ವಾರ್ತಾ ಮತ್ತು ಪ್ರಸಾರ ಸಚಿವಾಲಯ
“ಎ ಸ್ಟುಡಿಯೋ ಕಾಲ್ಡ್ ಇಂಡಿಯಾ:” ಅರ್ನ್ಸ್ಟ್ & ಯಂಗ್ ವರದಿಯನ್ನು ನಾಳೆ ವೇವ್ಸ್ 2025ರಲ್ಲಿ ಬಿಡುಗಡೆ ಮಾಡಲಾಗುವುದು
Posted On:
02 MAY 2025 2:36PM
|
Location:
PIB Bengaluru
ಜಾಗತಿಕ ವಿಷಯ/ ಮಾಹಿತಿ ಕ್ಷೇತ್ರದ ಶಕ್ತಿ ಕೇಂದ್ರವಾಗಿ ಭಾರತವು ಅಭಿವೃದ್ಧಿ ಹೊಂದಿ ಏರಿಕೆ ಕಂಡಿರುವುದಾಗಿ, ಅರ್ನ್ಸ್ಟ್ & ಯಂಗ್ ಅವರ “ಎ ಸ್ಟುಡಿಯೋ ಕಾಲ್ಡ್ ಇಂಡಿಯಾ”ಸಂಸ್ಥೆಯ ವರದಿಯ ಕೇಂದ್ರಬಿಂದುವಾಗಿ ಸೂಚಿಸಿದೆ. ಇದನ್ನು ನಾಳೆ ಮುಂಬೈನಲ್ಲಿ ವೇವ್ಸ್ 2025ರಲ್ಲಿ ಅನಾವರಣಗೊಳಿಸಲಾಗುವುದು. ಜಾಗತಿಕ ಮಾಧ್ಯಮ ಮತ್ತು ಮನರಂಜನಾ (ಎಂ&ಇ) ಚೌಕಟ್ಟನಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ವರದಿಯು ಒತ್ತಿಹೇಳುತ್ತದೆ. ಇದು ಭಾರತದ ವಿಸ್ತರಿಸುತ್ತಿರುವ ಡಿಜಿಟಲ್ ಮಾರುಕಟ್ಟೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮುಂದುವರಿದ ಉತ್ಪಾದನಾ ಸಾಮರ್ಥ್ಯಗಳಿಂದ ಮುನ್ನಡೆಸಲ್ಪಡುತ್ತದೆ:
- ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಮುಂದುವರಿದ ಮೂಲಸೌಕರ್ಯವು ಇದನ್ನು ಸೃಜನಶೀಲ ಕ್ಷೇತ್ರದ ಶಕ್ತಿ ಕೇಂದ್ರವನ್ನಾಗಿ ಮಾಡುತ್ತದೆ
- ಜಾಗತಿಕ ಮಟ್ಟಕ್ಕೆ ಹೋಲಿಸಿದರೆ, ಅನಿಮೇಷನ್ ಮತ್ತು ವಿ.ಎಫ್.ಎಕ್ಸ್. ವೆಚ್ಚಗಳು ಭಾರತದಲ್ಲಿ 40% ರಿಂದ 60% ಕಡಿಮೆ ಮತ್ತು ಜಾಗತಿಕ ಉತ್ಪಾದನಾ ಕಾರ್ಯಪ್ರವಾಹಗಳನ್ನು ಬೆಂಬಲಿಸಲು ಭಾರತದಲ್ಲಿ ದೊಡ್ಡ ಕೌಶಲ್ಯಪೂರ್ಣ ಕಾರ್ಯಪಡೆ ಇದೆ
- ಭಾರತದ ವಿಷಯ/ಮಾಹಿತಿ ಕ್ಷೇತ್ರವು ಅಂತರರಾಷ್ಟ್ರೀಯ ಸ್ವೀಕಾರವನ್ನು ಪಡೆಯುತ್ತಿದೆ, ಜಾಗತಿಕ ಒಟಿಟಿಟ ಪ್ಲಾಟ್ಫಾರ್ಮ್ ಗಳ ಕುರಿತು 25% ವರೆಗಿನ ವೀಕ್ಷಣೆಗಳು ಭಾರತದ ಹೊರಗೆ ಉತ್ಪತ್ತಿಯಾಗುತ್ತಿವೆ
