ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಾ. ಜಯಂತ್ ನಾರ್ಲಿಕರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ 

Posted On: 20 MAY 2025 1:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖಗೋಳ ಭೌತಶಾಸ್ತ್ರ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ಡಾ. ಜಯಂತ್ ನಾರ್ಲಿಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. 

ಪ್ರಧಾನಮಂತ್ರಿಯವರು  ತಮ್ಮ ಎಕ್ಸ್ ಖಾತೆಯಲ್ಲಿ:

"ಡಾ.ಜಯಂತ್ ನಾರ್ಲಿಕರ್ ಅವರ ನಿಧನವು ವೈಜ್ಞಾನಿಕ ಸಮುದಾಯಕ್ಕೆ ದೊಡ್ಡ ಪ್ರಮಾಣದ ಶಾಶ್ವತ ನಷ್ಟವಾಗಿದೆ. ಅವರು ವಿಶೇಷವಾಗಿ ಖಗೋಳ ಭೌತಶಾಸ್ತ್ರ ಕ್ಷೇತ್ರದಲ್ಲಿ ಪ್ರಭಾವಶಾಲಿಯಾಗಿದ್ದರು. ಅವರ ಪ್ರವರ್ತಕ ಕೃತಿಗಳು, ವಿಶೇಷವಾಗಿ ಪ್ರಮುಖ ಸೈದ್ಧಾಂತಿಕ ಚೌಕಟ್ಟುಗಳನ್ನು ತಲೆಮಾರುಗಳ ಸಂಶೋಧಕರು ವಿಶೇಷವಾಗಿ ಗೌರವಿಸುತ್ತಾರೆ. ಅವರು ಯುವ ಮನಸ್ಸುಗಳಿಗೆ ತರಬೇತಿ ನೀಡುವ ಕಲಿಕೆ ಮತ್ತು ಆವಿಷ್ಕಾರ ಕೇಂದ್ರಗಳ ಮತ್ತು ಸಂಸ್ಥೆಗಳ ನಿರ್ಮಾತೃವಾಗಿ ಗುರುತಿಸಲ್ಪಟಿದ್ದಾರೆ. ಅವರ ಬರವಣಿಗೆಗಳು ವಿಜ್ಞಾನವು, ಸಾಮಾನ್ಯ ಜನರಿಗೆ ಸುಲಭಸಾಧ್ಯವಾಗಿಸಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಓಂ ಶಾಂತಿ."

 

 

*****


(Release ID: 2129884)