ರೈಲ್ವೇ ಸಚಿವಾಲಯ
ಮಹಾ ಶಿವರಾತ್ರಿಗೆ ವಿಶೇಷ ವ್ಯವಸ್ಥೆಗಳೊಂದಿಗೆ ಸಜ್ಜಾದ ಭಾರತೀಯ ರೈಲ್ವೆ
ಪ್ರಯಾಗ್‌ರಾಜ್‌ನಿಂದ 350ಕ್ಕೂ ಹೆಚ್ಚು ವಿಶೇಷ ರೈಲುಗಳು, ಪ್ರಮುಖ ನಿಲ್ದಾಣಗಳಲ್ಲಿ ಹೆಚ್ಚು ಜಾಗರೂಕತೆ
ಮಹಾಕುಂಭ ಯಾತ್ರಾರ್ಥಿಗಳಿಗಾಗಿ 42 ದಿನಗಳಲ್ಲಿ 15,000ಕ್ಕೂ ಹೆಚ್ಚು ರೈಲುಗಳನ್ನು ಓಡಿಸುವ ಮೂಲಕ ಭಾರತೀಯ ರೈಲ್ವೆ ದಾಖಲೆಯನ್ನು ಸ್ಥಾಪಿಸಿದೆ
Posted On:
25 FEB 2025 7:47PM by PIB Bengaluru
ಮಹಾಕುಂಭ 2025ರ ಅಂತಿಮ ಅಮೃತ ಸ್ನಾನ ಫೆಬ್ರವರಿ 26 ರಂದು ನಿಗದಿಪಡಿಸಲಾಗಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗರಾಜ್‌ನಲ್ಲಿ ಜಮಾಯಿಸಿದ್ದಾರೆ. ಭಾನುವಾರ ಮತ್ತು ಸೋಮವಾರ, ಬಿಹಾರದ ಪಾಟ್ನಾ, ದಾನಪುರ್, ಮುಜಾಫರ್‌ಪುರ್, ಗಯಾ, ಸಸಾರಾಮ್, ಕತಿಹಾರ್, ಖಗಾರಿಯಾ, ಸಹರ್ಸಾ, ಜಯನಗರ ಮತ್ತು ದರ್ಭಾಂಗದಂತಹ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇದ್ದರು. ಅದೇ ರೀತಿ, ಉತ್ತರ ಪ್ರದೇಶದ ಗೋರಖ್‌ಪುರ, ಲಕ್ನೋ, ಅಯೋಧ್ಯೆ, ವಾರಣಾಸಿ, ಕಾನ್ಪುರ, ಗೊಂಡಾ, ದೀನ್ ದಯಾಳ್ ಉಪಾಧ್ಯಾಯ ಮತ್ತು ಝಾನ್ಸಿ ಮುಂತಾದ ನಿಲ್ದಾಣಗಳಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಮಧ್ಯಪ್ರದೇಶದ ಚಿತ್ರಕೂಟ, ಜಬಲ್‌ಪುರ್, ಸತ್ನಾ, ಮತ್ತು ಖುಜುರಾಹೊ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದರೆ, ಗಮನಾರ್ಹ ಸಂಖ್ಯೆಯ ಪ್ರಯಾಣಿಕರು ಜಾರ್ಖಂಡ್‌ನ ಧನ್‌ಬಾದ್, ಬೊಕಾರೊ, ರಾಂಚಿ, ಗರ್ಹ್ವಾ ಮತ್ತು ಮೇದಿನಿನಗರ ನಿಲ್ದಾಣಗಳಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಿದರು.
ಅಮೃತ್ ಸ್ನಾನದ ನಂತರ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಊರುಗಳಿಗೆ ಮರಳುವ ನಿರೀಕ್ಷೆಯಿದೆ, ಇದು ರೈಲ್ವೆ ನಿಲ್ದಾಣಗಳಲ್ಲಿ ಭಾರೀ ಜನಸಂದಣಿಗೆ ಕಾರಣವಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ನಾರ್ತ್ ಸೆಂಟ್ರಲ್ ರೈಲ್ವೇ, ಈಶಾನ್ಯ ರೈಲ್ವೇ ಮತ್ತು ಉತ್ತರ ರೈಲ್ವೇ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಜಾಗರೂಕರಾಗಿರಲು ಸೂಚಿಸಿದ್ದಾರೆ. ಮೌನಿ ಅಮವಾಸ್ಯೆಯ ಸಂದರ್ಭದಲ್ಲಿ, 360 ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. 20 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಸ್ಥಳಗಳಿಗೆ ಯಶಸ್ವಿಯಾಗಿ ಸಾಗಿಸಲಾಯಿತು. ಅಂತೆಯೇ, ಮಹಾ ಶಿವರಾತ್ರಿ ಸ್ನಾನದ ನಂತರ ಹೆಚ್ಚುವರಿ ರೈಲುಗಳನ್ನು ಓಡಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ, ಅಗತ್ಯವಿರುವಂತೆ ಬಳಸಲು ಹೆಚ್ಚುವರಿ ರೇಕ್‌ಗಳನ್ನು ಪ್ರಯಾಗರಾಜ್ ಬಳಿ ನಿಲ್ಲಿಸಲಾಗಿದೆ. ಆರಂಭದಲ್ಲಿ, ಮಹಾಕುಂಭದ ಸಮಯದಲ್ಲಿ ಸರಿಸುಮಾರು 13,500 ರೈಲುಗಳ ಕಾರ್ಯಾಚರಣೆಗೆ ರೈಲ್ವೆ ಯೋಜಿಸಿತ್ತು. ಆದರೆ, 42ನೇ ದಿನಕ್ಕೆ ಕಾಲಿಟ್ಟಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯ ವಿಶೇಷ ರೈಲುಗಳು ಸೇರಿದಂತೆ 15,000ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲಾಗಿದೆ.
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸಂಪೂರ್ಣ ರೈಲ್ವೆ ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಶ್ರೀ ಸತೀಶ್ ಕುಮಾರ್ ಅವರು ರೈಲು ಕಾರ್ಯಾಚರಣೆಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮೂರು ವಲಯ ರೈಲ್ವೆಗಳ ಜನರಲ್ ಮ್ಯಾನೇಜರ್‌ಗಳು ತಮ್ಮ ತಂಡಗಳೊಂದಿಗೆ ರೈಲ್ವೆ ವ್ಯವಸ್ಥೆಗಳನ್ನು ಬಲಪಡಿಸಲು ಕೆಲಸ ಮಾಡುತ್ತಿದ್ದಾರೆ. ರೈಲ್ವೆ ಸಚಿವರು ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಎಲ್ಲಾ ವಲಯ ರೈಲ್ವೇಗಳ ಜನರಲ್ ಮ್ಯಾನೇಜರ್‌ಗಳಿಗೆ ಮಹಾಕುಂಭ ಪ್ರಯಾಣಿಕರಿಗೆ ಹೆಚ್ಚಿನ ಕಾಳಜಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯವಿದ್ದರೆ ಹೆಚ್ಚುವರಿ ವಿಶೇಷ ರೈಲುಗಳನ್ನು ನಿರ್ವಹಿಸುವಂತೆ ನಿರ್ದೇಶಿಸಿದ್ದಾರೆ.
ಮಹಾ ಶಿವರಾತ್ರಿಯಂದು ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳ ನಿರೀಕ್ಷೆಯ ಹಿನ್ನೆಲೆಯಲ್ಲಿ ರೈಲ್ವೆ ಆಡಳಿತವು ಹೆಚ್ಚಿನ ಸಂಖ್ಯೆಯ ರೈಲುಗಳನ್ನು ಓಡಿಸುವುದರ ಜೊತೆಗೆ ಭದ್ರತೆ, ಆಶ್ರಯ ಮತ್ತು ಸುಲಭ ಟಿಕೆಟ್ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ವ್ಯವಸ್ಥೆಗಳನ್ನು ಮಾಡಿದೆ. ಪ್ರಯಾಗರಾಜ್ ಪ್ರದೇಶದ ಎಲ್ಲಾ ನಿಲ್ದಾಣಗಳಲ್ಲಿ 1,500 ಕ್ಕೂ ಹೆಚ್ಚು ವಾಣಿಜ್ಯ ವಿಭಾಗದ ಸಿಬ್ಬಂದಿ ಮತ್ತು 3,000 ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ, ರೈಲ್ವೆ ರಕ್ಷಣಾ ವಿಶೇಷ ಪಡೆಯ 29 ಸ್ಕ್ವಾಡ್‌ಗಳು, ಮಹಿಳಾ ರೈಲ್ವೆ ರಕ್ಷಣಾ ವಿಶೇಷ ಪಡೆಯ 2 ಸ್ಕ್ವಾಡ್‌ಗಳು, 22 ಶ್ವಾನ ದಳಗಳು ಮತ್ತು 2 ಬಾಂಬ್ ನಿಷ್ಕ್ರಿಯ ದಳಗಳು ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿವೆ. ಸ್ಕೌಟ್ಸ್ ಮತ್ತು ಗೈಡ್ಸ್, ಸಿವಿಲ್ ಡಿಫೆನ್ಸ್ ಮತ್ತು ಇತರ ಇಲಾಖೆಗಳ ತಂಡಗಳು ಯಾತ್ರಾರ್ಥಿಗಳಿಗೆ ಉತ್ತಮ ಪ್ರಯಾಣ ಸೌಲಭ್ಯಗಳನ್ನು ಒದಗಿಸಲು ಕೆಲಸ ಮಾಡುತ್ತಿವೆ.
ಯಾತ್ರಾರ್ಥಿಗಳಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ಪ್ರಯಾಗರಾಜ್ ಪ್ರದೇಶದ ಎಲ್ಲಾ ನಿಲ್ದಾಣಗಳಲ್ಲಿ ಆಂತರಿಕ ಚಲನೆಯ ಯೋಜನೆಗಳನ್ನು ಅಳವಡಿಸಲಾಗಿದೆ ಮತ್ತು ವಿಶೇಷ ರೈಲುಗಳ ಮೂಲಕ ಯಾತ್ರಿಕರನ್ನು ಅವರ ಸ್ಥಳಗಳಿಗೆ ಸಾಗಿಸಲಾಗಿದೆ. ಪ್ರಯಾಗ್‌ರಾಜ್ ಜಂಕ್ಷನ್‌ನಲ್ಲಿ, ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳ ಆಧಾರದ ಮೇಲೆ ನಿರ್ದಿಷ್ಟ ಶೆಲ್ಟರ್‌ಗಳಿಗೆ ನಿರ್ದೇಶಿಸಲಾಗಿದ್ದು, ನಂತರ ವಿಶೇಷ ರೈಲುಗಳ ಮೂಲಕ ಅವರ ಸ್ಥಳಗಳಿಗೆ ಕರೆದೊಯ್ಯಲಾಗುವುದು. ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ, ರೈಲ್ವೇ ತನ್ನ ತುರ್ತು ಯೋಜನೆಯನ್ನು ಖುಸ್ರೋ ಬಾಗ್‌ನಲ್ಲಿ ಪ್ರಯಾಣಿಕರನ್ನು ಹಿಡಿದಿಟ್ಟುಕೊಳ್ಳಲಿದೆ. ನಂತರ ಪ್ರಯಾಣಿಕರು ರೈಲುಗಳನ್ನು ಹತ್ತುವ ಮೊದಲು ಗೊತ್ತುಪಡಿಸಿದ ಶೆಲ್ಟರ್‌ಗಳ ಮೂಲಕ ಸುರಕ್ಷಿತವಾಗಿ ನಿಲ್ದಾಣವನ್ನು ಪ್ರವೇಶಿಸಲು ಸೂಚಿಸಲಾಗಿದೆ. ಪ್ರಯಾಗ್‌ರಾಜ್ ಜಂಕ್ಷನ್‌ನಲ್ಲಿರುವ ಕಂಟ್ರೋಲ್ ಟವರ್‌ನಿಂದ ಪ್ರಯಾಗ್‌ರಾಜ್ ವಿಭಾಗದ ಹಿರಿಯ ಅಧಿಕಾರಿಗಳು ಎಲ್ಲಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿದರು ಮತ್ತು ರೈಲು ಕಾರ್ಯಾಚರಣೆಯಲ್ಲಿ ಅಡಚಣೆಗಳನ್ನು ತಡೆಗಟ್ಟಲು ಮತ್ತು ವಿಶೇಷ ರೈಲುಗಳಲ್ಲಿ ಯಾತ್ರಾರ್ಥಿಗಳ ಸುರಕ್ಷಿತ ನಿರ್ಗಮನವನ್ನು ಖಚಿತಪಡಿಸಿಕೊಳ್ಳಲು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ವಿವಿಧ ನಿಲ್ದಾಣಗಳಲ್ಲಿ ವೈದ್ಯಕೀಯ ಸೌಲಭ್ಯಗಳೂ ಲಭ್ಯವಿದ್ದು, ಯಾತ್ರಿಕರ ಗಂಭೀರ ಪ್ರಕರಣಗಳಿಗೆ ವೀಕ್ಷಣಾ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಹಾ ಕುಂಭ 2025 ರ ಸಮಯದಲ್ಲಿ, ಅನೇಕ ಯಾತ್ರಾರ್ಥಿಗಳು ರೈಲ್ವೆ ನೀಡುವ ಡಿಜಿಟಲ್ ಸೇವೆಗಳನ್ನು ಬಳಸಿಕೊಂಡರು. ಲಕ್ಷಾಂತರ ಪ್ರಯಾಣಿಕರು ತಮ್ಮ ಪ್ರಯಾಣದ ಅಗತ್ಯಗಳಿಗಾಗಿ ವೆಬ್‌ಸೈಟ್ ಮತ್ತು ಕುಂಭ್ ಅಪ್ಲಿಕೇಶನ್ ಅನ್ನು ಬಳಸಿಸಿದ್ದಾರೆ. ಮಹಾ ಕುಂಭದ ಅಂತಿಮ ವಾರಾಂತ್ಯದಲ್ಲಿ, ರೈಲ್ವೆ ನಿಯಮಿತ ಮತ್ತು ವಿಶೇಷ ರೈಲುಗಳನ್ನು ಸಮರ್ಥವಾಗಿ ನಿರ್ವಹಿಸಿತು. ಭಾನುವಾರ, 335 ರೈಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿತು, 16 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಸ್ಥಳಗಳಿಗೆ ಸಾಗಿಸಿತು.
*****
(Release ID: 2106287)
Visitor Counter : 11