ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವೇವ್ಸ್ 2025ರಲ್ಲಿ ನಡೆಯುವ ಭಾರತದಲ್ಲಿ ಸೃಜನಶೀಲ ಸವಾಲು ಆವೃತ್ತಿ – 1ರಲ್ಲಿ   ಶಿಕ್ಷಣವು ಗೇಮಿಂಗ್ ಅನ್ನು ಎದುರುಗೊಳ್ಳಲಿದೆ


ನಿಮ್ಮ ನಗರವನ್ನು ಚೆನ್ನಾಗಿ ತಿಳಿದಿದ್ದೀರಾ?.ನಗರ ಅನ್ವೇಷಣೆ : ಭಾರತದ ಛಾಯೆ, ಆಟ ಆಡಿ ಮತ್ತು ಭಾರತೀಯ ನಗರಗಳು, ಅವುಗಳ ಸಾಧನೆಗಳು ಮತ್ತು ಸವಾಲುಗಳ ಬಗ್ಗೆ ನಿಮ್ಮ ಜ್ಞಾನಕ್ಕಾಗಿ ವೇವ್ಸ್ 2025ರಲ್ಲಿ ಮನ್ನಣೆ ಪಡೆಯಿರಿ

ಎಸ್.ಡಿ.ಜಿ ಅರಿವು ಮತ್ತು ಪ್ರಾದೇಶಿಕ ಹೆಮ್ಮೆಯನ್ನು ಉತ್ತೇಜಿಸುವ ನಗರ-ನಿರ್ದಿಷ್ಟ ಚೀಟಿಗಳೊಂದಿಗೆ ಸ್ಪರ್ಧಿಸಿ ಮತ್ತು ಕಲಿಯಿರಿ; ಜಾಗತಿಕ ಮಟ್ಟದಲ್ಲಿ 56 ಭಾರತೀಯ ನಗರಗಳ ಸಾಮರ್ಥ್ಯ ಮತ್ತು ಒಟ್ಟಾರೆ ಸುಸ್ಥಿರತೆಯ ಕಾರ್ಯಕ್ಷಮತೆಯನ್ನು ಅನ್ವೇಷಿಸಿ

ನವೀನ ಗೇಮಿಂಗ್ ಸುಸ್ಥಿರ ಅಭಿವೃದ್ಧಿಯನ್ನು ಪೂರೈಸುತ್ತದೆ: ನಗರ ಅನ್ವೇಷಣೆ – ಭಾರತದ ಛಾಯೆಯ ಐಐಟಿ ಬಾಂಬೆಯ ಇ-ಶೃಂಗಸಭೆ 2025ರಲ್ಲಿ ನಗರದ ಸುಸ್ಥಿರ ಅಭಿವೃದ್ಧಿ ಗುರಿಗಳು - ಎಸ್.ಡಿ.ಜಿ ಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲುವಂತೆ ಮಾಡಿತು, ಇದು ಯುವಜನರ ತೊಡಗಿಸಿಕೊಳ್ಳುವಿಕೆಗೆ ಚಾಲನೆ ನೀಡಿತು

Posted On: 10 FEB 2025 3:17PM by PIB Bengaluru

ನಿಮ್ಮ ನಗರದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್.ಡಿ.ಜಿ) ಪ್ರಗತಿಯ ಬಗ್ಗೆ ನಿಮಗೆ ಆಳವಾದ ಜ್ಞಾನವಿದ್ದರೆ, ರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಲ್ಪಡುವ ಅವಕಾಶ ಇಲ್ಲಿದೆ. ವಿಶ್ವ ದೃಶ್ಯ ಶ್ರವಣ ಮತ್ತು ಮನೋರಂಜನಾ ಶೃಂಗಸಭೆ (ವೇವ್ಸ್) 2025 ತಮ್ಮ ನಗರದ ಸುಸ್ಥಿರತೆಯ ಪ್ರಯತ್ನಗಳು, ಸವಾಲುಗಳು ಮತ್ತು ಸಾಧನೆಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗಳಿಗೆ ಒಂದು ಅನನ್ಯ ಅವಕಾಶವನ್ನು ನೀಡುತ್ತದೆ.

'ಸಿಟಿ ಕ್ವೆಸ್ಟ್: ಶೇಡ್ಸ್ ಆಫ್ ಭಾರತ್' ಎಂಬ ನವೀನ ಶೈಕ್ಷಣಿಕ ಆಟವು ವೇವ್ಸ್ 2025ರ ಅಡಿಯಲ್ಲಿ ನಡೆಯುತ್ತಿರುವ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌' ಪ್ರಮುಖ ಅಂಶವಾಗಿದೆ. ಈ ಆಕರ್ಷಕ ಆಟವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್.ಡಿ.ಗಳು)ನ್ನು ಗುರಿಯಾಗಿಸುವ ಮೂಲಕ ನಗರ ಅಭಿವೃದ್ಧಿಯ ಮಾಪನಗಳನ್ನು ಆಟ ಆಡುವ ಮೂಲಕ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಯುವಕರಿಗೆ ಶಿಕ್ಷಣ ನೀಡಲು ಮತ್ತು ಪ್ರೇರೇಪಿಸಲು ವಿನ್ಯಾಸಗೊಳಿಸಲಾಗಿದೆ. ಇದು ಬಾಲ್ಯದ ಟ್ರಂಪ್ ಕಾರ್ಡ್ ಆಟದ ಸಂತೋಷವನ್ನು ಮೆಲುಕು ಹಾಕುವಾಗ ದೇಶಾದ್ಯಂತ 56 ನಗರಗಳ ಸಾಮರ್ಥ್ಯ ಮತ್ತು ಸವಾಲುಗಳನ್ನು ಸಹ ಪರಿಶೋಧಿಸುತ್ತದೆ.

ವೇದಿಕೆಯು ಸುಸ್ಥಿರ ಭವಿಷ್ಯದತ್ತ ಗಮನಾರ್ಹ ದಾಪುಗಾಲು ಹಾಕುತ್ತಿರುವ ನಗರಗಳನ್ನು ಪ್ರಮುಖವಾಗಿ ಗುರುತಿಸಲು ಸ್ಥಳ ಒದಗಿಸುತ್ತದೆ. ನಗರ ಸುಸ್ಥಿರತೆಯ ಚಾಂಪಿಯನ್ ಆಗಿ ಎದ್ದು ಕಾಣಿರಿ ಮತ್ತು ನಗರದ ಎಸ್.ಡಿ.ಜಿ ಪ್ರಯಾಣದ ಬಗ್ಗೆ ನಿಮ್ಮ ಜ್ಞಾನವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯಿರಿ, ಮೇ 1-4, 2025 ರಂದು ಮುಂಬೈನಲ್ಲಿ ನಡೆಯುವ ವೇವ್ಸ್ 2025 ರಲ್ಲಿ ವಿಜೇತರನ್ನು ಸನ್ಮಾನಿಸಲಾಗುತ್ತದೆ.

ಆಟದ ಕುರಿತು 

ಸಿಟಿ ಕ್ವೆಸ್ಟ್ ಆಟವು ಸಿಂಗಲ್-ಪ್ಲೇಯರ್ ಸ್ವರೂಪದಲ್ಲಿ ತೊಡಗಿಸಿಕೊಳ್ಳುತ್ತದೆ, ಅಲ್ಲಿ ಆಟಗಾರರು ಸಿಟಿ ಕಾರ್ಡ್‌ಗಳ ಡೆಕ್ ಬಳಸಿ ಕಂಪ್ಯೂಟರ್ ಎದುರಾಳಿಯ ವಿರುದ್ಧ ಸ್ಪರ್ಧಿಸುತ್ತಾರೆ. ಪ್ರತಿ ಕಾರ್ಡ್ ಆರು ನಿಯತಾಂಕಗಳನ್ನು ಒಳಗೊಂಡಿರುತ್ತದೆ, ಇದು ಆಟಗಾರರಿಗೆ ಹಸಿವು ಸೂಚ್ಯಂಕ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಮತ್ತು ಲಿಂಗ ಸಮಾನತೆಯಂತಹ ವಿವಿಧ ಅಂಕಿಅಂಶಗಳ ಆಧಾರದ ಮೇಲೆ ನಗರಗಳನ್ನು ಹೋಲಿಸಲು ಅನುವು ಮಾಡಿಕೊಡುತ್ತದೆ. ಇದು 15 ಸುಸ್ಥಿರ ಅಭಿವೃದ್ಧಿ ಗುರಿಗಳ ಜಾಡು ಪತ್ತೆ ಮಾಡುತ್ತದೆ ಮತ್ತು ನೀತಿ ಆಯೋಗದ ನಗರ ಸೂಚ್ಯಂಕ (2021) ಬಳಸಿಕೊಂಡು 56 ನಗರಗಳಲ್ಲಿ ಅಗ್ರ ಶ್ರೆಯಾಂಕದ 6 ಎಸ್.ಡಿ.ಜಿಗಳನ್ನು ಬಳಸುತ್ತದೆ.

ಸಂವಾದಾತ್ಮಕ ಆಟದ ಮೂಲಕ, ಇದು 56 ಭಾರತೀಯ ನಗರಗಳ ಅಭಿವೃದ್ಧಿ ಸವಾಲುಗಳು ಮತ್ತು ಸಾಧನೆಗಳ ಬಗ್ಗೆ ಆಟಗಾರರಿಗೆ ಶಿಕ್ಷಣ ನೀಡುತ್ತದೆ, ಸುಸ್ಥಿರ ಅಭ್ಯಾಸಗಳ ಪ್ರಭಾವವನ್ನು ಒತ್ತಿ ಹೇಳುತ್ತದೆ. ಸಂವಾದಾತ್ಮಕವಾಗಿ ಆಟ ಆಡಲು ಅವಕಾಶ ನೀಡಲಿದ್ದು, ಇದು ಆಟಗಾರರಿಗೆ ಶಿಕ್ಷಣ ನೀಡುತ್ತದೆ.

 

 

ಆಟಗಾರರು ಸಿಟಿ ಕ್ವೆಸ್ಟ್ ಮೂಲಕ ಪ್ರತಿಯೊಂದು ನಗರದ ಗುಣಲಕ್ಷಣಗಳನ್ನು ಅನ್ವೇಷಿಸುವಾಗ, ಜಾಗತಿಕ ಮಟ್ಟದಲ್ಲಿ ಭಾರತದ ಒಟ್ಟಾರೆ ಸುಸ್ಥಿರತೆಯ ಕಾರ್ಯಕ್ಷಮತೆಯ ಮೇಲೆ ವೈಯಕ್ತಿಕ ಮತ್ತು ಸಾಮೂಹಿಕ ಕ್ರಮಗಳು ಹೇಗೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಒಳನೋಟಗಳನ್ನು ಪಡೆಯುತ್ತಾರೆ.

ಸಿಟಿ ಕ್ವೆಸ್ಟ್ ಆಟದಲ್ಲಿ ಎಲ್ಲಾ ವಯೋಮಾನದ ಎಲ್ಲಾ ವ್ಯಕ್ತಿಗಳು ಭಾಗವಹಿಸಲು ಮುಕ್ತವಾಗಿದ್ದು, ಹೊಸ ತಿರುವು ಮತ್ತು ಭಾರತದ ರೋಮಾಂಚಕ ನಗರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶದೊಂದಿಗೆ ಸಂದೇಶದ ಚೀಟಿಗಳು ಆಟದ ಅನುಭವದಲ್ಲಿ ಮುಳುಗಲು ಅವಕಾಶ ನೀಡುತ್ತದೆ. ಆಟವು ರಾಷ್ಟ್ರೀಯ ಮತ್ತು ನಗರ-ನಿರ್ದಿಷ್ಟ ನಾಯಕತ್ವದ ಫಲಕಗಳನ್ನು ಒಳಗೊಂಡಿದೆ, ಆಟಗಾರರಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸುತ್ತದೆ ಮತ್ತು ವಿವಿಧ ಪ್ರದೇಶಗಳಿಂದ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಆಟಗಾರರು ತಮ್ಮ ತವರು ನಗರಕ್ಕೆ ಸೈನ್ ಅಪ್ ಮಾಡಬಹುದು, ಸಮುದಾಯ ಮತ್ತು ಸ್ಥಳೀಯ ಹೆಮ್ಮೆಯ ಪ್ರಜ್ಞೆಯನ್ನು ಸೃಷ್ಟಿಸಬಹುದು.

ಸಿಟಿ ಕ್ವೆಸ್ಟ್: ಐಐಟಿ ಬಾಂಬೆಯ -ಶೃಂಗಸಭೆ 2025 ರಲ್ಲಿ ಆಲೋಚನೆಯ ಮನಸ್ಸು

ಸಿಟಿ ಕ್ವೆಸ್ಟ್ :ಶೇಡ್ಸ್ ಆಫ್ ಭಾರತ್’: ಇತ್ತೀಚೆಗೆ ಮುಕ್ತಾಯಗೊಂಡ ಇ-ಶೃಂಗಸಭೆ 2025ರಲ್ಲಿ, ಕಳೆದ ವಾರ ಇ-ಸೆಲ್ ಐಐಟಿ ಬಾಂಬೆಯ ವಾರ್ಷಿಕ ಪ್ರಮುಖ ಕಾರ್ಯಕ್ರಮವಾದ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು 56 ಭಾರತೀಯ ನಗರಗಳನ್ನು ಹೋಲಿಸುವ ಶಿಕ್ಷಣ-ಆಟ ಎಜು-ಗೇಮ್  ಅನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮವು ಎರಡು ದಿನಗಳಲ್ಲಿ ಅಪ್ರತಿಮ ಶಕ್ತಿ, ಉತ್ಸಾಹಭರಿತ ಮನಸ್ಸುಗಳು, ಅಂತ್ಯವಿಲ್ಲದ ಉತ್ಸಾಹ ಮತ್ತು 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಝೇಂಕರಿಸುವ ಗುಂಪನ್ನು ಹೊಂದಿತ್ತು.

 

ಐಐಟಿ ಬಾಂಬೆಯ ಇ-ಶೃಂಗಸಭೆ 2025ರಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಸಿಟಿ ಕ್ವೆಸ್ಟ್ ಮುನ್ನಡೆಸುತ್ತಿರುವ ಗೇಮಿಂಗ್ ಒಕ್ಕೂಟದ (ಇಜಿಎಫ್), ಗೇಮಿಂಗ್, ಸ್ಟಾರ್ಟ್‌ಅಪ್‌ಗಳು ಮತ್ತು ಉದಯೋನ್ಮುಖ ತಂತ್ರಜ್ಞಾನದ ಕುರಿತು ಪ್ರಮುಖ ಚರ್ಚೆಗಳನ್ನು ನಡೆಸಿತು. ಅವರ ಅವಧಿಗಳು ಆಧುನಿಕ ಉದ್ಯಮಶೀಲತೆಯಲ್ಲಿ ಗೇಮಿಂಗ್ ಉದ್ಯಮ ಮತ್ತು ನವೀನ ತಂತ್ರಜ್ಞಾನಗಳು ವಹಿಸುವ ಮಹತ್ವದ ಪಾತ್ರವನ್ನು ಬೆಳಗಿಸಿದವು.

ಶೃಂಗಸಭೆಯಲ್ಲಿ ಪ್ರಮುಖವಾಗಿ ಭಾಗವಹಿಸಿದವರಲ್ಲಿ ನಂದನ್ ನಿಲೇಕಣಿ, ಅನುಪಮ್ ಮಿತ್ತಲ್ ಮತ್ತು ಸೋನಮ್ ವಾಂಗ್ಚುಕ್ ಸೇರಿದ್ದಾರೆ. ಸಿಟಿ ಕ್ವೆಸ್ಟ್ ಐಐಟಿಬಿ ವಿದ್ಯಾರ್ಥಿಗಳು ಮತ್ತು ಸಂದರ್ಶಕರು ಗಮನ ಸೆಳೆದರು. ಮುಂಬರುವ 2025 ರ ವಿಶ್ವ ದೃಶ್ಯ ಶ್ರವಣ ಮನೋರಂಜನಾ ಶೃಂಗಸಭೆ ಮತ್ತು ಕ್ರಿಯೇಟ್ ಇನ್ ಇಂಡಿಯಾ ಆವೃತ್ತಿ 1 ಸವಾಲುಗಳ ಬಗ್ಗೆ ಸಂಚಲನ ಮೂಡಿಸಿತು.

ಬಾಂಬೆ ಐಐಟಿಯಲ್ಲಿ ಕಥೆ ಹೇಳುವ ಮೂಲಕ ಎಸ್.ಡಿ.ಜಿ ಯಲ್ಲಿ ಸಂವಾದಾತ್ಮಕವಾಗಿ ತೊಡಗಿಕೊಳ್ಳುವುದು

ಸಿಟಿ ಕ್ವೆಸ್ಟ್ ವಿದ್ಯಾರ್ಥಿಗಳಿಗೆ ಭಾರತೀಯ ನಗರಗಳ ಬಗ್ಗೆ ಸಂವಾದಾತ್ಮಕ ಕಥೆ ಹೇಳುವ ಮೂಲಕ ಮತ್ತು ಎಸ್‌ಡಿಜಿ ಜಾಗತಿಕ ಶ್ರೇಯಾಂಕಗಳಲ್ಲಿ ಭಾರತದ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಹೆಚ್ಚಿಸುವಲ್ಲಿ ದೈನಂದಿನ ಕ್ರಿಯೆಗಳ ಮೂಲಕ ಭಾರತೀಯ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯ ಪ್ರಾಮುಖ್ಯತೆಯ ಮೂಲಕ ತಲ್ಲೀನಗೊಳಿಸುವ ಅನುಭವವನ್ನು ನೀಡಿತು.

ತಮ್ಮ ಊರಿನ ರಾಯಭಾರಿಗಳಾಗಿ, ಸಿಟಿ ಕ್ವೆಸ್ಟ್ ಟ್ರಂಪ್ ಕಾರ್ಡ್‌ಗಳ ಮೂಲಕ ಪರಸ್ಪರ ಸ್ಪರ್ಧಿಸುವ ವಿದ್ಯಾರ್ಥಿಗಳ ನಡುವೆ ರೋಮಾಂಚಕಾರಿ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿತ್ತು. ಆಯ್ದ ವಿಜೇತರಿಗೆ ದಿನದ ಪ್ರತಿ ಗಂಟೆಗೆ ಸಿಟಿ ಕ್ವೆಸ್ಟ್ ಡೆಕ್‌ಗಳ ವಿಶೇಷ ಆವೃತ್ತಿಯನ್ನು ನೀಡಲಾಯಿತು.

ಶೇಡ್ಸ್ ಆಫ್ ಭಾರತ್ : ಸಿಟಿ ಕ್ವೆಸ್ಟ್ ಪ್ರಮುಖಾಂಶಗಳು

  • ನಾವೀನ್ಯತೆಯಿಂದ ಆಟ ಆಡುವುದು: ಆಟಗಾರರು ಸ್ನೇಹಪರವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ, ನಗರಗಳು ಎಸ್.ಡಿ.ಗಳನ್ನು ಸಾಧಿಸಲು ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ನಿರ್ಣಯಿಸಲು ಕಾರ್ಯತಂತ್ರದ ಚಿಂತನೆಯನ್ನು ಬಳಸುತ್ತಾರೆ, ಸಮುದಾಯದ ಪ್ರಜ್ಞೆ ಮತ್ತು ನಾಗರಿಕ ಹೆಮ್ಮೆಯನ್ನು ಬೆಳೆಸುತ್ತಾರೆ.
  • ಅಂತರವನ್ನು ತುಂಬುವುದು: ಸಿಟಿ ಕ್ವೆಸ್ಟ್, ಗೇಮಿಫಿಕೇಶನ್ ನೀತಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೇಗೆ ಪರಿಣಾಮಕಾರಿಯಾಗಿ ಸೇತುವೆಯಾಗಿ ರೂಪಿಸುತ್ತದೆ ಎಂಬುದನ್ನು ಉದಾಹರಣೆಯಾಗಿ ತೋರಿಸುತ್ತದೆ, ಇದು ಭಾರತದ ಯುವ ಸಮೂಹವನ್ನು ಸುಸ್ಥಿರ ಅಭಿವೃದ್ಧಿಯತ್ತ ಶಿಕ್ಷಣ ನೀಡಲು ಮತ್ತು ಪ್ರೇರೇಪಿಸಲು ಒಂದು ಆಕರ್ಷಕ ವಿಧಾನವನ್ನು ನೀಡುತ್ತದೆ.

ವೇವ್ಸ್ 2025

ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಮುಂಬರುವ ವಿಶ್ವ ದೃಶ್ಯ ಶ್ರವಣ ಮನೋರಂಜನಾ ಶೃಂಗಸಭೆಯ (ವೇವ್ಸ್ 2025) ದಿನಾಂಕಗಳು ಮತ್ತು ಸ್ಥಳವನ್ನು ಘೋಷಿಸಿದ್ದಾರೆ. ಸೃಜನಶೀಲ ಕೈಗಾರಿಕಾ ವಲಯದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ರೂಪಿಸಲು ಉದ್ದೇಶಿಸಿರುವ ಹೆಗ್ಗುರುತು ಕಾರ್ಯಕ್ರಮವು ಮುಂಬೈನಲ್ಲಿ ಮೇ 1, 2025 ರಿಂದ ಮೇ 4, 2025 ರವರೆಗೆ ನಡೆಯಲಿದೆ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗಿನ ವೇವ್ಸ್ ಸಲಹಾ ಮಂಡಳಿಯ ಫಲಪ್ರದ ಸಭೆಯ ನಂತರ ಘೋಷಣೆ ಮಾಡಲಾಗಿದ್ದು, ಇದು ವಿಶ್ವದ ಸೃಜನಶೀಲ ಶಕ್ತಿ ಕೇಂದ್ರವಾಗಬೇಕೆಂಬ ರಾಷ್ಟ್ರದ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಈ ಶೃಂಗಸಭೆಯು ವಿಶ್ವದ ಉನ್ನತ ಮಾಧ್ಯಮ ಸಿಇಒಗಳು, ಅತಿದೊಡ್ಡ ಮನೋರಂಜನಾ ದಿಗ್ಗಜರು ಮತ್ತು ಜಗತ್ತಿನಾದ್ಯಂತದ ಸೃಜನಶೀಲ ಮನಸ್ಸುಗಳನ್ನು ಒಟ್ಟುಗೂಡಿಸುತ್ತದೆ - ಹಿಂದೆಂದಿಗಿಂತಲೂ ಉತ್ತಮವಾಗಿ ಮನೋರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಸಂಗಮ ಇದಾಗಲಿದೆ.

 

ಆಟವು ಗೂಗಲ್ ಪ್ಲೇ ಮೂಲಕ ಆಂಡ್ರಾಯ್ಡ್ ಸಾಧನಗಳಲ್ಲಿ ಉಚಿವಾಗಿ ಲಭ್ಯವಿದೆ. ಇದು ದೇಶಾದ್ಯಂತ ಆಟಗಾರರಿಗೆ ಪ್ರಮುಖ ಸಾಮಾಜಿಕ ಸಮಸ್ಯೆಗಳೊಂದಿಗೆ ತೊಡಗಿಸಿಕೊಳ್ಳಲು ಪ್ರವೇಶಿಸಬಹುದಾದ ವೇದಿಕೆಯನ್ನು ಒದಗಿಸುತ್ತದೆ ಮತ್ತು ನಗರ ಬೆಳವಣಿಗೆ ಮತ್ತು ಸುಸ್ಥಿರತೆಯ ಸಾಮೂಹಿಕ ತಿಳುವಳಿಕೆಗೆ ಕೊಡುಗೆ ನೀಡುತ್ತದೆ.

 

*****


(Release ID: 2101410) Visitor Counter : 24