ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ಸಂಸ್ಕೃತ ದಿನದಂದು ಶುಭಾಶಯ ಕೋರಿದ ಪ್ರಧಾನಮಂತ್ರಿ, ಸಂಸ್ಕೃತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಬದ್ಧತೆಯನ್ನು ಪುನರುಚ್ಚರಿಸಿದರು

Posted On: 09 AUG 2025 10:13AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರಾವಣ ಪೂರ್ಣಿಮೆಯಂದು ಆಚರಿಸಲಾಗುವ ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಸಂಸ್ಕೃತವನ್ನು "ಜ್ಞಾನ ಮತ್ತು ಅಭಿವ್ಯಕ್ತಿಯ ಕಾಲಾತೀತ ಮೂಲ" ಎಂದು ಕರೆದ ಪ್ರಧಾನಮಂತ್ರಿ, ವಿವಿಧ ಕ್ಷೇತ್ರಗಳಲ್ಲಿ ಅದರ ನಿರಂತರ ಪ್ರಭಾವವನ್ನು ಒತ್ತಿ ಹೇಳಿದರು.

ಸಂಸ್ಕೃತವನ್ನು ಕಲಿಯುತ್ತಿರುವ, ಕಲಿಸುತ್ತಿರುವ ಮತ್ತು ಜನಪ್ರಿಯಗೊಳಿಸುತ್ತಿರುವ ವಿಶ್ವದಾದ್ಯಂತದ ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಉತ್ಸಾಹಿಗಳ ಸಮರ್ಪಣೆಯನ್ನು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಕಳೆದ ದಶಕದಲ್ಲಿ, ಸಂಸ್ಕೃತ ಕಲಿಕೆ ಮತ್ತು ಸಂಶೋಧನೆಯನ್ನು ಬಲಪಡಿಸಲು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು, ಸಂಸ್ಕೃತ ಕಲಿಕಾ ಕೇಂದ್ರಗಳನ್ನು ತೆರೆಯುವುದು, ಸಂಸ್ಕೃತ ವಿದ್ವಾಂಸರಿಗೆ ಅನುದಾನವನ್ನು ವಿಸ್ತರಿಸುವುದು ಮತ್ತು ಹಸ್ತಪ್ರತಿಗಳ ಡಿಜಿಟಲೀಕರಣಕ್ಕಾಗಿ ಜ್ಞಾನ ಭಾರತಂ ಮಿಷನ್ ಅನ್ನು ಪ್ರಾರಂಭಿಸುವುದು ಮುಂತಾದ ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಒತ್ತಿ ಹೇಳಿದರು.

ಈ ಸಂಬಂಧ ಎಕ್ಸ್ ಖಾತೆಯ ಸರಣಿ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಬರೆದಿದ್ದಾರೆ;

"ಇಂದು, ಶ್ರಾವಣ ಪೂರ್ಣಿಮೆಯಂದು, ನಾವು ವಿಶ್ವ ಸಂಸ್ಕೃತ ದಿನವನ್ನು ಆಚರಿಸುತ್ತೇವೆ. ಸಂಸ್ಕೃತವು ಜ್ಞಾನ ಮತ್ತು ಅಭಿವ್ಯಕ್ತಿಯ ಕಾಲಾತೀತ ಮೂಲವಾಗಿದೆ. ಇದರ ಪರಿಣಾಮವನ್ನು ಎಲ್ಲಾ ವಲಯಗಳಲ್ಲಿ ಕಾಣಬಹುದು. ಸಂಸ್ಕೃತವನ್ನು ಕಲಿಯುತ್ತಿರುವ ಮತ್ತು ಜನಪ್ರಿಯಗೊಳಿಸುತ್ತಿರುವ ವಿಶ್ವದಾದ್ಯಂತದ ಪ್ರತಿಯೊಬ್ಬ ವ್ಯಕ್ತಿಯ ಪ್ರಯತ್ನವನ್ನು ಶ್ಲಾಘಿಸುವ ಸಂದರ್ಭ ಈ ದಿನವಾಗಿದೆ."

"ಕಳೆದ ದಶಕದಲ್ಲಿ, ನಮ್ಮ ಸರ್ಕಾರವು ಸಂಸ್ಕೃತವನ್ನು ಜನಪ್ರಿಯಗೊಳಿಸಲು ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ. ಇವುಗಳಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು, ಸಂಸ್ಕೃತ ಕಲಿಕಾ ಕೇಂದ್ರಗಳ ಸ್ಥಾಪನೆ, ಸಂಸ್ಕೃತ ವಿದ್ವಾಂಸರಿಗೆ ಅನುದಾನ ಒದಗಿಸುವುದು ಮತ್ತು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲು ಜ್ಞಾನ ಭಾರತಂ ಮಿಷನ್ ಸೇರಿವೆ. ಇದು ಅಸಂಖ್ಯಾತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಪ್ರಯೋಜನವನ್ನು ನೀಡಿದೆ,’’ ಎಂದಿದ್ದಾರೆ.

“आज हम श्रावण पूर्णिमा के अवसर पर विश्व संस्कृत दिवस मना रहे हैं। संस्कृत ज्ञान और अभिव्यक्ति का एक शाश्वत स्रोत है। इसका प्रभाव सभी क्षेत्रों में देखा जा सकता है। यह दिन दुनियाभर में संस्कृत सीखने और उसे लोकप्रिय बनाने वाले प्रत्येक व्यक्ति के प्रयासों की सराहना करने का सुअवसर है।”

“पिछले एक दशक से ज्यादा समय में हमारी सरकार ने संस्कृत को लोकप्रिय बनाने के लिए अनेक प्रयास किए हैं। इनमें केंद्रीय संस्कृत विश्वविद्यालय, संस्कृत शिक्षण केंद्रों की स्थापना, संस्कृत विद्वानों को अनुदान प्रदान करना और पांडुलिपियों के डिजिटलीकरण के लिए ज्ञान भारतम मिशन शामिल हैं। इससे अनगिनत विद्यार्थियों और शोधकर्ताओं को लाभ हुआ है।”

“अद्य श्रावणपूर्णिमादिने वयं विश्वसंस्कृतदिवसम् आचरामः। संस्कृतभाषा ज्ञानस्य अभिव्यक्तेः च अनादिस्रोतः अस्ति। तस्याः प्रभावः विविधेषु क्षेत्रेषु द्रष्टुं शक्यते। समग्रे विश्वे प्रत्येकम् अपि जनः यः संस्कृतं पठितुं तस्य प्रचारं कर्तुं च प्रयतमानः अस्ति तस्य प्रशंसायै कश्चन अवसरः नाम एतत् दिनम्।”

“गते दशके  अस्माकं सर्वकारेण संस्कृतस्य प्रचाराय अनेके प्रयासाः कृताः सन्ति। तेषु त्रयाणां केन्द्रीयसंस्कृतविश्वविद्यालयानां स्थापनम्, संस्कृताध्ययनकेन्द्राणाम् आरम्भः, संस्कृतविद्वद्भ्यः अनुदानप्रदानम्, पाण्डुलिपीनां डिजिटल माध्यमे स्थापनाय ज्ञानभारतं मिशन् इत्यादीनि सन्ति। एतेन अगणिताः छात्राः शोधार्थिनः च लाभान्विताः जाताः।”

 

*****

 


(Release ID: 2154676)