ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಅಧಿಕೃತ ಫ್ಯಾಕ್ಟ್ ಚೆಕ್‌ ಘಟಕದ ಮೂಲಕ ಭಾರತ ಮತ್ತು ಸಶಸ್ತ್ರ ಪಡೆಗಳ ವಿರುದ್ಧ ಪಾಕಿಸ್ತಾನದ ಪ್ರಚಾರವನ್ನು ಸರ್ಕಾರ ತಳ್ಳಿಹಾಕಿದೆ


ನಕಲಿ ಸುದ್ದಿಗಳು, ಎಡಿಟ್‌ ಮಾಡಿದ ವಿಡಿಯೊಗಳನ್ನು ಪತ್ತೆಹಚ್ಚಲು ಮತ್ತು ನಿಲ್ಲಿಸಲು ಮತ್ತು ಪಾಕಿಸ್ತಾನದ ಭಾರತ ವಿರೋಧಿ ಪ್ರಚಾರವನ್ನು ತ್ವರಿತ ಖಂಡನೆಗಳೊಂದಿಗೆ ಎದುರಿಸಲು ಪಿಐಬಿ ಫ್ಯಾಕ್ಟ್ ಚೆಕ್‌ ಘಟಕವು ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಹಗಲಿರುಳು ಕೆಲಸ ಮಾಡಿತು

ಆಪರೇಷನ್‌ ಸಿಂಧೂರ್‌ ವೇಳೆ ಭಾರತ ವಿರೋಧಿ ಪ್ರಚಾರ ಹರಡುತ್ತಿದ್ದ 1,400ಕ್ಕೂ ಹೆಚ್ಚು ಯುಆರ್‌ಎಲ್‌ಗಳನ್ನು ತಡೆದ ಕೇಂದ್ರ ಸರ್ಕಾರ

Posted On: 30 JUL 2025 4:46PM by PIB Bengaluru

ಲಭ್ಯವಿರುವ ಶಾಸನಬದ್ಧ ಮತ್ತು ಸಾಂಸ್ಥಿಕ ಕಾರ್ಯವಿಧಾನಗಳೊಂದಿಗೆ ನಕಲಿ ಮತ್ತು ದಾರಿತಪ್ಪಿಸುವ ಮಾಹಿತಿಯ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ಸಾಧ್ಯವಿರುವ ಎಲ್ಲಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆಪರೇಷನ್‌ ಸಿಂಧೂರ್‌ ಸಮಯದಲ್ಲಿ, ಬೃಹತ್‌ ನಕಲಿ ಸುದ್ದಿ, ತಪ್ಪು ಮಾಹಿತಿ ಮತ್ತು ಪ್ರಚಾರ ಅಭಿಯಾನಗಳು ಹೆಚ್ಚಾಗಿ ಭಾರತದ ಹೊರಗಿನಿಂದ ನಡೆಯುತ್ತಿರುವುದು ಕಂಡುಬಂದಿದೆ. ಇಂತಹ ತಪ್ಪು ಮಾಹಿತಿ ಅಭಿಯಾನಗಳನ್ನು ಎದುರಿಸಲು ಸರ್ಕಾರ ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ:

ಅಧಿಕೃತ ಮಾಹಿತಿಯನ್ನು ಒದಗಿಸುವುದು: ಭಾರತ ಸರ್ಕಾರವು ನಿಯತಕಾಲಿಕ ಮಾಧ್ಯಮಗೋಷ್ಠಿಗಳನ್ನು ನಡೆಸಿತು ಮತ್ತು ಮಾಧ್ಯಮಗಳು ಮತ್ತು ನಾಗರಿಕರಿಗೆ ಮಾಹಿತಿ ನೀಡಿತು. ರಕ್ಷಣಾ ಪಡೆಗಳು ನಡೆಸಿದ ಕಾರ್ಯಾಚರಣೆಯ ವಿವರಗಳನ್ನು ಸಂಬಂಧಿತ ಆಡಿಯೊ-ದೃಶ್ಯಗಳು ಮತ್ತು ಉಪಗ್ರಹ ಚಿತ್ರಗಳೊಂದಿಗೆ ವಿವರಿಸಲಾಯಿತು. ಈ ಸಂಕ್ಷಿಪ್ತ ವಿವರಣೆಗಳು ಅಧಿಕೃತ ಮಾಹಿತಿಯನ್ನು ಒದಗಿಸಿದವು.

