ಪ್ರಧಾನ ಮಂತ್ರಿಯವರ ಕಛೇರಿ
ಪಿಂಗಲಿ ವೆಂಕಯ್ಯ ಅವರ ಜನ್ಮದಿನದಂದು ಅವರಿಗೆ ಗೌರವ ಸಮರ್ಪಿಸಿದ ಪ್ರಧಾನಮಂತ್ರಿ
Posted On:
02 AUG 2025 2:55PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಪಿಂಗಲಿ ವೆಂಕಯ್ಯ ಅವರ ಜನ್ಮ ದಿನದಂದು ಅವರಿಗೆ ಗೌರವ ಸಲ್ಲಿಸಿದರು, ಅವರು ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ನೀಡುವಲ್ಲಿ ಅವರ ಪಾತ್ರಕ್ಕಾಗಿ ಸ್ಮರಣೀಯರು. #HarGharTiranga ಅಭಿಯಾನ ಬಲಪಡಿಸಲು ಮತ್ತು ತ್ರಿವರ್ಣ ಧ್ವಜ ಹಾರಿಸಲು ಜನರನ್ನು ಪ್ರೇರೇಪಿಸುತ್ತಾ, ಶ್ರೀ ಮೋದಿ ಅವರು ತ್ರಿವರ್ಣ ಧ್ವಜದೊಂದಿಗೆ ತಮ್ಮ ಸೆಲ್ಫಿ ಅಥವಾ ಫೋಟೋಗಳನ್ನು harghartiranga.com ನಲ್ಲಿ ಹಂಚಿಕೊಳ್ಳಲು ಮನವಿ ಮಾಡಿದರು.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ಪಿಂಗಲಿ ವೆಂಕಯ್ಯ ಅವರ ಜನ್ಮದಿನದಂದು ಅವರಿಗೆ ನಮನಗಳು. ನಮಗೆ ತ್ರಿವರ್ಣ ಧ್ವಜ ನೀಡುವಲ್ಲಿ ಅವರು ವಹಿಸಿದ ಪಾತ್ರಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ, ಅದು ನಮ್ಮ ಹೆಮ್ಮೆ!
ಎಂದಿನಂತೆ, #HarGharTiranga ಅಭಿಯಾನವನ್ನು ಬಲಪಡಿಸೋಣ ಮತ್ತು ತ್ರಿವರ್ಣ ಧ್ವಜವನ್ನು ಹಾರಿಸೋಣ. ನಿಮ್ಮ ಸೆಲ್ಫಿ ಅಥವಾ ಫೋಟೋಗಳನ್ನು harghartiranga.com ನಲ್ಲಿ ಹಂಚಿಕೊಳ್ಳಿ”
*****
(Release ID: 2151833)
Read this release in:
Odia
,
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam