ಹಣಕಾಸು ಸಚಿವಾಲಯ
azadi ka amrit mahotsav

ಸರಕು ಮತ್ತು ಸೇವೆಗಳ ರಫ್ತುಗಳೆರಡೂ ಜಾಗತಿಕ ಸವಾಲುಗಳು, ಜಾಗತಿಕ ಸ್ಪರ್ಧೆ ಮತ್ತು ಹೆಚ್ಚುತ್ತಿರುವ ರಕ್ಷಣಾತ್ಮಕ ನೀತಿಯನ್ನು ಜಯಿಸುವುದರಿಂದ ಭಾರತದ ರಫ್ತುಗಳು ಶೇಕಡಾ 6 ರಷ್ಟು ಬೆಳೆಯುತ್ತವೆ: ಆರ್ಥಿಕ ಸಮೀಕ್ಷೆ 2024-25


ಜಾಗತಿಕ ಸೇವೆಗಳ ರಫ್ತಿನಲ್ಲಿ ಭಾರತದ ಪಾಲು 2005 ರಲ್ಲಿನ 1.9 ಶೇಕಡಾದಿಂದ 2023 ರಲ್ಲಿ 4.3 ಶೇಕಡಾಕ್ಕೆ ಹೆಚ್ಚಾಗುತ್ತದೆ

2024ರ ಇದೇ ಅವಧಿಗೆ ಹೋಲಿಸಿದರೆ 2025 ರ ಮೊದಲ ಎಂಟು ತಿಂಗಳ ಒಟ್ಟು ಎಫ್‌ ಡಿ ಐ 47.2 ಬಿಲಿಯನ್ ಡಾಲರ್‌ ನಿಂದ 55.6 ಬಿಲಿಯನ್ ಡಾಲರ್‌ ಗೆ ಹೆಚ್ಚಳ

ಡಿಸೆಂಬರ್ 2024 ರ ಅಂತ್ಯದ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು 640.3 ಬಿಲಿಯನ್  ಡಾಲರ್‌ ಆಗಿತ್ತು

ಭಾರತದ ಬಾಹ್ಯ ಸಾಲ ಸ್ಥಿರವಾಗಿದೆ; ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ ವಿದೇಶಿ ಸಾಲವು ಜಿಡಿಪಿ ಅನುಪಾತಕ್ಕೆ ಶೇ.19.4 ರಷ್ಟಿತ್ತು

Posted On: 31 JAN 2025 2:11PM by PIB Bengaluru

ಆರ್ಥಿಕ ಮತ್ತು ವ್ಯಾಪಾರ ನೀತಿಯ ಅನಿಶ್ಚಿತತೆಯ ಜಾಗತಿಕ ಸವಾಲುಗಳ ನಡುವೆಯೂ ಭಾರತದ ವಿದೇಶಿ ವಲಯವು ಸ್ಥಿತಿಸ್ಥಾಪಕತ್ವ ಪ್ರದರ್ಶಿಸುವುದನ್ನು ಮುಂದುವರೆಸಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2024-25 ಹೇಳುತ್ತದೆ.

ಭಾರತದ ವ್ಯಾಪಾರ ಸಾಧನೆ

2024-25ರ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಒಟ್ಟು ರಫ್ತುಗಳು (ಸರಕು ಮತ್ತು ಸೇವೆಗಳು) ಶೇಕಡಾ 6 ರಷ್ಟು ಸ್ಥಿರ ಬೆಳವಣಿಗೆಯನ್ನು ದಾಖಲಿಸಿವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಪೆಟ್ರೋಲಿಯಂ ಮತ್ತು ರತ್ನಗಳು ಮತ್ತು ಆಭರಣಗಳನ್ನು ಹೊರತುಪಡಿಸಿ ಸೇವೆಗಳು ಮತ್ತು ಸರಕುಗಳ ರಫ್ತು ಶೇಕಡಾ 10.4 ರಷ್ಟು ಹೆಚ್ಚಾಗಿದೆ. ಇದು ಭಾರತದ ಉತ್ಪಾದನೆ, ಕೃಷಿ ಮತ್ತು ಸೇವಾ ರಫ್ತುಗಳು ಜಾಗತಿಕ ಸ್ಪರ್ಧೆಯೊಂದಿಗೆ ಸ್ಪರ್ಧಿಸಲು ಸಮರ್ಥವಾಗಿವೆ ಎಂಬುದನ್ನು ಸೂಚಿಸುತ್ತದೆ. ಇದೇ ಅವಧಿಯಲ್ಲಿ ಒಟ್ಟು ಆಮದು ಶೇ.6.9ರಷ್ಟು ಬೆಳವಣಿಗೆ ದಾಖಲಿಸಿದೆ.

ಕೆಂಪು ಸಮುದ್ರದ ಬಿಕ್ಕಟ್ಟು, ಉಕ್ರೇನ್ ಯುದ್ಧ ಮತ್ತು ಪನಾಮ ಕಾಲುವೆಯಲ್ಲಿನ ಇತ್ತೀಚಿನ ಬರಗಾಲದಿಂದ ಉಂಟಾದ ಜಾಗತಿಕ ವ್ಯಾಪಾರದ ಅಡಚಣೆಗಳು, ಹಾಗೆಯೇ ಅನೇಕ ದೇಶಗಳು ತೋರಿದ ರಕ್ಷಣಾತ್ಮಕ ಪ್ರವೃತ್ತಿಗಳು ಅನಿಶ್ಚಿತತೆಯನ್ನು ಸೃಷ್ಟಿಸಿವೆ. ಅಂತರರಾಷ್ಟ್ರೀಯ ವ್ಯಾಪಾರವನ್ನು ನಿರ್ಬಂಧಿಸುವ ತೆರಿಗೆಯೇತರ ಕ್ರಮಗಳ (ಎನ್‌ ಟಿ ಎಂ) ಸಂಖ್ಯೆಯು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿದೆ. ವ್ಯಾಪಾರಕ್ಕೆ ತಾಂತ್ರಿಕ ಅಡೆತಡೆಗಳು (ಟಿಬಿಟಿ) 31.6 ಪ್ರತಿಶತ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತವೆ, ಇದು ಡಿಸೆಂಬರ್ 2024 ರ ಹೊತ್ತಿಗೆ ಜಾಗತಿಕ ವ್ಯಾಪಾರದ 67.1 ಪ್ರತಿಶತವನ್ನು ಒಳಗೊಂಡಿದೆ. ಇದು ರಫ್ತು-ಸಂಬಂಧಿತ ಕ್ರಮಗಳನ್ನು ಅನುಸರಿಸುತ್ತದೆ, ಇದು 19.3 ಪ್ರತಿಶತ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜಾಗತಿಕ ವ್ಯಾಪಾರದ 31.2 ಪ್ರತಿಶತವನ್ನು ಒಳಗೊಂಡಿದೆ. ಎನ್‌ ಟಿ ಎಂ ನಿಂದ ಹೆಚ್ಚು ಪ್ರಭಾವಿತವಾಗಿರುವ ಕ್ಷೇತ್ರಗಳಲ್ಲಿ ಕೃಷಿ, ಉತ್ಪಾದನೆ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸೇರಿವೆ.

ಮುಕ್ತ ವ್ಯಾಪಾರ ಒಪ್ಪಂದಗಳು

ಭಾರತವು ಪರಿಸ್ಥಿತಿಯನ್ನು ನಿರ್ಣಯಿಸಬೇಕಾಗಿದೆ ಮತ್ತು ಅದರ ಸಾಮರ್ಥ್ಯವನ್ನು ಬಳಸಿಕೊಳ್ಳುವ ದೂರದೃಷ್ಟಿಯ ಕಾರ್ಯತಂತ್ರದ ವ್ಯಾಪಾರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಸಮೀಕ್ಷೆ ಹೇಳಿದೆ. ಭಾರತವು ಅನೇಕ ದೇಶಗಳು ಮತ್ತು ವ್ಯಾಪಾರ ಗುಂಪುಗಳೊಂದಿಗೆ ಹಲವಾರು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಕುರಿತು ಮಾತುಕತೆ ನಡೆಸುತ್ತಿದೆ. ಉದಾಹರಣೆಗೆ, ಜವಳಿ ವಲಯದಲ್ಲಿ, ಯುಎಇ-ಭಾರತ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) (2022) ಪ್ರಮುಖ ಮಾರುಕಟ್ಟೆಯಾದ ಭಾರತಕ್ಕೆ ಜವಳಿ ಸುಂಕವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಭಾರತವು ಇಯು ಮತ್ತು ಯುಕೆಯಂತಹ ಉನ್ನತ ಆಮದುದಾರರೊಂದಿಗೆ ವ್ಯಾಪಾರ ಒಪ್ಪಂದಗಳ ಮಾತುಕತೆಯನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತವು ತನ್ನ ರಫ್ತು ಬುಟ್ಟಿಯನ್ನು ವೈವಿಧ್ಯಗೊಳಿಸಲು ಮತ್ತು ಹೊಸ ಮಾರುಕಟ್ಟೆಗಳನ್ನು ಗುರಿಯಾಗಿಸಲು ತಂತ್ರವನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಸೇವೆಗಳ ರಫ್ತು

ಭಾರತದಿಂದ ಸೇವೆಗಳ ರಫ್ತುಗಳು ಜಾಗತಿಕ ರಫ್ತುಗಳಲ್ಲಿ ಬಹು-ವಲಯಗಳ ಉಪಸ್ಥಿತಿಯನ್ನು ತೋರಿಸಿವೆ, ಹಲವಾರು ಕ್ಷೇತ್ರಗಳು ಗಮನಾರ್ಹ ಕೊಡುಗೆಗಳನ್ನು ನೀಡಿವೆ. ಜಾಗತಿಕ ಸೇವಾ ರಫ್ತಿನಲ್ಲಿ ಭಾರತದ ಪಾಲು 2005 ರಲ್ಲಿದ್ದ 1.9 ಪ್ರತಿಶತದಿಂದ 2023 ರಲ್ಲಿ ಸುಮಾರು 4.3 ಪ್ರತಿಶತಕ್ಕೆ ದುಪ್ಪಟ್ಟಾಗಿದೆ. 'ಟೆಲಿಕಾಂ, ಕಂಪ್ಯೂಟರ್ ಮತ್ತು ಮಾಹಿತಿ ಸೇವೆಗಳಲ್ಲಿ', ಭಾರತವು ಜಾಗತಿಕ ರಫ್ತು ಮಾರುಕಟ್ಟೆಯ 10.2 ಪ್ರತಿಶತವನ್ನು ಹೊಂದಿದೆ (ವಿಶ್ವದ ಎರಡನೇ ಅತಿದೊಡ್ಡ ರಫ್ತುದಾರ), ಇದು ಐಟಿ ಹೊರಗುತ್ತಿಗೆ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಡಿಜಿಟಲ್ ಸೇವೆಗಳಲ್ಲಿ ಅದರ ಬಲವಾದ ಸ್ಥಾನವನ್ನು ಪ್ರತಿಬಿಂಬಿಸುತ್ತದೆ. ದೇಶವು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಕೇಂದ್ರವಾಗಿರುವುದರಿಂದ ಮತ್ತು ಆವಿಷ್ಕಾರವನ್ನು ಮುಂದುವರೆಸುತ್ತಿರುವುದರಿಂದ, ಕೌಶಲ್ಯ ಅಭಿವೃದ್ಧಿ ಮತ್ತು ಕಾರ್ಯತಂತ್ರದ ನೀತಿ ಕ್ರಮಗಳ ಮೇಲೆ ಕೇಂದ್ರೀಕರಿಸುವುದು ಈ ಆವೇಗವನ್ನು ಉಳಿಸಿಕೊಳ್ಳಲು ಪ್ರಮುಖವಾಗಿದೆ ಎಂದು ಸಮೀಕ್ಷೆ ಹೇಳಿದೆ.

ವೃತ್ತಿಪರ ಮತ್ತು ಸಲಹಾ ಸೇವೆಗಳಲ್ಲಿನ ಪರಿಣತಿಯಿಂದಾಗಿ ಭಾರತವು ವಿಶ್ವದ ಶೇಕಡ 7.2 ರಷ್ಟು (ವಿಶ್ವದ 3 ನೇ ಅತಿದೊಡ್ಡ ರಫ್ತುದಾರರ ಸ್ಥಾನದಲ್ಲಿದೆ) ಹೊಂದಿರುವ 'ಇತರ ವ್ಯಾಪಾರ ಸೇವೆಗಳ ವಲಯ' ಕೂಡ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಜಾಗತಿಕ ಸಾರಿಗೆ ಜಾಲಗಳಲ್ಲಿ ಬೆಳವಣಿಗೆಗೆ ಅವಕಾಶಗಳಿವೆ. ಭಾರತದ ಇ-ಕಾಮರ್ಸ್ ರಫ್ತು ಗಣನೀಯವಾಗಿ ಬೆಳೆಯಲು ಮತ್ತು ದೇಶದ ಜಿಡಿಪಿಗೆ ಪ್ರಮುಖ ಕೊಡುಗೆ ನೀಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆನ್‌ಲೈನ್ ಪಾವತಿಗಳು, ಸ್ಥಳೀಯ ವಿತರಣಾ ಸೇವೆಗಳು, ಗ್ರಾಹಕರೊಂದಿಗೆ ಡೇಟಾ-ಚಾಲಿತ ಸಂವಹನಗಳು ಮತ್ತು ಡಿಜಿಟಲ್ ಮಾರ್ಕೆಟಿಂಗ್‌ ನಂತಹ ತಂತ್ರಜ್ಞಾನ-ಚಾಲಿತ ಪ್ರಗತಿಗಳ ಏರಿಕೆಯಂತಹ ವಿವಿಧ ಅಂಶಗಳಿಂದ ಇದು ನಡೆಸಲ್ಪಡುತ್ತದೆ.

ರಫ್ತುಗಳನ್ನು ಬಲಪಡಿಸುವ ಕ್ರಮಗಳು

ಲಾಜಿಸ್ಟಿಕ್ಸ್ ಹಬ್‌ ಗಳ ಅಭಿವೃದ್ಧಿ, ಮೂಲಸೌಕರ್ಯದಲ್ಲಿನ ಹೂಡಿಕೆಗಳು ಮತ್ತು ಪೂರೈಕೆ ಸರಪಳಿಯ ದಕ್ಷತೆಯನ್ನು ಸುಧಾರಿಸುವ ನೀತಿ ಸುಧಾರಣೆಗಳು ಭಾರತೀಯ ರಫ್ತು ವಲಯವನ್ನು ಹೆಚ್ಚಿಸುವ ಕ್ರಮಗಳಾಗಿವೆ. ವಿದೇಶೀ ವ್ಯಾಪಾರದ ಮಹಾನಿರ್ದೇಶನಾಲಯ (ಡಿ ಜಿ ಎಫ್‌ ಟಿ) 'ಟ್ರೇಡ್ ಕನೆಕ್ಟ್ ಇ-ಪ್ಲಾಟ್‌ಫಾರ್ಮ್' ಅನ್ನು ಪ್ರಾರಂಭಿಸಿದೆ, ಇದು ರಫ್ತುದಾರರಿಗೆ ಹೊಸ ಮಾರುಕಟ್ಟೆಗಳನ್ನು ಸೇರಿಸಲು ಅನುವು ಮಾಡಿಕೊಡುವ ಏಕ ಗವಾಕ್ಷಿ ಉಪಕ್ರಮವಾಗಿದೆ. ಇ-ಪ್ಲಾಟ್‌ಫಾರ್ಮ್ ಭಾರತೀಯ ರಫ್ತುದಾರರಿಗೆ, ವಿಶೇಷವಾಗಿ ಎಂ ಎಸ್‌ ಎಂ ಇ ಗಳಿಗೆ ಅಂತರರಾಷ್ಟ್ರೀಯ ವ್ಯಾಪಾರದ ಸನ್ನಿವೇಶವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. ಎಂ ಎಸ್‌ ಎಂ ಇ ಸಚಿವಾಲಯ, ಎಕ್ಸಿಂ ಬ್ಯಾಂಕ್, ಹಣಕಾಸು ಸೇವೆಗಳ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಪ್ರಮುಖ ಪಾಲುದಾರರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಪ್ಲಾಟ್‌ಫಾರ್ಮ್ ರಫ್ತುದಾರರಿಗೆ ಸಮಗ್ರ ಬೆಂಬಲ, ಸಂಪನ್ಮೂಲಗಳು ಮತ್ತು ನಿರ್ಣಾಯಕ ವ್ಯಾಪಾರ-ಸಂಬಂಧಿತ ಮಾಹಿತಿಗೆ ನೈಜ-ಸಮಯದ ಪ್ರವೇಶವನ್ನು ನೀಡುವ ಮೂಲಕ ಮಾಹಿತಿ ಅಸಮಾನತೆಯನ್ನು ಹೋಗಲಾಡಿಸುತ್ತದೆ.

ವಿದೇಶಿ ನೇರ ಹೂಡಿಕೆ (ಎಫ್ಡಿ )

2025 ನೇ ಹಣಕಾಸು ವರ್ಷದ ಮೊದಲ ಎಂಟು ತಿಂಗಳುಗಳಲ್ಲಿ ಎಫ್‌ ಡಿ ಐ ಒಳಹರಿವು ಸುಧಾರಣೆಯ ಲಕ್ಷಣಗಳನ್ನು ತೋರಿಸಿದೆ. ಆದಾಗ್ಯೂ ವಾಪಸಾತಿ/ಹೂಡಿಕೆಯಲ್ಲಿನ ಹೆಚ್ಚಳದಿಂದಾಗಿ ಏಪ್ರಿಲ್-ನವೆಂಬರ್ 2023 ಕ್ಕೆ ಹೋಲಿಸಿದರೆ ನಿವ್ವಳ ಎಫ್‌ ಡಿ ಐ ಒಳಹರಿವುಗಳಲ್ಲಿ ಇಳಿಕೆ ಕಂಡುಬಂದಿದೆ. 2024 ರ ಮೊದಲ ಎಂಟು ತಿಂಗಳಲ್ಲಿ 47.2 ಶತಕೋಟಿ ಡಾಲರ್‌ ನಿಂದ 2025 ರ ಅದೇ ಅವಧಿಯಲ್ಲಿ 55.6 ಶತಕೋಟಿ ಡಾಲರ್‌ ಗೆ ಒಟ್ಟು ಎಫ್‌ ಡಿ ಐ ಒಳಹರಿವು ವರ್ಷದಿಂದ ವರ್ಷಕ್ಕೆ 17.9 ಶೇಕಡಾ ಹೆಚ್ಚಳವಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ದೀರ್ಘಾವಧಿಯಲ್ಲಿ, ಭಾರತಕ್ಕೆ ಎಫ್‌ ಡಿ ಐ ಒಳಹರಿವು ಏಪ್ರಿಲ್ 2000 ರಿಂದ ಸೆಪ್ಟೆಂಬರ್ 2024 ರವರೆಗೆ 1 ಟ್ರಿಲಿಯನ್ ಗಡಿ ದಾಟುವ ನಿರೀಕ್ಷೆಯಿದೆ, ಇದು ಸುರಕ್ಷಿತ ಮತ್ತು ಪ್ರಮುಖ ಜಾಗತಿಕ ಹೂಡಿಕೆ ತಾಣವಾಗಿ ದೇಶದ ಸ್ಥಾನವನ್ನು ಬಲಪಡಿಸಿದೆ.

2025 ನೇ ಸಾಲಿನ ಅರ್ಧವಾರ್ಷಿಕದ ಒಟ್ಟು ಇಕ್ವಿಟಿ ಒಳಹರಿವಿನ ಅತಿ ಹೆಚ್ಚು 19.1 ಪ್ರತಿಶತದಷ್ಟು ಎಫ್‌ ಡಿ ಐ ಅನ್ನು ಸೇವಾ ವಲಯವು ಸ್ವೀಕರಿಸಿದೆ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಇತರ ಪ್ರಮುಖ ಕ್ಷೇತ್ರಗಳೆಂದರೆ ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ (ಶೇ. 14.1) ಟ್ರೇಡಿಂಗ್ (ಶೇ. 9.1), ಅಸಾಂಪ್ರದಾಯಿಕ ಇಂಧನ (7 ಪ್ರತಿಶತ) ಮತ್ತು ಸಿಮೆಂಟ್ ಮತ್ತು ಜಿಪ್ಸಮ್ ಉತ್ಪನ್ನಗಳು (6.1 ಪ್ರತಿಶತ). ಹಣದುಬ್ಬರದ ಒತ್ತಡಗಳು, ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿನ ಬಡ್ಡಿದರಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಅಂಶಗಳಿಂದ ನಡೆಸಲ್ಪಡುವ ಜಾಗತಿಕ ಮಾರುಕಟ್ಟೆಗಳಲ್ಲಿ ಅಲ್ಪಾವಧಿಯ ಚಂಚಲತೆಯ ಹೊರತಾಗಿಯೂ, ಭಾರತದಲ್ಲಿ ಎಫ್‌ ಡಿ ಐ ಗಾಗಿ ದೀರ್ಘಾವಧಿಯ ದೃಷ್ಟಿಕೋನವು ಅನುಕೂಲಕರವಾಗಿದೆ ಎಂದು ಸಮೀಕ್ಷೆ ಹೇಳಿದೆ. ಭಾರತದ ಬಲವಾದ ಆರ್ಥಿಕ ಮೂಲಭೂತ ಅಂಶಗಳು, ನಡೆಯುತ್ತಿರುವ ರಚನಾತ್ಮಕ ಸುಧಾರಣೆಗಳು ಮತ್ತು ಬೆಳೆಯುತ್ತಿರುವ ಗ್ರಾಹಕ ಮಾರುಕಟ್ಟೆಯು ವಿದೇಶಿ ಹೂಡಿಕೆಗೆ ಪ್ರಮುಖ ತಾಣವಾಗಿದೆ ಎಂದು ಸಮೀಕ್ಷೆಯು ಒತ್ತಿಹೇಳಿದೆ.

ಭಾರತಕ್ಕೆ ಎಫ್‌ ಡಿ ಐ ಕಡಿಮೆಯಾಗುತ್ತಿರುವ ಕುರಿತು ಇತ್ತೀಚಿನ ಕಳವಳವನ್ನು ತಳ್ಳಿಹಾಕುವ  ಸಮೀಕ್ಷೆಯು ಜಾಗತಿಕವಾಗಿ ಎಫ್‌ ಡಿ ಐ ಹರಿವಿಗೆ ಆರ್ಥಿಕ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಎರವಲು ವೆಚ್ಚಗಳಿಂದ ಅಡಚಣೆಯಾಗಿದೆ ಎಂದು ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ ಎಂದು ಹೇಳಿದೆ. ಹೂಡಿಕೆದಾರರ ನಂಬಿಕೆಯನ್ನು ಪ್ರತಿಬಿಂಬಿಸುವ ಭಾರತದ ಬಲವಾದ ಷೇರು ಮಾರುಕಟ್ಟೆಯ ಕಾರಣದಿಂದ ಅಂತರರಾಷ್ಟ್ರೀಯ ಕಂಪನಿಗಳು ದ್ವಿತೀಯ ಮಾರಾಟ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆಗಳ ಮೂಲಕ ಹೂಡಿಕೆಯಿಂದ ಆದಾಯವನ್ನು ಪಡೆದಿರುವುದರಿಂದ ಒಟ್ಟು ಎಫ್‌ ಡಿ ಐ ಒಳಹರಿವು ಮತ್ತು ವಾಪಸಾತಿಯಲ್ಲಿ ಹೆಚ್ಚಳವಾಗಿದೆ ಎಂದು ಅದು ಹೇಳಿದೆ. ಭಾರತೀಯ ಬಂಡವಾಳ ಮಾರುಕಟ್ಟೆಯ ಆಳ ಮತ್ತು ದೃಢತೆಯು ನೇರ ಹೂಡಿಕೆದಾರರಿಗೆ ಲಾಭದಾಯಕ ನಿರ್ಗಮನವನ್ನು ಒದಗಿಸುತ್ತದೆ, ಇದರಿಂದಾಗಿ ಭವಿಷ್ಯದ ಹೂಡಿಕೆಯನ್ನು ಉತ್ತೇಜಿಸುತ್ತದೆ ಎಂದು ಸಮೀಕ್ಷೆ ಒತ್ತಿಹೇಳಿದೆ.

