ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೋರ್ಟ್ ಆಫ್ ಸ್ಪೇನ್ ನಲ್ಲಿ ಭೋಜಪುರಿ ಚೌತಾಲ್ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 04 JUL 2025 9:06AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ರೋಮಾಂಚಕ ಭೋಜ್‌ಪುರಿ ಚೌತಾಲ್ ಪ್ರದರ್ಶನವನ್ನು ಶ್ಲಾಘಿಸಿದರು. ಇದು ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ನಡುವಿನ  ಸಾಂಸ್ಕೃತಿಕ ಬಾಂಧವ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಈ ಪ್ರದರ್ಶನವು ಎರಡು ರಾಷ್ಟ್ರಗಳ ನಡುವಿನ ವಿಶೇಷವಾಗಿ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದೊಂದಿಗೆ ಆಳವಾಗಿ ಬೇರೂರಿರುವ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ, ಅಲ್ಲಿ ಭೋಜ್‌ಪುರಿ ಸಂಪ್ರದಾಯಗಳು ತಲೆಮಾರುಗಳಿಂದ ಹೆಚ್ಚು ಪ್ರವರ್ಧಮಾನಕ್ಕೆ ಬಂದಿವೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಇದರಲ್ಲಿ ಎಂದೂ ಕಾಣದ ಸಾಂಸ್ಕೃತಿಕ ಸಂಪರ್ಕ!

ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭೋಜ್‌ಪುರಿ ಚೌತಾಲ್ ಪ್ರದರ್ಶನವನ್ನು ವೀಕ್ಷಿಸಲು ತುಂಬಾ ಸಂತೋಷವಾಗಿದೆ. ಟ್ರಿನಿಡಾಡ್ ಮತ್ತು ಟೊಬಾಗೋ ಮತ್ತು ಭಾರತ, ವಿಶೇಷವಾಗಿ ಪೂರ್ವ ಉತ್ತರಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳ ನಡುವಿನ ಸಂಪರ್ಕವು ಗಮನಾರ್ಹವಾಗಿದೆ."

 

"एगो अनमोल सांस्कृतिक जुड़ाव !

बहुत खुशी भइल कि पोर्ट ऑफ स्पेन में हम भोजपुरी चौताल प्रस्तुति के प्रदर्शन देखनी. त्रिनिदाद एंड टोबैगो आ भारत, खास करके पूर्वी यूपी आ बिहार के बीच के जुड़ाव उल्लेखनीय बा।"

 

*****


(Release ID: 2142203)