ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಮಕ್ಕಳ ಆಧಾರ್ ಬಯೋಮೆಟ್ರಿಕ್ಸ್ ನವೀಕರಿಸಲು ಪೋಷಕರು ಮತ್ತು ಸಂರಕ್ಷಣಕಾರರನ್ನು ಯು.ಐ.ಡಿ.ಎ.ಐ ಒತ್ತಾಯಿಸಿದೆ. 5 ರಿಂದ 7 ವರ್ಷದೊಳಗಿನ ಮಕ್ಕಳಿಗೆ ಉಚಿತ
ಕಡ್ಡಾಯ ಬಯೋಮೆಟ್ರಿಕ್ ನವೀಕರಣವು ಶಾಲಾ ಪ್ರವೇಶ, ಪ್ರವೇಶ ಪರೀಕ್ಷೆಗಳು, ವಿದ್ಯಾರ್ಥಿ ವೇತನಗಳು ಮತ್ತು ಡಿ.ಬಿ.ಟಿ ಪ್ರಯೋಜನಗಳಿಗೆ ತಡೆರಹಿತ ಪ್ರವೇಶವನ್ನು ಶಕ್ತಗೊಳಿಸುತ್ತದೆ
Posted On:
15 JUL 2025 5:16PM by PIB Bengaluru
ಏಳು ವರ್ಷ ತುಂಬಿದ ಆದರೆ ಆಧಾರ್‌ನಲ್ಲಿ ತಮ್ಮ ಬಯೋಮೆಟ್ರಿಕ್ಸ್‌ಅನ್ನು ಇನ್ನೂ ನವೀಕರಿಸದ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ನವೀಕರಣ (ಎಂ.ಬಿ.ಯು) ಪೂರ್ಣಗೊಳಿಸುವ ಮಹತ್ವವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯು.ಐ.ಡಿ.ಎ.ಐ) ಪುನರುಚ್ಚರಿಸಿದೆ. ಇದು ಆಧಾರ್ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಅವಶ್ಯಕತೆಯಾಗಿದ್ದು, ಪೋಷಕರು ಅಥವಾ ಸಂರಕ್ಷಣಕಾರರು ತಮ್ಮ ಮಗುವಿನ ವಿವರಗಳನ್ನು ಯಾವುದೇ ಆಧಾರ್ ಸೇವಾ ಕೇಂದ್ರ ಅಥವಾ ಗೊತ್ತುಪಡಿಸಿದ ಆಧಾರ್ ಕೇಂದ್ರದಲ್ಲಿ ನವೀಕರಿಸಬಹುದು.
ಎಂ.ಬಿ.ಯು ಅಭ್ಯಾಸವನ್ನು ಪೂರ್ಣಗೊಳಿಸಲು ಯು.ಐ.ಡಿ.ಎ.ಐ ಅಂತಹ ಮಕ್ಕಳ ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳಿಗೆ ಎಸ್.ಎಂ.ಎಸ್ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದೆ.
