ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ಅನ್ವೇಷಣಾ (ಎಕ್ಸ್ ಪ್ಲೋರರ್) ಚಾಲೆಂಜ್
Posted On:
14 FEB 2025 3:37PM by PIB Bengaluru
ಭಾರತದ ರೋಮಾಂಚಕ ನಿರೂಪಣೆಗಳನ್ನು ಜಾಗತಿಕ ವೇದಿಕೆಗೆ ತರುವುದು
ಪರಿಚಯ
ವೇವ್ಸ್ ಅನ್ವೇಷಣಾ ಸವಾಲು (ಎಕ್ಸ್ ಪ್ಲೋರರ್ ಚಾಲೆಂಜ್) ಸೃಷ್ಟಿಕರ್ತರು ಮತ್ತು ಕಥೆಗಾರರಿಗೆ ಯೂಟ್ಯೂಬ್ ಶಾರ್ಟ್ಸ್ ಮೂಲಕ ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರದರ್ಶಿಸಲು ಒಂದು ರೋಮಾಂಚಕಾರಿ ಅವಕಾಶವಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿರುವ ಈ ಉಪಕ್ರಮವು ದೇಶದ ರೋಮಾಂಚಕ ಬೀದಿಗಳು, ಸಾಂಸ್ಕೃತಿಕ ಪರಂಪರೆ, ರಮಣೀಯ ಭೂದೃಶ್ಯಗಳು ಮತ್ತು ಅಮೂಲ್ಯ ಹೊರಜಗತ್ತಿಗೆ ಪರಿಚಯವಾಗದ ಗುಪ್ತ ರತ್ನಗಳನ್ನು ಸೆರೆಹಿಡಿಯಲು ಭಾಗವಹಿಸುವವರನ್ನು ಆಹ್ವಾನಿಸುತ್ತದೆ. "ದಾಖಲೆಗಾಗಿ, ಇದು ನನ್ನ ಭಾರತ" ಎಂಬ ಶೀರ್ಷಿಕಾ ವಿಷಯದ ಸುತ್ತ ಕೇಂದ್ರೀಕೃತವಾಗಿರುವ ಈ ಚಾಲೆಂಜ್ ಭಾರತದ ವೈವಿಧ್ಯತೆ, ಅಧಿಕೃತತೆ ಮತ್ತು ಸೃಜನಶೀಲ ಮನೋಭಾವವನ್ನು ಎತ್ತಿ ತೋರಿಸುವ ವಿಸ್ತಾರ ವ್ಯಾಪ್ತಿಯ ನಿರೂಪಣೆಗೆ ಕೊಡುಗೆ ನೀಡುವ ವಿಶಿಷ್ಟ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಸೃಷ್ಟಿಕರ್ತರನ್ನು ಪ್ರೋತ್ಸಾಹಿಸುತ್ತದೆ.
ಈ ಚಾಲೆಂಜ್ 2025ರ ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ನಿನಲ್ಲಿ ನಡೆಯಲಿರುವ ವಿಶ್ವ ಆಡಿಯೊ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಪ್ರಮುಖ ಉಪಕ್ರಮವಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಿನ ಭಾಗವಾಗಿದೆ. ಉದ್ಯಮದ ನಾಯಕರು, ಸೃಷ್ಟಿಕರ್ತರು ಮತ್ತು ನಾವೀನ್ಯಕಾರರನ್ನು ಒಟ್ಟುಗೂಡಿಸುವ ವೇವ್ಸ್ ಉದಯೋನ್ಮುಖ ಪ್ರವೃತ್ತಿಗಳು, ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಚರ್ಚೆಗಳನ್ನು ಪೋಷಿಸುತ್ತದೆ ಮತ್ತು ಭಾರತದ ಸೃಜನಶೀಲ ಸಾಮರ್ಥ್ಯವನ್ನು ಉತ್ತೇಜಿಸಲು ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ವೇವ್ಸ್ ನ ಹೃದಯವೇ ಆಗಿರುವ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ಸ್ ವಿಶ್ವದಾದ್ಯಂತ 70,000 ಕ್ಕೂ ಹೆಚ್ಚು ನೋಂದಣಿಗಳೊಂದಿಗೆ ಅಗಾಧ ಭಾಗವಹಿಸುವಿಕೆಯನ್ನು ಗಳಿಸಿದೆ. ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರೇರೇಪಿಸಲು ವಿನ್ಯಾಸಗೊಳಿಸಲಾದ ಈ ಸವಾಲುಗಳು ಕಥೆಗಾರರಿಗೆ ಗಡಿಗಳನ್ನು ವಿಸ್ತರಿಸಲು ಮತ್ತು ವಿಷಯ ಸೃಷ್ಟಿ/ರಚನೆಯನ್ನು ಮರುವ್ಯಾಖ್ಯಾನಿಸಲು ಅವಕಾಶ ನೀಡುತ್ತವೆ. ಇಲ್ಲಿಯವರೆಗೆ ಪ್ರಾರಂಭಿಸಲಾದ 31 ಸವಾಲುಗಳಲ್ಲಿ, 22 ಜಾಗತಿಕ ಭಾಗವಹಿಸುವಿಕೆಯನ್ನು ಆಕರ್ಷಿಸಿವೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಮುಖ ಉಪಕ್ರಮವಾಗಿ, ಸವಾಲುಗಳು ಮಾಧ್ಯಮ ಮತ್ತು ಮನರಂಜನೆಯ ಕ್ರಿಯಾತ್ಮಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತಿವೆ.
ನಿಯಮಗಳು ಮತ್ತು ಮಾರ್ಗಸೂಚಿಗಳು

ವಿಜೇತರಿಗೆ 2025ರಲ್ಲಿ YouTube ಆಯೋಜಿಸುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು.
WAVES 2025 ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷವಾದ, ಎಲ್ಲಾ ವೆಚ್ಚಗಳನ್ನು ಭರಿಸುವ ಪ್ರವಾಸ.
ವಿಜೇತ ನಮೂದುಗಳನ್ನು ಈವೆಂಟ್‌ನಲ್ಲಿ WAVES ಹಾಲ್ ಆಫ್ ಫೇಮ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ನಿಮ್ಮ ಪ್ರವೇಶವನ್ನು ಇಲ್ಲಿ ಸಲ್ಲಿಕೆ ಫಾರ್ಮ್ ಮೂಲಕ ಸಲ್ಲಿಸಿ.
ಉಲ್ಲೇಖಗಳು:
- https://wavesindia.org/challenges-2025
- https://eventsites.iamai.in/Waves/explorer/
Click here to download PDF
*****
(Release ID: 2103430)
Visitor Counter : 27