ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

1ನೇ ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆಗೆ ಮುಂಚಿತವಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪ್ರಭಾವಶಾಲಿಗಳು, ಪಾಡ್ಕಾಸ್ಟರ್ಗಳು, ಅನಿಮೇಷನ್ ತಯಾರಕರು ಮತ್ತು ಗೇಮ್ ಡೆವಲಪರ್ಗಳು ಮುಂತಾದ ವಿಷಯ ಸೃಷ್ಟಿಕರ್ತರಿಗೆ ಉನ್ನತ ಪ್ರಶಸ್ತಿಗಳನ್ನು ಘೋಷಿಸಿದೆ


ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಅವರು ಸೃಜನಶೀಲ ವಿಷಯಗಳೊಂದಿಗೆ ವ್ಯವಹರಿಸುವ ಸೃಷ್ಟಿಕರ್ತರು ಮತ್ತು ಸಂಸ್ಥೆಗಳನ್ನು ಒಟ್ಟುಗೂಡಿಸಲು ಇ-ಮಾರ್ಕೆಟ್ ಪ್ಲೇಸ್ ವೇವ್ಸ್ ಬಜಾರ್ ಅನ್ನು ಪ್ರಾರಂಭಿಸಿದರು

ಕ್ಲಾಸಿಕಲ್ ಮತ್ತು ಸೆಮಿ ಕ್ಲಾಸಿಕಲ್ ಮ್ಯೂಸಿಕ್ ಚಾಲೆಂಜ್ 'ವಾಹ್ ಉಸ್ತಾದ್' ಮತ್ತು ಖಾದಿ ಪ್ರಚಾರ ಸೇರಿದಂತೆ ಇನ್ನೂ ಮೂರು ಚಾಲೆಂಜ್ ಗಳನ್ನು ವೇವ್ಸ್ ಗಾಗಿ ಪ್ರಾರಂಭಿಸಲಾಗಿದೆ. ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆ ಪ್ರಚಾರ ವಿಷಯ ಸವಾಲನ್ನು ಸಹ ಘೋಷಿಸಲಾಗಿದೆ

ಭಾರತವನ್ನು ವಿಷಯ ರಚನೆಯ ಜಾಗತಿಕ ರಾಜಧಾನಿಯಾಗಿಸಲು ವೇವ್ಸ್; ವಿವೇಕಾನಂದರ ಪರಂಪರೆಯನ್ನು ಪ್ರತಿಧ್ವನಿಸುವ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಪ್ರಾಮುಖ್ಯತೆಗೆ ಎತ್ತರಿಸಲಾಗುತ್ತಿದೆ: ಶ್ರೀ ಅಶ್ವಿನಿ ವೈಷ್ಣವ್

ವೇವ್ಸ್ ಕಲಾ ಪ್ರೇಮಿಗಳಿಗೆ ಒಂದು ಪ್ರಮುಖ ವೇದಿಕೆಯಾಗಿದೆ ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದ ಮುಂದೆ ನಿರೂಪಿಸಲು ಭಾರತೀಯ ಸೃಷ್ಟಿಕರ್ತರನ್ನು ಪ್ರೇರೇಪಿಸುತ್ತದೆ: ಶ್ರೀ ಗಜೇಂದ್ರ ಶೇಖಾವತ್

Posted On: 27 JAN 2025 7:22PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಹೊಸದಿಲ್ಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡುವ ಮೂಲಕ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂದು ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಗೆ ಮುಂಚಿತವಾಗಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿತು.

ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಸಂಸ್ಕೃತಿ ಸಚಿವಾಲಯ. ಕಾರ್ಯದರ್ಶಿ ಶ್ರೀ ಅರುಣೀಶ್ ಚಾವ್ಲಾ, ಭಾರತೀಯ ಚಲನಚಿತ್ರ ನಿರ್ಮಾಪಕ ಶ್ರೀ ಶೇಖರ್ ಕಪೂರ್ ಮತ್ತು ಪ್ರಸಾರ ಭಾರತಿ ಸಿಇಒ ಶ್ರೀ ಗೌರವ್ ದ್ವಿವೇದಿ ಕೂಡ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತವನ್ನು ಸೃಷ್ಟಿಕರ್ತ ಆರ್ಥಿಕತೆಯ ಜಾಗತಿಕ ರಾಜಧಾನಿಯಾಗಿ ಪರಿವರ್ತಿಸುವುದು

ದಾವೋಸ್ ಆರ್ಥಿಕ ವೇದಿಕೆಯಂತೆಯೇ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯನ್ನು (ವೇವ್ಸ್) ಜಾಗತಿಕ ಖ್ಯಾತಿಯ ಶೃಂಗಸಭೆಯಾಗಿ ಸ್ಥಾಪಿಸುವ ಪ್ರಧಾನಿಯವರ ದೃಷ್ಟಿಕೋನವನ್ನು ಪ್ರತಿಧ್ವನಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು, ಈ ಪ್ರಯತ್ನವು ಸಂಪ್ರದಾಯ, ಕಥೆ ಹೇಳುವಿಕೆ ಮತ್ತು ಸಾಂಸ್ಕೃತಿಕ ಮಹತ್ವದಿಂದ ಸಮೃದ್ಧವಾಗಿರುವ ಭಾರತದ ಸೃಜನಶೀಲ ಆರ್ಥಿಕತೆಯನ್ನು ಎತ್ತಿ ತೋರಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ ಎಂದು ಉಲ್ಲೇಖಿಸಿದರು.ಇವುಗಳನ್ನು ಜಾಗತಿಕ ಮಟ್ಟದಲ್ಲಿ ಕಿತ್ತಳೆ ಆರ್ಥಿಕತೆಯ ಸಲಕರಣೆಗಳು ಎಂದು ಪರಿಗಣಿಸಲಾಗಿದೆ.

"ಒಂದು ಕಾಲದಲ್ಲಿ ಸ್ವಾಮಿ ವಿವೇಕಾನಂದರ ಮೂಲಕ ಚಿಕಾಗೋ ವಿಶ್ವ ಮೇಳದ ಸಭಾಂಗಣಗಳಲ್ಲಿ ಪ್ರತಿಧ್ವನಿಸಿದ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಇಂದು ನಮ್ಮ ಪ್ರಧಾನಿಯವರು ಯೋಗ, ಸಂಸ್ಕೃತಿ, ಸೃಜನಶೀಲತೆ ಮತ್ತು ಆಯುರ್ವೇದದಂತಹ ಉಪಕ್ರಮಗಳ ಮೂಲಕ ಜಾಗತಿಕ ವೇದಿಕೆಯಲ್ಲಿ ಮುನ್ನಡೆಸುತ್ತಿದ್ದಾರೆ" ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು. "ವೇವ್ಸ್ ಪ್ರಯತ್ನದ ವಿಸ್ತರಣೆಯಾಗಿದ್ದು, ಭಾರತವನ್ನು ಸೃಷ್ಟಿಕರ್ತ ಆರ್ಥಿಕತೆಯ ಜಾಗತಿಕ ರಾಜಧಾನಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ" ಎಂದು ಅವರು ಹೇಳಿದರು.

ಕೇಂದ್ರ ಸಚಿವರು ವೇವ್ಸ್ ಬಜಾರ್, 3 ಕ್ರಿಯೇಟ್ ಇನ್ ಇಂಡಿಯಾ ಸವಾಲುಗಳು (ಚಾಲೆಂಜ್ಸ್) , ವೇವ್ಸ್ ಅವಾರ್ಡ್ಸ್ ಗೆ ಚಾಲನೆ ನೀಡಿದರು ಮತ್ತು ಇನ್ನೊಂದು  ಸವಾಲನ್ನು ಘೋಷಿಸಿದರು.

ವೇವ್ಸ್ ಬಜಾರ್: ಸೃಜನಶೀಲ ಆರ್ಥಿಕತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು

ಕಾರ್ಯಕ್ರಮವು ವೇವ್ಸ್ ಬಜಾರ್ - ಗ್ಲೋಬಲ್ ಇ-ಮಾರ್ಕೆಟ್ ಪ್ಲೇಸ್ ಅನಾವರಣಕ್ಕೆ ಸಾಕ್ಷಿಯಾಯಿತು, ಇದು ಭಾರತದ ವಿಶಾಲ ಸೃಜನಶೀಲ ಪ್ರತಿಭೆಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾದ ಅದ್ಭುತ ವೇದಿಕೆಯಾಗಿದೆ. ಪ್ಲಾಟ್ಫಾರ್ಮ್ ಬಳಕೆದಾರರಿಗೆ ತಮ್ಮ ವಿಷಯವನ್ನು ಪ್ರದರ್ಶಿಸಲು, ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಪಿಚ್ ಯೋಜನೆಗಳನ್ನು ರೂಪಿಸಲು ಮತ್ತು ಭೌಗೋಳಿಕ ಗಡಿಗಳನ್ನು ಮೀರುವ ಅರ್ಥಪೂರ್ಣ ಸಂಪರ್ಕಗಳನ್ನು ನಿರ್ಮಿಸಲು ಇದು ಅನುವು ಮಾಡಿಕೊಡುತ್ತದೆ. ಇದು ಸೂಕ್ತವಾದ ಸಾಧನಗಳು ಮತ್ತು ಸಂಪನ್ಮೂಲಗಳನ್ನು ನೀಡುವ ಮೂಲಕ ಜಾಗತಿಕ ವ್ಯಾಪಾರ ಸಂವಹನಗಳನ್ನು ಸರಳಗೊಳಿಸುತ್ತದೆ, ಸೃಷ್ಟಿಕರ್ತರು ಮತ್ತು ವ್ಯವಹಾರೋದ್ಯಮಗಳಿಗೆ ಬೆಳವಣಿಗೆ ಮತ್ತು ಯಶಸ್ಸಿಗೆ ಹೊಸ ಅವಕಾಶಗಳನ್ನು ಕಂಡುಹಿಡಿಯುವಾಗ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.

ವೇವ್ಸ್ ಬಜಾರ್ ಚಲನಚಿತ್ರ, ಟಿವಿ, ಸಂಗೀತ, ಕ್ರೀಡೆ, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ನಂತಹ ವಿವಿಧ ಮನರಂಜನಾ ಕ್ಷೇತ್ರಗಳ ಸೃಷ್ಟಿಕರ್ತರು, ಖರೀದಿದಾರರು ಮತ್ತು ಸಹಯೋಗಿಗಳನ್ನು ಒಂದುಗೂಡಿಸುವ ಪರಿವರ್ತಕ ವೇದಿಕೆಯಾಗಿದೆ ಎಂದು ಸಂದರ್ಭದಲ್ಲಿ ಮಾತನಾಡಿದ ಐ &ಬಿ ಕಾರ್ಯದರ್ಶಿ ಉಲ್ಲೇಖಿಸಿದರು. ಇದು ಭೌಗೋಳಿಕ ಅಂತರಗಳನ್ನು ಕಡಿಮೆ ಮಾಡುತ್ತದೆ, ಸೃಷ್ಟಿಕರ್ತರಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಅರ್ಥಪೂರ್ಣ  ಬಿ 2 ಬಿ ಸಂವಹನಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ವೇವ್ಸ್ ಬಜಾರ್ ಬ್ರಾಂಡ್ ಸಹಯೋಗ, ಧನಸಹಾಯ ಮತ್ತು ವಿತರಣೆಯನ್ನು ಸಹ ಬೆಂಬಲಿಸುತ್ತದೆ, ಸೃಷ್ಟಿಕರ್ತರು ತಮ್ಮ ಆಲೋಚನೆಗಳನ್ನು ಸಾಕಾರಗೊಳಿಸಲು ಅಗತ್ಯವಾದ ಬೆಂಬಲವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಸಮಗ್ರ ಇ-ಮಾರುಕಟ್ಟೆ ಭಾರತದಲ್ಲಿ ಉದಯೋನ್ಮುಖ ಸೃಜನಶೀಲ ಆರ್ಥಿಕತೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪ್ರಮುಖ ಸಾಧನವಾಗಿದೆ. ಈ ವೇದಿಕೆಯು ವಿಷಯ ಸೃಷ್ಟಿಕರ್ತರಿಗೆ ತಮ್ಮ ಉತ್ಪನ್ನಗಳು, ಆಲೋಚನೆಗಳು ಮತ್ತು ಕೌಶಲ್ಯಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

ವೇವ್ಸ್ ಪ್ರಶಸ್ತಿಗಳು

ವೇವ್ಸ್ ಪ್ರಶಸ್ತಿಗಳು ಫೆಬ್ರವರಿ 15, 2025 ರಂದು ನಾಮನಿರ್ದೇಶನಗಳೊಂದಿಗೆ ಪ್ರಾರಂಭವಾಗಲಿವೆ. ವಿವಿಧ ಸೃಜನಶೀಲ ವಿಭಾಗಗಳಲ್ಲಿ ಶ್ರೇಷ್ಠತೆಯನ್ನು ಕೊಂಡಾಡುವ ವೇವ್ಸ್ ಪ್ರಶಸ್ತಿಗಳು ಗೇಮ್ ಆಫ್ ದಿ ಇಯರ್, ಫಿಲ್ಮ್ ಆಫ್ ದಿ ಇಯರ್ ಮತ್ತು ವರ್ಷದ ಜಾಹೀರಾತು ಅಭಿಯಾನದಂತಹ ವಿಭಾಗಗಳನ್ನು ಒಳಗೊಂಡಿವೆ. ಜೀವಮಾನದ ಸಾಧನೆಗಳು ಮತ್ತು ತಂತ್ರಜ್ಞಾನ ಹಾಗು  ಸಾಮಾಜಿಕ ಪ್ರಭಾವದಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಪರಿಣಾಮಗಳನ್ನು ಗೌರವಿಸುವ ವಿಶೇಷ ಆಯ್ಕೆ ಪ್ರಶಸ್ತಿಗಳನ್ನು ಈ ಪ್ರಶಸ್ತಿಗಳು ಒಳಗೊಂಡಿವೆ.

ಕ್ರಿಯೇಟ್ ಇನ್ ಇಂಡಿಯಾ ಸವಾಲುಗಳ ಅಡಿಯಲ್ಲಿ ಮೂರು ಹೊಸ ಸವಾಲುಗಳು

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜೆಸ್  ಅಡಿಯಲ್ಲಿ ಮೂರು ಹೊಸ ಸವಾಲುಗಳನ್ನು ಪ್ರಾರಂಭಿಸಿದ್ದು, ಅವುಗಳೆಂದರೆ "ಪ್ರತಿಧ್ವನಿಸಿ: ಇಡಿಎಂ ಚಾಲೆಂಜ್", "ಜಗತ್ತನ್ನು ಖಾದಿ ಧರಿಸುವಂತೆ ಮಾಡಿ" ಮತ್ತು "ವಾಹ್ ಉಸ್ತಾದ್".

1. ವಾಹ್ ಉಸ್ತಾದ್

ಸಂಸ್ಕೃತಿ ಸಚಿವಾಲಯ ಮತ್ತು ದೂರದರ್ಶನದ ಸಹಯೋಗದೊಂದಿಗೆ ಗೌರವಾನ್ವಿತ "ದಿಲ್ಲಿ ಘರಾನಾ" ದಿಂದ ನಡೆಸಲ್ಪಡುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಲ್ಪನೆಯ "ವಾಹ್ ಉಸ್ತಾದ್" ಶಾಸ್ತ್ರೀಯವಾಗಿ ತರಬೇತಿ ಪಡೆದ ಯುವ ಗಾಯಕರಿಗೆ ತಮ್ಮ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ಇದು ಅಂತರರಾಷ್ಟ್ರೀಯ ಭಾಗವಹಿಸುವಿಕೆ ಸೇರಿದಂತೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ  ಭಾಗವಹಿಸುವ ಮುಕ್ತ ಅವಕಾಶವನ್ನು ಒದಗಿಸುತ್ತದೆ. ಇದು ಎರಡು ಹಂತಗಳ ಸ್ಪರ್ಧೆಯಾಗಿದ್ದು, ವೇವ್ಸ್ 2025 ರ ಗ್ರ್ಯಾಂಡ್ ನ್ಯಾಷನಲ್ ಫಿನಾಲೆಯಲ್ಲಿ ಕೊನೆಗೊಳ್ಳುತ್ತದೆ, ಇದರ ನೋಂದಣಿಗಳಿಗೆ ಅವಕಾಶವನ್ನು  ಇಂದು ಪ್ರಸಾರ ಭಾರತಿ (https://prasarbharati.gov.in/wah-ustad/) ಜಾಲತಾಣದಲ್ಲಿ  ತೆರೆಯಲಾಗಿದೆ.

2. 'ಜಗತ್ತನ್ನು ಖಾದಿ ಧರಿಸುವಂತೆ ಮಾಡಿ'

ಸವಾಲು ಖಾದಿಯನ್ನು ಜಾಗತಿಕ ಬ್ರಾಂಡ್ ಆಗಿಸುವ ನವೀನ ಅಭಿಯಾನಗಳನ್ನು ಅಭಿವೃದ್ಧಿಪಡಿಸಲು ಜಾಹೀರಾತು ವೃತ್ತಿಪರರು ಮತ್ತು ಫ್ರೀಲಾನ್ಸರ್ಗಳನ್ನು ಆಹ್ವಾನಿಸುತ್ತದೆ. ಅಂತರರಾಷ್ಟ್ರೀಯ ಭಾಗವಹಿಸುವಿಕೆಗೆ ಮುಕ್ತವಾಗಿರುವ ಚಾಲೆಂಜ್ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಾದಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸ್ಪರ್ಧಿಗಳು ವಿವಿಧ ಸ್ವರೂಪಗಳಲ್ಲಿ ನವೀನ ವಿನ್ಯಾಸ ಪರಿಕಲ್ಪನೆಗಳನ್ನು ರೂಪಿಸಬೇಕು/ಅನ್ವೇಷಿಸಬೇಕು (ಉದಾ. ಡಿಜಿಟಲ್, ಮುದ್ರಣ, ವೀಡಿಯೊ, ಅನುಭವ). "ಮೇಕ್ ದಿ ವರ್ಲ್ಡ್ ವೇರ್ ಖಾದಿ" ಖಾದಿಯ ಬ್ರಾಂಡ್ ಇಮೇಜ್ ಹೆಚ್ಚಿಸಲು ಮತ್ತು ಗ್ರಾಹಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸೃಜನಶೀಲ ಚಿಂತನೆ ಮತ್ತು ಕಾರ್ಯತಂತ್ರದ ವಿಧಾನಗಳನ್ನು ಪ್ರೋತ್ಸಾಹಿಸುತ್ತದೆ.

3. ರೆಸೊನೇಟ್ (ಅನುರಣನ): ದಿ ಇಡಿಎಂ ಸವಾಲು (ಚಾಲೆಂಜ್) : ಇಂಡಿಯನ್ ಮ್ಯೂಸಿಕ್ ಅಸೋಸಿಯೇಷನ್ (ಐಎಂಎ) ಆಯೋಜಿಸಿರುವ "ರೆಸೊನೇಟ್" ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ (ಇಡಿಎಂ) ನಿರ್ಮಾಣದಲ್ಲಿ ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಲು ವಿಶ್ವದಾದ್ಯಂತದ ಕಲಾವಿದರು, ಸಂಯೋಜಕರು, ಸಂಗೀತಗಾರರು ಮತ್ತು ಪ್ರದರ್ಶಕರನ್ನು ಆಹ್ವಾನಿಸುತ್ತದೆ. ಈ ಸವಾಲು ಎಲ್ಲಾ ರಾಷ್ಟ್ರೀಯತೆಗಳಿಗೆ ಮುಕ್ತವಾಗಿದೆ.

ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಸವಾಲು

ಭಾರತದ ಶ್ರೀಮಂತ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸುವ/ಶೋಧಿಸುವ  ಚಲನಚಿತ್ರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಹೊಸ ಸವಾಲನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು ಘೋಷಿಸಿದರು. ಈ ಉಪಕ್ರಮವು ಚಲನಚಿತ್ರ ನಿರ್ಮಾಪಕರಿಗೆ ರಾಷ್ಟ್ರದ ರೋಮಾಂಚಕ ಸಾಂಸ್ಕೃತಿಕ ಚಿತ್ರಣವನ್ನು ಆಳವಾಗಿ ಅನ್ವೇಷಿಸಲು ಸವಾಲು ಹಾಕುತ್ತದೆ, ಅದನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಪ್ರದರ್ಶಿಸುತ್ತದೆ. ಈ ಸವಾಲುಗಳು ಸೃಜನಶೀಲತೆ, ನಾವೀನ್ಯತೆ ಮತ್ತು ಜಾಗತಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.

ವೇವ್ಸ್: ಜಾಗತಿಕವಾಗಿ ಭಾರತದ ಸಾಂಸ್ಕೃತಿಕ ಪರಾಕ್ರಮವನ್ನು ಪ್ರದರ್ಶಿಸುತ್ತದೆ

ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಭಾರತವು ಕಥೆಗಾರರು, ಸಂಗೀತಗಾರರು, ವಿಷಯ ಸೃಷ್ಟಿಕರ್ತರು ಮತ್ತು ಧಾರ್ಮಿಕ ವೈವಿಧ್ಯತೆಯ ರೋಮಾಂಚಕ ತೊಟ್ಟಿಲು (ಕ್ರೂಸಿಬಲ್-ಬೋಗುಣಿ)  ಎಂದು ಬಣ್ಣಿಸಿದರು. "ನಮ್ಮ ಸಾಂಸ್ಕೃತಿಕ ಪರಂಪರೆಯು ನಮ್ಮ ಭೂತಕಾಲಕ್ಕೆ ಸಾಕ್ಷಿ ಮಾತ್ರವಲ್ಲ, ಜಾಗತಿಕ ವೇದಿಕೆಯಲ್ಲಿ ನಮ್ಮ ಭವಿಷ್ಯದ ಬೆನ್ನೆಲುಬಾಗಿದೆ" ಎಂದು ಶ್ರೀ ಶೇಖಾವತ್ ಹೇಳಿದರು. ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಳಸಿಕೊಳ್ಳಲು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಭಾರತದ ಸೃಜನಶೀಲ ಪ್ರತಿಭೆಗಳನ್ನು ಪ್ರದರ್ಶಿಸುವ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುವ ಕ್ರಿಯಾತ್ಮಕ ವೇದಿಕೆಯಾದ ವೇವ್ಸ್ ಅನ್ನು ಪ್ರಾರಂಭಿಸಿದೆ.

ಭಾರತವು ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಸಹಿತ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಂತೆ, ನಮ್ಮ ಸಾಂಸ್ಕೃತಿಕ ಪರಾಕ್ರಮವು ನಮ್ಮ ದೊಡ್ಡ ಆಸ್ತಿಯಾಗಿ ಉಳಿದಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ವೇವ್ಸ್ ಮೂಲಕ ಭಾರತದ ಸಾಂಸ್ಕೃತಿಕ ವೈವಿಧ್ಯತೆಯು ಅದಕ್ಕೆ ಅರ್ಹವಾದ ಜಾಗತಿಕ ಮಾನ್ಯತೆಯನ್ನು ಪಡೆಯುತ್ತದೆ, ಸಾಂಸ್ಕೃತಿಕ ಸೃಜನಶೀಲ ಆರ್ಥಿಕತೆಯನ್ನು ವಿಶ್ವದ ಔಪಚಾರಿಕ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿರಿಸುತ್ತದೆ ಎಂದು ಹೇಳಿದರು. ಈ ಉಪಕ್ರಮವು ಭಾರತದ ಸಾಂಸ್ಕೃತಿಕ ಶಕ್ತಿಯನ್ನು ಪ್ರದರ್ಶಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ವೇವ್ಸ್ ವಹಿಸುವ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ, ನಮ್ಮ ಸೃಷ್ಟಿಕರ್ತರಿಗೆ ವಿಶ್ವಾದ್ಯಂತ ಗೌರವ ಮತ್ತು ಮನ್ನಣೆಯನ್ನು ಗಳಿಸಲು ಅಡಿಪಾಯವನ್ನು ಒದಗಿಸುತ್ತದೆ ಎಂದವರು ತಿಳಿಸಿದರು.

ಕ್ರಿಯೇಟ್ ಇನ್ ಇಂಡಿಯಾ ಸವಾಲುಗಳು

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಮುಖ ಉಪಕ್ರಮವಾದ ವಿಶ್ವ ಆಡಿಯೊ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆಯ (ವೇವ್ಸ್) ಮೂಲಾಧಾರವಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್ , ಭಾರತ ಮತ್ತು ಪ್ರಪಂಚದಾದ್ಯಂತದ ಮಹತ್ವಾಕಾಂಕ್ಷಿ ಮತ್ತು ವೃತ್ತಿಪರ ಸೃಷ್ಟಿಕರ್ತರಿಂದ ಹೆಚ್ಚಿನ ಪ್ರತಿಕ್ರಿಯೆಯನ್ನು  ಸಾಕ್ಷೀಕರಿಸಿದೆ. 70,000 ಕ್ಕೂ ಹೆಚ್ಚು ನೋಂದಣಿಗಳು ಮತ್ತು ಎಣಿಕೆಯೊಂದಿಗೆ, ಈ ಸವಾಲು ವೈವಿಧ್ಯಮಯ ಹಿನ್ನೆಲೆಯ ವ್ಯಕ್ತಿಗಳು ಮತ್ತು ಸಮುದಾಯಗಳ ಕಲ್ಪನೆಯನ್ನು ಸೆರೆಹಿಡಿದಿದೆ, ರೋಮಾಂಚಕ ಸೃಜನಶೀಲತೆ ಮತ್ತು ನಾವೀನ್ಯತೆಗಾಗಿ ಸಮಗ್ರ ಪರಿಸರ ವ್ಯವಸ್ಥೆಯನ್ನು ಬೆಳೆಸಿದೆ. ಇಲ್ಲಿಯವರೆಗೆ, 31 ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಗಳನ್ನು ಪ್ರಾರಂಭಿಸಲಾಗಿದೆ, ಅವುಗಳಲ್ಲಿ 25 ಇನ್ನೂ ನೋಂದಣಿಗೆ ಮುಕ್ತವಾಗಿವೆ ಮತ್ತು 22 ಜಾಗತಿಕ ಭಾಗವಹಿಸುವಿಕೆಯನ್ನು ಆಕರ್ಷಿಸುತ್ತವೆ.

ಭಾರತ: ಕಥೆ ಹೇಳುವ ನಾಡು

ಪ್ರಖ್ಯಾತ  ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರು ತಮ್ಮ ಭಾಷಣದಲ್ಲಿ ಅತಿದೊಡ್ಡ ವಿಷಯ ರಚನೆ ಮತ್ತು ಬಳಕೆಯ ರಾಷ್ಟ್ರವಾಗಿ ಭಾರತದ ಸ್ಥಾನಮಾನವನ್ನು ಎತ್ತಿ ತೋರಿಸಿದರು. "ಭಾರತವು ಕೇವಲ ಕೇಂದ್ರವಲ್ಲ ಜೊತೆಗೆ ಚಲನಚಿತ್ರಗಳಿಂದ ಗೇಮಿಂಗ್ ವರೆಗೆ ಸಾಂಸ್ಕೃತಿಕ ಮತ್ತು ಡಿಜಿಟಲ್ ವಿಷಯಗಳ ಶಕ್ತಿ ಕೇಂದ್ರವಾಗಿದೆ. ಇದನ್ನೇ ನಾವು ನಮ್ಮ 'ಮೃದು ಶಕ್ತಿ' ಎಂದು ಕರೆಯುತ್ತೇವೆ" ಎಂದು ಕಪೂರ್ ಹೇಳಿದರು. ಈ ವಿಷಯದ ಬಗ್ಗೆ ಮಾತು ಮುಂದುವರಿಸಿದ ಶ್ರೀ ಕಪೂರ್ ಅವರು ಮುಂಬರುವ ವೇವ್ಸ್ ಶೃಂಗಸಭೆಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದರು, ಅಲ್ಲಿ ವಿಸ್ತಾರವಾದ ಸೃಜನಶೀಲ ಶಕ್ತಿಯನ್ನು ಪ್ರದರ್ಶಿಸಲಾಗುವುದು, ಜಾಗತಿಕ ಸೃಜನಶೀಲ ಆರ್ಥಿಕತೆಯಲ್ಲಿ ಭಾರತದ ನಾಯಕತ್ವವನ್ನು ಪ್ರದರ್ಶಿಸಲು ಕಾರ್ಯಕ್ರಮವು ನಿರ್ಣಾಯಕ ವೇದಿಕೆಯಾಗಿದೆ ಎಂದು ಒತ್ತಿಹೇಳಿದರು.

ಒಂದು ಅವಕಾಶ, ತಪ್ಪಿಸಿಕೊಳ್ಳಬಾರದು

ಆಡಿಯೊ, ವೀಡಿಯೊ ಮತ್ತು ಮನರಂಜನೆಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ಶೃಂಗಸಭೆಯನ್ನು ರೀತಿಯಲ್ಲಿ ಇದೇ  ಮೊದಲು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಪ್ರಪಂಚದಾದ್ಯಂತದ ಸೃಷ್ಟಿಕರ್ತರಿಗೆ ನೆಟ್ವರ್ಕ್, ಸಹಯೋಗ ಮತ್ತು ತಮ್ಮ ಸೃಜನಶೀಲ ಪರಾಕ್ರಮವನ್ನು ಪ್ರದರ್ಶಿಸಲು ಅನನ್ಯ ಅವಕಾಶವನ್ನು ಒದಗುತ್ತದೆ. ಶ್ರೀ ವೈಷ್ಣವ್ ಅವರು ಎಲ್ಲಾ ವಿಷಯ ಸೃಷ್ಟಿಕರ್ತರನ್ನು ವೇವ್ಸ್ ನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಿದರು, ಇದು ತಪ್ಪಿಸಿಕೊಳ್ಳಬಾರದ ಅವಕಾಶವಾಗಿದೆ ಎಂದು ಒತ್ತಿ ಹೇಳಿದರು.

 

*****


(Release ID: 2096866) Visitor Counter : 16