ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫಲಿತಾಂಶಗಳ ಪಟ್ಟಿ: ಇಂಡೋನೇಷ್ಯಾ ಅಧ್ಯಕ್ಷರ ಭಾರತ ಭೇಟಿ (ಜನವರಿ 23-26, 2025)

Posted On: 25 JAN 2025 8:54PM by PIB Bengaluru

 

ಕ್ರ.ಸಂ

ತಿಳುವಳಿಕಾ ಒಡಂಬಡಿಕೆಗಳು/ಒಪ್ಪಂದಗಳು

1.

ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಇಂಡೋನೇಷ್ಯಾದ ಆರೋಗ್ಯ ಸಚಿವಾಲಯದ ನಡುವೆ ಆರೋಗ್ಯ ಸಹಕಾರಕ್ಕಾಗಿ ತಿಳಿವಳಿಕಾ ಒಡಂಬಡಿಕೆ.

2.

ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಇಂಡೋನೇಷ್ಯಾದ ಬಕಾಮ್ಲಾ ನಡುವೆ ಕಡಲ ಸುರಕ್ಷತೆ ಮತ್ತು ಭದ್ರತಾ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. (ನವೀಕರಣ)

3.

ಆಯುಷ್ ಸಚಿವಾಲಯದ ಭಾರತೀಯ ಔಷಧ ಮತ್ತು ಹೋಮಿಯೋಪತಿ ಫಾರ್ಮಾಕೊಪಿಯಾ ಆಯೋಗ ಮತ್ತು ಇಂಡೋನೇಷ್ಯಾದ ಆಹಾರ ಮತ್ತು ಔಷಧ ಪ್ರಾಧಿಕಾರದ ನಡುವೆ ಸಾಂಪ್ರದಾಯಿಕ ಔಷಧ ಗುಣಮಟ್ಟ ಭರವಸೆ ಕ್ಷೇತ್ರದಲ್ಲಿ ತಿಳುವಳಿಕಾ ಒಡಂಬಡಿಕೆ.

4.

ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಇಂಡೋನೇಷ್ಯಾದ ಸಂವಹನ ಮತ್ತು ಡಿಜಿಟಲ್ ವ್ಯವಹಾರಗಳ ಸಚಿವಾಲಯದ ನಡುವೆ ಡಿಜಿಟಲ್ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.

5.

ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ಇಂಡೋನೇಷ್ಯಾದ ಸಂಸ್ಕೃತಿ ಸಚಿವಾಲಯದ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ. (ಅವಧಿ 2025-28)

 

 

ವರದಿಗಳು

1.

3ನೇ ಭಾರತ-ಇಂಡೋನೇಷ್ಯಾ ಸಿಇಒಗಳ ವೇದಿಕೆ: ಸಹ ಅಧ್ಯಕ್ಷರು ತಮ್ಮ ಜಂಟಿ ವರದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಇಂಡೋನೇಷ್ಯಾ ವಿದೇಶಾಂಗ ಸಚಿವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪ್ರಬೋವೊ ಅವರ ಸಮ್ಮುಖದಲ್ಲಿ ಸಲ್ಲಿಸಿದರು.

 

 

*****


(Release ID: 2096333)