ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ʻವೇವ್ಸ್ʼ ಬಜಾರ್


ಅನ್ವೇಷಿಸಿ, ಸಂಪರ್ಕಿಸಿ ಮತ್ತು ಜಾಗತಿಕವಾಗಿ ವ್ಯವಹರಿಸಿ

Posted On: 01 APR 2025 6:44PM by PIB Bengaluru

ಅನ್ವೇಷಿಸಿ, ಸಂಪರ್ಕಿಸಿ ಮತ್ತು ಜಾಗತಿಕವಾಗಿ ವ್ಯವಹರಿಸಿ

 

ಪರಿಚಯ

 

ʻವೇವ್ಸ್ ಬಜಾರ್ʼ - ಇದು ಜಾಗತಿಕ ಮನರಂಜನಾ ಉದ್ಯಮದ ವೃತ್ತಿಪರರು, ಉದ್ಯಮಗಳು ಮತ್ತು ಕಂಟೆಂಟ್‌ ಸೃಷ್ಟಿಕರ್ತರನ್ನು ಸಂಪರ್ಕಿಸುವ ನವೀನ ಆನ್‌ಲೈನ್‌ ಮಾರುಕಟ್ಟೆ ವೇದಿಕೆ.  ಇದಕ್ಕೆ ಜನವರಿ 27, 2025 ರಂದು ನವದೆಹಲಿಯ ʻರಾಷ್ಟ್ರೀಯ ಮಾಧ್ಯಮ ಕೇಂದ್ರʼದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ, ರೈಲ್ವೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.

ʻವೇವ್ಸ್ ಬಜಾರ್ʼ ವೇದಿಕೆಯು ʻವಿಶ್ವ ದೃಶ್ಯಶ್ರಾವ್ಯ ಮತ್ತು ಮನರಂಜನಾ ಶೃಂಗಸಭೆʼ ಎಂದೂ ಕರೆಯಲಾಗುವ ʻವೇವ್ಸ್ ಶೃಂಗಸಭೆʼಯ ಪ್ರಮುಖ ಭಾಗವಾಗಿದೆ. ಇದು ಉದ್ಯಮ ವೃತ್ತಿಪರರು ಪರಸ್ಪರ ಸಂಪರ್ಕಿಸಲು, ಸಹಕರಿಸಲು ಮತ್ತು ಹೊಸ ವ್ಯಾಪಾರ ಅವಕಾಶಗಳನ್ನು ಕಂಡುಹಿಡಿಯಲು ಒಟ್ಟಿಗೆ ಸೇರುವ ವಿಶೇಷ ವೇದಿಕೆಯಾಗಿದೆ. ʻವೇವ್ಸ್ ಶೃಂಗಸಭೆʼಯು ಮೇ 1-4, 2025 ರಿಂದ ಮುಂಬೈನ ʻಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ʼ ಮತ್ತು ʻಜಿಯೋ ವರ್ಲ್ಡ್ ಗಾರ್ಡನ್ಸ್‌ʼನಲ್ಲಿ ನಡೆಯಲಿದ್ದು, ʻವೇವ್ಸ್ ಬಜಾರ್ʼ ಅನ್ನು ಜಾಗತಿಕ ಮನರಂಜನಾ ವಿನಿಮಯದ ಪ್ರಮುಖ ಕೇಂದ್ರವಾಗಿಸಲಿದೆ.

ವೇವ್ಸ್ ಬಜಾರ್: ಜಾಗತಿಕ ಮಾರುಕಟ್ಟೆ

ʻವೇವ್ಸ್ ಬಜಾರ್ʼ ಒಂದು ರೀತಿಯ ಇ-ಮಾರುಕಟ್ಟೆಯಾಗಿದೆ. ಇದು ಚಲನಚಿತ್ರ, ದೂರದರ್ಶನ, ಅನಿಮೇಷನ್, ಗೇಮಿಂಗ್, ಜಾಹೀರಾತು, ಎಕ್ಸ್ಆರ್, ಸಂಗೀತ, ಧ್ವನಿ ವಿನ್ಯಾಸ, ರೇಡಿಯೋ ಮುಂತಾದವುಗಳು ಒಳಗೊಂಡಂತೆ ಮಾಧ್ಯಮ ಮತ್ತು ಮನರಂಜನಾ ವಲಯದಾದ್ಯಂತ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುತ್ತದೆ.

ಸಹಯೋಗಿಗಳನ್ನು ಹುಡುಕುವ ಕಂಟೆಂಟ್‌ ಸೃಷ್ಟಿಕರ್ತರಾಗಿರಲಿ, ಸರಿಯಾದ ವೇದಿಕೆಯನ್ನು ಹುಡುಕುವ ಉದ್ಯಮಗಳಾಗಿರಲಿ, ಹೂಡಿಕೆದಾರರನ್ನು ಹುಡುಕುವ ಡೆವಲಪರ್ ಅಥವಾ ಜಾಗತಿಕ ಪ್ರೇಕ್ಷಕರ ಮುಂದೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಬಯಸುವ ಕಲಾವಿದರಾಗಿರಲಿ, ʻವೇವ್ಸ್ ಬಜಾರ್ʼ ಉದ್ಯಮ ವೃತ್ತಿಪರರಿಗೆ ಸಂಪರ್ಕಜಾಲ, ಸಹಯೋಗ ಮತ್ತು ತಮ್ಮ ವ್ಯವಹಾರಗಳನ್ನು ಬೆಳೆಸಲು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ. ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೆ, ಮಾಧ್ಯಮ ಮತ್ತು ಮನರಂಜನೆ ವಲಯದ ವಿವಿಧ ವಿಭಾಗಗಳಿಂದ 5500 ಖರೀದಿದಾರರು, 2000ಕ್ಕೂ ಹೆಚ್ಚು ಮಾರಾಟಗಾರರು ಮತ್ತು ಸರಿಸುಮಾರು 1000 ಯೋಜನೆಗಳು ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿವೆ.

ʻವೇವ್ಸ್ ಬಜಾರ್ʼನ ವೈಶಿಷ್ಟ್ಯಗಳು

ʻವೇವ್ಸ್ ಬಜಾರ್ʼ ಅನ್ನು ಅನೇಕ ವಿಭಾಗಗಳಾಗಿ ರಚಿಸಲಾಗಿದೆ, ಇದರಲ್ಲಿ ಪ್ರತಿಯೊಂದು ವಿಭಾಗವನ್ನೂ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ನಿರ್ದಿಷ್ಟ ಅಗತ್ಯವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಇವು ಸೇರಿವೆ:

  • ಚಲನಚಿತ್ರ ಮತ್ತು ಟಿವಿ / ವೆಬ್ ಸರಣಿ: ನಿಮ್ಮ ಕಂಟೆಂಟ್‌ ಪ್ರದರ್ಶಿಸಲು ಜಾಗತಿಕ ವಿತರಕರು, ಒಟಿಟಿ ವೇದಿಕೆಗಳು ಮತ್ತು ಉತ್ಸವ ಕಾರ್ಯಕ್ರಮಗಳೊಂದಿಗೆ ಸಂಪರ್ಕ ಒದಗಿಸುತ್ತದೆ.
  • ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್: ಹೂಡಿಕೆದಾರರು, ಖರೀದಿದಾರರು ಮತ್ತು ಪ್ರಕಾಶನ ವೇದಿಕೆಗಳಿಗೆ ಕ್ರೀಡೆಯ ಪರಿಕಲ್ಪನೆಗಳು, ʻಐಪಿʼಗಳು ಮತ್ತು ಸ್ವತ್ತುಗಳನ್ನು ಪ್ರಸ್ತುತಪಡಿಸಲು ಅನುಕೂಲ.
  • ಅನಿಮೇಷನ್ ಮತ್ತು ವಿಎಫ್ಎಕ್ಸ್: ವೈವಿಧ್ಯಮಯ ಸೃಜನಶೀಲ ಯೋಜನೆಗಳಿಗೆ ಉನ್ನತ ಶ್ರೇಣಿಯ ಅನಿಮೇಷನ್ ಮತ್ತು ವಿಎಫ್ಎಕ್ಸ್ ಸೇವೆಗಳನ್ನು ಒದಗಿಸುತ್ತದೆ.
  • ಕಾಮಿಕ್ಸ್ / ಇ-ಪುಸ್ತಕಗಳು: ವ್ಯಾಪಕ ಪ್ರೇಕ್ಷಕರನ್ನು ತಲುಪಲು ಸ್ಟೋರಿಬೋರ್ಡ್‌ಗಳು, ಪ್ರಕಟಣೆ ಮತ್ತು ಕಂಟೆಂಟ್‌ ರಚನೆಯನ್ನು ಪ್ರಚಾರ ಮಾಡಲು.
  • ರೇಡಿಯೋ ಮತ್ತು ಪಾಡ್ಕಾಸ್ಟ್: ಪ್ರಾಯೋಜಕತ್ವವನ್ನು ಪಡೆಯಲು ಮತ್ತು ಅವರ ವ್ಯಾಪ್ತಿಯನ್ನು ಹೆಚ್ಚಿಸಲು ಸ್ವತಂತ್ರ ಆಡಿಯೊ ಸೃಷ್ಟಿಕರ್ತರನ್ನು ಸಶಕ್ತಗೊಳಿಸುತ್ತದೆ.
  • ಸಂಗೀತ ಮತ್ತು ಧ್ವನಿ: ಪರವಾನಗಿ ಅವಕಾಶಗಳನ್ನು ಅನಾವರಣಗೊಳಿಸಲು ಮತ್ತು ಸಂಗೀತ ನಿರ್ಮಾಣ, ಧ್ವನಿ ವಿನ್ಯಾಸ ಮುಂತಾದವುಗಳಲ್ಲಿ ಸಹಕಾರ.
  • ಲೈವ್ ಕಾರ್ಯಕ್ರಮಗಳು & ಇನ್‌ಫ್ಲುಯೆನ್ಸರ್‌ ಮಾರ್ಕೆಟಿಂಗ್: ಲೈವ್ ಕಾರ್ಯಕ್ರಮಗಳ ಮೂಲಕ ಪ್ರಾಯೋಜಕತ್ವ, ಬ್ರಾಂಡ್ ಪಾಲುದಾರಿಕೆ ಮತ್ತು ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

ವೇವ್ಸ್ ಬಜಾರ್ ಹೇಗೆ ಕೆಲಸ ಮಾಡುತ್ತದೆ

ಡುತ್ತದವೇವ್ಸ್ ಬಜಾರ್ ವೆಬ್‌ಸೈಟ್‌ಗೆ ಭೇಟಿ ನೀಡಿ: ವೇದಿಕೆಯನ್ನು ಪ್ರವೇಶಿಸಲು ಮತ್ತು ಅನ್ವೇಷಿಸಲು http://wavesbazaar.comಗೆ ಭೇಟಿ ನೀಡಿ.
ಸೈನ್ ಅಪ್ ಮಾಡಿ ಮತ್ತು ನಿಮ್ಮ ಪ್ರೊಫೈಲ್ ಸೃಷ್ಟಿಸಿ: ಪೂರ್ಣ ಶ್ರೇಣಿಯ ಅವಕಾಶಗಳನ್ನು ಪ್ರವೇಶಿಸಲು ಖರೀದಿದಾರ, ಮಾರಾಟಗಾರ ಅಥವಾ ಹೂಡಿಕೆದಾರರಾಗಿ ನೋಂದಾಯಿಸಿ.

ನಿಮ್ಮ ಸೇವೆಗಳು ಅಥವಾ ಪ್ರಾಜೆಕ್ಟ್ ಅಗತ್ಯಗಳನ್ನು ಪಟ್ಟಿ ಮಾಡಿ: ನಿಮ್ಮ ಕೆಲಸವನ್ನು ಪ್ರದರ್ಶಿಸಿ ಅಥವಾ ನಿಮ್ಮ ವ್ಯವಹಾರ ಆಸಕ್ತಿಗಳಿಗೆ ಅನುಗುಣವಾಗಿ ಲಭ್ಯವಿರುವ ಪಟ್ಟಿಗಳನ್ನು ಅನ್ವೇಷಿಸಿ.
ಸಂಪರ್ಕ ಮತ್ತು ಸಹಯೋಗ: ಉದ್ಯಮ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ, ಸಭೆಗಳನ್ನು ನಿಗದಿಪಡಿಸಿ ಮತ್ತು ಯಶಸ್ವಿ ಸಹಯೋಗಗಳನ್ನು ಪ್ರಾರಂಭಿಸಿ.

ನಿಮ್ಮ ವ್ಯವಹಾರವನ್ನು ಬೆಳೆಸಿ: ನಿಮ್ಮ ಮಾರುಕಟ್ಟೆಯನ್ನು ವಿಸ್ತರಿಸಿ, ಹೊಸ ಆದಾಯದ ಹರಿವುಗಳನ್ನು ಕಂಡುಕೊಳ್ಳಿ ಮತ್ತು ದೀರ್ಘಕಾಲೀನ ಪಾಲುದಾರಿಕೆಯನ್ನು ಸ್ಥಾಪಿಸಿ.

ಅರ್ಹತೆ: ʻವೇವ್ಸ್ ಬಜಾರ್ʼ ಸೇವೆಗಳಿಗೆ ನೋಂದಾಯಿಸಲು ಮತ್ತು ಬಳಸಲು ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ವಿವಿಧ ವೃತ್ತಿಪರರಿಗೆ ವೇವ್ಸ್ ಬಜಾರ್

ʻವೇವ್ಸ್ ಬಜಾರ್ʼ ಸೃಜನಶೀಲ ಉದ್ಯಮಗಳಲ್ಲಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಮುಕ್ತವಾಗಿದೆ. ನವೀನ ಕಂಟೆಂಟ್‌ ಮತ್ತು ಸೇವೆಗಳನ್ನು ಬಯಸುವ ಉದ್ಯಮಗಳು ಮತ್ತು ವ್ಯಕ್ತಿಗಳು ಈ ಸೃಷ್ಟಿಕರ್ತರನ್ನು ಅನ್ವೇಷಿಸಲು ಮತ್ತು ಸಂಪರ್ಕಿಸಲು ಖರೀದಿದಾರರಾಗಿ ನೋಂದಾಯಿಸಿಕೊಳ್ಳಬಹುದು. ʻವೇವ್ಸ್ ಬಜಾರ್ʼಗೆ ಸೇರಲು ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ.

ಮಾರಾಟಗಾರರಿಗೆ ಮಾರ್ಗಸೂಚಿಗಳು

ಮಾರಾಟಗಾರರಿಗೆ ಮಾರ್ಗಸೂಚಿಗಳು

ಮಾರಾಟಗಾರರಾಗಿ ನೋಂದಾಯಿಸಲು,  ʻವೇವ್ಸ್ ಬಜಾರ್ʼ ವೆಬ್‌ಸೈಟ್‌ನಲ್ಲಿ ʻವೇವ್ ಸೆಲ್ಲರ್ ಸೈನ್ ಅಪ್ʼ ಪುಟಕ್ಕೆ ಭೇಟಿ ನೀಡಿ. ನಿಮ್ಮ ಮತ್ತು ನಿಮ್ಮ ಸೇವೆಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ನೋಂದಣಿ ನಮೂನೆಯನ್ನು ಪೂರ್ಣಗೊಳಿಸಿ. ಒಮ್ಮೆ ನೋಂದಾಯಿಸಿದ ನಂತರ, ನಿಮ್ಮ ಯೋಜನೆಗಳನ್ನು ಪ್ರದರ್ಶಿಸಲು ಮತ್ತು ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ನೀವು ʻಪ್ರೊಫೈಲ್ʼ ಸೃಷ್ಟಿಸಬಹುದು.

ಖರೀದಿದಾರರಾಗಿ ವೇವ್ಸ್ ಬಜಾರ್ ಗೆ ಸೇರಿ

ಖರೀದಿದಾರರಾಗಿ ನೋಂದಾಯಿಸಲು,  ʻವೇವ್ಸ್ ಬಜಾರ್ʼ ವೆಬ್‌ಸೈಟ್‌ನಲ್ಲಿ ʻವೇವ್ ಬೈಯರ್‌ ಸೈನ್ ಅಪ್ʼ ಪುಟಕ್ಕೆ ಹೋಗಿ. ಅಗತ್ಯವಿರುವ ವಿವರಗಳನ್ನು ಒದಗಿಸುವ ಮೂಲಕ ಸೈನ್ ಅಪ್ ಮಾಡಿ. ನೋಂದಣಿಯ ನಂತರ, ನೀವು ವೈವಿಧ್ಯಮಯ ಶ್ರೇಣಿಯ ಸೃಜನಶೀಲ ಯೋಜನೆಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಪಡೆಯುತ್ತೀರಿ, ಇದು ಮಾರಾಟಗಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ವೀಕ್ಷಣಾ ಕೊಠಡಿ ಮತ್ತು ಮಾರುಕಟ್ಟೆ ಸ್ಕ್ರೀನಿಂಗ್‌ಗಳುನಿಂಗ್ ಗಳು

  • ʻವೇವ್ಸ್ ಬಜಾರ್ʼ ಸುಧಾರಿತ ವೀಕ್ಷಣಾ ಕೊಠಡಿ ಮತ್ತು ಮಾರುಕಟ್ಟೆ ಸ್ಕ್ರೀನಿಂಗ್ ವೈಶಿಷ್ಟ್ಯವನ್ನು ಒದಗಿಸುತ್ತದೆ. ಆ ಮೂಲಕ ಗುಣಮಟ್ಟದ ಆಯ್ದ ಕಂಟೆಂಟ್‌ ಸೂಕ್ತ ಪ್ರೇಕ್ಷಕರನ್ನು ತಲುಪುವುದನ್ನು ಖಚಿತಪಡಿಸುತ್ತದೆ.
  • ವೀಕ್ಷಣಾ ಕೊಠಡಿ: ಸ್ವಾಧೀನ ಅಥವಾ ಪಾಲುದಾರಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಚಲನಚಿತ್ರಗಳು, ಅನಿಮೇಷನ್‌ಗಳು ಮತ್ತು ಗೇಮಿಂಗ್ ಐಪಿಗಳನ್ನು ಪೂರ್ವವೀಕ್ಷಣೆ ಮಾಡಲು ಖರೀದಿದಾರರಿಗೆ ವೀಕ್ಷಣಾ ಕೊಠಡಿ ಸುರಕ್ಷಿತ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ.
  • ಮಾರುಕಟ್ಟೆ ಸ್ಕ್ರೀನಿಂಗ್‌ಗಳು ಹೂಡಿಕೆದಾರರು ಮತ್ತು ವಿತರಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೆಚ್ಚಿನ ಸಾಮರ್ಥ್ಯದ ಯೋಜನೆಗಳನ್ನು ಎತ್ತಿ ತೋರಲು ವಿನ್ಯಾಸಗೊಳಿಸಲಾದ ವಿಶೇಷ ವೈಯಕ್ತಿಕ ಮತ್ತು ವರ್ಚುವಲ್ ಸ್ಕ್ರೀನಿಂಗ್‌ಗಳನ್ನು ಇದು ಒಳಗೊಂಡಿವೆ.

ತೀರ್ಮಾನ

ತೀರ್ಮಾನ

ʻವೇವ್ಸ್ ಬಜಾರ್ʼ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಕ್ರಾಂತಿಯನ್ನುಂಟುಮಾಡುತ್ತಿದೆ. ಇದು ವೃತ್ತಿಪರರು, ಉದ್ಯಮಗಳು ಮತ್ತು ಕಂಟೆಂಟ್‌ ಸೃಷ್ಟಿಕರ್ತರಿಗೆ ಪರಸ್ಪರ ಸಂಪರ್ಕಿಸಲು, ಸಹಕರಿಸಲು ಮತ್ತು ಬೆಳೆಯಲು ಕ್ರಿಯಾತ್ಮಕ ಡಿಜಿಟಲ್ ಮಾರುಕಟ್ಟೆ ವೇದಿಕೆಯನ್ನು ಒದಗಿಸುತ್ತದೆ. ಚಲನಚಿತ್ರ ಮತ್ತು ಗೇಮಿಂಗ್‌ನಿಂದ ಹಿಡಿದು ಸಂಗೀತ ಮತ್ತು ಜಾಹೀರಾತುಗಳವರೆಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವಕಾಶಗಳೊಂದಿಗೆ ಇದು ತಡೆರಹಿತ ಸಂಪರ್ಕಜಾಲ ಮತ್ತು ವ್ಯವಹಾರ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಖರೀದಿದಾರರು ಮತ್ತು ಮಾರಾಟಗಾರರಿಗಾಗಿ ಸೇವೆ ಸಲ್ಲಿಸುತ್ತಿರುವ ʻವೇವ್ಸ್ ಬಜಾರ್ʼ ಜಾಗತಿಕ ಮನರಂಜನಾ ವಿನಿಮಯ ಮತ್ತು ಸೃಜನಶೀಲ ಸಹಯೋಗದ ಹೊಸ ಯುಗಕ್ಕೆ ವೇದಿಕೆಯನ್ನು ನಿರ್ಮಿಸುತ್ತಿದೆ.

 

ಉಲ್ಲೇಖಗಳು

 

*****


(Release ID: 2117641) Visitor Counter : 11