5 ರಿಂದ 7 ವರ್ಷದೊಳಗಿನ ನಿಮ್ಮ ಮಗುವಿನ ಆಧಾರ್ ಬಯೋಮೆಟ್ರಿಕ್ಸ್‌ಅನ್ನು ಉಚಿತವಾಗಿ ನವೀಕರಿಸಿ
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವು ಛಾಯಾಚಿತ್ರ, ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಪುರಾವೆಗಳ ದಾಖಲೆಗಳನ್ನು ಒದಗಿಸುವ ಮೂಲಕ ಆಧಾರ್‌ಗೆ ನೋಂದಾಯಿಸುತ್ತದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಬೆರಳಚ್ಚು ಮತ್ತು ಐರಿಸ್ ಬಯೋಮೆಟ್ರಿಕನ್ನು ಆಧಾರ್ ನೋಂದಣಿಗಾಗಿ ಸೆರೆಹಿಡಿಯಲಾಗುವುದಿಲ್ಲ ಏಕೆಂದರೆ ಅವು ಆ ವಯಸ್ಸಿನಲ್ಲಿ ಪ್ರಬುದ್ಧವಾಗಿರುವುದಿಲ್ಲ. ಆದ್ದರಿಂದ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಮಗುವಿಗೆ ಐದು ವರ್ಷ ವಯಸ್ಸಾದಾಗ ಬೆರಳಚ್ಚು, ಕಣ್ಪೊರೆ ಮತ್ತು ಫೋಟೋವನ್ನು ಅವನ / ಅವಳ ಆಧಾರ್‌ನಲ್ಲಿ ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ. ಇದನ್ನು ಮೊದಲ ಕಡ್ಡಾಯ ಬಯೋಮೆಟ್ರಿಕ್ ನವೀಕರಣ (ಎಂ.ಬಿ.ಯು) ಎಂದು ಕರೆಯಲಾಗುತ್ತದೆ. ಮಗುವು 5 ರಿಂದ 7 ವರ್ಷದೊಳಗಿನ ಎಂ.ಬಿ.ಯು ಮಾಡಿದರೆ, ಅದು ಉಚಿತವಾಗಿರುತ್ತದೆ. ಆದರೆ ಏಳು ವರ್ಷದ ನಂತರ, ನಿಗದಿತ ಶುಲ್ಕ ಕೇವಲ 100 ರೂ. ಇರಲಿದೆ.
ಮಕ್ಕಳ ಬಯೋಮೆಟ್ರಿಕ್ ಡೇಟಾ(ದತ್ತಾಂಶ)ದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಎಂ.ಬಿ.ಯುಅನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದು ಅತ್ಯಗತ್ಯ. 7 ವರ್ಷಗಳ ನಂತರವೂ ಎಂ.ಬಿ.ಯು ಪೂರ್ಣಗೊಳ್ಳದಿದ್ದರೆ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಆಧಾರ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಬಹುದು.
ನೋಂದಣಿಯಿಂದ ಅವಕಾಶದವರೆಗೆ- ಆಧಾರ್ ಪ್ರತಿ ಹಂತವನ್ನು ಸಶಕ್ತಗೊಳಿಸುತ್ತದೆ
ನವೀಕರಿಸಿದ ಬಯೋಮೆಟ್ರಿಕ್‌ನೊಂದಿಗೆ ಆಧಾರ್ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಶಾಲಾ ಪ್ರವೇಶ, ಪ್ರವೇಶ ಪರೀಕ್ಷೆಗಳಿಗೆ ನೋಂದಾಯಿಸುವುದು, ವಿದ್ಯಾರ್ಥಿವೇತನದ ಪ್ರಯೋಜನಗಳನ್ನು ಪಡೆಯುವುದು, ಡಿ.ಬಿ.ಟಿ (ನೇರ ಲಾಭ ವರ್ಗಾವಣೆ) ಯೋಜನೆಗಳು ಮುಂತಾದ ಸೇವೆಗಳನ್ನು ಪಡೆಯಲು ಆಧಾರ್‌ನ ತಡೆರಹಿತ ಬಳಕೆಯನ್ನು ಖಚಿತಪಡಿಸುತ್ತದೆ. ಪೋಷಕರು / ಪಾಲಕರು ತಮ್ಮ ಮಕ್ಕಳ ಬಯೋಮೆಟ್ರಿಕ್ಸ್‌ಅನ್ನು ಆದ್ಯತೆಯ ಮೇರೆಗೆ ಆಧಾರ್‌ನಲ್ಲಿನ ವೀಕರಿಸಲು ಸೂಚಿಸಲಾಗಿದೆ.
*****
(Release ID: 2145025)
Visitor Counter : 3
Read this release in:
Bengali-TR
,
English
,
Gujarati
,
Urdu
,
Marathi
,
Hindi
,
Bengali
,
Punjabi
,
Tamil
,
Telugu
,
Malayalam