ಈ ವರದಿಯು ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯದಲ್ಲಿ ಭಾರತದ ಪ್ರಭಾವಶಾಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಎತ್ತಿ ತೋರಿಸುತ್ತದೆ. ಜಾಗತಿಕ ವಿಷಯ ಸೃಷ್ಟಿಯಲ್ಲಿ ದೇಶವನ್ನು ನಾಯಕನನ್ನಾಗಿ ಮಾಡುತ್ತದೆ. ಭಾರತವು ವೇಗವಾಗಿ ಜಾಗತಿಕ ವಿಷಯ ಕೇಂದ್ರವಾಗುತ್ತಿದೆ. ಇದು ಅದರ ವಿಸ್ತರಿಸುತ್ತಿರುವ ಡಿಜಿಟಲ್ ಮಾರುಕಟ್ಟೆ, ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆ ಮತ್ತು ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುವ ಶ್ರೀಮಂತ ಕಥೆ ಹೇಳುವ ಸಂಪ್ರದಾಯಗಳಿಂದ ನಡೆಸಲ್ಪಡುತ್ತದೆ.
ವರದಿಯ ಪ್ರಮುಖ ಮುಖ್ಯಾಂಶಗಳು ಇವುಗಳನ್ನು ಒಳಗೊಂಡಿರುತ್ತವೆ:
ಡಿಜಿಟಲ್ ಮಾಧ್ಯಮ ಸ್ವಾಧೀನ: 2024ರಲ್ಲಿ, ಡಿಜಿಟಲ್ ಮಾಧ್ಯಮವು ದೂರದರ್ಶನವನ್ನು ಹಿಂದಿಕ್ಕಿ ಭಾರತದ ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯದ ಅತಿದೊಡ್ಡ ವಿಭಾಗವಾಯಿತು, 800 ಶತಕೋಟಿ ರೂಪಾಯಿ ($9.4 ಶತಕೋಟಿ ಡಾಲರ್) ಗಿಂತ ಹೆಚ್ಚಿನ ಕೊಡುಗೆ ನೀಡಿತು ಮತ್ತು ವಲಯದ ಆದಾಯದ 32% ರಷ್ಟನ್ನು ಹೊಂದಿತ್ತು.
- ವಿಷಯ ನಿರ್ಮಾಣ: ಭಾರತವು ಕಳೆದ ವರ್ಷ ಸುಮಾರು 200,000 ಗಂಟೆಗಳ ಮೂಲ ವಿಷಯವನ್ನು ನಿರ್ಮಿಸಿತು, ಇದರಲ್ಲಿ 1,600 ಚಲನಚಿತ್ರಗಳು, 2,600 ಗಂಟೆಗಳ ಪ್ರೀಮಿಯಂ ಒಟಿಟಿ ವಿಷಯ ಮತ್ತು 20,000 ಮೂಲ ಹಾಡುಗಳು ಸೇರಿವೆ. ಇದು ಭಾರತವನ್ನು ಜಾಗತಿಕವಾಗಿ ಅತಿದೊಡ್ಡ ವಿಷಯ-ಸೃಷ್ಟಿ ಕೇಂದ್ರಗಳಲ್ಲಿ ಒಂದಾಗಿ ಇರಿಸುತ್ತದೆ.
