ಹಣಕಾಸು ಸಚಿವಾಲಯ
ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳಿಗಾಗಿ ವ್ಯಾಪಾರ ದಾಖಲೀಕರಣ ಮತ್ತು ಹಣಕಾಸು ಪರಿಹಾರಕ್ಕೆ ಏಕೀಕೃತ ವೇದಿಕೆಯಾಗಿ 'ಭಾರತ್ ಟ್ರೇಡ್ ನೆಟ್'ಸ್ಥಾಪನೆ: ಕೇಂದ್ರ ಬಜೆಟ್ 2025-26
ಭಾರತೀಯ ಆರ್ಥಿಕತೆಯನ್ನು ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ಏಕೀಕರಣಗೊಳಿಸಲು ದೇಶೀಯ ಉತ್ಪಾದನಾ ಸಾಮರ್ಥ್ಯಗಳ ಬಲವರ್ಧನೆ
ಉದ್ಯಮ 4.0ರ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ದೇಶೀಯ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮಕ್ಕೆ ಸರ್ಕಾರದ ಬೆಂಬಲ
ಉದಯೋನ್ಮುಖ ದ್ವಿತೀಯ ಶ್ರೇಣಿ ನಗರಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಉತ್ತೇಜಿಸಲು ರಾಜ್ಯಗಳಿಗೆ ರಾಷ್ಟ್ರೀಯ ಚೌಕಟ್ಟು
Posted On:
01 FEB 2025 1:15PM by PIB Bengaluru
ಸಬ್ ಕಾ ವಿಕಾಸ್ ಗುರಿಯನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಎಲ್ಲಾ ಪ್ರದೇಶಗಳ ಸಮತೋಲಿತ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಾ, ರಫ್ತುಗಳನ್ನು ಭಾರತದ ಪ್ರಗತಿಯ ಗಾಥೆಯ ಶಕ್ತಿಶಾಲಿ ಎಂಜಿನ್ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಇಂದು ಮಂಡಿಸಿದ ಕೇಂದ್ರ ಬಜೆಟ್ 2025-26, ದೇಶೀಯ ಉತ್ಪಾದನೆಯಲ್ಲಿ ಪರಿವರ್ತಕ ಸುಧಾರಣೆಗಳನ್ನು ಪ್ರಾರಂಭಿಸಲು ಮತ್ತು ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ಭಾರತದ ಆರ್ಥಿಕತೆಯನ್ನು ಸಂಯೋಜಿಸುವ ಉದ್ದೇಶ ಹೊಂದಿದೆ.
ಭಾರತ್ ಟ್ರೇಡ್ ನೆಟ್ (BharatTradeNet)
ವ್ಯಾಪಾರ ದಾಖಲೀಕರಣ ಮತ್ತು ಹಣಕಾಸು ಪರಿಹಾರಗಳಿಗಾಗಿ ಏಕೀಕೃತ ವೇದಿಕೆಯಾಗಿ ಅಂತಾರಾಷ್ಟ್ರೀಯ ವ್ಯಾಪಾರಕ್ಕಾಗಿನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, 'BharatTradeNet' (BTN) ಅನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಬಜೆಟ್ ಭಾಷಣದಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, "ಏಕೀಕೃತ ಸಂವಹನಾಗತ್ಮ ವೇದಿಕೆ (ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ಫಾರ್ಮ್)ಗೆ ಪೂರಕವಾಗಿ ಬಿಟಿಎನ್ ಇರಲಿದೆ ಅಂತಾರಾಷ್ಟ್ರೀಯ ಅಭ್ಯಾಸಗಳೊಂದಿಗೆ ಹೊಂದಿಕೆಯಾಗಲಿದೆ" ಎಂದು ಹೇಳಿದ್ದಾರೆ.
ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ಭಾರತದ ಆರ್ಥಿಕತೆಯ ಸಂಯೋಜನೆ
ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ಭಾರತೀಯ ಆರ್ಥಿಕತೆಯನ್ನು ಸಂಯೋಜಿಸಲು ದೇಶೀಯ ಉತ್ಪಾದನಾ ಸಾಮರ್ಥ್ಯಗಳ ವೃದ್ಧಿಗೆ ಬೆಂಬಲ ನೀಡಲಾಗುವುದು ಎಂದು ಹಣಕಾಸು ಸಚಿವರು ಕೇಂದ್ರ ಬಜೆಟ್ 2025-26 ರಲ್ಲಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ, ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ವಲಯಗಳನ್ನು ಗುರುತಿಸಲಾಗುತ್ತದೆ.
ಆಯ್ದ ಉತ್ಪನ್ನಗಳು ಮತ್ತು ಪೂರೈಕೆ ಸರಪಳಿಗಳಿಗಾಗಿ ಹಿರಿಯ ಅಧಿಕಾರಿಗಳು ಮತ್ತು ಉದ್ಯಮ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಮುನ್ನಡೆಸಬಲ್ಲ ಗುಂಪುಗಳನ್ನು ರಚಿಸಬೇಕೆಂದು ಸಹ ಪ್ರಸ್ತಾಪಿಸಲಾಗಿದೆ.
ಭಾರತದ ಯುವಕರು ಉದ್ಯಮ 4.0 ಗೆ ಸಂಬಂಧಿಸಿದ ಅವಕಾಶಗಳನ್ನು ಬಳಸಿಕೊಳ್ಳಲು ಅಗತ್ಯವಿರುವ ಉನ್ನತ ಕೌಶಲ್ಯ ಮತ್ತು ಪ್ರತಿಭೆ ಎರಡನ್ನೂ ಹೊಂದಿದ್ದಾರೆ ಎಂದು ಶ್ರೀಮತಿ. ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಮುಂದುವರಿದು, "ಯುವಕರ ಅನುಕೂಲಕ್ಕಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ದೇಶೀಯ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮಕ್ಕೆ ನಮ್ಮ ಸರ್ಕಾರ ಬೆಂಬಲ ನೀಡಲಿದೆ" ಎಂದು ಅವರು ಹೇಳಿದ್ದಾರೆ.
ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಗಾಗಿ ರಾಷ್ಟ್ರೀಯ ಚೌಕಟ್ಟು
ಉದಯೋನ್ಮುಖ 2ನೇ ಶ್ರೇಣಿ ನಗರಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಉತ್ತೇಜಿಸಲು ರಾಜ್ಯಗಳಿಗೆ ಮಾರ್ಗದರ್ಶನವಾಗಿ ರಾಷ್ಟ್ರೀಯ ಚೌಕಟ್ಟನ್ನು ರೂಪಿಸಲು ಕೇಂದ್ರ ಆಯವ್ಯಯ 2025-26 ರಲ್ಲಿ ಪ್ರಸ್ತಾಪಿಸಲಾಗಿದೆ. ಇದು ಪ್ರತಿಭೆ ಮತ್ತು ಮೂಲಸೌಕರ್ಯಗಳ ಲಭ್ಯತೆ ವೃದ್ಧಿಸಲು, ಬೈಲಾ ಸುಧಾರಣೆಗಳು ಮತ್ತು ಉದ್ಯಮದೊಂದಿಗೆ ಸಹಯೋಗಕ್ಕಾಗಿ ಕಾರ್ಯವಿಧಾನಗಳನ್ನು ಹೆಚ್ಚಿಸಲು 16 ಕ್ರಮಗಳನ್ನು ಸೂಚಿಸುತ್ತದೆ.
Click here -https://pib.gov.in/PressReleasePage.aspx?PRID=2098447
*****
(Release ID: 2098826)
Visitor Counter : 11