ಪ್ರಧಾನ ಮಂತ್ರಿಯವರ ಕಛೇರಿ
ಅಮೆರಿಕದ ಸರ್ಕಾರಿ ದಕ್ಷತಾ ವಿಭಾಗದ ಮುಖ್ಯಸ್ಥರಿಂದ (ಡಿಒಜಿಇ) ಪ್ರಧಾನಮಂತ್ರಿಗಳ ಭೇಟಿ
Posted On:
13 FEB 2025 11:51PM by PIB Bengaluru
ಅಮೆರಿಕದ ಸರ್ಕಾರಿ ದಕ್ಷತಾ ವಿಭಾಗದ (DOGE) ಮುಖ್ಯಸ್ಥರು ಮತ್ತು ಟೆಸ್ಲಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆದ ಶ್ರೀ ಎಲಾನ್ ಮಸ್ಕ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ನಾವಿನ್ಯತೆ, ಬಾಹ್ಯಾಕಾಶ ಪರಿಶೋಧನೆ, ಕೃತಕ ಬುದ್ಧಿಮತ್ತೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತ ಮತ್ತು ಅಮೆರಿಕದ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸುವ ಕುರಿತು ಪ್ರಧಾನಮಂತ್ರಿ ಮತ್ತು ಶ್ರೀ ಮಸ್ಕ್ ಅವರು ಚರ್ಚಿಸಿದರು. ಉದಯೋನ್ಮುಖ ತಂತ್ರಜ್ಞಾನಗಳು, ಉದ್ಯಮಶೀಲತೆ ಮತ್ತು ಉತ್ತಮ ಆಡಳಿತದಲ್ಲಿ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಉಭಯರು ಪ್ರಮುಖವಾಗಿ ಚರ್ಚಿಸಿದರು.
ಶ್ರೀ ಮಸ್ಕ್ ಅವರು ಕುಟುಂಬ ಸಹಿತವಾಗಿ ಸಭೆಗೆ ಹಾಜರಾಗಿದ್ದರು.
*****
(Release ID: 2104908)
Visitor Counter : 10
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam