ಹಣಕಾಸು ಸಚಿವಾಲಯ
ಎಲ್ಲಾ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸಲಾಗುವುದು
ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಕವರ್ ಅನ್ನು 5 ಕೋಟಿಯಿಂದ 10 ಕೋಟಿಗೆ ಹೆಚ್ಚಿಸಲಾಗಿದೆ
ಉದ್ಯಮ್ ಪೋರ್ಟಲ್ ನಲ್ಲಿ ನೋಂದಾಯಿಸಲಾದ ಮೈಕ್ರೋ ಉದ್ಯಮಗಳಿಗೆ 5 ಲಕ್ಷ ಮಿತಿಯೊಂದಿಗೆ 10 ಲಕ್ಷ ವೈಯಕ್ತಿಕಗೊಳಿಸಿದ ಕ್ರೆಡಿಟ್ ಕಾರ್ಡುಗಳನ್ನು ಮೊದಲ ವರ್ಷದಲ್ಲಿ ಪರಿಚಯಿಸಲಾಗುವುದು
ನವೋದ್ಯಮಗಳಿಗಾಗಿ 10,000 ಕೋಟಿ ರೂಪಾಯಿಗಳ ಹೊಸ ನಿಧಿಯ ಸ್ಥಾಪಿಸಲಾಗುವುದು
ಮೊದಲ ಬಾರಿಗೆ ಉದ್ಯಮಿಗಳಾಗುತ್ತಿರುವ ಎಸ್.ಸಿ.ಎಸ್.ಟಿ ಹಾಗು 5 ಲಕ್ಷ ಮಹಿಳೆಯರಿಗೆ ಮುಂದಿನ 5 ವರ್ಷಗಳಲ್ಲಿ 2 ಕೋಟಿ ರೂ.ಗಳವರೆಗೆ ಸಾಲವನ್ನು ಒದಗಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು
ರಫ್ತು ಸಾಲವನ್ನು ಸುಲಭವಾಗಿ ಪಡೆಯಲು ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿನ ಸುಂಕ ರಹಿತ ಸಮಸ್ಯೆಗಳನ್ನು ನಿವಾರಿಸಲು ಎಮ್.ಎಸ್.ಎಮ್.ಇ ಗಳಿಗೆ ಸಹಾಯ ಮಾಡಲು ರಫ್ತು ಪ್ರಚಾರ ಮಿಷನ್ ಅನ್ನು ಘೋಷಿಸಲಾಯಿತು
Posted On:
01 FEB 2025 1:17PM by PIB Bengaluru
2025-26ರ ಕೇಂದ್ರ ಬಜೆಟ್ ಮುಂದಿನ ಐದು ವರ್ಷಗಳ ಅವಧಿಯನ್ನು 'ಸಬ್ಕಾ ವಿಕಾಸ್' ಅನ್ನು ಸಾಕಾರಗೊಳಿಸಲು, ಎಲ್ಲಾ ವಲಯಗಳ ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಒಂದು ಅನನ್ಯ ಅವಕಾಶವೆಂದು ಪರಿಗಣಿಸಿದೆ.
ಕೇಂದ್ರ ಬಜೆಟ್ ಎಂ.ಎಸ್.ಎಮ್.ಇ ಗಳನ್ನು ಅಭಿವೃದ್ಧಿಗೆ ಪ್ರಬಲ ಎಂಜಿನ್‌ಗಳಲ್ಲಿ ಒಂದೆಂದು ವ್ಯಾಖ್ಯಾನಿಸುತ್ತದೆ ಮತ್ತು ಪ್ರಸ್ತಾವಿತ ಅಭಿವೃದ್ಧಿ ಕ್ರಮಗಳು ಎಮ್.ಎಸ್.ಎಮ್.ಇಗಳ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬೆಂಬಲಿಸುತ್ತವೆ.
ಎಂ.ಎಸ್.ಎಮ್.ಇ ಗಳಿಗೆ ವರ್ಗೀಕರಣ ಮಾನದಂಡಗಳಲ್ಲಿ ಪರಿಷ್ಕರಣೆ
ಇಂದು ಸಂಸತ್ತಿನಲ್ಲಿ 2025-26 ರ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು " ಎಂ.ಎಸ್.ಎಮ್.ಇ ಗಳು ಹೆಚ್ಚಿನ ದಕ್ಷತೆ, ತಾಂತ್ರಿಕ ನವೀಕರಣ ಮತ್ತು ಬಂಡವಾಳಕ್ಕೆ ಉತ್ತಮ ಎಟುಕುವಿಕೆಗೆ ಸಹಾಯ ಮಾಡಲು, ಎಲ್ಲಾ ಎಮ್.ಎಸ್.ಎಮ್.ಇ ಗಳ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸಲಾಗುವುದು" ಎಂದು ಹೇಳಿದರು. ವಿವರಗಳು ಚಿತ್ರ 1 ರಲ್ಲಿವೆ.
ಇದು ನಮ್ಮ ಯುವಕರಿಗೆ ಬೆಳೆಯಲು ಮತ್ತು ಉದ್ಯೋಗವನ್ನು ಸೃಷ್ಟಿಸಲು ಅವರಿಗೆ ವಿಶ್ವಾಸವನ್ನು ನೀಡುತ್ತದೆ ಎಂದು ಅವರು ಹೇಳಿದರು.
ರೂ. ಕೋಟಿಗಳಲ್ಲಿ
|
ಹೂಡಿಕೆ
|
ವಹಿವಾಟು
|
|
ಪ್ರಸ್ತುತ
|
ಪರಿಷ್ಕರಿಸಲಾದ
|
ಪ್ರಸ್ತುತ
|
ಪರಿಷ್ಕರಿಸಲಾದ
|
ಮೈಕ್ರೋ ಉದ್ಯಮಗಳು
|
1
|
2.5
|
5
|
10
|
ಸಣ್ಣ ಉದ್ಯಮಗಳು
|
10
|
25
|
50
|
100
|
ಮಧ್ಯಮ ಉದ್ಯಮಗಳು
|
50
|
125
|
250
|
500
|
(ಚಿತ್ರ 1)
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಪ್ರಸ್ತುತ 7.5 ಕೋಟಿ ಜನರಿಗೆ ಉದ್ಯೋಗ ನೀಡುತ್ತಿರುವ ಮತ್ತು ನಮ್ಮ ಉತ್ಪಾದನೆಯಲ್ಲಿ ಶೇ. 36 ರಷ್ಟು ಕೊಡುಗೆ ನೀಡುವ ಒಂದು ಕೋಟಿಗೂ ಹೆಚ್ಚು ನೋಂದಾಯಿತ ಎಂಎಸ್‌ಎಂಇಗಳು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಈ ಎಂಎಸ್‌ಎಂಇಗಳು ತಮ್ಮ ಗುಣಮಟ್ಟದ ಉತ್ಪನ್ನಗಳೊಂದಿಗೆ ನಮ್ಮ ರಫ್ತಿನ ಶೇಕಡಾ 45 ರಷ್ಟು ಕೊಡುಗೆ ನೀಡುತ್ತಿವೆ ಎಂದು ಅವರು ಹೇಳಿದರು.
ಗ್ಯಾರಂಟಿ ಕವರ್‌ನೊಂದಿಗೆ ಸಾಲ ಲಭ್ಯತೆಯ ಗಮನಾರ್ಹ ಹೆಚ್ಚಳ
ಸಾಲದ ಲಭ್ಯತೆಯನ್ನು ಸುಧಾರಿಸಲು, ಕ್ರೆಡಿಟ್ ಗ್ಯಾರಂಟಿ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು:
ಎ) ಅತಿಸಣ್ಣ (ಮೈಕ್ರೋ) ಮತ್ತು ಸಣ್ಣ ಉದ್ಯಮಗಳಿಗೆ 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಕನಿಷ್ಠ ಸಾಲದ ಮೊತ್ತವನ್ನು ಹೆಚ್ಚಿಸಿರುವುದು, ಮುಂದಿನ 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲಗಳ ಲಭ್ಯತೆಗೆ ಕಾರಣವಾಗುತ್ತದೆ;
ಬಿ) ನವೋದ್ಯಮಗಳಿಗೆ, 10 ಕೋಟಿಯಿಂದ 20 ಕೋಟಿಗೆ, ಆತ್ಮನಿರ್ಭರ ಭಾರತಕ್ಕೆ ಪ್ರಮುಖವಾದ 27 ಕೇಂದ್ರೀಕೃತ ವಲಯಗಳಲ್ಲಿನ ಸಾಲಗಳಿಗೆ ಗ್ಯಾರಂಟಿ ಶುಲ್ಕವನ್ನು ಶೇಕಡಾ 1 ಕ್ಕೆ ಮಿತಿಗೊಳಿಸಲಾಗುತ್ತದೆ; ಮತ್ತು
ಸಿ) ಉತ್ತಮವಾಗಿ ಕಾರ್ಯನಿರ್ವಹಿಸುವ ರಫ್ತುಮಾಡುವ ಎಂಎಸ್‌ಎಂಇಗಳಿಗೆ, 20 ಕೋಟಿವರೆಗಿನ ಅವಧಿ ಸಾಲಗಳಿಗೆ.
ಮೈಕ್ರೋ ಉದ್ಯಮಗಳಿಗೆ ಕ್ರೆಡಿಟ್ ಕಾರ್ಡ್‌ಗಳು
ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೈಕ್ರೋ ಉದ್ಯಮಗಳಿಗೆ 5 ಲಕ್ಷ ಮಿತಿಯನ್ನು ಹೊಂದಿರುವ ವೈಯುಕ್ತೀಕರಿಸಿದ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಮೊದಲ ವರ್ಷದಲ್ಲಿ, ಅಂತಹ 10 ಲಕ್ಷ ಕಾರ್ಡುಗಳನ್ನು ನೀಡಲಾಗುವುದು ಎಂದು ಹೇಳಿದರು.
ನವೋದ್ಯಮಗಳಿಗೆ ನಿಧಿಗಳ ನಿಧಿ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ, “ನವೋದ್ಯಮಗಳಿಗೆ ಪರ್ಯಾಯ ಹೂಡಿಕೆ ನಿಧಿಗಳು (ಎಐಎಫ್.ಗಳು) ₹91,000 ಕೋಟಿಗೂ ಹೆಚ್ಚಿನ ಬದ್ಧತೆಯ ಒಪ್ಪಿಗೆಗಳನ್ನು ಪಡೆದಿವೆ” ಎಂದು ಹೇಳಿದರು. ಇವುಗಳಿಗೆ 10,000 ಕೋಟಿ ರೂ. ಸರ್ಕಾರದ ಸಹಾಯಧನದೊಂದಿಗೆ ಸ್ಥಾಪಿಸಲಾದ ನಿಧಿಗಳ ನಿಧಿಯಿಂದ ಬೆಂಬಲ ನೀಡಲಾಗುತ್ತದೆ'' ಈಗ ವಿಸ್ತೃತ ವ್ಯಾಪ್ತಿ ಮತ್ತು 10,000 ಕೋಟಿ ರೂ.ಗಳ ಹೊಸ ಕೊಡುಗೆಯೊಂದಿಗೆ ಹೊಸ ನಿಧಿಗಳ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ಮೊದಲ ಬಾರಿಯ ಉದ್ಯಮಿಗಳಿಗೆ ಯೋಜನೆ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿಗೆ ಉದ್ಯಮಿಗಳಾಗಿರುವ 5 ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ಇದು ಮುಂದಿನ 5 ವರ್ಷಗಳಲ್ಲಿ 2 ಕೋಟಿ ವರೆಗೆ ಅವಧಿ ಸಾಲಗಳನ್ನು ಒದಗಿಸುತ್ತದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. "ಈ ಯೋಜನೆಯು ಯಶಸ್ವಿ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯ ಪಾಠಗಳನ್ನು ಒಳಗೊಂಡಿರುತ್ತದೆ. ಉದ್ಯಮಶೀಲತೆ ಮತ್ತು ನಿರ್ವಹಣಾ ಕೌಶಲ್ಯಗಳಿಗಾಗಿ ಆನ್‌ಲೈನ್ ಸಾಮರ್ಥ್ಯ ನಿರ್ಮಾಣವನ್ನು ಸಹ ಆಯೋಜಿಸಲಾಗುವುದು."
ಡೀಪ್ ಟೆಕ್ ನಿಧಿಗಳ ನಿಧಿ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಈ ಉಪಕ್ರಮದ ಭಾಗವಾಗಿ ಮುಂದಿನ ಪೀಳಿಗೆಯ ನವೋದ್ಯಮಗಳನ್ನು ಉತ್ತೇಜಿಸಲು ನಿಧಿಗಳ ಡೀಪ್ ಟೆಕ್ (ಆಳವಾದ ತಂತ್ರಜ್ಞಾನ) ನಿಧಿಯನ್ನು ಸಹ ಪರಿಗಣಿಸಲಾಗುವುದು ಎಂದು ತಿಳಿಸಿದರು.
ರಫ್ತು ಉತ್ತೇಜನ ಮಿಷನ್
ವಾಣಿಜ್ಯ, ಎಂ.ಎಸ್.ಎಂ.ಇ ಮತ್ತು ಹಣಕಾಸು ಸಚಿವಾಲಯಗಳು ಜಂಟಿಯಾಗಿ ನಡೆಸುವ ವಲಯ ಮತ್ತು ಸಚಿವರ ಗುರಿಗಳೊಂದಿಗೆ ʼರಫ್ತು ಉತ್ತೇಜನ ಮಿಷನ್ʼ ಅನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಿದೇಶಿ ಮಾರುಕಟ್ಟೆಗಳಲ್ಲಿ ಸುಂಕ ರಹಿತ ಕ್ರಮಗಳನ್ನು ನಿಭಾಯಿಸಲು ರಫ್ತು ಕ್ರೆಡಿಟ್, ಗಡಿಯಾಚೆಗಿನ ಅಪವರ್ತನ ಬೆಂಬಲ ಮತ್ತು ಎಂ.ಎಸ್.ಎಂ.ಇಗಳಿಗೆ ಬೆಂಬಲವನ್ನು ಸುಲಭಗೊಳಿಸಲು ಮಿಷನ್ ಸಹಾಯ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.
ನವೋದ್ಯಮಗಳ ಕುರಿತ ಸಂಬಂಧಿತ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ - https://pib.gov.in/PressReleasePage.aspx?PRID=2098452
*****
(Release ID: 2098808)
Visitor Counter : 27