ಸಹಕಾರ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜಸ್ಥಾನದ ಜೈಪುರದಲ್ಲಿ ನಡೆದ ‘ಸಹಕಾರ ಮತ್ತು ರೋಜ್ಗಾರ್ ಉತ್ಸವ’ದಲ್ಲಿ ರಾಜಸ್ಥಾನದ ವಿವಿಧ ಜಿಲ್ಲೆಗಳ 8 ಸಾವಿರಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿ ಹಳ್ಳಿ, ಬಡ ವ್ಯಕ್ತಿ ಮತ್ತು ರೈತರಿಗೆ ಸಹಕಾರವನ್ನು ವಿಸ್ತರಿಸುವ ಗುರಿಯೊಂದಿಗೆ ಸ್ವತಂತ್ರ ಕೇಂದ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು
ಸ್ಥಾಪನೆಯಾದ ನಾಲ್ಕು ವರ್ಷಗಳಲ್ಲಿ, ಸಹಕಾರ ಸಚಿವಾಲಯವು 61 ಉಪಕ್ರಮಗಳ ಮೂಲಕ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಿದೆ
ಮುಂದಿನ 100 ವರ್ಷಗಳು ಸಹಕಾರಕ್ಕೆ ಸೇರಿವೆ
ಸಹಕಾರಿ ಸಂಸ್ಥೆಗಳ ಮೂಲಕ ಒಂಟೆ ತಳಿ ಸಂರಕ್ಷಣೆ ಮತ್ತು ಒಂಟೆ ಹಾಲಿನ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ
ದೇಶದ ಕೃಷಿ ಅಭಿವೃದ್ಧಿಯಲ್ಲಿ ರಾಜಸ್ಥಾನವು ದೊಡ್ಡ ಕೊಡುಗೆಯನ್ನು ಹೊಂದಿದೆ, ಕ್ಲಸ್ಟರ್ ಬೀನ್ಸ್, ಸಾಸಿವೆ, ರಾಗಿ, ಎಣ್ಣೆಕಾಳುಗಳು ಮತ್ತು ಸಿರಿಧಾನ್ಯಗಳ ಉತ್ಪಾದನೆಯಲ್ಲಿಇದು ಮೊದಲ ಸ್ಥಾನದಲ್ಲಿದೆ
ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಮೆಕ್ಕೆಜೋಳ ಉತ್ಪಾದಿಸುವ ರೈತರ ಸಂಪೂರ್ಣ ಉತ್ಪನ್ನಗಳನ್ನು ನಾಫೆಡ್ (NAFED) ಮತ್ತು ಎನ್.ಸಿ.ಸಿ.ಎಫ್ ಮೂಲಕ ಎಂ.ಎಸ್.ಪಿಗೆ ಖರೀದಿಸುವ ಭರವಸೆಯನ್ನು ನರೇಂದ್ರ ಮೋದಿ ಸರ್ಕಾರ ನೀಡಿದೆ
ಒಂದು ಕಾಲದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಿಂದ ತತ್ತರಿಸಿದ್ದ ರಾಜಸ್ಥಾನ, ಎಸ್.ಐ.ಟಿ ರಚಿಸುವ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗೆ ಬಲವಾದ ಸಂದೇಶವನ್ನು ರವಾನಿಸಿದೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು 24 ಧಾನ್ಯ ಶೇಖರಣಾ ಗೋದಾಮುಗಳು ಮತ್ತು 64 ರಾಗಿ ಮಳಿಗೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದರು, ಗೋಪಾಲ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 1400 ದನಗಾಹಿಗಳಿಗೆ 12 ಕೋಟಿ ರೂ.ಗಳ ಸಾಲವನ್ನು ವಿತರಿಸಿದರು ಮತ್ತು 2300 ಕ್ಕೂ ಹೆಚ್ಚು ಹಾಲು ಉತ್ಪಾದಕ ಸಮಿತಿಗಳಿಗೆ ಮೈಕ್ರೋ ಎ.ಟಿ.ಎಂಗಳನ್ನು ವಿತರಿಸಿದರು
ಶ್ವೇತ ಕ್ರಾಂತಿ 2.0 - ಪ್ರಾಥಮಿಕ ಡೈರಿ ಸಹಕಾರಿ ಸೊಸೈಟಿ (ಪಿ.ಡಿ.ಸಿ.ಎಸ್) ಆನ್ ಲೈನ್ ನೋಂದಣಿ ವೇದಿಕೆಯ ಉದ್ಘಾಟನೆ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗರೀಬಿ ಮುಕ್ತ ಗ್ರಾಮ ಅಭಿಯಾನದ ಅಡಿಯಲ್ಲಿ ಯಶೋಗಾಥೆಗಳ ಸಂಕಲನವನ್ನು ಬಿಡುಗಡೆ ಮಾಡಿ, ರಾಜಸ್ಥಾನ ಪೊಲೀಸರಿಗೆ ನೀಡಲಾದ 100 ಹೊಸ ವಾಹನಗಳಿಗೆ ಹಸಿರು ನಿಶಾನೆ ತೋರಿದರು
Posted On:
17 JUL 2025 5:08PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ರಾಜಸ್ಥಾನದ ಜೈಪುರದಲ್ಲಿ ನಡೆದ ‘ಸಹಕಾರ ಮತ್ತು ರೋಜ್ಗಾರ್ ಉತ್ಸವ’ ದಲ್ಲಿಅಂತಾರಾಷ್ಟ್ರೀಯ ಸಹಕಾರ ವರ್ಷ - 2025ರ ಸಂದರ್ಭದಲ್ಲಿಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಕೇಂದ್ರ ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಶ್ರೀಮತಿ ವಸುಂಧರಾ ರಾಜೇ ಸಿಂಧಿಯಾ ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

‘ಸಹಕಾರ್ ಮತ್ತು ರೋಜ್ಗಾರ್ ಉತ್ಸವ’ ವನ್ನುದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ, ಅಂತಾರಾಷ್ಟ್ರೀಯ ಸಹಕಾರಿ ವರ್ಷ - 2025ರ ಆಚರಣೆ ಭಾರತದಿಂದ ಪ್ರಾರಂಭವಾಯಿತು ಎಂದರು. ವಿಶ್ವಸಂಸ್ಥೆಯ ಮಹಾಧಿವೇಶನ (ಯು.ಎನ್.ಜಿ.ಎ) 2025ನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷ ಎಂದು ಘೋಷಿಸಿದಾಗ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅದರ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿದರು ಎಂದರು. ಅಂತಾರಾಷ್ಟ್ರೀಯ ಸಹಕಾರಿ ವರ್ಷದ ಅಂಗವಾಗಿ ಇಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ, 24 ಧಾನ್ಯ ಶೇಖರಣಾ ಗೋದಾಮುಗಳು ಮತ್ತು 64 ರಾಗಿ ಮಳಿಗೆಗಳ ವರ್ಚುವಲ್ ಉದ್ಘಾಟನೆ ನಡೆಯಿತು, ಗೋಪಾಲ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸಾಲಗಳನ್ನು ವಿತರಿಸಲಾಯಿತು, ಡೈರಿ ಉತ್ಪಾದಕ ಸಂಘಗಳಿಗೆ ಮೈಕ್ರೋ ಎಟಿಎಂಗಳನ್ನು ವಿತರಿಸಲಾಯಿತು ಮತ್ತು ಎರಡು ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿ.ಎ.ಸಿ.ಎಸ್) ಗೌರವಿಸಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರೊಂದಿಗೆ, ಶ್ವೇತ ಕ್ರಾಂತಿ 2.0 - ಪ್ರಾಥಮಿಕ ಡೈರಿ ಸಹಕಾರಿ ಸೊಸೈಟಿ (ಪಿ.ಡಿ.ಸಿ.ಎಸ್) ಆನ್‌ಲೈನ್ ನೋಂದಣಿ ವೇದಿಕೆಯ ಬಿಡುಗಡೆ ನಡೆಯಿತು ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗರೀಬಿ ಮುಕ್ತ ಗ್ರಾಮ ಯೋಜನೆ ಮತ್ತು ವಂದೇ ಗಂಗಾ ಜಲ ಸಂರಕ್ಷ ಣಾ ಅಭಿಯಾನದ ಅಡಿಯಲ್ಲಿ ಯಶೋಗಾಥೆಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಇದಲ್ಲದೆ, ರಾಜಸ್ಥಾನ ಪೊಲೀಸರಿಗೆ ನೀಡಲಾದ 100 ಹೊಸ ವಾಹನಗಳಿಗೆ ಹಸಿರು ನಿಶಾನೆ ತೋರಲಾಯಿತು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿ ಗ್ರಾಮ, ಬಡ ವ್ಯಕ್ತಿ ಮತ್ತು ರೈತರಿಗೆ ಸಹಕಾರವನ್ನು ವಿಸ್ತರಿಸುವ ಗುರಿಯೊಂದಿಗೆ ಸ್ವತಂತ್ರ ಕೇಂದ್ರ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಶೇ.98ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರವು ಸಕ್ರಿಯ ಪಾತ್ರ ವಹಿಸುತ್ತಿದ್ದು, ಮುಂದಿನ 100 ವರ್ಷಗಳು ಸಹಕಾರಕ್ಕೆ ಸೇರಿವೆ ಎಂದರು. ದೇಶದ ಭತ್ತ ಮತ್ತು ಗೋಧಿ ಸಂಗ್ರಹಣೆಗೆ ಸಹಕಾರಿ ಸಂಸ್ಥೆಗಳು ಸರಿಸುಮಾರು ಶೇ.20 ರಷ್ಟು ಕೊಡುಗೆ ನೀಡುತ್ತವೆ, ಆದರೆ 35 ಪ್ರತಿಶತ ರಸಗೊಬ್ಬರಗಳು ಮತ್ತು 30 ಪ್ರತಿಶತ ಸಕ್ಕರೆ ಉತ್ಪಾದನೆಯನ್ನು ಸಹಕಾರಿ ಸಂಘಗಳ ಮೂಲಕ ಮಾಡಲಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶೇ.20ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳನ್ನು ಸಹಕಾರಿ ಸಂಘಗಳ ಮೂಲಕ ನಡೆಸಲಾಗುತ್ತದೆ. 8.5 ಲಕ್ಷ ಸಹಕಾರಿ ಸಂಸ್ಥೆಗಳ ಮೂಲಕ 31 ಕೋಟಿ ಜನರು ಸಹಕಾರದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದರು.

ಸಹಕಾರ ಸಚಿವಾಲಯ ಸ್ಥಾಪನೆಯಾದ ನಾಲ್ಕು ವರ್ಷಗಳಲ್ಲಿ, ನಾವು 61 ಉಪಕ್ರಮಗಳ ಮೂಲಕ ಸಹಕಾರಿ ಸಂಸ್ಥೆಗಳನ್ನು ಬಲಪಡಿಸಲು ಕೆಲಸ ಮಾಡಿದ್ದೇವೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ನಾವು ಎರಡು ಲಕ್ಷ ಹೊಸ ಪಿ.ಎ.ಸಿ.ಎಸ್‌ಗಳನ್ನು ರಚಿಸುವ ಗುರಿ ಹೊಂದಿದ್ದೇವೆ, ಅದರಲ್ಲಿ40 ಸಾವಿರ ಪಿ.ಎ.ಸಿ.ಎಸ್‌ಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ಎಲ್ಲಾ ಪಿ.ಎ.ಸಿ.ಎಸ್‌ಗಳ ಗಣಕೀಕರಣ ಪೂರ್ಣಗೊಂಡಿದೆ ಮತ್ತು ಎಲ್ಲಾ ರಾಜ್ಯಗಳು ಪಿ.ಎ.ಸಿ.ಎಸ್‌ನ ಮಾದರಿ ಬೈಲಾಗಳನ್ನು ಒಪ್ಪಿಕೊಂಡಿವೆ, ಗೋದಾಮುಗಳನ್ನು ಸಹ ನಿರ್ಮಿಸಲಾಗುತ್ತಿದೆ. ಸಾವಯವ ಉತ್ಪನ್ನಗಳು, ರಫ್ತು ಮತ್ತು ಬೀಜ ಉತ್ತೇಜನಕ್ಕಾಗಿ ಹೊಸ ಸಹಕಾರಿ ಸಂಸ್ಥೆಗಳನ್ನು ರಚಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ(ಎಂ.ಎ.ಸ್‌ಪಿ) ನಾಫೆಡ್(NAFED) ಮತ್ತು ಎನ್.ಸಿ.ಸಿ.ಎಫ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿದ ರೈತರ ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಮೆಕ್ಕೆಜೋಳವನ್ನು ಖರೀದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಮತ್ತು ಮಾರುಕಟ್ಟೆಯಲ್ಲಿ ಪಡೆಯುತ್ತಿರುವ ಬೆಲೆ ಎಂ.ಎಸ್.ಪಿಗಿಂತ ಹೆಚ್ಚಿದ್ದರೆ, ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿಮಾರಾಟ ಮಾಡಲು ಮುಕ್ತರಾಗಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಇಂದು ರಾಜಸ್ಥಾನವು ದೇಶದ ಕೃಷಿ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಶೇಕಡಾ 90ಕ್ಕಿಂತ ಹೆಚ್ಚು ಗ್ವಾರ್ (ಕ್ಲಸ್ಟರ್ ಬೀನ್ಸ್) ಅನ್ನು ರಾಜ್ಯದಲ್ಲಿಉತ್ಪಾದಿಸಲಾಗುತ್ತಿದೆ. ಶೇ.46ರಷ್ಟು ಸಾಸಿವೆ, ಶೇ.44ರಷ್ಟು ಮುತ್ತು ಸಿರಿಧಾನ್ಯಗಳು (ಸಜ್ಜೆ), ಶೇ.22ರಷ್ಟು ಎಣ್ಣೆಕಾಳುಗಳು ಮತ್ತು ಶೇ.15ರಷ್ಟು ಸಿರಿಧಾನ್ಯಗಳನ್ನು ರಾಜಸ್ಥಾನದಲ್ಲೇ ಉತ್ಪಾದಿಸಲಾಗುತ್ತಿದೆ. ಈ ಬೆಳೆಗಳ ಉತ್ಪಾದನೆಯಲ್ಲಿ ರಾಜಸ್ಥಾನವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ ಶೇಕಡಾ 18 ರಷ್ಟು ನೆಲಗಡಲೆಯನ್ನು ಉತ್ಪಾದಿಸಲಾಗುತ್ತಿದೆ ಮತ್ತು ಅದರ ಉತ್ಪಾದನೆಯಲ್ಲಿಇದು ದೇಶದಲ್ಲಿಎರಡನೇ ಸ್ಥಾನದಲ್ಲಿದೆ, ಆದರೆ ರಾಜಸ್ಥಾನವು ಜೋಳ, ಕಡಲೆ, ದ್ವಿದಳ ಧಾನ್ಯಗಳು ಮತ್ತು ಸೋಯಾಬೀನ್ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು ಶೇಕಡ 73, ಕಡಲೆ ಶೇಕಡ 82, ಸಾಸಿವೆ ಶೇಕಡ 95 ಮತ್ತು ನೆಲಗಡಲೆಯನ್ನು ಶೇಕಡ 82 ರಷ್ಟು ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.

ರಾಜಸ್ಥಾನವನ್ನು ಒಂಟೆಗಳ ನಾಡು ಎಂದು ಇಡೀ ದೇಶಕ್ಕೆ ತಿಳಿದಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಒಂಟೆ ತಳಿಯ ಸಂರಕ್ಷಣೆ ಮತ್ತು ಸಹಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಒಂಟೆ ಹಾಲಿನ ಔಷಧೀಯ ಗುಣಗಳನ್ನು ಪರೀಕ್ಷಿಸುವ ಬಗ್ಗೆ ನಾವು ಸಂಶೋಧನೆಯನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಒಂಟೆಗಳ ಅಸ್ತಿತ್ವಕ್ಕೆ ಯಾವುದೇ ಅಪಾಯವಿಲ್ಲಎಂದು ಅವರು ಹೇಳಿದರು.
ರಾಜಸ್ಥಾನದ ಪ್ರಸ್ತುತ ಸರ್ಕಾರವು ಬಹಳ ಕಡಿಮೆ ಅವಧಿಯಲ್ಲಿಸಾಕಷ್ಟು ಕೆಲಸಗಳನ್ನು ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಹಿಂದೆ ಇಡೀ ರಾಜ್ಯವು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಂದ ಪೀಡಿತವಾಗಿತ್ತು, ಆದರೆ ರಾಜಸ್ಥಾನ ಸರ್ಕಾರವು ಎಸ್.ಐ.ಟಿ ರಚಿಸುವ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗೆ ಬಲವಾದ ಸಂದೇಶವನ್ನು ಕಳುಹಿಸಿದೆ ಎಂದು ಅವರು ಹೇಳಿದರು. ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ, ಮುಖ್ಯಮಂತ್ರಿ ಭಜನ್ ಲಾಲ್ ಅವರ ನೇತೃತ್ವದಲ್ಲಿ 35 ಲಕ್ಷ ಕೋಟಿ ರೂ.ಗಳ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು ಮತ್ತು 3 ಲಕ್ಷ ಕೋಟಿ ರೂ.ಗಳ ತಿಳಿವಳಿಕೆ ಒಪ್ಪಂದಗಳ ಕೆಲಸವೂ ಪ್ರಾರಂಭವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಕಡಿಮೆ ಮಾಡಲಾಗಿದೆ, ಎಲ್.ಪಿ.ಜಿ ಸಿಲಿಂಡರ್ ಅನ್ನು 450 ರೂ.ಗೆ ನೀಡಲಾಗಿದೆ ಎಂದು ಅವರು ಹೇಳಿದರು. ಇದರೊಂದಿಗೆ, ರಾಮ್ ಜಲ ಸೇತು ಲಿಂಕ್ ಯೋಜನೆ, ನವನೇರಾ ಬ್ಯಾರೇಜ್, ತಾಜೆವಾಲಾ ಬ್ಯಾರೇಜ್‌ನಿಂದ ನೀರನ್ನು ತರಲು ಯಮುನಾ ನದಿಯ ಡಿ.ಪಿ.ಆರ್‌ಅನ್ನು ಅನುಮೋದಿಸಲಾಯಿತು ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿಅನೇಕ ಹಳ್ಳಿಗಳಲ್ಲಿನಲ್ಲಿ ನೀರು ಸರಬರಾಜು ಪ್ರಾರಂಭಿಸಲಾಯಿತು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, 11 ವರ್ಷಗಳ ಅಧಿಕಾರಾವಧಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಮನೆಗಳು, ಶೌಚಾಲಯಗಳು, ವಿದ್ಯುತ್, ಅನಿಲ, ಐದು ಕೆಜಿ ಉಚಿತ ಆಹಾರ ಧಾನ್ಯಗಳು, ಐದು ಲಕ್ಷ ರೂಪಾಯಿಗಳವರೆಗೆ ಚಿಕಿತ್ಸೆ ಮತ್ತು 60 ಕೋಟಿ ಬಡ ಜನರಿಗೆ ಉಚಿತ ಔಷಧಗಳನ್ನು ಒದಗಿಸಿದೆ ಎಂದು ಹೇಳಿದರು. ಈ ಎಲ್ಲಯೋಜನೆಗಳನ್ನು ರಾಜಸ್ಥಾನದಲ್ಲಿಉತ್ತಮವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಅವರು ಸಹಕಾರ ಸಚಿವಾಲಯದ ಎಲ್ಲಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜಸ್ಥಾನವನ್ನು ದೇಶದ ಅಗ್ರ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ ಮತ್ತು ಅವರ ಪ್ರಯತ್ನಗಳಿಂದಾಗಿ ರಾಜಸ್ಥಾನದಲ್ಲಿಸಹಕಾರ ಬಲಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು 11ನೇ ಸ್ಥಾನದಿಂದ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 27 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಮಾಡಿದ ದೊಡ್ಡ ಕೆಲಸವೆಂದರೆ ದೇಶವನ್ನು ಭದ್ರಪಡಿಸುವುದು ಎಂದು ಅವರು ಹೇಳಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶವು ಭಯೋತ್ಪಾದಕ ದಾಳಿಗಳಿಂದ ಪೀಡಿತವಾಗಿತ್ತು ಎಂದು ಗೃಹ ಸಚಿವರು ಉಲ್ಲೇಖಿಸಿದರು. ಆದರೆ ಉರಿಯಲ್ಲಿ ದಾಳಿ ನಡೆದಾಗ, ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದರು, ಪುಲ್ವಾಮಾದಲ್ಲಿ ದಾಳಿ ನಡೆದಾಗ, ಅವರು ಏರ್ ಸ್ಟ್ರೈಕ್ ಮಾಡಿದರು ಮತ್ತು ಪಹಲ್ಗಾಮ್‌ನಲ್ಲಿನಡೆದ ದಾಳಿಗೆ ಪ್ರತಿಕ್ರಿಯೆಯಾಗಿ, ಆಪರೇಷನ್ ಸಿಂಧೂರ್ ಅಡಿಯಲ್ಲಿ ನಾವು ಪಾಕಿಸ್ತಾನದ ಒಳಗೆ ಹೋಗಿ ಭಯೋತ್ಪಾದಕರ ಅಡಗುತಾಣಗಳನ್ನು ಸೊಧೀಟಿಸಿದ್ದೇವೆ. ಭಾರತ, ಭಾರತೀಯ ಸೇನೆ ಮತ್ತು ಭಾರತೀಯ ಗಡಿಯ ನಾಗರಿಕರೊಂದಿಗೆ ಯಾರೂ ಗೊಂದಲ ಮಾಡಬಾರದು, ಇಲ್ಲದಿದ್ದರೆ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಲವಾದ ಸಂದೇಶವನ್ನು ಇಡೀ ಜಗತ್ತಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ಈ ಸಂದೇಶವನ್ನು ನೀಡುವ ಮೂಲಕ, ನರೇಂದ್ರ ಮೋದಿ ಜೀ ಸಮೃದ್ಧ, ಸುರಕ್ಷಿತ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಕೆಲಸ ಮಾಡಿದ್ದಾರೆ ಎಂದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಭಾರತ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರ ಒಟ್ಟಾಗಿ ರಾಜಸ್ಥಾನದಲ್ಲಿಸಹಕಾರ ಚಳವಳಿಯನ್ನು ಬಲಪಡಿಸಲಿವೆ ಎಂದು ಹೇಳಿದರು. 2047ರಲ್ಲಿ, ಭಾರತವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ, ರಾಜಸ್ಥಾನದ ಸಹಕಾರಿ ಕ್ಷೇತ್ರವು ಇಡೀ ದೇಶದಲ್ಲಿ ಮೊದಲ ಸ್ಥಾನದಲ್ಲಿರುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ವೀರ ರಾಣಾ ಸಂಗಾ, ಮಹಾರಾಣಾ ಪ್ರತಾಪ್, ದುರ್ಗಾದಾಸ್ ರಾಥೋಡ್, ಪೃಥ್ವಿರಾಜ್ ಚೌಹಾಣ್, ಮಹಾರಾಣಿ ಪದ್ಮಿನಿ, ಪನ್ನಾ ದಾಯಿ ಮತ್ತು ಭಾಮಾಷಾ ಅವರಂತಹ ಧೈರ್ಯಶಾಲಿ ಯೋಧರಿಗೆ ರಾಜಸ್ಥಾನ ಭೂಮಿ ಜನ್ಮ ನೀಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಭದ್ರತೆಯಲ್ಲಿ ರಾಜಸ್ಥಾನವು ಪ್ರಮುಖ ಕೊಡುಗೆ ನೀಡಿದೆ ಮತ್ತು ಇಲ್ಲಿಂದ ಹೆಚ್ಚಿನ ಸಂಖ್ಯೆಯ ಜನರು ಸೈನ್ಯಕ್ಕೆ ಸೇರುತ್ತಾರೆ ಎಂದು ಅವರು ಹೇಳಿದರು. ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ನಿರ್ಮಲ್ ಸಿಂಗ್ ಸೆಖೋನ್ ಅವರನ್ನು ಅವರ ಜನ್ಮ ಜಯಂತಿಯಂದು ಸ್ಮರಿಸಿದ ಶ್ರೀ ಅಮಿತ್ ಶಾ, ನಿರ್ಮಲ್ ಸಿಂಗ್ ಸೆಖೋನ್ ಅವರು ತಮ್ಮ ತಾಯ್ನಾಡನ್ನು ರಕ್ಷಿಸಲು ಸಾಟಿಯಿಲ್ಲದ ಶೌರ್ಯ ಮತ್ತು ತ್ಯಾಗವನ್ನು ಪ್ರದರ್ಶಿಸಿದರು ಎಂದರು.
*****
(Release ID: 2145668)