ಅಂತರ ಸಚಿವಾಲಯ ಸಮನ್ವಯ: ಆಪರೇಷನ್‌ ಸಿಂಧೂರ್‌ ಸಮಯದಲ್ಲಿ, ಅಂತರಶಿಸ್ತೀಯ ಮತ್ತು ಅಂತರ-ಇಲಾಖಾ ಸಮನ್ವಯಕ್ಕಾಗಿ ಕೇಂದ್ರೀಕೃತ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಯಿತು. ಈ ನಿಯಂತ್ರಣ ಕೊಠಡಿಯು ದಿನದ 24 ಗಂಟೆಯು ಕಾರ್ಯನಿರ್ವಹಿಸಿತು ಮತ್ತು ಎಲ್ಲಾ ಮಾಧ್ಯಮ ಮಧ್ಯಸ್ಥಗಾರರಿಗೆ ನೈಜ ಸಮಯದ ಮಾಹಿತಿ ಪ್ರಸಾರಕ್ಕೆ ಅನುಕೂಲ ಮಾಡಿಕೊಟ್ಟಿತು. ಈ ನಿಯಂತ್ರಣ ಕೊಠಡಿಯಲ್ಲಿಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನೋಡಲ್‌ ಪ್ರತಿನಿಧಿಗಳು, ವಿವಿಧ ಸರ್ಕಾರಿ ಮಾಧ್ಯಮ ಘಟಕಗಳ ಅಧಿಕಾರಿಗಳು ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಅಧಿಕಾರಿಗಳು ಇದ್ದರು. ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ಹರಡುವ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪೋಸ್ಟ್‌ಗಳನ್ನು ಸಕ್ರಿಯವಾಗಿ ಗುರುತಿಸಲಾಗಿದೆ.

ಫ್ಯಾಕ್ಟ್ ಚೆಕ್‌

ಈ ಘಟಕವು ಭಾರತ ಮತ್ತು ಭಾರತೀಯ ಸಶಸ್ತ್ರ ಪಡೆಗಳ ವಿರುದ್ಧ ಪಾಕಿಸ್ತಾನದ ಪ್ರಚಾರವನ್ನು ತಳ್ಳಿಹಾಕಿತು ಮತ್ತು ಅಂತಹ ವಿಷಯವನ್ನು ಎದುರಿಸುವ ಅನೇಕ ಪೋಸ್ಟ್‌ಗಳನ್ನು ಪರಿಶೀಲಿಸಿತು. ಹೆಚ್ಚುವರಿಯಾಗಿ, ಎಫ್‌ಸಿಯು ಫ್ಯಾಕ್ಟ್ ಚೆಕ್‌ ಮಾಡಿದ ಆಪರೇಷನ್‌ ಸಿಂಧೂರ್‌ಗೆ ಸಂಬಂಧಿಸಿದ ತಪ್ಪು ಮಾಹಿತಿ ಅಥವಾ ಸುಳ್ಳು ಸುದ್ದಿಗಳಿಗೆ ಸಂಬಂಧಿಸಿದ ಲಿಂಕ್‌ಗಳನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಮಧ್ಯವರ್ತಿಗಳೊಂದಿಗೆ ತಕ್ಷಣ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್ ಚೆಕ್‌ ಘಟಕದ ಪ್ರಯತ್ನಗಳನ್ನು ಮಾಧ್ಯಮಗಳು ಶ್ಲಾಘಿಸಿದವು. ಕೆಲವು ಲೇಖನಗಳ ಲಿಂಕ್‌ಗಳನ್ನು ಕೆಳಗೆ ನೀಡಲಾಗಿದೆ:

  • ‘ಆಪರೇಷನ್‌ ಸಿಂಧೂರ್‌’ ನಂತರ ಪಾಕಿಸ್ತಾನದ ಡಿಜಿಟಲ್‌ ಪ್ರಚಾರದ ವಿರುದ್ಧ ಭಾರತದ ಎಫ್‌ಸಿಯು ತ್ವರಿತ ಪ್ರತಿರೋಧದೊಂದಿಗೆ ಹೋರಾಡುತ್ತದೆ

https://www.newindianexpress.com/nation/2025/May/10/indias-fcu-battles-pakistans-digital-propaganda-with-swift-rebuttals-following-operation-sindoor

  • ಸುಳ್ಳು ಹೇಳಿಕೆಗಳನ್ನು ಬಿಂಬಿಸಲು ಆಪರೇಷನ್‌ ಸಿಂಧೂರ್‌ ಹಿನ್ನೆಲೆಯಲ್ಲಿ ಸರ್ಕಾರಿ ಸತ್ಯಶೋಧನಾ ಘಟಕವು ಕಾರ್ಯಪ್ರವೃತ್ತವಾಗಿದೆ

https://www.livemint.com/industry/media/india-pib-govt-fact-checking-unit-operation-sindoor-misinformation-false-claims-11746770729519.html

  • ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ವಿರುದ್ಧ ಭಾರತ ಹೇಗೆ ಹೋರಾಡುತ್ತಿದೆ

https://www.hindustantimes.com/india-news/how-india-is-fighting-pakistan-s-disinformation-campaign-101746644575505.html

ನಿರ್ಬಂಧಿಸಲಾಗುತ್ತಿದೆ

ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಸುಳ್ಳು ಮತ್ತು ಹಾನಿಕಾರಕ ಮಾಹಿತಿಯನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿವೆ ಎಂದು ಗಮನಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷ ನ್‌ 69 ಎ ಅಡಿಯಲ್ಲಿ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷ ಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪೋಸ್ಟ್‌ಗಳನ್ನು ನಿರ್ಬಂಧಿಸಲು ಸರ್ಕಾರ ಅಗತ್ಯ ಆದೇಶಗಳನ್ನು ಹೊರಡಿಸಿದೆ.

ಆಪರೇಷನ್‌ ಸಿಂಧೂರ್‌ ಸಮಯದಲ್ಲಿ ಡಿಜಿಟಲ್‌ ಮಾಧ್ಯಮದಲ್ಲಿ1,400ಕ್ಕೂ ಹೆಚ್ಚು ಯುಆರ್‌ಎಲ್‌ಗಳನ್ನು ನಿರ್ಬಂಧಿಸಲು ಸಚಿವಾಲಯ ನಿರ್ದೇಶನಗಳನ್ನು ನೀಡಿದೆ . ಈ ಯುಆರ್‌ಎಲ್‌ಗಳ ವಿಷಯವು ಸುಳ್ಳು, ದಾರಿತಪ್ಪಿಸುವ, ಭಾರತ ವಿರೋಧಿ ಸುದ್ದಿ ವಿಷಯ, ಮುಖ್ಯವಾಗಿ ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಕೋಮು ಸೂಕ್ಷ್ಮ ವಿಷಯ ಮತ್ತು ಭಾರತೀಯ ಸಶಸ್ತ್ರ ಪಡೆಗಳ ವಿರುದ್ಧ ಪ್ರಚೋದನಕಾರಿ ವಿಷಯಗಳನ್ನು ಒಳಗೊಂಡಿದೆ.

ಮಾಧ್ಯಮಗಳಿಗೆ ಸಲಹೆ

ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರವನ್ನು ಮಾಡದಂತೆ 2025ರ ಏಪ್ರಿಲ್‌ 26ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ಮಾಧ್ಯಮ ಚಾನೆಲ್‌ಗಳಿಗೆ ಸಲಹೆ ನೀಡಿತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಅವರು ಇಂದು ಲೋಕಸಭೆಯಲ್ಲಿಈ ಮಾಹಿತಿಯನ್ನು ಸಲ್ಲಿಸಿದರು.

 

*****
 


(Release ID: 2150468)