ಆಯುಷ್
ಐತಿಹಾಸಿಕ ಭಾಗವಹಿಸುವಿಕೆ ಮತ್ತು ಎಲ್ಲ ಸ್ಥಳಗಳನ್ನು ತಲುಪುವ ಮೂಲಕ 2025ರ 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ ವಿಶ್ವ
191 ದೇಶಗಳಲ್ಲಿ 2,000 ಜಾಗತಿಕ ಕಾರ್ಯಕ್ರಮಗಳ ಆಯೋಜನೆ
ಭಾರತದಾದ್ಯಂತ 13 ಲಕ್ಷ ಕಾರ್ಯಕ್ರಮಗಳ ಪೂರ್ವ ನೋಂದಣಿ
ವಿಶಾಖಪಟ್ಟಣದಲ್ಲಿ 2 ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ
Posted On:
23 JUN 2025 5:47PM by PIB Bengaluru
2025 ಜೂನ್ 21ರಂದು ಜಾಗತಿಕ ಮಟ್ಟದಲ್ಲಿ ಆಚರಿಸಲಾದ 11ನೇ ಅಂತಾರಾಷ್ಟ್ರೀಯ ಯೋಗ ದಿನ(ಐಡಿವೈ-2025)ದಲ್ಲಿ ವಿಶ್ವಾದ್ಯಂತ ಜನರು ಹಿಂದೆಂದೂ ಕಾಣದಂತೆ ಅಭೂತಪೂರ್ವ ಭಾಗವಹಿಸುವಿಕೆಯೊಂದಿಗೆ ಅದ್ಭುತ ಯಶಸ್ಸು ಸಾಧಿಸಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಐಡಿವೈ ಆಚರಣೆಯು ಯೋಗದ ಹೆಚ್ಚುತ್ತಿರುವ ಜಾಗತಿಕ ಆಕರ್ಷಣೆ, ಸಮಗ್ರ ಆರೋಗ್ಯ ಮತ್ತು ಸ್ವಾಸ್ಥ್ಯ ಉತ್ತೇಜಿಸುವಲ್ಲಿ ಭಾರತ ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಒತ್ತಿಹೇಳಿದೆ.
ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಭಾರತದಾದ್ಯಂತ ಯೋಗ ಪೋರ್ಟಲ್‌ನಲ್ಲಿ ಜೂನ್ 20ರ ವರೆಗೆ 13.04 ಲಕ್ಷ ಯೋಗ ಸಂಗಮ ಕಾರ್ಯಕ್ರಮಗಳನ್ನು ನೋಂದಾಯಿಸಲಾಗಿದೆ, ಇದು ತಳಮಟ್ಟದಲ್ಲಿ ಜನರ ವ್ಯಾಪಕ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಜಾಗತಿಕವಾಗಿ, ಭಾರತದ ಹೊರಗೆ ಸುಮಾರು 191 ದೇಶಗಳ 1,300 ಸ್ಥಳಗಳಲ್ಲಿ ಯೋಗ ಪ್ರದರ್ಶನಗಳು ನಡೆದವು. ಅಂದಾಜು 2,000 ಜಾಗತಿಕ ಕಾರ್ಯಕ್ರಮಗಳು ಜರುಗಿದವು. ಈ ವಿಶಾಲವಾದ ಅಂತಾರಾಷ್ಟ್ರೀಯ ಸಂಪರ್ಕವು ಜಾಗತಿಕ ಆರೋಗ್ಯ, ಸಾಮರಸ್ಯ ಮತ್ತು ಯೋಗಕ್ಷೇಮ ಬೆಳೆಸುವಲ್ಲಿ ಯೋಗದ ಸಾರ್ವತ್ರಿಕ ಪ್ರಸ್ತುತತೆಯನ್ನು ಪುನರುಚ್ಚರಿಸಿತು.
ಭಾರತವು ವಿಶಾಖಪಟ್ಟಣದಲ್ಲಿ 2 ಮಹತ್ವದ ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿತು, ಇದು ಯೋಗದ ಆಳವಾದ ದೃಷ್ಟಿ(ಕುಶಾಗ್ರಮತಿ) ಮತ್ತು ವ್ಯಾಪಕ ಸ್ವೀಕಾರವನ್ನು ಎತ್ತಿ ತೋರಿಸುತ್ತದೆ. ಮೊದಲನೆಯದು ಒಂದೇ ಸ್ಥಳದಲ್ಲಿ ಯೋಗ ಕಲಾಪಕ್ಕಾಗಿ ಅತಿದೊಡ್ಡ ಸಭೆ ಆಯೋಜಿಸಲಾಗಿತ್ತು. 2025 ಜೂನ್ 21ರಂದು ಗರಿಷ್ಠ 302,000 (3.02 ಲಕ್ಷ) ಪ್ರತಿನಿಧಿಗಳು ಭಾಗವಹಿಸಿದ್ದರು. ಎರನೆಯದಾಗಿ, 2025 ಜೂನ್ 20ರಂದು 22,122 ಬುಡಕಟ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು, ಇದು ಅತಿದೊಡ್ಡ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶನವಾಗಿದ್ದು, 2ನೇ ಗಿನ್ನೆಸ್ ದಾಖಲೆ ನಿರ್ಮಿಸಿತು.
ಐಡಿವೈ ಕಾರ್ಯಕ್ರಮಗಳ ಸುತ್ತ ಭಾರತದ ಶ್ರೀಮಂತ ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಆಯುಷ್ ಸಚಿವಾಲಯವು, ಸಂಪೂರ್ಣ ಸರ್ಕಾರಿ ಕಾರ್ಯ ವಿಧಾನದ ಮೂಲಕ ಗಮನಾರ್ಹ ಫಲಿತಾಂಶಗಳನ್ನು ಸಾಧಿಸಲು, ರಾಷ್ಟ್ರವ್ಯಾಪಿ ಕಾರ್ಯತಂತ್ರ ಮಹತ್ವದ ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯಮಯ ಸ್ಥಳಗಳಲ್ಲಿ 15 ಸಾಂಪ್ರದಾಯಿಕ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಗಳು ಭಾರತದ ನೈಸರ್ಗಿಕ ಸೌಂದರ್ಯ, ರಾಷ್ಟ್ರೀಯ ಮನೋಭಾವ ಮತ್ತು ನಾಗರಿಕತೆಯ ನೀತಿ ಸಂಕೇತಿಸುವ ಗುರಿ ಹೊಂದಿದ್ದು, ಯೋಗದ ಮೂಲಕ ಯೋಗಕ್ಷೇಮ ಮತ್ತು ಏಕತೆಯ ಸಂದೇಶವನ್ನು ಹರಡುವ ಗುರಿ ಹೊಂದಿವೆ.
ದೇಶದ ಅತ್ಯಂತ ಹವಾಮಾನ ಸವಾಲಿನ ಭೂಪ್ರದೇಶಗಳಲ್ಲಿ ದೈಹಿಕ ಹೊಂದಾಣಿಕೆ ಮತ್ತು ರಾಷ್ಟ್ರೀಯ ಸೇವೆಯನ್ನು ಒತ್ತಿಹೇಳುವ ಯೋಗ ಪ್ರದರ್ಶನಗಳು ನಡೆದವು. ಉದಾಹರಣೆಗೆ ಸಿಯಾಚಿನ್ ಹಿಮನದಿ(ರಾಶಿ)ಯಲ್ಲಿ ಭಾರತೀಯ ಸೇನಾ ಸಿಬ್ಬಂದಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಯೋಗ ಪ್ರದರ್ಶಿಸಿದರು. ಗಾಲ್ವಾನ್ ಕಣಿವೆಯಲ್ಲಿ 15,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಯೋಗ ಕಲಾಪಗಳು ನಡೆದವು. ಇದು ಭಾರತದ ಶಾಂತಿ ಮತ್ತು ಆಂತರಿಕ ಶಕ್ತಿಯ ಸಂದೇಶವನ್ನು ಸಂಕೇತಿಸುತ್ತದೆ. ರೋಹ್ಟಾಂಗ್ ಪಾಸ್, ಸೆಲಾ ಸುರಂಗ ಮತ್ತು ಪಾಂಗಾಂಗ್ ಸರೋವರ: ಗಡಿ ರಸ್ತೆಗಳ ಸಂಘಟನೆ(ಬಿ.ಆರ್.ಒ.) ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಪ್ರತೀಕೂಲ ಹವಾಮಾನದಲ್ಲಿ ಯೋಗಾಭ್ಯಾಸ ಮಾಡಿದರು. ಚೆನಾಬ್ ರೈಲು ಸೇತುವೆ(ಜಮ್ಮು-ಕಾಶ್ಮೀರ): ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಮೇಲೆ ಯೋಗ ಪ್ರದರ್ಶಿಸಲಾಯಿತು. ಎಂಜಿನಿಯರಿಂಗ್ ಶ್ರೇಷ್ಠತೆಯನ್ನು ಆಧ್ಯಾತ್ಮಿಕ ಸಾಮರಸ್ಯದೊಂದಿಗೆ ಸಂಯೋಜಿಸಲಾಯಿತು. ರಾನ್ ಮತ್ತು ಕ್ರೀಕ್ ವಲಯ, ಕಚ್ (ಗುಜರಾತ್): ಭಾರತೀಯ ಸೇನೆಯ ಕೊನಾರ್ಕ್ ಕಾರ್ಪ್ಸ್ ಭಾರತದ ಪಶ್ಚಿಮ ಭಾಗವಾದ ಇಂದಿರಾ ಪಾಯಿಂಟ್(ಅಂಡಮಾನ್-ನಿಕೋಬಾರ್ ದ್ವೀಪಗಳು)ನಲ್ಲಿ ಐಡಿವೈ-2025ಕ್ಕೆ ಮುನ್ನುಡಿ ಬರೆಯಿತು. ಭಾರತದ ದಕ್ಷಿಣ ತುದಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್, ಮುಂಬೈನಲ್ಲಿ ಯೋಗ ಆಚರಿಸಲಾಯಿತು. ಆಫ್‌ಶೋರ್ ಆಯಿಲ್ ರಿಗ್: ಅರೇಬಿಯನ್ ಸಮುದ್ರದ ನಡುವೆ ಒಎನ್‌ಜಿಸಿ ಸಿಬ್ಬಂದಿ ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಹೊಸ ಪಂಬನ್ ಸೇತುವೆ(ತಮಿಳುನಾಡು): ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಈ ಸಂದರ್ಭವನ್ನು ಆಚರಿಸಿದರು, ಇದು ಸಂಪರ್ಕ ಮತ್ತು ಹರಿವನ್ನು ಸಂಕೇತಿಸುತ್ತದೆ.
ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವದ ಸ್ಥಳಗಳಲ್ಲಿ ಜರುಗಿದ ವಿಶೇಷ ಯೋಗ ಕಲಾಪಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸಿದವು. ಉದಾಹರಣೆಗೆ ನಮೋ ಘಾಟ್, ವಾರಾಣಸಿ: ಎನ್‌ಸಿಸಿಯ 91 ಯುಪಿ ತುಕಡಿಯು ಗಂಗಾ ನದಿಯ ತಟದಲ್ಲಿ ಆಧ್ಯಾತ್ಮಿಕ ಚೈತನ್ಯ ಮತ್ತು ಯುವಕರ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುವ ರೋಮಾಂಚಕ ಯೋಗ ಕಲಾಪಗಳನ್ನು ಪ್ರದರ್ಶಿಸಿತು. ಕಿಶನ್‌ಗಢ ಕೋಟೆ, ಜೈಸಲ್ಮೇರ್: ಬಿಎಸ್‌ಎಫ್ ರಾಜಸ್ಥಾನ ಗಡಿನಾಡಿನ ಶ್ರೀಮತಿ ಸೀಮಾ ಪ್ರಹಾರಿ ಮರುಭೂಮಿ ಕೋಟೆ, ಪಹಲ್ಗಾಮ್ ಮತ್ತು ಸೋನ್‌ಮಾರ್ಗ್ (ಜಮ್ಮು-ಕಾಶ್ಮೀರ)ನಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತ ಕಾರ್ಯಕ್ರಮ ಆಯೋಜಿಸಿದ್ದರು: ಜೆ & ಕೆ ಸ್ಪೋರ್ಟ್ಸ್ ಕೌನ್ಸಿಲ್‌ನ ಕ್ರೀಡಾಪಟುಗಳು ಸುಂದರವಾದ ಹುಲ್ಲುಗಾವಲುಗಳಲ್ಲಿ ಕಲಾಪಗಳನ್ನು ನಡೆಸಿದರು, ಪ್ರಕೃತಿಯಲ್ಲಿ ಯೋಗಕ್ಷೇಮವನ್ನು ಉತ್ತೇಜಿಸಿದರು, ಬೈನಾಂಗ್ ಕೌಂಟಿ, ಟಿಬೆಟ್ ಸ್ವಾಯತ್ತ ಪ್ರದೇಶ: ನಾಥು ಲಾ ಮಾರ್ಗದ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಭಾರತೀಯ ಯಾತ್ರಿಕರು ಯೋಗ ಪ್ರದರ್ಶಿಸಿದರು, ಇದು ಗಡಿಯಾಚೆಗಿನ ಆಧ್ಯಾತ್ಮಿಕ ಅನುರಣನವನ್ನು ಸಂಕೇತಿಸುತ್ತದೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ(ಜಿಎಸ್‌ಐ) ಸಹಯೋಗದೊಂದಿಗೆ ವೈಜ್ಞಾನಿಕ, ಪರಿಸರ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ 12 ಭೂವೈಜ್ಞಾನಿಕ ಪರಂಪರೆಯ ತಾಣಗಳಲ್ಲಿ ಯೋಗ ಕಲಾಪಗಳನ್ನು ಆಯೋಜಿಸಲಾಗಿತ್ತು, ಇವುಗಳಲ್ಲಿ ಇವು ಸೇರಿವೆ: ರಹಿಯೋಲಿ ಡೈನೋಸಾರ್ ಫಾಸಿಲ್ ಉದ್ಯಾನವನ(ಗುಜರಾತ್), ಭೀಮ್‌ಬೆಟ್ಕಾ ರಾಕ್ ಶೆಲ್ಟರ್‌ಗಳು(ಮಧ್ಯಪ್ರದೇಶ), ನಿಘೋಜ್ ನ್ಯಾಚುರಲ್ ಪಾಥ್ ಹೋಲ್ಸ್(ಮಹಾರಾಷ್ಟ್ರ), ಗಂಗಾನಿ ನದಿ ಕಮರಿ(ಪಶ್ಚಿಮ ಬಂಗಾಳ), ಶಿವಾಲಿಕ್ ಫಾಸಿಲ್ ಉದ್ಯಾನವನ(ಹಿಮಾಚಲ ಪ್ರದೇಶ), ಅರ್ವಾ-ಲುಮ್ಶಿನ್ನಾ ಗುಹೆ(ಮೇಘಾಲಯ), ಸೇಂಟ್ ಥಾಮಸ್ ಮೌಂಟ್ ಚಾರ್ನೋಕೈಟ್(ತಮಿಳುನಾಡು), ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿರುವ ಪುರಾತನ ಬಂಡೆ-ಪೆನಿನ್ಸುಲರ್ ಗ್ನೀಸ್ (ಕರ್ನಾಟಕ), ಮಂಗಂಪೇಟಾ ಬ್ಯಾರೈಟ್ಸ್ ಡಿಪಾಸಿಟ್ (ಆಂಧ್ರಪ್ರದೇಶ) ಸೇರಿದಂತೆ ಹಲವು ಕಡೆ ಯೋಗ ಪ್ರದರ್ಶನಗಳು ಜರುಗಿದವು.
ಈ 15 ಐತಿಹಾಸಿಕ ಘಟನೆಗಳು ಭಾರತದ ಪ್ರಾಚೀನ ಯೋಗ ಜ್ಞಾನ ಮತ್ತು ಅದರ ವಿಶಿಷ್ಟ ಭೌಗೋಳಿಕ ಪರಂಪರೆಯ ನಡುವಿನ ಆಳವಾದ ಸಂಪರ್ಕವನ್ನು ಒಟ್ಟಾರೆಯಾಗಿ ಒತ್ತಿಹೇಳುತ್ತವೆ, ಇದು 'ಎಲ್ಲರಿಗೂ ಯೋಗ, ಎಲ್ಲೆಡೆ ಯೋಗ' ಎಂಬ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಈ ಪ್ರಾಚೀನ ಅಭ್ಯಾಸವು ದೇಶಾದ್ಯಂತ ವೈವಿಧ್ಯಮಯ ಭೂಪ್ರದೇಶಗಳು ಮತ್ತು ಸಮುದಾಯಗಳಲ್ಲಿ ಹೊಂದಾಣಿಕೆ, ಯೋಗಕ್ಷೇಮ ಮತ್ತು ಏಕತೆಯನ್ನು ಪ್ರೇರೇಪಿಸುವ ಜೀವಂತ ಸಂಪ್ರದಾಯವಾಗಿ ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ಯೋಗಪಟುಗಳು ಪ್ರಬಲವಾಗಿ ಪ್ರದರ್ಶಿಸಿದರು.
2025ರ ಅಂತಾರಾಷ್ಟ್ರೀಯ ಯೋಗ ದಿನವನ್ನು ಏಕತೆ, ಕ್ಷೇಮ ಮತ್ತು ಶಾಂತಿಯ ಐತಿಹಾಸಿಕ ಆಚರಣೆಯನ್ನಾಗಿ ಮಾಡಿದ್ದಕ್ಕಾಗಿ ಆಯುಷ್ ಸಚಿವಾಲಯವು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು, ಅಂತಾರಾಷ್ಟ್ರೀಯ ಸಮುದಾಯ, ಭಾರತೀಯ ಸಶಸ್ತ್ರ ಪಡೆಗಳು, ಯೋಗ ಸಂಸ್ಥೆಗಳು ಮತ್ತು ಸಂಘಗಳು, ಶಿಕ್ಷಣ ಸಂಸ್ಥೆಗಳು, ಎನ್‌ಜಿಒಗಳು ಮತ್ತು ವಿಶ್ವಾದ್ಯಂತ ಲಕ್ಷಾಂತರ ಯೋಗ ಉತ್ಸಾಹಿಗಳಿಗೆ ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ.
*****
(Release ID: 2139499)
Visitor Counter : 2