಿಸಲ್ಪಡುತ್ತದೆ, ಇದು ತಳಮಟ್ಟದ ಸೃಜನಶೀಲತೆ ಮತ್ತು ಸಹಯೋಗದ ಕಲಿಕೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್‌ನ ಮಿಷನ್ ನಿರ್ದೇಶಕ ದೀಪಕ್ ಬಾಗ್ಲಾ, “ನಾವೀನ್ಯತೆ ಮತ್ತು ಯುವಕರು ರಾಷ್ಟ್ರೀಯ ಪರಿವರ್ತನೆಯ ಪ್ರೇರಕ ಶಕ್ತಿಗಳಲ್ಲಿ ಒಂದೆಂದು ಪರಿಗಣಿಸಿ, ಗೌರವಾನ್ವಿತ ಪ್ರಧಾನ ಮಂತ್ರಿಯವರ ವಿಕಸಿತ ಭಾರತದ ದೂರದೃಷ್ಟಿಗೆ ಅನುಗುಣವಾಗಿ ಮೆಗಾ ಟಿಂಕರಿಂಗ್ ಡೇ 2025 ತಳಮಟ್ಟದ ನಾವೀನ್ಯತೆ ಶಕ್ತಿಯ ಮಹತ್ವದ ಪ್ರದರ್ಶನವಾಗಿದೆ. ಈ ನೇರ ಕಾರ್ಯಕ್ರಮದಲ್ಲಿ, 10,000 ಕ್ಕೂ ಅಧಿಕ ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಸೃಜನಶೀಲತೆಯಲ್ಲಿ ಒಟ್ಟುಗೂಡಿದವು. ಭಾರತದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಒಂದಾಗಿ ಅಭಿವೃದ್ಧಿಪಡಿಸುವುದು, ಕಲಿಯುವುದು ಮತ್ತು ನಾವೀನ್ಯತೆಯನ್ನು ಪ್ರದರ್ಶಿಸಿದರು. ಜಗತ್ತಿನ ಯಾವುದೇ ದೇಶವು ತನ್ನ ಶಾಲಾ ಪರಿಸರ ವ್ಯವಸ್ಥೆಯನ್ನುಈ ಪ್ರಮಾಣದಲ್ಲಿ ನಾವೀನ್ಯತೆಗೆ ಸಜ್ಜುಗೊಳಿಸಿಲ್ಲ. ಯುವ ಮನಸ್ಸುಗಳು ಸಬಲೀಕರಣಗೊಂಡಾಗ ನಮ್ಮ ರಾಷ್ಟ್ರಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಹೇಗೆ ಪರಿಹಾರಗಳನ್ನು ಕಂಡುಕೊಳ್ಳಬಹುದೆಂಬುದನ್ನು ತೋರಿಸಲು ಇದು ಭಾರತದ ಸಮಯವಾಗಿದೆ. ಇಂದು ನಮ್ಮ ತರಗತಿ ಕೋಣೆಗಳಲ್ಲಿ ಭವಿಷ್ಯವನ್ನು ಸೃಷ್ಟಿಸಲಾಗುತ್ತಿದೆ’’ ಎಂದರು.
ಆರಂಭದಿಂದಲೂ ಎಐಎಂ ಶಾಲೆಗಳಲ್ಲಿ 10,000 ಕ್ಕೂ ಅಧಿಕ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಿದೆ, ಇದು ವಿದ್ಯಾರ್ಥಿಗಳಿಗೆ 3ಡಿ ಪ್ರಿಂಟರ್‌ಗಳು, ರೊಬೊಟಿಕ್ಸ್ ಕಿಟ್‌ಗಳು, ಐಒಟಿ ಸಾಧನಗಳು ಮತ್ತು ಹೆಚ್ಚಿನವುಗಳಂತಹ ಪರಿಕರಗಳನ್ನು ಒದಗಿಸಿಕೊಡುತ್ತದೆ. ಈ ಪ್ರಯೋಗಾಲಯಗಳು ಮಧ್ಯಮದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳಿಗೆ ಪ್ರಾಯೋಗಿಕವಾಗಿ ಒಡ್ಡಿಕೊಳ್ಳುವುದನ್ನು ಒದಗಿಸುತ್ತವೆ ಮತ್ತು ನೈಜ-ಪ್ರಪಂಚದ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುತ್ತವೆ.
ಮೆಗಾ ಟಿಂಕರಿಂಗ್ ದಿನವು ಕೇವಲ ಯೋಜನೆ-ರೂಪಿಸುವ ಗೋಷ್ಠಿಯಾಗಿರಲಿಲ್ಲ; ಇದು ರಾಷ್ಟ್ರೀಯ ನಾವೀನ್ಯತೆ ಚಳವಳಿಯ ಕಾರ್ಯವಾಗಿತ್ತು. ಇದು ಮುಂಬರುವ ಶೈಕ್ಷಣಿಕ ವರ್ಷದ ಟಿಂಕರಿಂಗ್ ಚಟುವಟಿಕೆಗಳಿಗೆ ಒಂದು ಉಡಾವಣಾ ವೇದಿಕೆಯಾಗಿ ಮತ್ತು ಭಾರತದಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಮಾರ್ಗದರ್ಶಕರು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮ ಪಾಲುದಾರರಿಗೆ ಒಂದು ಸಮಾಗಮ ಸಭೆಯಾಗಿತ್ತು.
ಭಾರತದ ಭವಿಷ್ಯವನ್ನ ರೂಪಿಸುವ ಸೃಜನಶೀಲ ಚಿಂತಕರು, ನಾವೀನ್ಯಕಾರರು ಮತ್ತು ಉದ್ಯಮಿಗಳನ್ನು ಪೋಷಿಸುವ ಮತ್ತು ನಮ್ಮ ಮುಂದಿನ ಪೀಳಿಗೆಯಿಂದ ಭವಿಷ್ಯವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಾಬೀತುಪಡಿಸುವ ಅಟಲ್ ಇನ್ನೋವೇಷನ್ ಮಿಷನ್ ನ ದೂರದೃಷ್ಟಿಯನ್ನು ಈ ಕಾರ್ಯಕ್ರಮ ಸಾಕಾರಗೊಳಿಸಿತು.
ಮೆಗಾ ಟಿಂಕರಿಂಗ್ ದಿನ ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://aim.gov.in





*****
(Release ID: 2155500)
Read this release in:
Bengali-TR
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia