ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ನವೀಕರಿಸಬಹುದಾದ ಇಂಧನ ಬೆಳವಣಿಗೆಯನ್ನು ವೇಗಗೊಳಿಸಲು ಎನ್.ಎಲ್.ಸಿ.ಐ.ಎಲ್ ಗೆ ಹೂಡಿಕೆ ವಿನಾಯಿತಿಗೆ ಒದಗಿಸಲು ಕೇಂದ್ರ ಸಂಪುಟದ ಅನುಮೋದನೆ
Posted On:
16 JUL 2025 2:48PM by PIB Bengaluru
ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸಭೆಯು, 'ನವರತ್ನ' ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (ಸಿಪಿಎಸ್ಇ) ಅನ್ವಯವಾಗುವ ಹೂಡಿಕೆ ಮಾರ್ಗಸೂಚಿಗಳಿಂದ ಎನ್.ಎಲ್.ಸಿ. ಇಂಡಿಯಾ ಲಿಮಿಟೆಡ್ (ಎನ್.ಎಲ್.ಸಿ.ಐ.ಎಲ್)ಗೆ ವಿಶೇಷ ವಿನಾಯಿತಿ ನೀಡಲು ತನ್ನ ಅನುಮೋದನೆ ನೀಡಿದೆ. ಈ ಕಾರ್ಯತಂತ್ರದ ನಿರ್ಧಾರವು ಎನ್.ಎಲ್.ಸಿ.ಐ.ಎಲ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎನ್.ಎಲ್.ಸಿ. ಇಂಡಿಯಾ ರಿನ್ಯೂವೇಬಲ್ಸ್ ಲಿಮಿಟೆಡ್ (ಎನ್.ಐ.ಆರ್.ಎಲ್) ನಲ್ಲಿ 7,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಪ್ರತಿಯಾಗಿ ಎನ್.ಐ.ಆರ್.ಎಲ್ ವಿವಿಧ ಯೋಜನೆಗಳಲ್ಲಿ ನೇರವಾಗಿ ಅಥವಾ ಜಂಟಿ ಉದ್ಯಮಗಳ ರಚನೆಯ ಮೂಲಕ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಎನ್.ಎಲ್.ಸಿ.ಐ.ಎಲ್ ಮತ್ತು ಎನ್.ಐ.ಆರ್.ಎಲ್ ಗೆ ಹೆಚ್ಚಿನ ಕಾರ್ಯಾಚರಣೆ ಮತ್ತು ಆರ್ಥಿಕ ನಮ್ಯತೆಯನ್ನು ಒದಗಿಸುವ ಜಂಟಿ ಉದ್ಯಮಗಳು ಮತ್ತು ಅಂಗಸಂಸ್ಥೆಗಳಲ್ಲಿ 'ಸಿಪಿಎಸ್ಇ'ಗಳ ಒಟ್ಟಾರೆ ಹೂಡಿಕೆಗೆ ಸಾರ್ವಜನಿಕ ಉದ್ಯಮಗಳ ಇಲಾಖೆ (ಡಿಪಿಇ) ನಿಗದಿಪಡಿಸಿದ 30% ನಿವ್ವಳ ಮೌಲ್ಯದ ಮಿತಿಯಿಂದ ಈ ಹೂಡಿಕೆಗೆ ವಿನಾಯಿತಿ ನೀಡಲಾಗಿದೆ.
2030 ರ ವೇಳೆಗೆ 10.11 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ (ಆರ್. ಇ) ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮತ್ತು 2047ರ ವೇಳೆಗೆ ಇದನ್ನು 32 ಗಿಗಾವ್ಯಾಟ್ ಗೆ ವಿಸ್ತರಿಸುವ ಎನ್.ಎಲ್.ಸಿ.ಐ.ಎಲ್.ನ ಮಹತ್ವಾಕಾಂಕ್ಷೆಯ ಗುರಿಯನ್ನು ಬೆಂಬಲಿಸುವ ಉದ್ದೇಶವನ್ನು ಈ ವಿನಾಯಿತಿಗಳು ಹೊಂದಿವೆ. ಈ ಅನುಮೋದನೆಯು ಕಡಿಮೆ ಇಂಗಾಲದ ಆರ್ಥಿಕತೆಯತ್ತ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಿಒಪಿ 26 ರ ಸಮಯದಲ್ಲಿ ಮಾಡಿದ ಭಾರತದ ಬದ್ಧತೆಗಳೊಂದಿಗೆ ಹೊಂದಿಕೆಯಾಗುತ್ತದೆ. "ಪಂಚಾಮೃತ" ಗುರಿಗಳ ಭಾಗವಾಗಿ ಮತ್ತು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ದೀರ್ಘಕಾಲೀನ ಬದ್ಧತೆಯ ಭಾಗವಾಗಿ 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಶಕ್ತಿ ಸಾಮರ್ಥ್ಯವನ್ನು ನಿರ್ಮಿಸಲು ದೇಶವು ಸಂಕಲ್ಪ ಮಾಡಿದೆ.
