ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಯುವ ಚಲನಚಿತ್ರ ನಿರ್ಮಾಪಕರಿಗೆ “ವೇವ್ಸ್” ಸವಾಲು
Posted On:
12 FEB 2025 5:33PM by PIB Bengaluru
ಮುಂದಿನ ಪೀಳಿಗೆಯಲ್ಲಿ ಸೃಜನಶೀಲತೆಯನ್ನು ಬೆಳಗಿಸುವುದು
ಪರಿಚಯ
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಭಾಗಿತ್ವದಲ್ಲಿ ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್ ಆಯೋಜಿಸಿರುವ ವೇವ್ಸ್ ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್, 12 ರಿಂದ 19 ವರ್ಷ ವಯಸ್ಸಿನ ಉದಯೋನ್ಮುಖ ಕಥೆಗಾರರಿಗೆ ಚಲನಚಿತ್ರ ನಿರ್ಮಾಣದ ಜಗತ್ತಿಗೆ ಕಾಲಿಡಲು ಅತ್ಯಾಕರ್ಷಕ ವೇದಿಕೆಯನ್ನು ಒದಗಿಸುತ್ತದೆ. ಸೃಜನಶೀಲತೆಯನ್ನು ಉದ್ದೀಪಿಸಲು, ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಮತ್ತು ಕಥೆ ಹೇಳುವ ಕೌಶಲ್ಯಗಳನ್ನು ಪರಿಷ್ಕರಿಸಲು ವಿನ್ಯಾಸಗೊಳಿಸಲಾದ ಈ ಸವಾಲು (ಚಾಲೆಂಜ್) ಯುವ ಸೃಷ್ಟಿಕರ್ತರನ್ನು 60 ಸೆಕೆಂಡುಗಳ ಆಕರ್ಷಕ ಚಲನಚಿತ್ರಗಳನ್ನು ರಚಿಸಲು ಆಹ್ವಾನ ನೀಡುತ್ತದೆ. ವರ್ಲ್ಡ್ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆಯ (ವೇವ್ಸ್) ಪ್ರಮುಖ ಭಾಗವಾಗಿ, ಇದು ಮಕ್ಕಳು ಮತ್ತು ಹದಿಹರೆಯದವರನ್ನು ತಮ್ಮ ಕಲ್ಪನೆಯನ್ನು ಅನುಷ್ಠಾನಿಸಲು/ಅನ್ವೇಷಿಸಲು ಮತ್ತು ಕಿರು-ರೂಪದ ಕಥೆ ಹೇಳುವ ಮೂಲಕ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್ನಲ್ಲಿ 2025 ರ ಮೇ 1 ರಿಂದ 4 ರವರೆಗೆ ನಡೆಯಲಿರುವ ವೇವ್ಸ್, ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಚರ್ಚೆಗಳು, ಸಹಯೋಗ ಮತ್ತು ನಾವೀನ್ಯತೆಗಾಗಿ ಪ್ರಧಾನ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ರಮವು ಹೊಸ ಅವಕಾಶಗಳನ್ನು ಅನ್ವೇಷಿಸಲು, ಸವಾಲುಗಳನ್ನು ಎದುರಿಸಲು ಮತ್ತು ಭಾರತದ ಎಂ &ಇ ವಲಯದಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ಉದ್ಯಮದ ನಾಯಕರು, ಮಧ್ಯಸ್ಥಗಾರರು ಮತ್ತು ಅನ್ವೇಷಕರನ್ನು/ ನಾವೀನ್ಯಕಾರರನ್ನು ಒಟ್ಟುಗೂಡಿಸುತ್ತದೆ.

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಮುಖ ಉಪಕ್ರಮವಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ಸ್ “ವೇವ್ಸ್ “ ನ ಕೇಂದ್ರಬಿಂದುವಾಗಿದೆ. 70,000 ಕ್ಕೂ ಹೆಚ್ಚು ನೋಂದಣಿಗಳು ಮತ್ತು 31 ಸವಾಲುಗಳನ್ನು ಪ್ರಾರಂಭಿಸುವುದರೊಂದಿಗೆ, ಈ ಉಪಕ್ರಮವು ಪ್ರಪಂಚದಾದ್ಯಂತದ ಸೃಜನಶೀಲ ಮನಸ್ಸುಗಳನ್ನು ಆಕರ್ಷಿಸಿದೆ. ನಾವೀನ್ಯತೆಯ/ಅನ್ವೇಷಣೆಯ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಮೂಲಕ, ಸವಾಲುಗಳು ಭಾರತವನ್ನು ಮಾಧ್ಯಮ ಮತ್ತು ಮನರಂಜನೆಯ ಜಾಗತಿಕ ಕೇಂದ್ರವಾಗಿ ಬೆಳೆಸುವ ಗುರಿಯನ್ನು ಹೊಂದಿವೆ.
ಪ್ರಮುಖ ಉದ್ದೇಶಗಳು
ಸೃಜನಶೀಲತೆಗೆ ಸ್ಫೂರ್ತಿ ನೀಡಿ: ಯುವ ಚಲನಚಿತ್ರ ನಿರ್ಮಾಪಕರು ಚಲನಚಿತ್ರದ ಮೂಲಕ ತಮ್ಮ ಸೃಜನಶೀಲತೆ ಮತ್ತು ಸ್ವಂತಿಕೆಯನ್ನು ವ್ಯಕ್ತಪಡಿಸಲು ಒಂದು ಮೋಜಿನ ಮತ್ತು ಬೆಂಬಲ ನೀಡುವ ವೇದಿಕೆಯನ್ನು ಒದಗಿಸಿ.
ಕಥೆ ಹೇಳುವಿಕೆಯನ್ನು ಉತ್ತೇಜಿಸಿ: ಯುವ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುವ ಆಕರ್ಷಕ ಮತ್ತು ಕಾಲ್ಪನಿಕ ಕಥೆಗಳನ್ನು ಅಭಿವೃದ್ಧಿಪಡಿಸಲು ಭಾಗವಹಿಸುವವರನ್ನು ಪ್ರೋತ್ಸಾಹಿಸಿ.
ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ: ಮಕ್ಕಳು ಮತ್ತು ಹದಿಹರೆಯದವರಿಗೆ ಜಾಗತಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಿ.
ವೈವಿಧ್ಯತೆಯನ್ನು ಆಚರಿಸಿ: ಯುವ ಚಲನಚಿತ್ರ ನಿರ್ಮಾಪಕರು ತೆರೆಗೆ ತರುವ ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ನಿರೂಪಣೆಗಳನ್ನು ಹೈಲೈಟ್ ಮಾಡಿ.
ನಿರ್ಣಯಿಸುವ ಮಾನದಂಡಗಳು

ನೋಂದಣಿ ಮಾರ್ಗಸೂಚಿಗಳು

ಸವಾಲಿನ ಕಾಲಾನುಕ್ರಮಗಳು
ಸೆಪ್ಟೆಂಬರ್ 2024 ರಿಂದ ಫೆಬ್ರವರಿ 15, 2025 ರವರೆಗೆ ನಡೆಯಲಿದೆ.
ಮೊದಲ ಸುತ್ತಿನ ಚಲನಚಿತ್ರ ನಿರ್ಮಾಣ, ಸೃಜನಶೀಲತೆ ಮತ್ತು ತಂಡದ ಕೆಲಸಗಳ ಮೇಲೆ ಕೇಂದ್ರೀಕರಿಸುತ್ತದೆ.
ಪ್ರತಿ ವಿಭಾಗದ ಟಾಪ್ 10 ಭಾಗವಹಿಸುವವರು ಮಾರ್ಚ್ 7 ಮತ್ತು 8, 2025 ರಂದು ಮುಂಬೈನ ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್‌ನಲ್ಲಿ ಚಲನಚಿತ್ರ ನಿರ್ಮಾಪಕ ಅಮೋಲ್ ಗುಪ್ತೆ ಅವರೊಂದಿಗೆ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಶಾರ್ಟ್‌ಲಿಸ್ಟ್ ಮಾಡಿದ ತಂಡಗಳು ತಮ್ಮ ಚಲನಚಿತ್ರಗಳನ್ನು ಮರು ಚಿತ್ರೀಕರಣ ಮಾಡಿ ಮತ್ತು ಅಂತಿಮ ಆವೃತ್ತಿಯನ್ನು ಏಪ್ರಿಲ್ 15, 2025 ರೊಳಗೆ ಸಲ್ಲಿಸಬಹುದು.
ಪ್ರಶಸ್ತಿಗಳು ಮತ್ತು ಮನ್ನಣೆ
ಆಯ್ಕೆಯಾದ ಚಲನಚಿತ್ರಗಳನ್ನು ಮೀಸಲಾದ WAVES ಅಧಿವೇಶನದಲ್ಲಿ ಪ್ರದರ್ಶಿಸಲಾಗುತ್ತದೆ, ಅಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.
ಪ್ರತಿ ವಯಸ್ಸಿನ ವಿಭಾಗದ ವಿಜೇತರಿಗೆ ಉಚಿತ ಪ್ರಯಾಣ ಮತ್ತು WAVES ನಲ್ಲಿ ವಾಸ್ತವ್ಯ ನೀಡಲಾಗುವುದು.
ವಿಜೇತರಿಗೆ ಮನ್ನಣೆ, ಮಾರ್ಗದರ್ಶನ, ವಿದ್ಯಾರ್ಥಿವೇತನ ಅವಕಾಶಗಳು, ಆನ್‌ಲೈನ್ ಚಲನಚಿತ್ರ ನಿರ್ಮಾಣ ಕೋರ್ಸ್‌ಗಳಿಗೆ ಪ್ರವೇಶ ಮತ್ತು ಸಾಧನೆಯ ಪ್ರಮಾಣಪತ್ರಗಳು ಸಿಗುತ್ತವೆ.
ಎಲ್ಲಾ ಭಾಗವಹಿಸುವವರು ಯುವ ಚಲನಚಿತ್ರ ನಿರ್ಮಾಪಕರಾಗಿ ತಮ್ಮ ಬೆಳವಣಿಗೆಗೆ ಬೆಂಬಲ ನೀಡಲು ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಾರೆ.
ಉಲ್ಲೇಖಗಳು
Click here to see PDF:
*****
(Release ID: 2103963)
Visitor Counter : 19