ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೌಶಲ್ಯ-ಸಂಯೋಜಿತ, ಎಲ್ಲವನ್ನೂ ಒಳಗೊಂಡ ಶಿಕ್ಷಣಕ್ಕಾಗಿ ಪರಿವರ್ತಕ ನೀಲನಕ್ಷೆಯಾದ ಪಿ.ಆರ್.ಎಸ್ 2024 ಕುರಿತ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ

Posted On: 30 JUL 2025 1:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತವು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಮೀರಿ ತನ್ನ ಶಿಕ್ಷಣ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸುತ್ತಿದೆ ಮತ್ತು ನೈಜ ಕಲಿಕೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿದೆ ಎಂದು ಹೇಳಿದ್ದಾರೆ. ಲೇಖನವನ್ನು ಹಂಚಿಕೊಂಡಿರುವ ಶ್ರೀ ನರೇಂದ್ರ ಮೋದಿ ಅವರು, ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ವೈಜ್ಞಾನಿಕ ಒಳನೋಟಗಳನ್ನು ಒದಗಿಸುವ ಮತ್ತು ಸಮಗ್ರ, ಕೌಶಲ್ಯ-ಸಂಬಂಧಿತ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ಸಾಕ್ಷ್ಯ ಆಧಾರಿತ, ಜಿಲ್ಲಾ ಮಟ್ಟದ ಕ್ರಮಕ್ಕಾಗಿ ನೀಲನಕ್ಷೆಯನ್ನು ರೂಪಿಸುವ ಪಿ.ಆರ್.ಎಸ್ 2024 ಅನ್ನು ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ವೇದಿಕೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಜಯಂತ್ ಚೌಧರಿ ಅವರ ಪೋಸ್ಟ್‌ ಗೆ ಭಾರತದ ಪ್ರಧಾನಮಂತ್ರಿಗಳ ಕಾರ್ಯಾಲಯ ಹೀಗೆ ಪ್ರತಿಕ್ರಿಯಿಸಿದೆ: 

“ಭಾರತವು ನೈಜ ಕಲಿಕೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಮೀರಿ ತನ್ನ ಶಿಕ್ಷಣ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸುತ್ತಿದೆ. ತಮ್ಮ ಇತ್ತೀಚಿನ ಚಿಂತನೆಯಲ್ಲಿ, ಕೇಂದ್ರ ಸಚಿವರಾದ ಶ್ರೀ @jayantrld ಅವರು ಪಿ.ಆರ್.ಎಸ್ 2024 ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ವೈಜ್ಞಾನಿಕ ಒಳನೋಟಗಳನ್ನು ಹೇಗೆ ಒದಗಿಸುತ್ತದೆ ಮತ್ತು ಸಮಗ್ರ, ಕೌಶಲ್ಯ-ಸಂಬಂಧಿತ ಶಿಕ್ಷಣಕ್ಕೆ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ಹೇಗೆ ಸಾಕ್ಷ್ಯ ಆಧಾರಿತ, ಜಿಲ್ಲಾ ಮಟ್ಟದ ಕ್ರಮಕ್ಕಾಗಿ ನೀಲನಕ್ಷೆಯನ್ನು  ರೂಪಿಸುತ್ತದೆ ಎಂಬುದನ್ನು ಚರ್ಚಿಸಿದ್ದಾರೆ.”

 

 

*****

 


(Release ID: 2150109)