ಪ್ರಧಾನ ಮಂತ್ರಿಯವರ ಕಛೇರಿ
ದೇಶಭಕ್ತ ಭಾರತೀಯರ ಶೌರ್ಯಕ್ಕೆ ಕಾಕೋರಿಯ ಶತಮಾನೋತ್ಸವದಂದು ಪ್ರಧಾನಮಂತ್ರಿ ಗೌರವ ನಮನ
प्रविष्टि तिथि:
09 AUG 2025 2:59PM by PIB Bengaluru
ಕಾಕೋರಿ ಘಟನೆಯ 100ನೇ ವರ್ಷಾಚರಣೆಯ ಅಂಗವಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಭಾರತೀಯರ ಶೌರ್ಯ ಮತ್ತು ದೇಶಭಕ್ತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೌರವ ಸಲ್ಲಿಸಿದ್ದಾರೆ.
ದೇಶಭಕ್ತ ಭಾರತೀಯರು ನೂರು ವರ್ಷಗಳ ಹಿಂದೆ ಕಾಕೋರಿಯಲ್ಲಿ ತೋರಿದ್ದ ಶೌರ್ಯವು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಜನರಲ್ಲಿದ್ದ ವಿಪರೀತ ಅಸಮಾಧಾನವನ್ನು ಎತ್ತಿ ತೋರಿಸಿದೆ. ಇನ್ನಷ್ಟು ವಸಾಹತುಶಾಹಿ ಶೋಷಣೆಗೆ ಜನರ ಹಣವನ್ನು ಬಳಸುತ್ತಿದ್ದ ರೀತಿಯು ಜನರನ್ನು ಕುಪಿತಗೊಳಿಸಿತ್ತು ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಜನರು ಅವರ ಧೈರ್ಯವನ್ನು ಸದಾ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿರುವ ಶ್ರೀ ಮೋದಿ ಅವರು, ಬಲಿಷ್ಠ ಮತ್ತು ಸಮೃದ್ಧ ಭಾರತಕ್ಕಾಗಿ ಅವರ ಕನಸುಗಳನ್ನು ನನಸಾಗಿಸುವತ್ತ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ನೂರು ವರ್ಷಗಳ ಹಿಂದೆ ಈ ದಿನದಂದು, ಕಾಕೋರಿಯಲ್ಲಿ ದೇಶಭಕ್ತ ಭಾರತೀಯರು ಪ್ರದರ್ಶಿಸಿದ ಶೌರ್ಯವು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಜನರಲ್ಲಿದ್ದ ಅಸಮಾಧಾನವನ್ನು ಎತ್ತಿ ತೋರಿಸಿತು. ಇನ್ನಷ್ಟು ವಸಾಹತುಶಾಹಿ ಶೋಷಣೆಗೆ ಜನರ ಹಣವನ್ನು ಬಳಸುತ್ತಿದ್ದ ಬಗ್ಗೆ ಅವರು ಕ್ರೋಧಗೊಂಡಿದ್ದರು. ಅವರ ಶೌರ್ಯವನ್ನು ಭಾರತದ ಜನರು ಸದಾ ಸ್ಮರಿಸುವರು. ಬಲಿಷ್ಠ ಮತ್ತು ಸಮೃದ್ಧ ಭಾರತಕ್ಕಾಗಿ ಅವರ ಕನಸುಗಳನ್ನು ನನಸಾಗಿಸಲು ನಾವು ನಿರಂತರವಾಗಿ ಶ್ರಮಿಸುತ್ತೇವೆ.”
*****
(रिलीज़ आईडी: 2154677)
आगंतुक पटल : 14
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam