ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇಂದ್ರ ಮತ್ತು ಅಸ್ಸಾಂನ ಎನ್‌.ಡಿ.ಎ. ಸರ್ಕಾರಗಳು ಬೋಡೋ ಸಮುದಾಯವನ್ನು ಸಬಲೀಕರಣಗೊಳಿಸಲು ಮತ್ತು ಬೋಡೋ ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುತ್ತಿವೆ, ಈ ಕಾರ್ಯಗಳು ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯುತ್ತವೆ: ಪ್ರಧಾನಮಂತ್ರಿ 

Posted On: 15 FEB 2025 4:08PM by PIB Bengaluru

ಫೆಬ್ರವರಿ 17, 2025 ರಂದು ಕೊಕ್ರಜಾರ್‌ ನಲ್ಲಿ ನಡೆಯಲಿರುವ ಐತಿಹಾಸಿಕ ಒಂದು ದಿನದ ವಿಶೇಷ ಅಸೆಂಬ್ಲಿ ಅಧಿವೇಶನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. 

ಕೇಂದ್ರ ಮತ್ತು ಅಸ್ಸಾಂನಲ್ಲಿ ಎನ್‌.ಡಿ.ಎ. ಸರ್ಕಾರಗಳು ಬೋಡೋ ಸಮುದಾಯವನ್ನು ಸಬಲೀಕರಣಗೊಳಿಸಲು ಮತ್ತು ಬೋಡೋ ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುತ್ತಿವೆ. ಮತ್ತು ಈ ಕೆಲಸಗಳು ಇನ್ನೂ ಹೆಚ್ಚಿನ ಹುರುಪಿನಿಂದ ಮುಂದುವರಿಯಲಿವೆ." ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ಕೊಕ್ರಜಾರ್‌ನಲ್ಲಿ ಒಂದು ದಿನದ ಅಸೆಂಬ್ಲಿ ಅಧಿವೇಶನದ ಕುರಿತು ಎಕ್ಸ್ ತಾಣದಲ್ಲಿ ಸಂದೇಶ ಪ್ರಕಟಿಸಿದರು, ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಕ್ಸ್‌ ತಾಣದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ;

"ಕೇಂದ್ರ ಮತ್ತು ಅಸ್ಸಾಂನಲ್ಲಿನ ಎನ್‌.ಡಿ.ಎ. ಸರ್ಕಾರಗಳು ಬೋಡೋ ಸಮುದಾಯವನ್ನು ಸಬಲೀಕರಣಗೊಳಿಸಲು ಮತ್ತು ಬೋಡೋ ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುತ್ತಿವೆ. ಈ ಕೆಲಸಗಳು ಇನ್ನೂ ಹೆಚ್ಚಿನ ಹುರುಪಿನಿಂದ ಮುಂದುವರಿಯಲಿವೆ. 

ವೈವಿಧ್ಯಮಯ ಬೋಡೋ ಸಂಸ್ಕೃತಿಗೆ ಸಾಕಾರವಾಗಿರುವ ಕೊಕ್ರಜಾರ್‌ ಗೆ ಈ ಹಿಂದೆ ಸ್ವತಃ ನೀಡಿದ ಭೇಟಿಯ ಕ್ಷಣಗಳನ್ನು ಈ ಸಂದರ್ಭದಲ್ಲಿ ಸಂತಸದಿಂದ ನಾನು ನೆನಪಿಸಿಕೊಳ್ಳುತ್ತೇನೆ.

 

 

*****


(Release ID: 2103704) Visitor Counter : 22