- ತಾಂತ್ರಿಕ ಪ್ರಗತಿಗಳು: ಕೃತಕ ಬುದ್ದಿಮತ್ತೆ (ಎಐ) ಮತ್ತು ಹೊಸ ತಂತ್ರಜ್ಞಾನಗಳು ಭಾರತದಲ್ಲಿ ವಿಷಯ ಉದ್ಯಮವನ್ನು ಕ್ರಾಂತಿಗೊಳಿಸುತ್ತಿವೆ. ಕೃತಕ ಬುದ್ದಿಮತ್ತೆ (ಎಐ)-ಚಾಲಿತ ವೇದಿಕೆಗಳು ವಿಷಯ ಉತ್ಪಾದನೆಯ ದಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತವೆ. ವೃತ್ತಿಪರ ದರ್ಜೆಯ ವೀಡಿಯೊಗಳು, ಚಿತ್ರಗಳು, ಪಠ್ಯ ಮತ್ತು ಸಂಗೀತದ ತ್ವರಿತ ರಚನೆಯನ್ನು ಸಕ್ರಿಯಗೊಳಿಸುತ್ತವೆ.
- ಲೈವ್ ಈವೆಂಟ್ ಗಳು ಉಲ್ಬಣಗೊಳ್ಳುತ್ತಿವೆ: 2024 ರಲ್ಲಿ ಮಾತ್ರ, ಭಾರತವು ಎಡ್ ಶೀರನ್ ಮತ್ತು ಕೋಲ್ಡ್ಪ್ಲೇನಂತಹ ಜಾಗತಿಕ ಕಲಾವಿದರನ್ನು ಒಳಗೊಂಡ ಸಂಗೀತ ಕಚೇರಿಗಳನ್ನು ಒಳಗೊಂಡಂತೆ 30,000 ಕ್ಕೂ ಹೆಚ್ಚು ಲೈವ್ ಈವೆಂಟ್ ಗಳನ್ನು ಆಯೋಜಿಸಿತು. ಕಳೆದ ಐದು ವರ್ಷಗಳಲ್ಲಿ ಟಿಕೆಟ್ ಪಡೆದ ಕಾರ್ಯಕ್ರಮಗಳು ನಾಲ್ಕು ಪಟ್ಟು ಹೆಚ್ಚಾಗಿದ್ದು, ನೇರ ಮನರಂಜನೆಗಾಗಿ ಹೆಚ್ಚುತ್ತಿರುವ ಹಸಿವನ್ನು ಎತ್ತಿ ತೋರಿಸುತ್ತವೆ.
- ಪ್ರತಿಭಾನ್ವಿತ ಪೂಲ್ ವಿಸ್ತರಣೆ: ಮಾಧ್ಯಮ ಮತ್ತು ಮನರಂಜನಾ (ಎಂ&ಇ) ವಲಯವು 2.8 ಮಿಲಿಯನ್ ಜನರನ್ನು ನೇರವಾಗಿ ತನ್ನ ಕ್ಷೇತ್ರದಲ್ಲಿ ಬಳಸಿಕೊಂಡು ಈಗಾಗಲೇ ನೇಮಿಸಿಕೊಂಡಿದೆ ಮತ್ತು ಹೆಚ್ಚುವರಿಯಾಗಿ 10 ಮಿಲಿಯನ್ ಪರೋಕ್ಷ ಉದ್ಯೋಗಗಳನ್ನು ಹೊಂದಿದೆ. ಭಾರತದ ಸ್ಕೇಲೆಬಲ್ ಪ್ರತಿಭೆಯ ಪ್ರಯೋಜನವು ಅದರ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಭಾಷಾ ಚೌಕಟ್ಟುನಿಂದ ಬಲಗೊಂಡಿದೆ, ಇದು ಅಭಿವೃದ್ಧಿ ಹೊಂದುತ್ತಿರುವ ವಿಷಯ / ಮಾಹಿತಿ ಕ್ಷೇತ್ರದ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತದೆ.
*****
Release ID:
(Release ID: 2126170)
| Visitor Counter:
10
Read this release in:
Assamese
,
Urdu
,
English
,
Nepali
,
Gujarati
,
Tamil
,
Malayalam
,
Hindi
,
Marathi
,
Bengali
,
Punjabi