ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮ್ಮ ಭಾರತೀಯ ನವೋದ್ಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿ ಛಾಪು ಮೂಡಿಸುತ್ತಿರುವುದು ಸಂತಸಕರ: ಪ್ರಧಾನಮಂತ್ರಿ


ಭಾರತವನ್ನು ನವೋದ್ಯಮಗಳಿಗೆ ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡಿರುವ ಭಾರತದ ಯವಸಮೂಹದ ಶಕ್ತಿ ಮತ್ತು ಕೌಶಲ್ಯದ ಬಗ್ಗೆ ಹೆಮ್ಮೆಯಿದೆ: ಪ್ರಧಾನಮಂತ್ರಿ

Posted On: 16 JAN 2025 1:31PM by PIB Bengaluru

ಭಾರತೀಯ ನವೋದ್ಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿ ಛಾಪು ಮೂಡಿಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. "ಭಾರತವನ್ನು ನವೋದ್ಯಮಗಳಿಗೆ ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡಿರುವ ಭಾರತದ ಯುವಸಮೂಹದ ಶಕ್ತಿ ಮತ್ತು ಕೌಶಲ್ಯದ ಬಗ್ಗೆ ಹೆಮ್ಮೆ ಇದೆ!" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 

ಮೈಗೌಇಂಡಿಯಾಗೆ ಪ್ರತಿಕ್ರಿಯೆ ನೀಡುತ್ತಾ ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ನಮ್ಮ ಭಾರತೀಯ ನವೋದ್ಯಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿ ಛಾಪು ಮೂಡಿಸುತ್ತಿರುವುದು ಸಂತಸ ತಂದಿದೆ."

#9YearsOfStartupIndia

 

"ಭಾರತವನ್ನು ಸ್ಟಾರ್ಟ್ ಅಪ್ಗಳಿಗೆ ಅತ್ಯಂತ ಆಕರ್ಷಕ ತಾಣವನ್ನಾಗಿ ಮಾಡಿರುವ ಭಾರತದ ಯುವಜನರ ಶಕ್ತಿ ಮತ್ತು ಕೌಶಲ್ಯದ ಬಗ್ಗೆ ಹೆಮ್ಮೆ ಇದೆ!"

#9YearsOfStartupIndia

 

 

*****


(Release ID: 2093428) Visitor Counter : 12