ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಹೇಳಿಕೆ

Posted On: 30 JUL 2025 8:29PM by PIB Bengaluru

ದ್ವಿಪಕ್ಷೀಯ ವ್ಯಾಪಾರದ ಬಗ್ಗೆ ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಸರ್ಕಾರ ಗಮನಿಸಿದೆ. ಅದರ ಪರಿಣಾಮಗಳನ್ನು ಸರ್ಕಾರ ಅಧ್ಯಯನ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತ ಮತ್ತು ಅಮೆರಿಕ ಕಳೆದ ಕೆಲವು ತಿಂಗಳುಗಳಿಂದ ನ್ಯಾಯಯುತ, ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಮಾತುಕತೆಗಳಲ್ಲಿ ತೊಡಗಿವೆ. ನಾವು ಆ ಉದ್ದೇಶಕ್ಕೆ ಬದ್ಧರಾಗಿದ್ದೇವೆ.

ನಮ್ಮ ರೈತರು, ಉದ್ಯಮಿಗಳು ಮತ್ತು ಎಂಎಸ್ಎಂಇಗಳ ಕಲ್ಯಾಣವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸರ್ಕಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.

ಯುನೈಟೆಡ್ ಕಿಂಗ್ ಡಮ್ ಜತೆಗಿನ ಇತ್ತೀಚಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಸೇರಿದಂತೆ ಇತರ ವ್ಯಾಪಾರ ಒಪ್ಪಂದಗಳಂತೆಯೇ ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಭದ್ರಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

 

*****
 


(Release ID: 2150522)