ಮಹತ್ವದ ವಿದ್ಯುತ್ ಘಟಕ ಮತ್ತು ನವರತ್ನ 'ಸಿಪಿಎಸ್ಇ' ಆಗಿ ಎನ್.ಎಲ್.ಸಿ.ಐ.ಎಲ್ ಈ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹೂಡಿಕೆಯ ಮೂಲಕ, ಎನ್.ಎಲ್.ಸಿ.ಐ.ಎಲ್ ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸಲು ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ಹವಾಮಾನ ಕ್ರಿಯಾ ಉದ್ದೇಶಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಪ್ರಯತ್ನಿಸುತ್ತದೆ.
ಪ್ರಸ್ತುತ, ಎನ್.ಎಲ್.ಸಿ.ಐ.ಎಲ್ ಒಟ್ಟು 2 ಗಿಗಾವ್ಯಾಟ್ ಸ್ಥಾಪಿತ ಸಾಮರ್ಥ್ಯದೊಂದಿಗೆ ಏಳು ನವೀಕರಿಸಬಹುದಾದ ಇಂಧನ ಸ್ವತ್ತುಗಳನ್ನು ನಿರ್ವಹಿಸುತ್ತಿದೆ, ಅವು ಕಾರ್ಯನಿರ್ವಹಿಸುತ್ತಿವೆ ಅಥವಾ ವಾಣಿಜ್ಯ ಕಾರ್ಯಾಚರಣೆಗೆ ಹತ್ತಿರದಲ್ಲಿವೆ. ಈ ಸಂಪುಟ ಅನುಮೋದನೆಗೆ ಅನುಸಾರವಾಗಿ ಈ ಸ್ವತ್ತುಗಳನ್ನು ಎನ್.ಎಲ್.ಸಿ.ಐ.ಎಲ್ ಗೆ ವರ್ಗಾಯಿಸಲಾಗುವುದು. ಎನ್.ಎಲ್.ಸಿ.ಐ.ಎಲ್ ನ ಹಸಿರು ಇಂಧನ ಉಪಕ್ರಮಗಳಿಗೆ ಪ್ರಮುಖ ವೇದಿಕೆಯಾಗಿ ರೂಪಿಸಲಾಗಿರುವ ಎನ್.ಐ.ಆರ್.ಎಲ್, ಹೊಸ ಯೋಜನೆಗಳಿಗೆ ಸ್ಪರ್ಧಾತ್ಮಕ ಬಿಡ್ಡಿಂಗ್ ನಲ್ಲಿ ಭಾಗವಹಿಸುವುದು ಸೇರಿದಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದಾದ್ಯಂತ ಹೊಸ ಅವಕಾಶಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ.
ಈ ಅನುಮೋದನೆಯು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಕಲ್ಲಿದ್ದಲು ಆಮದನ್ನು ಕಡಿಮೆ ಮಾಡುವ ಮೂಲಕ ಮತ್ತು ದೇಶಾದ್ಯಂತ 24×7 ವಿದ್ಯುತ್ ಪೂರೈಕೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಮೂಲಕ ಹಸಿರು ಇಂಧನ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ.
ಪರಿಸರದ ಪರಿಣಾಮವನ್ನು ಮೀರಿ, ಈ ಉಪಕ್ರಮವು ನಿರ್ಮಾಣ ಮತ್ತು ಕಾರ್ಯಾಚರಣೆಯ ಹಂತಗಳಲ್ಲಿ ನೇರ ಮತ್ತು ಪರೋಕ್ಷವಾಗಿ ಗಮನಾರ್ಹ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಆ ಮೂಲಕ ಸ್ಥಳೀಯ ಸಮುದಾಯಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅಂತರ್ಗತ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
*****
(Release ID: 2145172)
Visitor Counter : 2
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali-TR
,
Bengali
,
Punjabi
,
Gujarati
,
Odia
,
Tamil
,
Telugu
,
Malayalam