ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಪ್ರಧಾನಮಂತ್ರಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಿಂದ ಮಾಲ್ಡೀವ್ಸ್ ನ ರಕ್ಷಣಾ ಸಚಿವಾಲಯದ ಕಟ್ಟಡ ಜಂಟಿಯಾಗಿ ಉದ್ಘಾಟನೆ
Posted On:
25 JUL 2025 8:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಾದ ಮಾನ್ಯ ಡಾ||ಮೊಹಮ್ಮದ್ ಮುಯಿಝು ಅವರು ಜಂಟಿಯಾಗಿ ಇಂದು ಮಾಲೆಯಲ್ಲಿ ಮಾಲ್ಡೀವ್ಸ್ ನ ರಕ್ಷಣಾ ಸಚಿವಾಲಯದ (MoD) ಅತ್ಯಾಧುನಿಕ ಕಟ್ಟಡವನ್ನು ಉದ್ಘಾಟಿಸಿದರು.
ಹಿಂದೂ ಮಹಾಸಾಗರದತ್ತ ದೃಷ್ಟಿ ಹಾಯಿಸುತ್ತಿರುವ ಈ ಹನ್ನೊಂದು ಅಂತಸ್ತಿನ ಕಟ್ಟಡವು ಎರಡೂ ದೇಶಗಳ ನಡುವಿನ ಸದೃಢ ಮತ್ತು ದೀರ್ಘಕಾಲದ ರಕ್ಷಣಾ ಮತ್ತು ಭದ್ರತಾ ಸಹಕಾರದ ಸಂಕೇತವಾಗಿದೆ.
ಭಾರತದ ಆರ್ಥಿಕ ನೆರವಿನೊಂದಿಗೆ ರಕ್ಷಣಾ ಸಚಿವಾಲಯದ ಕಟ್ಟಡವನ್ನು ನಿರ್ಮಿಸಲಾಗಿದ್ದು, ಮಾಲ್ಡೀವ್ಸ್ ನ ರಕ್ಷಣಾ ಮತ್ತು ಕಾನೂನು ಜಾರಿ ಪ್ರಾಧಿಕಾರಗಳ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಇದು ಕೊಡುಗೆ ನೀಡಲಿದೆ.
*****
(Release ID: 2148691)
Read this release in:
Odia
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam