WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ 2025ಕ್ಕೂ ಮುನ್ನ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸುದ್ದಿ ಮಾಧ್ಯಮ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದರು


ವೇವ್ಸ್ ಉದ್ಯಮದಿಂದ ನಡೆಸಲ್ಪಡುತ್ತಿದೆ; ಸರ್ಕಾರವು ವೇಗವರ್ಧಕವಾಗಿದೆ: ಶ್ರೀ ಅಶ್ವಿನಿ ವೈಷ್ಣವ್


ಭಾರತದ ಸೃಜನಶೀಲ ಆರ್ಥಿಕತೆಯ ಉತ್ತೇಜನಕ್ಕೆ ಭಾರಿ ಪ್ರತಿಕ್ರಿಯೆ: 1 ಲಕ್ಷಕ್ಕೂ ಹೆಚ್ಚು ನೋಂದಣಿಗಳು, 750 ಉನ್ನತ ಶ್ರೇಣಿಯ ಸೃಜನಶೀಲರು ತಮ್ಮ ಕೆಲಸವನ್ನು ಪ್ರದರ್ಶಿಸಲಿದ್ದಾರೆ


ಸೃಜನಶೀಲ ಪರಿಹಾರಗಳಿಗಾಗಿ ಸೃಜನಶೀಲರು, ಖರೀದಿದಾರರು ಮತ್ತು ಮಾರುಕಟ್ಟೆಗಳ ನಡುವೆ ಜಾಗತಿಕ ಸಂಪರ್ಕವಾಗಿ ವೇವ್ಸ್‌ ಹೊರಹೊಮ್ಮುತ್ತಿದೆ: ಕೇಂದ್ರ ಸಚಿವರು

 Posted On: 19 APR 2025 7:03PM |   Location: PIB Bengaluru

ಸೃಜನಶೀಲರ ಜಗತ್ತು ಮತ್ತು ಅವರ ಆರ್ಥಿಕತೆಯಲ್ಲಿ ಮೂಲಭೂತ ಬದಲಾವಣೆಯಾಗುತ್ತಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು. ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಗೆ ಮುಂಚಿತವಾಗಿ ಇಂದು ಸುದ್ದಿ ಮಾಧ್ಯಮಗಳೊಂದಿಗೆ ಅವರು ಸಂವಾದ ನಡೆಸಿದರು. ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ಮಾಧ್ಯಮಗಳ ಸುಮಾರು 20 ಮಾಧ್ಯಮ ಸಂಸ್ಥೆಗಳು ಈ ಸಂವಾದದಲ್ಲಿ ಭಾಗವಹಿಸಿದ್ದವು. ಎದುರಿಸುತ್ತಿರುವ ಸವಾಲುಗಳನ್ನು ಕುರಿತು ಮಾತನಾಡಿದ ಕೇಂದ್ರ ಸಚಿವರು, ತಂತ್ರಜ್ಞಾನದ ಆಗಮನದೊಂದಿಗೆ, ಹಳೆಯ ಮಾದರಿಯು ಹೊಸ ಮಾದರಿಗೆ ದಾರಿ ಮಾಡಿಕೊಡುತ್ತಿದೆ, ಅವಕಾಶಗಳ ಜೊತೆಗೆ ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಮಾಧ್ಯಮ ಪ್ರಪಂಚದ ಸ್ವರೂಪ ಬದಲಾಗುತ್ತಿದೆ ಎಂದ ಅವರು ಹೊಸ ಮಾದರಿಗೆ ಒಂದು ದೇಶವಾಗಿ ಸ್ಪಂದಿಸುವ ಸಾಮೂಹಿಕ ಅಗತ್ಯವನ್ನು ಒತ್ತಿ ಹೇಳಿದರು. ಉದಾಹರಣೆಯೊಂದರ ಮೂಲಕ ವಿವರಿಸಿದ ಅವರು, ಕಂಟೆಂಟ್‌ ರಚಿಸಲು ದೊಡ್ಡ ಸ್ಟುಡಿಯೋ ಅಗತ್ಯವಿದ್ದ ದಿನಗಳು ಈಗ ಇಲ್ಲ ಎಂದು ಹೇಳಿದರು. ಇಂದು ಜಾರ್ಖಂಡ್ ಅಥವಾ ಕೇರಳದ ದೂರದ ಹಳ್ಳಿಯಿಂದ ಬಂದ ಸೃಜನಶೀಲರು ಉತ್ತಮ ಗುಣಮಟ್ಟದ ಕಂಟೆಂಟ್‌ ರಚಿಸಬಹುದು ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯಬಹುದು ಎಂದು ಅವರು ಹೇಳಿದರು.

ಸೃಜನಶೀಲ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು. ನಮ್ಮ ದೂರದೃಷ್ಟಿಯ ಪ್ರಧಾನಿಯವರು ಭಾರತದ ಸಾಂಸ್ಕೃತಿಕ ಶಕ್ತಿಯನ್ನು ಜಾಗತಿಕವಾಗಿ ಉತ್ತೇಜಿಸುವ ಮೂಲಕ ಸೃಜನಶೀಲರ ಕೆಲಸ ಮತ್ತು ಆರ್ಥಿಕತೆಗೆ ಅವರ ಕೊಡುಗೆಯನ್ನು ಗುರುತಿಸಿದ್ದಾರೆ ಎಂದು ಸಚಿವರು ಹೇಳಿದರು. ದಾವೋಸ್ ಆರ್ಥಿಕ ನೀತಿಗಳಿಗೆ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುವಂತೆಯೇ, ವೇವ್ಸ್ ಮಾಧ್ಯಮ ಮತ್ತು ಮನರಂಜನೆಗಾಗಿ ಜಾಗತಿಕ ವೇದಿಕೆಯಾಗಿ ತನ್ನನ್ನು ತಾನು ಅಭಿವೃದ್ಧಿಪಡಿಸಿಕೊಳ್ಳಲು ಬಯಸುತ್ತದೆ ಎಂದು ಅವರು ಹೇಳಿದರು.‌

ವೇವ್ಸ್ 2025ಕ್ಕೆ 1 ಲಕ್ಷಕ್ಕೂ ಹೆಚ್ಚು ನೋಂದಣಿಗಳೊಂದಿಗೆ ಭಾರತದ ಸೃಜನಶೀಲ ಆರ್ಥಿಕತೆಯು ಅಗಾಧವಾದ ಉತ್ತೇಜನವನ್ನು ಪಡೆದಿದೆ. ವಿಕಸನಗೊಳ್ಳುತ್ತಿರುವ ಜಾಗತಿಕ ಮಾಧ್ಯಮ ಮತ್ತು ‌ ಮನರಂಜನಾ ಕ್ಷೇತ್ರಕ್ಕೆ ಅವರ ಕೊಡುಗೆಗಳನ್ನು ಆಚರಿಸುವ ಮೂಲಕ ಉನ್ನತ ನಾವೀನ್ಯಕಾರರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ನಮ್ಮ ಸೃಜನಶೀಲರೊಂದಿಗೆ ಜಗತ್ತನ್ನು ಸಂಪರ್ಕಿಸಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ಶ್ರೀ ವೈಷ್ಣವ್ ಹೇಳಿದರು. ಸೃಜನಶೀಲ ಪರಿಹಾರಗಳಿಗಾಗಿ ಸೃಜನಶೀಲರು, ಖರೀದಿದಾರರು ಮತ್ತು ಮಾರುಕಟ್ಟೆಗಳ ನಡುವೆ ವೇವ್ಸ್ ಜಾಗತಿಕ ಸಂಪರ್ಕವಾಗಿ ಹೊರಹೊಮ್ಮುತ್ತಿದೆ ಎಂದು ಸಚಿವರು ಹೇಳಿದರು. ವೇವ್ಸ್‌ ಮೂಲಕ, ಖರೀದಿದಾರರು ಮತ್ತು ಮಾರಾಟಗಾರರು ವೇದಿಕೆಯನ್ನು ಪಡೆಯುತ್ತಿದ್ದಾರೆ, ಅಲ್ಲಿ ಸೃಜನಶೀಲರು ತಮ್ಮ ಕಂಟೆಂಟ್‌ ನೀಡಬಹುದು ಮತ್ತು ಸಂಸ್ಥೆಗಳು ಗುಣಮಟ್ಟದ ಸೃಜನಶೀಲ ಕೆಲಸವನ್ನು ಪಡೆಯಬಹುದು ಎಂದು ಅವರು ಹೇಳಿದರು.

ಸಂವಾದದಲ್ಲಿ ಭಾಗವಹಿಸಿದ ವಿವಿಧ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ನೀತಿ ನಿರೂಪಕರು, ಸೃಜನಶೀಲರು, ಉದ್ಯಮದ ನಾಯಕರು, ತಂತ್ರಜ್ಞಾನ ದಿಗ್ಗಜರು ಮತ್ತು ಮಾಧ್ಯಮ ಮತ್ತು ಮನರಂಜನಾ ವಲಯದ ನವೋದ್ಯಮಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲು ವೇವ್ಸ್ ರೂಪದಲ್ಲಿ ಒಂದು ಹೊಸ ಪರಿಕಲ್ಪನೆಯನ್ನು ರೂಪಿಸಿದ್ದಕ್ಕಾಗಿ ಸರ್ಕಾರವನ್ನು ಅಭಿನಂದಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಭಾಗವಹಿಸಿದವರು ಮತ್ತು ಗಣ್ಯರನ್ನು ಸ್ವಾಗತಿಸಿದರು, ಮಾಧ್ಯಮ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಸಾಮೂಹಿಕ ಸಂವಾದದ ಮಹತ್ವವನ್ನು ಒತ್ತಿ ಹೇಳಿದರು. ವಿವಿಧ ವೇದಿಕೆಗಳಲ್ಲಿ ಭಾಗೀದಾರರೊಂದಿಗೆ ತೊಡಗಿಸಿಕೊಳ್ಳುವ ಸಚಿವಾಲಯದ ಬದ್ಧತೆಯನ್ನು ಅವರು ಒತ್ತಿ ಹೇಳಿದರು ಮತ್ತು ವೇವ್ಸ್ 2025ರ ಪೂರ್ವಭಾವಿಯಾಗಿ ಮಾಧ್ಯಮ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.

 

*****

 


Release ID: (Release ID: 2122981)   |   Visitor Counter: 41