ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೋರ್ಟ್ ಆಫ್ ಸ್ಪೇನ್‌ನಲ್ಲಿ ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ​​ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 04 JUL 2025 9:42AM by PIB Bengaluru

ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ​​ಅವರನ್ನು ಭೇಟಿಯಾದರು. ಅವರು ಕೆಲವು ವರ್ಷಗಳ ಹಿಂದೆ ನಡೆದ ಮಹಾತ್ಮ ಗಾಂಧಿಯವರ 150 ನೇ ಜಯಂತಿ ಆಚರಣೆಯ ವೇಳೆ 'ವೈಷ್ಣವ ಜನ ತೋ' ಹಾಡಿದ್ದರು.

ಭಾರತೀಯ ಸಂಗೀತ ಮತ್ತು ಸಂಸ್ಕೃತಿಯ ಬಗ್ಗೆ ಶ್ರೀ ಮೋಹಿಪ್ ​​ಅವರ ಆಸಕ್ತಿಯನ್ನು ಪ್ರಧಾನಿ ಅವರು ಆತ್ಮೀಯವಾಗಿ ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

"ನಾವು ಕೆಲವು ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರ 150ನೇ ಜಯಂತಿಯನ್ನು ಆಚರಿಸಿದಾಗ 'ವೈಷ್ಣವ ಜನ ತೋ' ಹಾಡಿದ ಶ್ರೀ ರಾಣಾ ಮೋಹಿಪ್ ​​ಅವರನ್ನು ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಭೋಜನಕೂಟದಲ್ಲಿ ಭೇಟಿಯಾಗಿದ್ದೆ. ಭಾರತೀಯ ಸಂಗೀತ ಮತ್ತು ಸಂಸ್ಕೃತಿಯ ಬಗ್ಗೆ ಅವರ ಉತ್ಸಾಹವು ಪ್ರಶಂಸನೀಯವಾಗಿದೆ.’’
 

 

*****


(Release ID: 2142205) Visitor Counter : 2