ಚಾಲ್ತಿ ಖಾತೆ ಕೊರತೆ (ಸಿಎಡಿ)

ಭಾರತವು ಚಾಲ್ತಿ ಖಾತೆ ಕೊರತೆಯನ್ನು ಹೊಂದಿದ್ದು, ಅದರ ಆರ್ಥಿಕತೆಯ ಗಾತ್ರವನ್ನು ಗಮನಿಸಿದರೆ ಅದರ ಹೂಡಿಕೆಯ ಅಗತ್ಯತೆಗಳು ದೊಡ್ಡದಾಗಿರುವುದರಿಂದ, ಸಮಂಜಸವಾದ ದೊಡ್ಡ ವಿದೇಶಿ ಉಳಿತಾಯದೊಂದಿಗೆ ದೇಶೀಯ ಉಳಿತಾಯವನ್ನು ಸೇರಿಸುವುದು ಬಂಡವಾಳ ರಚನೆಗೆ ಸಹಾಯ ಮಾಡುತ್ತದೆ ಎಂದು ಸಮೀಕ್ಷೆಯು ಸೂಚಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳು ಸಹ ಹೂಡಿಕೆಯನ್ನು ಆಕರ್ಷಿಸುತ್ತಿವೆ ಮತ್ತು ಭಾರತವು ಇತರ ಉದಯೋನ್ಮುಖ ಆರ್ಥಿಕತೆಗಳೊಂದಿಗೆ ಸ್ಪರ್ಧಿಸುತ್ತಿಲ್ಲ ಎಂದು ಸಮೀಕ್ಷೆಯು ಸೂಚಿಸಿದೆ, ಎಫ್‌ ಡಿ ಐ ಅನ್ನು ಆಕರ್ಷಿಸಲು ಮತ್ತು ವಿದೇಶಿ ಹೂಡಿಕೆದಾರರಿಗೆ ತನ್ನನ್ನು ಹೆಚ್ಚು ಆಕರ್ಷಕವಾಗಿಸಲು ಭಾರತವು ಹೆಚ್ಚಿನದನ್ನು ಮಾಡಬೇಕಾಗಿದೆ ಮತ್ತು ಹೂಡಿಕೆಗೆ ಇರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಬೇಕು ಲಭ್ಯವಿರುವ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆಗಳನ್ನು ಹೆಚ್ಚು ಲಾಭದಾಯಕವಾಗಿಸಲು ಅನಿಯಂತ್ರಣ ಮತ್ತು ವ್ಯಾಪಾರವನ್ನು ಸುಲಭಗೊಳಿಸುವ ಮೂಲಕ ಹೂಡಿಕೆಯ ದಕ್ಷತೆಯನ್ನು ಸುಧಾರಿಸಬೇಕು ಎಂದು ತಿಳಿಸಿದೆ.

ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆ (ಎಫ್‌ ಪಿ ಐ)

ಎಫ್‌ ಪಿ ಐ ಗಳಿಗೆ ಸಂಬಂಧಿಸಿದಂತೆ, 2025ನೇ ಹಣಕಾಸು ವರ್ಷವು ಇದುವರೆಗೆ ಮಿಶ್ರ ಪ್ರವೃತ್ತಿಯನ್ನು ಕಂಡಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಗಳಿಕೆಯ ಬೆಳವಣಿಗೆಯಲ್ಲಿನ ನಿಧಾನಗತಿ, ಹೆಚ್ಚಿನ ಮೌಲ್ಯಮಾಪನಗಳು, ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಚೀನಾದಲ್ಲಿನ ಇತ್ತೀಚಿನ ಬೆಳವಣಿಗೆಗಳಂತಹ ಅಂಶಗಳಿಂದಾಗಿ ಎಫ್‌ ಪಿ ಐ ಗಳು ಭಾರತೀಯ ಷೇರುಗಳಿಂದ ಗಮನಾರ್ಹ ಹಣವನ್ನು ಹಿಂತೆಗೆದುಕೊಂಡಿವೆ ಎಂದು ಸಮೀಕ್ಷೆಯು ಗಮನಿಸಿದೆ. ಹೆಚ್ಚುವರಿಯಾಗಿ, ಭಾರತದ ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಅನುಕೂಲಕರ ವ್ಯಾಪಾರ ವಾತಾವರಣ ಮತ್ತು ಬಲವಾದ ಆರ್ಥಿಕ ಬೆಳವಣಿಗೆಯು ಹೂಡಿಕೆದಾರರನ್ನು ಹೊರಹರಿವಿನ ಪ್ರವೃತ್ತಿಯಿಂದ ಹಿಮ್ಮೆಟ್ಟಿಸಲು ಪ್ರೋತ್ಸಾಹಿಸಿದೆ ಎಂದು ಅದು ಹೇಳಿದೆ.

ವಿದೇಶಿ ವಿನಿಮಯ ಮೀಸಲು

ಭಾರತದ ವಿದೇಶಿ ವಿನಿಮಯ ಸಂಗ್ರಹದ ಕುರಿತು ಹೇಳಿರುವ ಆರ್ಥಿಕ ಸಮೀಕ್ಷೆಯು ಡಿಸೆಂಬರ್ 2024 ರ ಅಂತ್ಯದ ವೇಳೆಗೆ 640.3 ಬಿಲಿಯನ್‌ ಡಾಲರ್‌ ನಷ್ಟಿದೆ ಎಂದು ಹೇಳಿದೆ. ಸೆಪ್ಟೆಂಬರ್ 2024 ರ ವೇಳೆಗೆ ದೇಶದ 711.8 ಬಿಲಿಯನ್‌ ಡಾಲರ್‌ ವಿದೇಶಿ ಸಾಲದ ಸುಮಾರು 90 ಪ್ರತಿಶತವನ್ನು ಸರಿದೂಗಿಸಲು ಮೀಸಲು ಸಾಕಾಗುತ್ತದೆ ಎಂದು ಅದು ಹೇಳಿದೆ.

ಬಾಹ್ಯ ಸಾಲ

ಕಳೆದ ಕೆಲವು ವರ್ಷಗಳಿಂದ ಭಾರತದ ಬಾಹ್ಯ ಸಾಲವು ಸ್ಥಿರವಾಗಿದೆ ಎಂದು ಎತ್ತಿ ತೋರಿಸುತ್ತಿರುವ ಆರ್ಥಿಕ ಸಮೀಕ್ಷೆಯು, ಪ್ರಪಂಚದ ಉಳಿದ ಭಾಗಗಳು ಭೌಗೋಳಿಕ ರಾಜಕೀಯ ಸವಾಲುಗಳಿಂದ ಪ್ರಭಾವಿತವಾಗಿರುವ ಸಮಯದಲ್ಲಿ ಬಾಹ್ಯ ವಲಯದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡಿದೆ ಎಂದು ಹೇಳುತ್ತದೆ. ಜಿಡಿಪಿ ಅನುಪಾತಕ್ಕೆ ಬಾಹ್ಯ ಸಾಲವು ಜೂನ್ 2024 ರ ಅಂತ್ಯದ ವೇಳೆಗೆ ಜಿಡಿಪಿಯ ಶೇಕಡಾ 18.8 ರಿಂದ ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ ಶೇಕಡಾ 19.4 ಕ್ಕೆ ಸ್ವಲ್ಪ ಏರಿಕೆಯಾಗಿದೆ, ಹಾಗೆಯೇ ವಿದೇಶಿ ವಿನಿಮಯ ಮೀಸಲುಗಳ ಅನುಪಾತವು ಜೂನ್ 2024 ರ ಅಂತ್ಯದ ವೇಳೆಗೆ 20.3 ಶೇಕಡಾದಿಂದ ಸೆಪ್ಟೆಂಬರ್ 2024 ರ ಅಂತ್ಯದ ವೇಳೆಗೆ ಶೇಕಡಾ 18.9 ಕ್ಕೆ ಕಡಿಮೆಯಾಗಿದೆ.

 

*****

 


(Release ID: 2098270) Visitor Counter : 14