ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಉಲಾನ್ಬತಾರ್ ಓಪನ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಕುಸ್ತಿಪಟುಗಳಿಗೆ ಪ್ರಧಾನಮಂತ್ರಿ ಅಭಿನಂದನೆ
                    
                    
                        
                    
                
                
                    Posted On:
                02 JUN 2025 8:01PM by PIB Bengaluru
                
                
                
                
                
                
                ಉಲಾನ್ಬತಾರ್ ಓಪನ್ 2025 ರ 3 ನೇ ಶ್ರೇಯಾಂಕ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಕುಸ್ತಿಪಟುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. "ನಮ್ಮ ನಾರಿ ಶಕ್ತಿ ರ್‍ಯಾಂಕಿಂಗ್ ಸರಣಿಯಲ್ಲಿ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಈ ಸಾಧನೆಯ ಮೂಲಕ ಸರಣಿಯನ್ನು ಇನ್ನಷ್ಟು ಸ್ಮರಣೀಯವಾಗಿಸಿದೆ. ಈ ಕ್ರೀಡಾ ಪ್ರದರ್ಶನವು ಹಲವಾರು ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಎಕ್ಸ್ ಪೋಸ್ಟ್ ಹೀಗಿದೆ:
"ಕ್ರೀಡೆಯಲ್ಲಿ ಭಾರತದ ಸಾಧನೆಗಳು ಮುಂದುವರೆದಿವೆ! ಉಲಾನ್‌ಬತಾರ್ ಓಪನ್ 2025ರಲ್ಲಿ ಅದ್ಭುತ ಪ್ರದರ್ಶನಕ್ ತೋರಿ 3ನೇ ಶ್ರೇಯಾಂಕ ಸರಣಿಯಲ್ಲಿ 6 ಚಿನ್ನ ಸೇರಿದಂತೆ 21 ಪದಕಗಳನ್ನು ಗೆದ್ದ ನಮ್ಮ ಕುಸ್ತಿಪಟುಗಳಿಗೆ ಅಭಿನಂದನೆಗಳು. ನಮ್ಮ ನಾರಿ ಶಕ್ತಿ ರ್‍ಯಾಂಕಿಂಗ್ ಸರಣಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ಈ ಸಾಧನೆಯನ್ನು ಇನ್ನಷ್ಟು ಸ್ಮರಣೀಯವಾಗಿಸಿದೆ. ಈ ಅತ್ಯದ್ಭುತ ಕ್ರೀಡಾ ಪ್ರದರ್ಶನವು ಭವಿಷ್ಯದ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲಿದೆ."
 
 
*****
                
                
                
                
                
                (Release ID: 2133525)
                Visitor Counter : 4
                
                
                
                    
                
                
                    
                
                Read this release in: 
                
                        
                        
                            Urdu 
                    
                        ,
                    
                        
                        
                            Malayalam 
                    
                        ,
                    
                        
                        
                            English 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Manipuri 
                    
                        ,
                    
                        
                        
                            Assamese 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu